See also 2place
1place ಪ್ಲೇಸ್‍
ನಾಮವಾಚಕ
  1. (ಒಂದು ಗೊತ್ತಾದ) ಎಡೆ; ಕಡೆ; ಜಾಗ; ಸ್ಥಳ.
  2. (ವ್ಯಕ್ತಿ ಯಾ ವಸ್ತುವು ಆಕ್ರಮಿಸುವ) ನೆಲೆ; ಸ್ಥಾನ; ತಾವು; ಠಾವು: it has changed its place ಅದು ತನ್ನ ಸ್ಥಾನವನ್ನು ಬದಲಾಯಿಸಿದೆ.
  3. ಸ್ಥಾನ; ಸ್ಥಳ; ಅವಕಾಶ; ಆಸ್ಪದ; ತಕ್ಕ, ನಿಯತ ಯಾ ಸಹಜ – ಸ್ಥಾನ: take your place ನಿನ್ನ ಸ್ಥಾನದಲ್ಲಿರು. there is no place for doubt ಅನುಮಾನಕ್ಕೆ ಆಸ್ಪದವಿಲ್ಲ.
  4. ಪಟ್ಟಣ, ಊರು, ಹಳ್ಳಿ, ಮೊದಲಾದವು: was born in this place ಅವನು ಈ ಊರಿನಲ್ಲಿ ಹುಟ್ಟಿದ್ದು.
  5. ವಾಸಸ್ಥಾನ; ಮನೆ; ವಸತಿ; ವಾಸಸ್ಥಳ: has a place in the country ಹಳ್ಳಿಯಲ್ಲಿ ಅವನಿಗೆ ಒಂದು ಮನೆ ಇದೆ. come round to my place ನನ್ನ ಮನೆಗೆ ಬಾ.
  6. (ನಗರ ಮೊದಲಾದವುಗಳಲ್ಲಿ ಗೃಹಸಮೂಹದ, ಗುಂಪು ಕಟ್ಟಡಗಳ) ಪ್ರದೇಶ; ಸ್ಥಳ; ಕಟ್ಟಡಗಳಿಂದ ಸುತ್ತುವರೆದ, ಸಾಮಾನ್ಯವಾಗಿ ಚೌಕಾಕಾರದ, ಪ್ರದೇಶ: Connaught Place ಕನಾಟ್‍ ಪ್ಲೇಸ್‍; ಕನಾಟ್‍ ಚೌಕ.
  7. (ಸುತ್ತಮುತ್ತಲಿನ ಕಟ್ಟಡ, ಹೊಲ, ಮೊದಲಾದವು ಸೇರಿದ) ಹಳ್ಳಿಮನೆ; ಗ್ರಾಮಗೃಹ; ಗ್ರಾಮಾವಾಸ.
  8. (ವ್ಯಕ್ತಿಯ) ಸ್ಥಾನ; ದರ್ಜೆ; ಅಂತಸ್ತು: servants must know their place ಸೇವಕರು ತಮ್ಮ ಸ್ಥಾನವನ್ನು ಅರಿತಿರಬೇಕು.
  9. (ಊಟದ ಮೇಜು, ಬಂಡಿ, ವಾಹನ, ಮೊದಲಾದವುಗಳಲ್ಲಿ ಒಬ್ಬನಿಗೆ, ಒಂದಕ್ಕೆ) ಸ್ಥಳ; ಸ್ಥಾನ; ಸೀಟು; ಆಸನ; ಅವಕಾಶ: take two places in the coach ಗಾಡಿಯಲ್ಲಿ ಎರಡು ಸೀಟು ಪಡೆ, ಹಿಡಿ.
  10. ನಿರ್ದಿಷ್ಟ ಉದ್ದೇಶಕ್ಕಾಗಿಟ್ಟಿರುವ – ಮಂದಿರ, ಸ್ಥಳ, ಸ್ಥಾನ ಯಾ ಪ್ರದೇಶ: place of worship ದೇವಾಲಯ; ಪೂಜಾಸ್ಥಳ.
  11. ಪುಸ್ತಕ ಮೊದಲಾದವುಗಳಲ್ಲಿ ಯಾವುದೋ ಒಂದು ಭಾಗ, ವಿಭಾಗ, ಪ್ರಕರಣ, ಪ್ರಸಂಗ.
