See also 2take
1take ಟೇಕ್‍
ಕ್ರಿಯಾಪದ
(ಭೂತರೂಪ took ಉಚ್ಚಾರಣೆ ಟುಕ್‍, ಭೂತಕೃದಂತ taken ಉಚ್ಚಾರಣೆ

ಟೇಕನ್‍).

ಸಕರ್ಮಕ ಕ್ರಿಯಾಪದ
  1. (ಕೈ, ಸಲಕರಣೆ, ಮೊದಲಾದವುಗಳಿಂದ) ತೆಗೆದುಕೊ; ಹಿಡಿದುಕೊ; ಹಿಡಿ: took him by the throat ಅವನ ಕುತ್ತಿಗೆಗೆ ಕೈಹಾಕಿ ಹಿಡಿದು ಕೊಂಡನು.
  2. ಸೆರೆಹಿಡಿ; ಕೈವಶ ಮಾಡಿಕೊ; ಸ್ವಾಧೀನಪಡಿಸಿಕೊ: take a fortress ಕೋಟೆಯನ್ನು ಹಿಡಿ.
  3. (ಪರಿ)ಗ್ರಹಿಸು; ಸ್ವೀಕರಿಸು (ರೂಪಕ ಸಹ).
  4. ಪಡೆದುಕೊ; ಗಳಿಸು; ಗೆದ್ದುಕೊ.
  5. ಕೊಳ್ಳುವ ಮೂಲಕ ತೆಗೆದುಕೊ, ಖರೀದಿಸು; ದುಡ್ಡುಕೊಟ್ಟು–ಹಿಡಿ, ಪಡೆ, ಗೊತ್ತುಮಾಡಿಕೊ: took tickets for the ballet ‘ಬ್ಯಾಲೆ’ ಪ್ರದರ್ಶನಕ್ಕೆ ಟಿಕೆಟ್‍ ತೆಗೆದುಕೊಂಡ.
  6. (ಕ್ರಮಬದ್ಧ ಒಪ್ಪಂದದ ಮೂಲಕ) ಯಾವುದರದೇ ಬಳಕೆಯನ್ನು, ಉಪಯೋಗವನ್ನು ಪಡೆದುಕೊ: took lodgings ವಸತಿ ಪಡೆದುಕೊಂಡ, ಗೊತ್ತುಮಾಡಿಕೊಂಡ.
  7. (ತಿಂಡಿ ಮೊದಲಾದವನ್ನು ಮಾಡುವಲ್ಲಿ) ಬಳಸು; ಉಪಯೋಗಿಸು; ಪ್ರಯೋಜನ ಪಡೆದುಕೊ: take a dozen eggs and beat them well ಒಂದು ಡಜನ್‍ ಮೊಟ್ಟೆಗಳನ್ನು ತೆಗೆದುಕೊಂಡು, ಅವನ್ನು ಚೆನ್ನಾಗಿ ಗೊಟಾಯಿಸು.
    1. ಬಳಸು; ಉಪಯೋಗಿಸು; ವಶಪಡಿಸಿಕೊ: I wish you will not take my bicycle ನೀನು ನನ್ನ ಸೈಕಲನ್ನು ಬಳಸುವುದಿಲ್ಲವೆಂದು ನಿರೀಕ್ಷಿಸುತ್ತೇನೆ; ನೀನು ನನ್ನ ಸೈಕಲನ್ನು ಉಪಯೋಗಿಸದಿರುವುದು ಒಳ್ಳೆಯದು.
    2. ಪ್ರಯಾಣದ, ಸಾರಿಗೆಯ ಮಾಧ್ಯಮವಾಗಿ, ವಾಹನವಾಗಿ–ಬಳಸು, ತೆಗೆದುಕೊ, ಹಿಡಿ: took a taxi ಟ್ಯಾಕ್ಸಿ ಹಿಡಿದ.
  8. (ಪತ್ರಿಕೆ ಮೊದಲಾದವುಗಳಿಗೆ ಚಂದಾಕೊಟ್ಟು) ನಿಯತವಾಗಿ–ಕೊಂಡುಕೊ, ತರಿಸು; ಚಂದಾದಾರನಾಗು.
  9. (ಅಗತ್ಯ ನಿಯಮಗಳನ್ನು ಪಾಲಿಸಿ ಏನನ್ನಾದರೂ) ಪಡೆ; ತೆಗೆದುಕೊ; ಗಳಿಸು: take a degree ಪದವಿ ಪಡೆ.
  10. (ಸ್ಥಾನ ಮೊದಲಾದವನ್ನು) ಸ್ವೀಕರಿಸು; ವಹಿಸಿಕೊ: take the chair ಅಧ್ಯಕ್ಷ ಸ್ಥಾನ ವಹಿಸು.
  11. ತೆಗೆದುಕೊ; ಹಿಡಿ; ಬಳಸು; ಉಪಯೋಗಿಸು: take the next turning on the left ಎಡಗಡೆಯಲ್ಲಿರುವ ಮುಂದಿನ ತಿರುವನ್ನು ಹಿಡಿ, ಬಳಸಿಕೊ.
  12. (ಆಹಾರ, ಔಷಧಿ, ಮೊದಲಾದವನ್ನು) ತೆಗೆದುಕೊ; ಸೇವಿಸು; ತಿನ್ನು; ಕುಡಿ; ನುಂಗು: take a cup of tea ಒಂದು ಕಪ್‍ ‘ಟೀ’ ತೆಗೆದುಕೊ, ಕುಡಿ. took poison ವಿಷ ಸೇವಿಸಿದ. take pills ಮಾತ್ರೆಗಳನ್ನು ತೆಗೆದುಕೊ, ನುಂಗು: do you take sugar ನೀನು ಸಕ್ಕರೆ ಹಾಕಿಕೊಳ್ಳುವೆಯಾ?
  13. ಸಾಕಾಗು; ಬೇಕಾಗು; ತೆಗೆದುಕೊ; ಆಗು: will only take a minute ಒಂದು ನಿಮಿಷ ಮಾತ್ರ ಸಾಕು, ಆಗುತ್ತದೆ. these things take time ಈ ಕೆಲಸಗಳಿಗೆ (ಸಾಕಷ್ಟು) ಸಮಯ ಬೇಕು.
  14. ಒಯ್ಯು; ಜೊತೆಯಲ್ಲಿ ಕರೆತರು ಯಾ ಕರೆದುಕೊಂಡು ಹೋಗು; ಕರೆದೊಯ್ಯು; ಕೊಂಡೊಯ್ಯು; ತೆಗೆದುಕೊಂಡು ಹೋಗು: the bus takes you past the station ಬಸ್ಸು ನಿನ್ನನ್ನು ಸ್ಟೇಷನ್ನಿನಿಂದ ಮುಂದಕ್ಕೆ ಕೊಂಡೊಯ್ಯುತ್ತದೆ. take the book home ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗು.
