See also 2chance  3chance
1chance ಚಾನ್ಸ್‍
ನಾಮವಾಚಕ
  1. ಅದೃಷ್ಟ; ವಿಧಿ; ಪುರುಷ ಪ್ರಯತ್ನವಿಲ್ಲದೆ ಘಟನೆಗಳು ನಡೆಯುವ ರೀತಿ.
  2. ಆಕಸ್ಮಿಕ; ಅನಿರೀಕ್ಷಿತವಾದ, ಅಕಸ್ಮಾತ್‍ ಆಗುವ–ಘಟನೆ.
  3. (ತಪ್ಪಿಸಿಕೊಳ್ಳುವ ಮೊದಲಾದ) ಅವಕಾಶ.
  4. (ಕ್ರಿಕೆಟ್‍) (ಬ್ಯಾಟುಗಾರನನ್ನು ಔಟ್‍ ಮಾಡಲು ದೊರೆತ) ಅವಕಾಶ.
  5. ಸಾಧ್ಯತೆ.
  6. (ಮುಖ್ಯವಾಗಿ ಬಹುವಚನದಲ್ಲಿ) ಸಂಭವ: the chances are against it ಹಾಗೆ ಆಗುವ ಸಂಭವವಿಲ್ಲ.
  7. (ಪೂರ್ವಭಾವಿಯಾದ ಏರ್ಪಾಡಿಲ್ಲದೆ ಯಾ ಗೋಚರವಾಗುವ ಕಾರಣವಿಲ್ಲದೆ) ತನಗೆ ಸಂಭವಿಸುವ ಘಟನೆ.
  8. ಯೋಗ; ದೆಸೆ; ಯೋಗಾಯೋಗ; ದೈವ ಘಟನೆ; ವಿಧಿ, ನಿಯತಿ ಎಂದು ನಂಬಲಾದ ಘಟನಾವಳಿ.
ಪದಗುಚ್ಛ

game of chance ಅದೃಷ್ಟದ ಆಟ; ಕೌಶಲವನ್ನವಲಂಬಿಸದೆ ಕೇವಲ ಅದೃಷ್ಟವನ್ನೇ ಅವಲಂಬಿಸಿರುವ ಆಟ.

ನುಡಿಗಟ್ಟು
  1. by chance ಆಕಸ್ಮಾತ್ತಾಗಿ; ಅನಿರೀಕ್ಷಿತವಾಗಿ; ಅಪ್ರಯತ್ನವಾಗಿ.
  2. on the chance (of, that) ಆಗಬಹುದೆಂದು; ನಡೆಯಬಹುದೆಂಬ–ನಿರೀಕ್ಷೆಯಿಂದ, ನೆಚ್ಚಿಕೆಯಿಂದ.
  3. on the off chance ಸಂಭವ ತೀರ ಅಲ್ಪ ಎನಿಸುವಂತಿದ್ದರೂ.
  4. stand a (good) chance ಒಳ್ಳೆಯ, ಉತ್ತಮ ಅವಕಾಶವಿರು; ಈಡೇರುವ ಸಂಭವವಿರು.
  5. take a chance ಸಾಹಸ ಮಾಡು; ಅಪಾಯದ ಸಂಭವವಿರುವಾಗ–ಮುಂದುವರಿ, ಕೆಲಸಕ್ಕೆ ಕೈ ಹಾಕು.
  6. take chances = ನುಡಿಗಟ್ಟು \((5)\).
  7. take one’s chance (on, with) ಅದೃಷ್ಟವಿದ್ದ ಹಾಗೆ ಆಗಲಿ ಎನ್ನು; ಬಂದದ್ದನ್ನು ಸ್ವೀಕರಿಸು.
  8. the main chance ಹಣ ಮುಂತಾದ್ದನ್ನು ಪಡೆಯುವ ಅವಕಾಶ: he always has an eye to the main chance ಅವನಿಗೆ ಸದಾ ಹಣಗಳಿಸುವುದರ ಮೇಲೆಯೇ ಕಣ್ಣು.