  12. (ಪುಸ್ತಕ ಮೊದಲಾದವುಗಳಲ್ಲಿ) (ಓದುತ್ತಾ) ತಲುಪಿದ ಜಾಗ: lost my place ನಾನು ಓದಿ ನಿಲ್ಲಿಸಿದ ಜಾಗ ಕಳೆದುಕೊಂಡೆ.
  13. ಒಂದು ಮೇಲ್ಮೈ (ಮುಖ್ಯವಾಗಿ ಚರ್ಮದ) ಮೇಲಿನ ನಿರ್ದಿಷ್ಟ ಜಾಗ, ಗೊತ್ತಾದ ಪ್ರದೇಶ: a sore place on his arm ತೋಳಿನ ಮೇಲೆ ನೋಯುವ ಒಂದು ಭಾಗ (ಹುಣ್ಣು, ಗಾಯ, ಮೊದಲಾದವು).
  14. (ಮುಖ್ಯವಾಗಿ ಸರ್ಕಾರದ) ಉದ್ಯೋಗ; ಹುದ್ದೆ; ಸ್ಥಾನ; ಚಾಕರಿ; ನೌಕರಿ: lost his place at the Ministry ಮಂತ್ರಿ ಇಲಾಖೆಯಲ್ಲಿ ತನ್ನ ಸ್ಥಾನ ಕಳೆದುಕೊಂಡ.
  15. ಅಧಿಕಾರ; ಅಧಿಕಾರಕ್ಕೆ ಯಾ ಅದರ ವ್ಯಾಪ್ತಿಗೆ ಸೇರಿದ, ಸಂಬಂಧಿಸಿದ ಕರ್ತವ್ಯಗಳು, ಜವಾಬ್ದಾರಿಗಳು; ಹಕ್ಕು ಬಾಧ್ಯತೆಗಳು, ಮೊದಲಾದವು: it is not my place to inquire into that ಅದನ್ನು ವಿಚಾರಿಸಿಕೊಂಡು ಹೋಗುವುದು ನನ್ನ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದುದಲ್ಲ. is his place to hire staff ಸಿಬ್ಬಂದಿಯನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಅವನ ಅಧಿಕಾರಕ್ಕೆ ಸೇರಿದ್ದು.
  16. (ಪಂದ್ಯದ ತಂಡದಲ್ಲಿ ಒಬ್ಬ ಆಟಗಾರನಾಗಿ, ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿಯಾಗಿ, ಮೊದಲಾದ) (ಒಬ್ಬನ, ಒಂದರ) ಸ್ಥಾನ.
  17. (ಬ್ರಿಟಿಷ್‍ ಪ್ರಯೋಗ) ಸ್ಥಾನ; ರೇಸ್‍ನಲ್ಲಿ ಮೊದಲ ಮೂರು ಯಾ ಕೆಲವು ವೇಳೆ ನಾಲ್ಕು ಸ್ಥಾನಗಳಲ್ಲಿ ಒಂದು (ಮುಖ್ಯವಾಗಿ ಜಯಶೀಲವಾದುದಕ್ಕಿಂತ ಬೇರೆಯಾದದ್ದು: backed it for place ಮೂರು ಯಾ ನಾಲ್ಕು ಸ್ಥಾನಗಳಲ್ಲಿ ಒಂದಕ್ಕಾಗಿ ಪಣ ಕಟ್ಟಿದೆ.)
  18. (ಗಣಿತ) ಸ್ಥಾನ; ಸಾಲಾಗಿ ಬರೆಯುವ ಅಂಕಿಗಳಲ್ಲಿ ಯಾವುದೇ ಅಂಕಿಯ (ಮೌಲ್ಯಸೂಚಕ) ಸ್ಥಾನ: calculate upto the third decimal place ಮೂರನೆಯ ದಶಮಾಂಶ ಸ್ಥಾನದವರೆಗೂ ಲೆಕ್ಕ ಹಾಕು, ಗಣಿಸು.
  19. (ವಾದ, ನಿರೂಪಣೆ, ಮೊದಲಾದವುಗಳ ಗತಿಯಲ್ಲಿ) ಒಂದು ಮೆಟ್ಟಿಲು; ಮಜಲು: in the first place ಮೊದಲನೆಯದಾಗಿ.
ಪದಗುಚ್ಛ
  1. all over the place ಎಲ್ಲೆಡೆ; ಎಲ್ಲೆಲ್ಲೂ; ಅವ್ಯವಸ್ಥೆಯಲ್ಲಿ; ಚೆಲ್ಲಾಪಿಲ್ಲಿಯಾಗಿ; ಅಸ್ತವ್ಯಸ್ತವಾಗಿ.