  15. ತೆಗೆದುಕೊ; ಅಪಹರಿಸು; ಕಿತ್ತುಕೊ: someone has taken my pen ಯಾರೋ ನನ್ನ ಪೆನ್ನನ್ನು ತೆಗೆದುಕೊಂಡಿದ್ದಾರೆ.
  16. (ಬೆಂಕಿ, ಜ್ವರ, ಮೊದಲಾದವು) ಹಿಡಿ; ಅಂಟಿಸಿಕೊ; ಸೋಂಕು ತಗಲು ಯಾ ತಂದುಕೊ.
  17. ಪಡು; ಅನುಭವಿಸು; ಒಂದರ ಪ್ರಭಾವಕ್ಕೆ, ಪರಿಣಾಮಕ್ಕೆ ಒಳಗಾಗು: take pleasure ಸಂತೋಷಪಡು. take fright ದಿಗಿಲು ಬೀಳು.
  18. ತಾಳು; ಹೊಂದು; ಪಡು: take comfort ಸಮಾಧಾನ ಪಡು.
  19. ತೆಗೆದುಕೊ; ವಹಿಸು: take courage ಧೈರ್ಯ ತೆಗೆದುಕೊ.
  20. (ಹೆಸರು, ವಿಳಾಸ, ದೇಹದ ಶಾಖ, ವ್ಯಕ್ತಿಯ ತೂಕ, ಎತ್ತರ, ಮೊದಲಾದವನ್ನು) ತೆಗೆದುಕೊ; ತಿಳಿದಿಟ್ಟುಕೊ; ವಿಚಾರಿಸಿ, ಪರೀಕ್ಷಿಸಿ ಯಾ ಅಳೆದು–ಕಂಡುಹಿಡಿ: take someone’s pulse (ಒಬ್ಬ ವ್ಯಕ್ತಿಯ) ನಾಡಿ–ತೆಗೆದುಕೊ, ಪರೀಕ್ಷಿಸು.
  21. ಮನಸ್ಸಿನಲ್ಲಿ–ಗ್ರಹಿಸು, ಊಹಿಸು, ಭಾವಿಸು, ಅನಿಸು, ತಿಳಿದುಕೊ, ಅರ್ಥಮಾಡಿಕೊ: I take it that we are to wait ನಾವು ಕಾಯಬೇಕಾಗುತ್ತದೆಂದು ನನಗೆ ಕಾಣುತ್ತದೆ, ನನ್ನ ಗ್ರಹಿಕೆ, ಅನಿಸಿಕೆ. I took you to mean yes ನೀನು ಆಗಲಿ ಎಂದು, ಒಪ್ಪಿದೆ ಎಂದು ಹೇಳಿದೆ–ಎಂದು ನಾನು ಅರ್ಥ ಮಾಡಿಕೊಂಡೆ. took him for a fool ಅವನೊಬ್ಬ ದಡ್ಡನೆಂದು ಭಾವಿಸಿದೆ. I take your point ನಿನ್ನ ಮಾತಿನ ಅರ್ಥವನ್ನು ನಾನು ಗ್ರಹಿಸುತ್ತೇನೆ.
  22. (ಯಾವುದಾದರೂ ವಿಷಯವನ್ನು) ಒಂದು ನಿರ್ದಿಷ್ಟ ರೀತಿಯಲ್ಲಿ–ತೆಗೆದುಕೊ, ಪರಿಗಣಿಸು, ಸಹಿಸು, ಅನುಭವಿಸು: take things coolly ಎಲ್ಲವನ್ನೂ ಸಮಾಧಾನದಿಂದ ತೆಗೆದುಕೊ, ಸೈರಣೆಯಿಂದ ಸಹಿಸು.
  23. (-ಎಂದು) ಭಾವಿಸು; ಅಂದುಕೊ; ತಿಳಿದುಕೊ: took it badly ಅದನ್ನು ತಪ್ಪಾಗಿ ಭಾವಿಸಿದ. do you take me for an idiot? ನನ್ನನ್ನು ತಿಳಿಗೇಡಿಯೆಂದು ತಿಳಿದುಕೊಂಡಿದ್ದೀಯಾ?
  24. ತೆಗೆದುಕೊ; ಪರಿಗ್ರಹಿಸು; ಸ್ವೀಕರಿಸು; ಒಪ್ಪಿಕೊ: take what you can get ಬಂದುದನ್ನು ಸ್ವೀಕರಿಸು. take the offer ಕೊಟ್ಟುದನ್ನು ಒಪ್ಪಿಕೊ.
  25. ತೆಗೆದುಕೊ; ಸ್ವೀಕರಿಸು; ಒಪ್ಪಿಕೊ; ಸಮ್ಮತಿಸು; ಸಹಿಸು; ಒಳಗಾಗು; ಒಳಪಡಿಸಿಕೊ: take no nonsense ಅಸಂಬದ್ಧವನ್ನು ಸಹಿಸಬೇಡ. take a risk ಅಪಾಯ ಸ್ವೀಕರಿಸು; ಅಪಾಯಕ್ಕೆ ತಲೆಯೊಡ್ಡು.
    1. ತಳೆ; ವಹಿಸು; ತೆಗೆದುಕೊ; ಪಡೆ; ಹೊಂದು: took a different view ಬೇರೆ ದೃಷ್ಟಿಕೋನ ತಳೆದ. took the initiative ಮುಂದಾಳತ್ವ ವಹಿಸಿದ.
    2. ಆರಿಸಿಕೊ: took a job ಕೆಲಸ ಆರಿಸಿಕೊಂಡ.
  26. ಪಡೆ(ದುಕೊ); ತೆಗೆದುಕೊ: takes its name from the inventor ಅದು ಆವಿಷ್ಕಾರ ಮಾಡಿದವನ ಹೆಸರನ್ನು ಪಡೆದಿದೆ; ಅದರ ಹೆಸರು ಅದನ್ನು ಕಂಡುಹಿಡಿದವನ ಹೆಸರಿನಿಂದ ಬಂದಿದೆ.
  27. ಕಳೆ; ವ್ಯವಕಲಿಸು; ವ್ಯವಕಲನ ಮಾಡು; ತೆಗೆ(ದು ಹಾಕು): take 3 from 9 ಒಂಬತ್ತರಿಂದ ಮೂರನ್ನು ಕಳೆ.
