See also 2gauntlet
1gauntlet ಗಾಂಟ್‍ಲಿಟ್‍
ನಾಮವಾಚಕ
  1. (ಚರಿತ್ರೆ) ಕೈಪೊಡೆ; ಉಕ್ಕಿನ ಕೈಕವಚ; ಹಸ್ತತ್ರಾಣ; ಉಕ್ಕಿನ ಕೈಗವುಸು; ತೊಗಲಿನ ಮೇಲೆ ಉಕ್ಕಿನ ತಗಡು ಹೊದಿಸಿದ, ಮಣಿಕಟ್ಟಿಗಿಂತಲೂ ಮೇಲಕ್ಕೆ ಹರಡಿ ಮುಂಗೈ ಮುಚ್ಚುವ, ಉಕ್ಕಿನ ಕೈಚೀಲ. Figure: gaunlet-1
  2. (ಮೋಟಾರು ವಾಹನ ನಡೆಸುವುದು, ಕುದುರೆ ಸವಾರಿ ಮಾಡುವುದು, ಕತ್ತಿವರಸೆ ಮಾಡುವುದು, ಕ್ರಿಕೆಟ್‍ನಲ್ಲಿ ವಿಕೆಟ್‍ ಕಾಯುವುದು, ಮೊದಲಾದವುಗಳಿಗಾಗಿ ಬಳಸುವ, ಮಣಿಕಟ್ಟಿಗಿಂತಲೂ ಮೇಲಕ್ಕೆ ವ್ಯಾಪಿಸುವ, ಅಳ್ಳಕವಾದ) ಕೈ – ಚೀಲ, ಗವುಸು, ಕಾಪು. Figure: gauntlet-2
  3. ಕೈಗವುಸಿನ (ಅಗಲವಾದ) ಮಣಿಕಟ್ಟಿನ ಭಾಗ.
ನುಡಿಗಟ್ಟು
  1. fling (or throw) down the gauntlet
    1. ಕಾಳಗಕ್ಕೆ, ಸೆಣಸಾಟಕ್ಕೆ ಕರೆ; ಪೈಜೆ ಹೂಡು; ಸಮರಕ್ಕಾಗಿ ಸವಾಲು ಹಾಕು.
    2. (ಇದರ ಸಂಕೇತವಾಗಿ) ಉಕ್ಕಿನ ಕೈಕವಚ ಎಸೆ; ಮುಡಿಗೆಯಿಕ್ಕು.
  2. pick (or take) up the gauntlet
    1. ಕಾಳಗಕ್ಕೆಂದು ಕೊಟ್ಟ ಕರೆಯನ್ನೊಪ್ಪಿಕೊ; ಸಮರಕ್ಕಾಗಿ ಕೊಟ್ಟ ಸವಾಲು ಸ್ವೀಕರಿಸು, ಸವಾಲೊಪ್ಪು.
    2. (ಇದರ ಸಂಕೇತವಾಗಿ ಎದುರಾಳಿಯ ಕೆಳಗೆಸೆದ) ಕೈಕವಚವನ್ನೆತ್ತಿಕೊ.