  2. $^1$another place.
  3. bathing-place ಬಚ್ಚಲು ಮನೆ; ಸ್ನಾನ ಮಾಡುವ ಜಾಗ.
  4. give place to
    1. (ಒಬ್ಬನಿಗೆ, ಒಂದಕ್ಕೆ) ಎಡೆಗೊಡು; ಸ್ಥಳ ಬಿಟ್ಟುಕೊಡು.
    2. ಆದ್ಯತೆ ನೀಡು; ಅಗ್ರಸ್ಥಾನ ಬಿಟ್ಟುಕೊಡು.
    3. ತನ್ನ ತರುವಾಯ ತನ್ನ ಸ್ಥಾನವನ್ನು (ಬೇರೊಂದು) ತೆಗೆದುಕೊಳ್ಳುವಂತೆ, ವಹಿಸಿಕೊಳ್ಳುವಂತೆ, ತನ್ನ ಸ್ಥಾನಕ್ಕೆ (ಮತ್ತೊಂದು) ಬರುವಂತೆ – ಮಾಡು.
  5. go places (ಆಡುಮಾತು) ಯಶಸ್ವಿಯಾಗು, ಸಫಲವಾಗು.
  6. in place
    1. ಸರಿಯಾದ, ಉಚಿತ, ತಕ್ಕ, ಯುಕ್ತ – ಸ್ಥಾನದಲ್ಲಿ, ಸ್ಥಳದಲ್ಲಿ.
    2. ಸರಿಯಾಗಿ; ಉಚಿತವಾಗಿ; ಯುಕ್ತವಾಗಿ.
  7. in place of ಒಂದರ ಬದಲು; ಒಂದರ ಸ್ಥಾನದಲ್ಲಿ.
  8. in places ಅಲ್ಲಲ್ಲಿ; ಕೆಲವೆಡೆಗಳಲ್ಲಿ ಯಾ ಕೆಲವು ಭಾಗಗಳಲ್ಲಿ (ಆದರೆ ಇತರ ಕಡೆಗಳಲ್ಲಲ್ಲ).
  9. keep a person in his (or her) place ಒಬ್ಬನ(ಳ)ನ್ನು ಅವನ(ಳ) ಸ್ಥಾನದಲ್ಲಿಡು; ಒಬ್ಬ ವ್ಯಕ್ತಿಯ ದಬ್ಬಾಳಿಕೆಯನ್ನು, ಆಡಂಬರವನ್ನು – ಅಡಗಿಸು.
  10. put a person in his or her place (ತಲೆಹರಟೆಯ ಯಾ ಒಣ ಪ್ರತಿಷ್ಠೆಯ) ವ್ಯಕ್ತಿಯ ಗರ್ವಭಂಗಮಾಡು. ಅವನ(ಳ)ನ್ನು ಅವಮಾನಮಾಡು.
  11. out of place
    1. ಅನುಚಿತ; ತಕ್ಕದ್ದಲ್ಲದ; ಯುಕ್ತವಲ್ಲದ.
    2. ತಪ್ಪಾದ ಅನುಚಿತ – ಸ್ಥಾನದಲ್ಲಿರುವ.
  12. place in the sun ಅನುಕೂಲಕರವಾದ ಪರಿಸ್ಥಿತಿ, ಸ್ಥಾನ, ಮೊದಲಾದವು.
  13. put oneself in another’s place ತನ್ನನ್ನು ಇನ್ನೊಬ್ಬನ(ಳ) ಸ್ಥಾನದಲ್ಲಿ ಇಟ್ಟುಕೊ, ಊಹಿಸಿಕೊ.
  14. take one’s place
    1. ಕುಳಿತುಕೊ; ಆಸೀನನಾಗು.
    2. ತನ್ನ ಜಾಗಕ್ಕೆ ಹೋಗು; ತನಗೆ ಸರಿಯಾದ, ಯುಕ್ತವಾದ ಸ್ಥಾನಕ್ಕೆ ಹೋಗು.
  15. take place ಉಂಟಾಗು ಸಂಭವಿಸು.
  16. take the place of (ಒಂದರ ಯಾ ಒಬ್ಬನ) ಸ್ಥಾನದಲ್ಲಿರು; ಜಾಗ ತೆಗೆದುಕೊ; ಸ್ಥಾನ ವಹಿಸು.