  28. ಸಾಧಿಸು; ಮಾಡು; ಮಾಡಲು ಒಪ್ಪಿಕೊ; ಕೈಗೊಳ್ಳು; ತೆಗೆದುಕೊ: take notes ಟಿಪ್ಪಣಿ–ತೆಗೆದುಕೊ, ಬರೆದುಕೊ. take an oath ಶಪಥ, ಪ್ರತಿಜ್ಞೆ–ಮಾಡು. take a decision ನಿರ್ಧಾರ ಕೈಗೊಳ್ಳು. take a look ಒಂದು ದೃಷ್ಟಿ ಬೀರು, ಹಾಕು.
  29. (ಒಂದರಲ್ಲಿ) ತೊಡಗಿರು; ನಿರತನಾಗಿರು; ಯಾವುದನ್ನೇ ಮಾಡು, ಅನುಭವಿಸು ಯಾ ಸವಿ: take rest ವಿಶ್ರಾಂತಿ ಅನುಭವಿಸು. take exercise ವ್ಯಾಯಾಮ ಮಾಡು. take a holiday ರಜೆ ತೆಗೆದುಕೊ.
  30. ನಡೆಸು; ನಿರ್ವಹಿಸು: took the school assembly ಶಾಲೆಯ ಸಭೆಯನ್ನು ನಿರ್ವಹಿಸಿದ.
  31. (ಒಂದು ನಿರ್ದಿಷ್ಟ ರೀತಿಯಲ್ಲಿ) ನಡೆಸು; ನಿರ್ವಹಿಸು: took the corner too fast ಮೂಲೆಯಲ್ಲಿ ತಿರುಗುವಾಗ ವಿಪರೀತ ವೇಗದಲ್ಲಿ ನಡೆಸಿದ, ಹೋದ.
    1. ಒಂದು ವಿಷಯದಲ್ಲಿ ಶಿಕ್ಷಣ ಪಡೆ ಯಾ ಕೊಡು; ಕಲಿ ಯಾ ಬೋಧಿಸು.
    2. (ಒಂದು ವಿಷಯದಲ್ಲಿ) ಪರೀಕ್ಷೆ ಕೂಡು; ಪರೀಕ್ಷೆ ತೆಗೆದುಕೊ.
  32. (ಛಾಯಾಚಿತ್ರಣ) ಕ್ಯಾಮರಾದಿಂದ (ವ್ಯಕ್ತಿಯ ಯಾ ವಸ್ತುವಿನ) ಹೋಟೊ–ತೆಗೆ, ಇಳಿಸು, ಹಿಡಿ, ಹೊಡೆ.
  33. (ಮಾತನಾಡುವಾಗ) ತೆಗೆದುಕೊ; ನಿದರ್ಶನ ಕೊಡು; ಉದಾಹರಿಸು: let us take Gandhi ಗಾಂಧಿಯನ್ನು ತೆಗೆದುಕೊಳ್ಳೋಣ, ಉದಾಹರಿಸೋಣ.
  34. (ವ್ಯಾಕರಣ) ತೆಗೆದುಕೊ; ಬೇಕಾಗು; ಬಯಸು; ಅಪೇಕ್ಷಿಸು: this verb takes an object ಈ ಕ್ರಿಯಾಪದ ಕರ್ಮಪದವನ್ನು ತೆಗೆದುಕೊಳ್ಳುತ್ತದೆ, ಅಪೇಕ್ಷಿಸುತ್ತದೆ.
  35. (ಹೆಂಗಸನ್ನು) ಸಂಭೋಗಿಸು.
  36. (ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಮರುಳುಗೊಳಿಸು; ಸೆಳೆ; ಆಕರ್ಷಿಸು: was much taken by (or with) her manners ಅವಳ ನಡೆವಳಿಯಿಂದ ಬಹಳ ಮರುಳಾದ. he took her fancy ಅವನು ಅವಳ ಮನಸ್ಸನ್ನು ಆಕರ್ಷಿಸಿದ.
  37. ಗೆದ್ದುಕೊ; ಜಯಿಸು: he took the first set 6-3 (ಟೆನಿಸ್‍) ಅವನು 6-3 ಆಟಗಳಿಂದ ಮೊದಲನೆಯ ಸೆಟ್ಟನ್ನು ಗೆದ್ದ.
  38. ಬೇಕಾಗು; ಹಿಡಿ; ಅಗತ್ಯವಾಗು: it takes a poet to translate Virgil ವರ್ಜಿಲ್‍ನ ಕಾವ್ಯವನ್ನು ಭಾಷಾಂತರಿಸಲು ಒಬ್ಬ ಕವಿಯೇ (ಆಗ)ಬೇಕು.
  39. (ಧಾರ್ಮಿಕ ವಿಧಿ, ಆಚರಣೆ, ಮೊದಲಾದವನ್ನು) ನಡೆಸು; ನಿರ್ವಹಿಸು.
ಅಕರ್ಮಕ ಕ್ರಿಯಾಪದ
  1. ಯಶಸ್ವಿಯಾಗು; ಸಫಲವಾಗು; ಫಲಕಾರಿಯಾಗು; ಪರಿಣಾಮಕಾರಿಯಾಗು; ಉದ್ದಿಷ್ಟ ಪರಿಣಾಮ–ಬೀರು, ಸಾಧಿಸು: the novel did not take ಆ ಕಾದಂಬರಿ ಯಶಸ್ವಿಯಾಗಲಿಲ್ಲ, ಜನಪ್ರಿಯವಾಗಲಿಲ್ಲ. the injection did not take ಚುಚ್ಚುಮದ್ದು ಪರಿಣಾಮಕಾರಿಯಾಗಲಿಲ್ಲ.
  2. (ಗಿಡ, ಬೀಜ, ಮೊದಲಾದವುಗಳ ವಿಷಯದಲ್ಲಿ) ಬೆಳೆ; ಮೊಳೆ; ಚಿಗುರು; ಬೆಳೆಯಲಾರಂಭಿಸು.
  3. (ಬೀಗದಂತೆ) ಹಾಕಿಕೊ; ಬಿಗಿದುಕೊ.
  4. (ಮಸಿ ಯಾ ಬಣ್ಣದಂತೆ) ಅಂಟಿಕೊ; ಕಚ್ಚಿಕೊ.
  5. ತೊಡಗು; ನಿರತನಾಗು: took to his studies ತನ್ನ ಓದಿನಲ್ಲಿ ತೊಡಗಿದ.
ಪದಗುಚ್ಛ
  1. have what it takes (ಆಡುಮಾತು) (ಮುಖ್ಯವಾಗಿ ಒಂದರ ಸಾಧನೆಗೆ, ಯಶಸ್ಸಿಗೆ) ಬೇಕಾದ, ಅಗತ್ಯವಾದ ಯೋಗ್ಯತೆ ಮೊದಲಾದವನ್ನು ಪಡೆದಿರು.
  2. take $^2$account of.
  3. take a $^1$chance.
  4. take $^1$action.
  5. take $^1$advantage of.
