See also 2word
1word ವರ್ಡ್‍
ನಾಮವಾಚಕ
  1. ಮಾತು; ಶಬ್ದ; ಪದ; ನುಡಿ; ಸೊಲ್ಲು: is not the word for it ಅದಕ್ಕೆ ತಕ್ಕ ಪದವಲ್ಲ.
  2. ಕಂಪ್ಯೂಟರ್‍ ದತ್ತಾಂಶ, ನಿರ್ದೇಶನ, ಮೊದಲಾದವುಗಳಲ್ಲಿ ಬಳಸುವ, ಮೂಲಭೂತ ಅಭಿವ್ಯಕ್ತಿಯ ಘಟಕ, ಅಂಶ.
  3. ಮಾತು; ಭಾಷಣ: honest in word and deed ನುಡಿಯಲ್ಲಿ ಮತ್ತು ನಡೆಯಲ್ಲಿ ಪ್ರಾಮಾಣಿಕ; ನುಡಿದಂತೆ ನಡೆಯುವ (ನಿಷ್ಠೆಯುಳ್ಳ).
  4. (ಬಹುವಚನ ಯಾ ಏಕವಚನದಲ್ಲಿ) ಹೇಳಿದ ಮಾತು; ಹೇಳಿಕೆ; ನುಡಿ; ಟೀಕೆ; ಉಕ್ತಿ; ವಚನ; ಮಾತುಕತೆ.
  5. (ಬಹುವಚನದಲ್ಲಿ) ಮಾತು; ಹಾಡಿನ ಸಾಹಿತ್ಯ, ನಟನ ಮಾತುಗಳು, ಮೊದಲಾದವು.
  6. (ಕೇವಲ ಬಾಯಿಮಾತಿನಲ್ಲಿ) ಹೇಳಿದುದು; ಮಾತು; ನುಡಿ (ಕಾರ್ಯರೂಪವಾಗಿ ಮಾಡಿದುದಲ್ಲ): bold in word only ಮಾತಿನಲ್ಲಷ್ಟೇ ಧೈರ್ಯಶಾಲಿ.
  7. ಸುದ್ದಿ; ವಾರ್ತೆ; ಸಮಾಚಾರ: send word ಸಮಾಚಾರ ಕಳುಹಿಸು.
  8. ಆಡಿದ ಮಾತು; ಕೊಟ್ಟ ವಚನ; ವಾಗ್ದಾನ: gave us their word ಅವರು ವಾಗ್ದಾನ ಮಾಡಿದರು, ಮಾತು ಕೊಟ್ಟರು.
  9. ಆಜ್ಞೆ; ಅಪ್ಪಣೆ; ಶಾಸನ: his word is law ಅವನ ಮಾತೇ ಶಾಸನ.
  10. ಸಂಕೇತ ಪದ: gave the word to begin ಪ್ರಾರಂಭಿಸಲು ಸಂಕೇತ(ಪದ) ಕೊಟ್ಟ.
  11. ಸೂಕ್ತಿ; ಧ್ಯೇಯ(ಪದ).
  12. (ಬಹುವಚನದಲ್ಲಿ) ಕೋಪದ ಮಾತು; ಜಗಳ: have words with ಕೋಪದಿಂದ – ನುಡಿ, ಕೂಗಾಡು.
ಪದಗುಚ್ಛ
  1. at a word ಹೇಳಿದ ಯಾ ಕೇಳಿದ ಕೂಡಲೇ.
  2. a word to the wise ವಿವೇಕಿಗೆ ಒಂದು ಮಾತು ಸಾಕು.
  3. be as good as word (or better than) one’s word ನುಡಿದಂತೆ ನಡೆ; ಆಡಿದಂತೆ (ಯಾ ಆಡಿದುದಕ್ಕಿಂತ ಮಿಗಿಲಾಗಿ) ನಡೆದುಕೊ.
  4. break one’s word ಮಾತಿಗೆ ತಪ್ಪು.
  5. eat one’s words.
  6. give (or pledge) person word ಮಾತು, ಭಾಷೆ – ಕೊಡು; ವಾಗ್ದಾನ ಮಾಡು.
  7. (hard, high, etc.) words ಕೋಪದ, ಬಿರು – ಮಾತುಗಳು.
  8. have a word (with) ಸಂಕ್ಷೇಪವಾಗಿ ಮಾತುಕತೆ ನಡೆಸು, ವಿಚಾರ ವಿನಿಮಯ ಮಾಡಿಕೊ.
  9. have a word to say ಹೇಳಲು ಯಾ ಕೇಳಲು ಯೋಗ್ಯವಾದಂಥ ವಿಷಯವನ್ನು ತಿಳಿದಿರು.
  10. have no words for ಮಾತಿಲ್ಲದಂತಾಗು; ಹೇಳಲು ಮಾತಿಲ್ಲವಾಗು
  11. his word is (as good as) his bond ಅವನ ಮಾತೇ ಒಂದು ಪತ್ರ(ದಷ್ಟು ಖಚಿತ, ಸತ್ಯ).
  12. I give you my word for it ಅದು ಹಾಗೆಯೇ, ನಿಜ, ಎಂದು ಭರವಸೆ ಕೊಡುತ್ತೇನೆ, ಪ್ರಮಾಣ ಮಾಡುತ್ತೇನೆ.
  13. in a (or one) word ಒಂದು ಮಾತಿನಲ್ಲಿ; ಸಂಕ್ಷೇಪವಾಗಿ.
  14. in other words ಅರ್ಥಾತ್‍; ಅಂದರೆ; ಬೇರೆ ಮಾತುಗಳಲ್ಲಿ ಹೇಳುವುದಾದರೆ.