  6. take a dislike to ಇಷ್ಟಪಡದಿರು.
  7. take advice.
  8. take a $^1$fancy to (or for).
  9. take after (ಸ್ವಭಾವ, ರೂಪ, ಮೊದಲಾದವುಗಳಲ್ಲಿ ಮುಖ್ಯವಾಗಿ ತಂದೆ, ತಾಯಿ ಯಾ ವಂಶೀಕರನ್ನು)ಹೋಲು.
  10. take against (ಮುಖ್ಯವಾಗಿ ಅಂತಃಪ್ರಚೋದನೆಯಿಂದ) ವಿರೋಧಿಸು; ಅಪ್ರೀತಿ ತೋರಿಸು.
  11. take aim (ಒಂದು ವಸ್ತುವಿನ ಕಡೆ ಆಯುಧ ಮೊದಲಾದವನ್ನು) ಗುರಿಯಿಡು; ತಿರುಗಿಸು.
  12. take a lot of doing ಬಹಳ ಕೆಲಸ ಹಿಡಿ; ಮಾಡಲು ಕಷ್ಟವಾಗು; ಪ್ರಯಾಸವಾಗು.
  13. take $^1$amiss.
  14. take apart.
  15. take a person at his $^1$word.
  16. take a person up on (ವ್ಯಕ್ತಿಯೊಬ್ಬನು ನೀಡಿದ್ದು ಮೊದಲಾದವನ್ನು) ತೆಗೆದುಕೊ; ಸ್ವೀಕರಿಸು; ಒಪ್ಪಿಕೊ.
  17. a pleasure in (ಯಾವುದನ್ನೇ ಮಾಡುವುದು ಮೊದಲಾದವುಗಳಲ್ಲಿ) ಖುಷಿಪಡು; ಸಂತೋಷಪಡು.
  18. take $^1$aside.
  19. take as read (ಸಭೆಯ ವರದಿ ಮೊದಲಾದವನ್ನು) ಓದದೆ ಯಾ ಚರ್ಚೆ ಮಾಡದೆ ಬಿಡು; ಓದಿದಂತೆ ಭಾವಿಸಿಕೊ, ಒಪ್ಪಿಕೊ, ಅಂಗೀಕರಿಸು.
  20. take away
    1. (ಒಂದು ಮೊತ್ತ, ಸಂಖ್ಯೆ, ಮೊದಲಾದವುಗಳಿಂದ ಇನ್ನೊಂದನ್ನು) ಕಳೆ; ತೆಗೆದು ಹಾಕು.
    2. (ಬ್ರಿಟಿಷ್‍ ಪ್ರಯೋಗ) (ಹೋಟೆಲಿನಲ್ಲಿ ಖರೀದಿಸಿದ ತಿಂಡಿ ಮೊದಲಾದವನ್ನು) ಬೇರೆಡೆ ತಿನ್ನಲು ಕೊಂಡುಕೊ ಯಾ ತಿನ್ನಲು ಬೇರೆಡೆಗೆ ಕೊಂಡೊಯ್ಯು, ತೆಗೆದುಕೊಂಡು ಹೋಗು.
  21. take a wife (ಒಬ್ಬಳನ್ನು) ಮದುವೆಯಾಗು; ವರಿಸು.
  22. take back
    1. (ಹೇಳಿಕೆ ಮೊದಲಾದವನ್ನು) ಹಿಂತೆಗೆದುಕೊ.
    2. (ಮುದ್ರಣ) (ಅಕ್ಷರ ಮೊದಲಾದವನ್ನು) ಹಿಂದಿನ ಸಾಲಿಗೆ ವರ್ಗಾಯಿಸು.
    3. (ವ್ಯಕ್ತಿಯನ್ನು) (ಕಲ್ಪನೆಯಲ್ಲಿ) ಭೂತಕಾಲಕ್ಕೆ ಕೊಂಡೊಯ್ಯಿ; ಹಿಂದೆ ನಡೆದುಹೋದ ಸಂದರ್ಭ ಮೊದಲಾದವನ್ನು (ಅವನಿಗೆ) ನೆನಪುಮಾಡಿ ಕೊಡು.
    4. (ವ್ಯಕ್ತಿ ಯಾ ವಸ್ತುವನ್ನು ಅವನ ಯಾ ಅದರ) ಮೂಲಸ್ಥಾನಕ್ಕೆ, ಮೊದಲಿನ ಜಾಗಕ್ಕೆ–ಒಯ್ಯು, ಸಾಗಿಸು, ತಲುಪಿಸು.
  23. take down
    1. ಉಕ್ತಲೇಖನ ಬರೆದುಕೊ; ಹೇಳಿದ ಮಾತುಗಳನ್ನು ಬರೆದುಕೊ.
    2. ಅವಮಾನ ಮಾಡು; ಮರ್ಯಾದೆ ಕಳೆ.
    3. (ಕಟ್ಟಡ ಮೊದಲಾದವನ್ನು) ಕೆಡವು; ಸ್ವಲ್ಪ ಸ್ವಲ್ಪವಾಗಿ–ಕಳಚು, ತೆಗೆದುಹಾಕು.
  24. take exception to.
  25. take $^1$effect.
  26. take for a $^2$ride.
  27. take for $^1$granted.
  28. take from
    1. ಕಳೆ; ತೆಗೆದುಹಾಕು: take 4 from 6 ಆರರಿಂದ ನಾಲ್ಕನ್ನು ಕಳೆ.
    2. ಕಡಮೆ ಮಾಡು; ತಗ್ಗಿಸು; ದುರ್ಬಲಗೊಳಿಸು; ಕೊರತೆ, ಕುಂದು–ಉಂಟುಮಾಡು.
  29. take (a person’s) name in vain
    1. ವೃಥಾ (ಲಘುವಾಗಿ ಯಾ ಅಗೌರವದಿಂದ) ಒಬ್ಬನ ಹೆಸರು ಹೇಳು, ಬಳಸು.
    2. take God’s name in vain (ಹಾಸ್ಯ ಪ್ರಯೋಗ) ವೃಥಾ ದೇವರ ಹೆಸರು ಹೇಳಿ ಹೊಲಗೆಡಿಸು, ಅಪವಿತ್ರಗೊಳಿಸು.
  30. take heart ಧೈರ್ಯ ತಂದುಕೊ; ಉತ್ತೇಜನ ಪಡೆ.
  31. take heed ಎಚ್ಚರ ವಹಿಸು, ತೆಗೆದುಕೊ.
  32. take his bet ಅವನ ಪಣ ಒಪ್ಪಿಕೊ.
  33. take $^2$hold.
  34. take ill (or ಅಮೆರಿಕನ್‍ ಪ್ರಯೋಗ sick) (ಆಡುಮಾತು) ಮುಖ್ಯವಾಗಿ ಇದ್ದಕ್ಕಿದ್ದಂತೆ ಕಾಯಿಲೆ ಬೀಳು.
  35. take in
    1. (ಅತಿಥಿ, ಬಾಡಿಗೆದಾರ, ಮೊದಲಾದವರನ್ನು) ಬರಗೊಡು; ಸೇರಿಸಿಕೊ; (ಅವರಿಗೆ) ಪ್ರವೇಶ ಕೊಡು.
    2. (ಮಹಿಳೆಯನ್ನು) ದಿವಾನಖಾನೆಯಿಂದ ಊಟದ ಮೇಜಿನ ಬಳಿಗೆ ಕರೆದೊಯ್ಯಿ, ದಾರಿ ತೋರಿಸು.
    3. (ಹೊಲಿಯುವುದು, ಟೈಪ್‍ ಮಾಡುವುದು, ಮೊದಲಾದವನ್ನು ಮನೆಯಲ್ಲಿ ಮಾಡಲು) ತೆಗೆದುಕೊ; ಒಪ್ಪಿಕೊ.
    4. ಒಳಗೊಳ್ಳು; ಹೊಂದಿರು.
    5. (ಆಡುಮಾತು) (ಇನ್ನೊಂದು ಜಾಗಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ) (ಸ್ಥಳ ಮೊದಲಾದವನ್ನು)–ಸಂದರ್ಶಿಸು, ನೋಡಲು, ನೋಡಿಕೊಂಡು–ಹೋಗು: shall we take in Belur? ದಾರಿಯಲ್ಲಿ ಬೇಲೂರನ್ನು ನೋಡಿಕೊಂಡು ಹೋಗೋಣವೆ?
    6. (ಉಡುಪು ಮೊದಲಾದವನ್ನು) ಚಿಕ್ಕದು ಮಾಡು; ಸಣ್ಣ ಅಳತೆಗೆ ತಗ್ಗಿಸು.
    7. (ಹಾಯಿಯನ್ನು) ಸುತ್ತು.
    8. ಮೋಸ ಮಾಡು; ವಂಚಿಸು: I was taken in ನಾನು ಮೋಸಹೋದೆ.
    9. ತಪ್ಪದೆ, ಕ್ರಮವಾಗಿ (ವೃತ್ತಪತ್ರಿಕೆ ಮೊದಲಾದವನ್ನು) ಕೊಳ್ಳು; ಚಂದಾದಾರನಾಗಿ ತರಿಸಿಕೊ.
    10. (ಮನಸ್ಸಿನಲ್ಲಿ) ಗ್ರಹಿಸು; ಅರ್ಥಮಾಡಿಕೊ: did you take that in? ನೀನು ಅದನ್ನು ಅರ್ಥಮಾಡಿಕೊಂಡೆಯಾ?
  36. take in hand
    1. ಕೈಗೊಳ್ಳು; ತೊಡಗು; ವಹಿಸು; ಮಾಡಲು ಯಾ ವ್ಯವಹರಿಸಲು ಆರಂಭಿಸು.
    2. (ವ್ಯಕ್ತಿಯ) ನಿಯಂತ್ರಣದ, ಸುಧಾರಣೆಯ ಯಾ ಶಿಕ್ಷಣದ–ಜವಾಬ್ದಾರಿ ಹೊರು, ವಹಿಸಿಕೊ: the boy wants taking in hand ಹುಡುಗನನ್ನು ನೋಡಿಕೊಳ್ಳಬೇಕಾಗಿದೆ, ತಿದ್ದಬೇಕಾಗಿದೆ, ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿದೆ.
  37. take into account (ಇತರ ಅಂಶಗಳ ಜೊತೆಗೆ) ಲೆಕ್ಕಕ್ಕೆ, ಪರಿಗಣನೆಗೆ ತೆಗೆದುಕೊ: took their age into account (ಇತರ ಅಂಶಗಳ ಜೊತೆಗೆ) ಅವರ ವಯಸ್ಸನ್ನೂ ಪರಿಗಣಿಸಿದರು.
  38. take it
    1. ಇಟ್ಟುಕೊ; ಭಾವಿಸಿಕೊ: I take it that you have finished ನೀನು ಮುಗಿಸಿದ್ದೀಯೆಂದು ನಾನು ಭಾವಿಸಿದ್ದೇನೆ, ಅಂದುಕೊಂಡಿದ್ದೇನೆ.
    2. (ಆಡುಮಾತು) (ಕಷ್ಟ, ಶಿಕ್ಷೆ, ಮೊದಲಾದವನ್ನು) ಧೈರ್ಯವಾಗಿ (ಮೊದಲಾದ ವಿಶೇಷ ರೀತಿಯಲ್ಲಿ) ತೆಗೆದುಕೊ, ಸಹಿಸು, ಅನುಭವಿಸು: took it badly ಅದನ್ನು ಕೆಟ್ಟದ್ದಾಗಿ ತೆಗೆದುಕೊಂಡ, ದುಃಖದಿಂದ ಅನುಭವಿಸಿದ.
  39. take it $^2$easy.
  40. take it from me = ಪದಗುಚ್ಛ\((49)\).
  41. take it ill (ಒಂದರ ಬಗ್ಗೆ) ಅಸಮಾಧಾನ ಪಡು.
  42. take it into one’s head (ಏನನ್ನಾದರೂ) ಮಾಡಲು ನಿರ್ಧರಿಸು; (ಯಾವುದಾದರೂ ಕೆಲಸ ಮಾಡಬೇಕೆಂಬಉದನ್ನು) ತಲೆಗೆ ಹಚ್ಚಿಕೊ.
  43. take it or leave it (ಮುಖ್ಯವಾಗಿ ವಿಧಿರೂಪದಲ್ಲಿ) ಬೇಕಾದರೆ ತೆಗೆದುಕೊ, ಬೇಡವಾದರೆ ಬಿಡು (ತಾನು ಒಂದನ್ನು ನೀಡಿದ ಮೇಲೆ ಇನ್ನೊಬ್ಬನು ತೆಗೆದುಕೊಂಡ ನಿರ್ಣಯದ ಬಗ್ಗೆ ತಾತ್ಸಾರವನ್ನೋ ಅಸಹನೆಯನ್ನೋ ತೋರಿಸುವ ಮಾತು).
  44. take it out of
    1. (ಒಬ್ಬನ ಮೇಲೆ) ಸೇಡು ತೀರಿಸಿಕೊ.
    2. (ಒಬ್ಬನ) ಬಲಗುಂದಿಸು.