  15. in so many words ಸ್ಪಷ್ಟವಾಗಿ; ನಿಸ್ಸಂದಿಗ್ಧವಾಗಿ; ಯಾವ ಸಂದೇಹವೂ ಇಲ್ಲದಂತೆ.
  16. keep one’s word ಮಾತು ಉಳಿಸಿಕೊ; ವಾಗ್ದಾನ ಪಾಲಿಸು.
  17. my (or upon my) word (ಆಶ್ಚರ್ಯ ಯಾ ಭಯಸೂಚಕ ಅವ್ಯಯವಾಗಿ) ಅಯ್ಯೋ ದೇವರೇ! (ಇತ್ಯಾದಿ).
  18. not a word of it (ಕಥೆ, ವೃತ್ತಾಂತ, ಮೊದಲಾದವುಗಳ ವಿಷಯದಲ್ಲಿ) ಅದರ ಬಗ್ಗೆ – ಒಂದು ಮಾತಿಲ್ಲ, ಸೊಲ್ಲಿಲ್ಲ, ಸದ್ದಿಲ್ಲ.
  19. not have a word to throw at a dog ನಾಯಿಯನ್ನು ಮಾತನಾಡಿಸಲೂ ಬಾಯಿ ಬಿಡದಷ್ಟು ಬಿಗಿತುಕೊಂಡಿದ್ದಾನೆ; ಮಾತನಾಡಿದರೆ ಮುತ್ತು ಸುರಿದು ಹೋಗುತ್ತದೇನೋ ಎಂದು ತುಟಿ ಬಿಚ್ಚದಿದ್ದಾನೆ.
  20. not the word for it (ಹಾಗೆಂದರೆ) ಅದಕ್ಕೆ ಸರಿಯಾದ, ಸಮರ್ಪಕವಾದ – ಪದವಲ್ಲ; ಅದನ್ನು ಸರಿಯಾಗಿ ವಿವರಿಸಿದಂತಾಗಲಿಲ್ಲ.
  21. of few words ಮಿತಭಾಷಿಯಾದ; ಹೆಚ್ಚು ಮಾತಿಲ್ಲದ.
  22. of many words ವಾಚಾಳಿಯಾದ; ವಿಪರೀತ ಮಾತನಾಡುವ.
  23. of one’s words ಮಾತಿಗೆ ತಪ್ಪದ; ಆಡಿದ ಮಾತಿನಂತೆ ನಡೆಯುವ; (ಅವನ) ಮಾತನ್ನು – ನೆಚ್ಚಬಹುದಾದ, ನಂಬಬಹುದಾದ: a man of his word ಮಾತಿಗೆ ತಪ್ಪದ ವ್ಯಕ್ತಿ.
  24. say a few words ಎರಡು ಮಾತನಾಡು; ಚಿಕ್ಕ ಭಾಷಣಮಾಡು.
  25. say the word ಅಪ್ಪಣೆ (ಆಜ್ಞೆ) ಕೊಡು.
  26. suit the action to the word ಆಡಿದಂತೆ ನಡೆ; (ಬೆದರಿಕೆ, ಎಚ್ಚರಿಕೆ, ಮೊದಲಾದವನ್ನು) ನಿರ್ದಾಕ್ಷಿಣ್ಯವಾಗಿ ಕಾರ್ಯರೂಪಕ್ಕೆ ತಂದುಬಿಡು.
  27. take a person at his (or her) word ಒಬ್ಬ ವ್ಯಕ್ತಿಯ ಮಾತುಗಳನ್ನು ಅಕ್ಷರಶಃ ಗ್ರಹಿಸು, ಅರ್ಥಮಾಡಿಕೊ.
  28. take a person’s word for it ಅವನು ಹೇಳಿದ್ದನ್ನು (ವಿಚಾರ, ಶೋಧನೆ ಮಾಡದೆ) ಸತ್ಯವೆಂದು ಒಪ್ಪಿಕೊ, ನಂಬಉ.
  29. the Word (of God)
    1. ಬೈಬಲ್ಲು; ಬೈಬಲ್ಲು ಯಾ ಅದರ ಒಂದು ಭಾಗ.
    2. (ದೇವಮಾನವರ ಮಧ್ಯವರ್ತಿ ಅಥವಾ ಪ್ರತ್ಯಕ್ಷ ದೇವಸ್ವರೂಪನೆಂದು ಕ್ರೈಸ್ತರು ನಂಬಉವ) ಯೇಸುಕ್ರಿಸ್ತ.
  30. too funny etc. for words ಹೇಳಲಾರದಷ್ಟು ವಿಚಿತ್ರ, ಹಾಸ್ಯಾಸ್ಪದ, ಇತ್ಯಾದಿ.
  31. upon (or on) my word ನನ್ನ ಆಣೆಗೂ, ಸತ್ಯವಾಗಿ ಹೇಳುತ್ತೇನೆ... ಇತ್ಯಾದಿ.
  32. word for word ಪದಶಃ; ಶಬ್ದಕ್ಕೆ ಪ್ರತಿಯಾಗಿ ಶಬ್ದ ಇಟ್ಟು: translate word for word ಪದಶಃ ಭಾಷಾಂತರಿಸು.
  33. word of honour ಗೌರವದ ಆಣೆ; ತನ್ನ ಗೌರವದ ಮೇಲೆ ಆಣೆ ಇಟ್ಟು ಮಾಡಿದ ವಾಗ್ದಾನ, ಕೊಟ್ಟ ಮಾತು.
  34. word of mouth ಕೇವಲ ಬಾಯಿಮಾತು, ಹೇಳಿಕೆ.
  35. words $^2$fail me.
  36. words of command (ಆಟ, ಸೈನಿಕ ಕವಾಯತು, ಮೊದಲಾದವುಗಳಲ್ಲಿ) ಆಜ್ಞೆಯ ಮಾತು.