  45. take it out on( ತನ್ನ ಸಿಟ್ಟು, ನಿರಾಶೆ, ಮೊದಲಾದವನ್ನು ತೀರಿಸಿಕೊಳ್ಳಲು ಬೇರೊಬ್ಬನ) ಮೇಲೆ–ಬೀಳು, ಎಗರಾಡು, ರೇಗಾಡು.
  46. take (it) to $^1$heart.
  47. take it (up)on one(self)
    1. ಮಾಡು; ಕೈಹಾಕು; ಮಾಡುತ್ತೇನೆಂದುಕೊ.
    2. (ಭಾರ, ಹೊಣೆ, ಜವಾಬ್ದಾರಿ) ಹೊತ್ತುಕೊ; ವಹಿಸಿಕೊ.
    3. (ಮಾಡಲು) ಸ್ವಾತಂತ್ರ್ಯ ವಹಿಸು; ಧೈರ್ಯಮಾಡು; ಕೈಗೊಳ್ಳು.
  48. take it well ಸರಿಯಾಗಿ ಗ್ರಹಿಸು; ಒಳ್ಳೆಯ ಅರ್ಥದಲ್ಲಿ ತೆಗೆದುಕೊ; ತಪ್ಪು ಅರ್ಥ ಮಾಡದಿರು.
  49. take my word for it (ಎಲ್ಲವನ್ನೂ ಬಲ್ಲ) ನನ್ನ ಮಾತು ಕೇಳು; ಆ ವಿಚಾರದಲ್ಲಿ ನನ್ನ ಮಾತು–ನಂಬು, ತೆಗೆದುಕೊ.
  50. taken aback.
  51. taken all in all (or taking one thing with another) ಎಲ್ಲವನ್ನೂ ಒಟ್ಟಾರೆ ಗ್ರಹಿಸುವಾಗ; ಒಟ್ಟಿನಲ್ಲಿ; ಒಟ್ಟಾರೆ.
  52. take off
    1. (ತನ್ನ ಯಾ ಇನ್ನೊಬ್ಬರ ಧರಿಸಿದ ಬಟ್ಟೆ ಮೊದಲಾದವನ್ನು) ಕಳಚು; ತೆಗೆದಿಡು.
    2. ದೂರ ಕಳುಹಿಸು; ಕರೆದೊಯ್ಯು; ಸಾಗಹಾಕು.
    3. (ಮುಖ್ಯವಾಗಿ ಅವಸರವಸರವಾಗಿ) ಹೊರಟುಹೋಗು; ನಿರ್ಗಮಿಸು: took off in a fast car ವೇಗವಾದ ಕಾರಿನಲ್ಲಿ ಹೊರಟುಹೋದ.
    4. (ಬೆಲೆ ಮೊದಲಾದವನ್ನು) ಕಡಿಮೆ ಮಾಡು; ಇಳಿಸು.
    5. ಅಣಕಿಸು; ಅಣಕಿಸಿ ಲೇವಡಿ ಮಾಡು; ಅನುಕರಿಸಿ ಹಾಸ್ಯ, ಗೇಲಿ–ಮಾಡು.
    6. (ಸ್ಥಳದಿಂದ ಸ್ಥಳಕ್ಕೆ ಯಾ ನೆಲದಿಂದ ಮೇಲಕ್ಕೆ) ಹಾರು; ನೆಗೆ; ಚಿಮ್ಮು.
    7. (ವಿಮಾನ ಯಾ ವಿಮಾನ ಚಾಲಕ) ಮೇಲೇರು; ಮೇಲಕ್ಕೆ ಹಾರು.
    8. (ವಾರದಲ್ಲಿ ದಿನ ಮೊದಲಾದವನ್ನು) ರಜಾದಿನವಾಗಿ ಪರಿಗಣಿಸು; ರಜ ತೆಗೆದುಕೊ.
    9. (ಯೋಜನೆ, ಉದ್ಯಮ, ಮೊದಲಾದವುಗಳ ವಿಷಯದಲ್ಲಿ) ಯಶಸ್ವಿಯಾಗು ಯಾ ಜನಪ್ರಿಯವಾಗು.
  53. take offence ಅಪಚಾರವಾಗಿ ಎಣಿಸು; ಅಸಮಾಧಾನ ಪಟ್ಟುಕೊ.
  54. take off one’s hat ಮೆಚ್ಚಿಗೆ ಸೂಚಿಸು; ಪ್ರಶಂಸೆ ತೋರು; ಶ್ಲಾಘಿಸು.
  55. take on
    1. (ಕೆಲಸ, ಜವಾಬ್ದಾರಿ, ಮೊದಲಾದವನ್ನು) ನಿರ್ವಹಿಸಲು ಒಪ್ಪಿಕೊ; ವಹಿಸಿಕೊ; ಕೈಗೊಳ್ಳು.
    2. (ಹೊಸ ಅರ್ಥ ಮೊದಲಾದವನ್ನು) ತಳೆ; ಪಡೆ.
    3. (ನೌಕರನನ್ನು) ಕೆಲಸಕ್ಕೆ–ಸೇರಿಸಿಕೊ, ತೆಗೆದುಕೊ.
    4. (ಗಾಲ್ಫ್‍ ಮೊದಲಾದ ಆಟಗಳಲ್ಲಿ, ವಾದ ಮೊದಲಾದವುಗಳಲ್ಲಿ) (ಮುಖ್ಯವಾಗಿ ಬಲವಾದ ಎದುರಾಳಿಯನ್ನು) ಎದುರಿಸಲು ಸಿದ್ಧನಾಗು; ಸವಾಲು ಒಪ್ಪಿಕೊ.
    5. (ಆಡುಮಾತು) ಆವೇಶ ತೋರಿಸು; ರಗಳೆ ಮಾಡು; ರಂಪ, ಗೊಂದಲ, ರಾದ್ಧಾಂತ–ಎಬ್ಬಿಸು.
  56. take oneself off ನಿರ್ಗಮಿಸು; ನಿಕಲಾಯಿಸು; ಹೊರಟುಹೋಗು.
  57. take one’s $^1$hook.
  58. take one’s $^3$leave of.
  59. take one’s $^1$place.
  60. take one’s revenge ಸೇಡು ತೀರಿಸಿಕೊ.
  61. take one’s time ಆತುರ ಪಡದಿರು; ಅಗತ್ಯವಾದಷ್ಟು ಕಾಲ ತೆಗೆದುಕೊ.
  62. take $^1$orders.
  63. take out
    1. (ಒಳಗಿನಿಂದ) ಹೊರಕ್ಕೆ–ಹೊರಡಿಸು, ತರು, ಎಳೆ, ಸೆಳೆ.
    2. ಜೊತೆಗೆ ಹೋಗು; ಕರೆದೊಯ್ಯಿ: take him out for a walk ಅವನನ್ನು ತಿರುಗಾಡಲು ಕರೆದೊಯ್ಯಿ.
    3. (ಅಮೆರಿಕನ್‍ ಪ್ರಯೋಗ) = ಪದಗುಚ್ಛ(19b).
    4. (ಬ್ರಿಡ್ಜ್‍ ಆಟದಲ್ಲಿ)(ತನ್ನ ಜೊತೆಯವನು ಹೇಳಿದ ರಂಗು ಬಿಟ್ಟು ಹೊಸ ರಂಗು ಹೇಳಿ ಯಾ ತುರುಫಿಲ್ಲದ ಆಟ ಹೇಳಿ, ಜೊತೆಯವನಿಂದ) ಆಟ ತೆಗೆದುಕೊ.
    5. (ನ್ಯಾಯಾಲಯದ ಸಮನ್ಸ್‍, ಸ್ವಾಮ್ಯದ ಸನ್ನದು, ರಹದಾರಿ, ಮೊದಲಾದವನ್ನು) ಪಡೆದುಕೊ; ತೆಗೆದುಕೊ.
    6. ಕೊಲ್ಲು ಯಾ ನಾಶಮಾಡು.
    7. (ಕರೆ ಮೊದಲಾದವನ್ನು) ತೆಗೆದು, ಅಳಿಸಿ –ಹಾಕು.
  64. take over
    1. (ಬೇರೊಂದು ವ್ಯಾಪಾರ ಸಂಸ್ಥೆ ಮೊದಲಾದವನ್ನು) ಸ್ವಾಧೀನಕ್ಕೆ, ವಶಕ್ಕೆ–ತೆಗೆದುಕೊ; ಸ್ವಾಮ್ಯ ಯಾ ಮಾಲೀಕತ್ವ ವಹಿಸಿಕೊ.
    2. (ಮುದ್ರಣ) ಮುಂದಿನ ಸಾಲಿಗೆ ವರ್ಗಾಯಿಸು.
  65. take pains ಶ್ರಮವಹಿಸು; ಕಷ್ಟಪಡು.
  66. take $^1$part.
  67. take person all the time (ಆಡುಮಾತು) (ಒಬ್ಬ ವ್ಯಕ್ತಿ) ತನ್ನ ಸರ್ವಶಕ್ತಿಯನ್ನೂ ಪ್ರಯೋಗಿಸುವಂತಾಗು; ತನ್ನ ಎಲ್ಲ ಕಾಲ, ಶಕ್ತಿಸಾಮರ್ಥ್ಯಗಳನ್ನೂ ವಿನಿಯೋಗಿಸುವಂತಾಗು.
  68. take (person) down a $^1$peg or two.
  69. take (person) into one’s confidence ಒಬ್ಬನಲ್ಲಿ ವಿಶ್ವಾಸವಿಡು; ಅಂತರಂಗ ಹೇಳಿಕೊ.
  70. take person out of himself (or herself) ಒಬ್ಬನು(ಳು) ತನ್ನ ಚಿಂತೆ, ತೊಂದರೆ, ಮೊದಲಾದವನ್ನು ಮರೆಯುವಂತೆ ಮಾಡು.
  71. take pity on (ಒಬ್ಬನ) ಮೇಲೆ ಕನಿಕರಪಡು; ದಯೆತೋರಿಸು.
  72. take $^1$place.
  73. take possession.
  74. take precedence.
  75. take pride in one’s work ತನ್ನ ಕೆಲಸದ ಬಗ್ಗೆ ಹೆಮ್ಮೆಪಡು.
  76. take shape ರೂಪ ತಾಳು; ನಿರ್ದಿಷ್ಟ ಆಕಾರ ಪಡೆ; ಒಂದು ಗೊತ್ತಾದ ರೂಪಕ್ಕೆ ಬೆಳೆ.
  77. take sides ಪಕ್ಷ ವಹಿಸು; ಪಕ್ಷಪಾತ ತೋರಿಸು.
  78. take $^1$silk.
  79. take $^1$stock.
  80. take that! (ಏಟು ಮೊದಲಾದವನ್ನು ಹೊಡೆಯುವಾಗ) ತಗೊ ಅದನ್ನು!
  81. take the biscuit (or bun or cake) (ಆಡುಮಾತು) ಎಲ್ಲವನ್ನೂ ಮೀರಿಸು; ಎದ್ದು ಕಾಣುವಂತಿರು; ಗಮನಾರ್ಹವಾಗಿರು.
  82. take the bit between the teeth.
  83. take the $^1$bull by the horns.
  84. take the liberty to do.
  85. take the $^1$place of.
  86. take the $^1$sun.
  87. take to
    1. ತೊಡಗು; ಮಾಡಲು ಪ್ರಾರಂಭಿಸು.
    2. ಅಭ್ಯಾಸ ಮಾಡಿಕೊ; ಮಾಡುವ, ಬಳಸುವ–ವಾಡಿಕೆ ಮಾಡಿಕೊ; ಅಭ್ಯಾಸಕ್ಕೆ, ಹವ್ಯಾಸಕ್ಕೆ, ಚಾಳಿಗೆ–ಬೀಳು: took to smoking ಧೂಮಪಾನದ ಚಾಳಿಗೆ ಬಿದ್ದ. take to literature ಸಾಹಿತ್ಯಾಭ್ಯಾಸ ಮಾಡು.
    3. ಒಲವು ತೋರು; ಇಷ್ಟ ಪಡು.
    4. (ಒಬ್ಬನ ಜೊತೆ) ಹೊಂದಾವಣೆ ಮಾಡಿಕೊ.
    5. ಆಶ್ರಯಿಸು; ಅವಲಂಬಿಸು; ಹಿಡಿ.
  88. take to one’s $^1$heels.
  89. take to $^1$pieces.
  90. take to 1task.
  91. take to wife (ಪ್ರಾಚೀನ ಪ್ರಯೋಗ) (ಒಬ್ಬಳನ್ನು) ಮದುವೆಯಾಗು.
  92. take trouble ಶ್ರಮವಹಿಸು; ತೊಂದರೆ ತೆಗೆದುಕೊ.
  93. take up
    1. ಮೇಲೆತ್ತು; ಮೇಲಕ್ಕೆ ಎತ್ತು.
    2. ಹೀರಿಕೊ: sponge takes up water ಸ್ಪಂಜು ನೀರನ್ನು ಹೀರಿಕೊಳ್ಳುತ್ತದೆ.
    3. (ಕಾಲ, ಪ್ರದೇಶ, ಮೊದಲಾದವುಗಳ ವಿಷಯದಲ್ಲಿ) ಹಿಡಿ; ತೆಗೆದುಕೊ; ಬೇಕಾಗು; ಅಪೇಕ್ಷಿಸು: takes up all my time ನನ್ನ ಸಮಯವನ್ನೆಲ್ಲ ತೆಗೆದು ಕೊಳ್ಳುತ್ತದೆ.
    4. (ಒಬ್ಬ ವ್ಯಕ್ತಿಯನ್ನು) ಗಾಡಿಯೊಳಕ್ಕೆ–ಹತ್ತಿಸಿಕೊ, ಸೇರಿಸಿಕೊ: the train stops to take up passengers ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ರೈಲು ನಿಲ್ಲುತ್ತದೆ.
    5. ಆಶ್ರಿತನನ್ನಾಗಿ–ಮಾಡಿಕೊ, ಸ್ವೀಕರಿಸು, ತೆಗೆದುಕೊ.
    6. (ಕಸಬನ್ನಾಗಿ) ಹಿಡಿ; ಅವಲಂಬಿಸು.
    7. (ವಾಸ ಮೊದಲಾದವನ್ನು) ಹೂಡು; ಪ್ರಾರಂಭಿಸು.
    8. (ಮಾತನಾಡುವವನನ್ನು) (ಅಸಮ್ಮತಿ ತೋರಿ) ತಡೆ; ಅಡ್ಡಿಪಡಿಸು.
    9. (ಸಮಸ್ಯೆ, ವಿಷಯ, ವಿಚಾರಣೆ, ಮೊದಲಾದವನ್ನು) ಅಡಚಣೆಯ ನಂತರ ಮುಂದುವರಿಸು.
    10. (ಬಟ್ಟೆಯ ವಿಷಯದಲ್ಲಿ) ಚಿಕ್ಕದು ಮಾಡು; (ಅಳತೆ) ಕಡಮೆ ಮಾಡು.
    11. (ಸಮಸ್ಯೆ, ವಿಷಯ, ಕಾರ್ಯ, ಮೊದಲಾದವುಗಳಲ್ಲಿ) ಆಸಕ್ತಿ ವಹಿಸು ಯಾ ತೊಡಗು.
  94. take up the $^1$cudgels.
  95. take up the $^1$gauntlet.
  96. take up the $^1$glove.
  97. take up with ಸಹವಾಸ ಬೆಳೆಸು; ಜೊತೆ ಸೇರು.
  98. to be taken bad = ಪದಗುಚ್ಛ \((100)\).
  99. to be taken by (or with) ಆಕರ್ಷಿತನಾಗು; ಮೋಹಗೊಳ್ಳು; ಮರುಳಾಗು.
  100. to be taken ill (or) (ಅಮೆರಿಕನ್‍ ಪ್ರಯೋಗ) sick (ಆಡುಮಾತು) (ಮುಖ್ಯವಾಗಿ ಇದ್ದಕ್ಕಿದ್ದಂತೆ) ರೋಗಹಿಡಿ; ಕಾಯಿಲೆ ಬೀಳು; ಅಸ್ವಸ್ಥನಾಗು.
  101. to take a joke in good part ತಮಾಷೆಯನ್ನು ಒಳ್ಳೆಯ, ಸರಿಯಾದ ರೀತಿಯಲ್ಲಿ (ಅಸಮಾಧಾನ, ಅವಮಾನ ಪಡದೆ) ತೆಗೆದುಕೊ.
  102. took it like a lamb ಅವನು ಅದನ್ನು ಸೈರಿಸಿಕೊಂಡು (ಕುರಿಯ ಹಾಗೆ) ಸುಮ್ಮನಿದ್ದ; ಕುರಿಮರಿಯಂತೆ, ತಲೆ ಬಗ್ಗಿಸಿಕೊಂಡು ತೆಗೆದುಕೊಂಡ; ಪೂರ್ಣ ವಿಧೇಯತೆಯಿಂದ ಸಹಿಸಿಕೊಂಡ.
  103. will not take a hint ಸೂಕ್ಷ್ಮ ಸೂಚನೆ ಗ್ರಹಿಸಲಾರ, ಅವನಿಗೆ ಅರ್ಥವಾಗದು.
  104. you can’t take it with you (ಆಡುಮಾತು) ನೀನು ಸತ್ತಾಗ, ಅದನ್ನು ನಿನ್ನ ಜೊತೆ ಕೊಂಡೊಯ್ಯಲಾರೆ (ನಿನಗೆ ಸೇರಿದುದೆಲ್ಲವೂ ನೀನು ಸತ್ತ ಅನಂತರ ಬೇರೆಯವರ ಪಾಲಾಗುತ್ತದೆ).
  105. you may take it from me ನೀನು ಆ ವಿಷಯದಲ್ಲಿ ನನ್ನ ಮಾತು ನಂಬಬಹುದು.
  106. you must take us as you find us ನಾವು ಹೇಗಿದ್ದೇವೋ ಹಾಗೆ ನಮ್ಮ (ಲೋಪದೋಷ ಮೊದಲಾದವುಗಳೊಡನೆ) ನೀನು ನಮ್ಮನ್ನು–ಅರ್ಥಮಾಡಿ ಕೊಳ್ಳಬೇಕು, ತೆಗೆದುಕೊಳ್ಳಬೇಕು, ಒಪ್ಪಿಕೊಳ್ಳಬೇಕು.
See also 1take
2take ಟೇಕ್‍
ನಾಮವಾಚಕ
  1. (ಮೀನು, ಬೇಟೆ, ಮೊದಲಾದವುಗಳ ವಿಷಯದಲ್ಲಿ, ಒಂದು ಅವಧಿ ಯಾ ಪ್ರಯತ್ನದಲ್ಲಿ ಸಿಕ್ಕ) ಹಿಡಿದದ್ದರ ಮೊತ್ತ; ಒಟ್ಟು ಸಿಕ್ಕಿದುದು; ಹಿಡಿದಷ್ಟು; ಸಿಕ್ಕಿದಷ್ಟು.
  2. (ಮುದ್ರಣ) ತೆಕ್ಕೆ; ಮೊಳೆ ಜೋಡಿಸಲು ಒಂದು ಸಲಕ್ಕೆ ತೆಗೆದುಕೊಂಡ ಹಸ್ತಪ್ರತಿಯ ಕಟ್ಟು.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)(ಮುಖ್ಯವಾಗಿ ನಾಟಕಮಂದಿರದಲ್ಲಿ ಟಿಕೀಟು ಮಾರಿ) ಬಂದ ಹಣ; ಗಳಿಕೆ; ಆದಾಯ; ಉತ್ಪತ್ತಿ.
  4. (ಚಲನಚಿತ್ರ) ಸರಣಿ ಚಿತ್ರಣ; ಒಂದೇ ಸಲ, ಯಾವ ತಡೆಯೂ ಇಲ್ಲದೆ ಚಿತ್ರೀಕರಿಸಿದ ದೃಶ್ಯ ಯಾ ಸಂದರ್ಭ.