See also 2peg
1peg ಪೆಗ್‍
ನಾಮವಾಚಕ
  1. (ಉರುಳೆಯಾಕಾರದಲ್ಲಿದ್ದು, ಒಂದು ತುದಿ ಚೂಪಾಗಿರುವ, ಎರಡು ವಸ್ತುಗಳನ್ನು ಬಂಧಿಸುವ, ಗೋಡೆ ಮೊದಲಾದವುಗಳಿಗೆ ಹೊಡೆದು ಬಟ್ಟೆಬರೆಗಳನ್ನು ತಗುಲಿಹಾಕುವ, ನೆಲದಲ್ಲಿ ಹುಗಿದು ಡೇರೆಯನ್ನು ಎಬ್ಬಿಸಲು ಹಗ್ಗಗಳನ್ನು ಕಟ್ಟುವ, ಮೊದಲಾದ ಕೆಲಸಗಳಿಗೆ ಬಳಸುವ) ಗೂಟ; ದಸಿ.
  2. (ಪೀಪಾಯಿ ಮೊದಲಾದವುಗಳ ಬಾಯಿ ಮುಚ್ಚಲು ಬಳಸುವ) ಬೆಣೆ; ಬಿರಡೆ.
  3. (ಪಿಟೀಲು ಮೊದಲಾದವುಗಳ ತಂತಿಗಳನ್ನು ಬಿಗಿಸಲು ಯಾ ಸಡಿಲಿಸಲು ಬಳಸುವ) ಬಿರಡೆ.
  4. (ಕ್ರಿಬೇಜ್‍ ಎಂಬ ಇಸ್ಪೀಟಾಟದಲ್ಲಿ ಗೆಲ್ಲಂಕಗಳನ್ನು ಗುರುತಿಸಲು ಮಣೆಯ ತೂತುಗಳಿಗೆ ಸಿಕ್ಕಿಸುವ) ಚಿಕ್ಕಕಡ್ಡಿ, ಬೆಂಕಿಕಡ್ಡಿ, ಮೊದಲಾದವು.
  5. (ಬ್ರಿಟಿಷ್‍ ಪ್ರಯೋಗ) = clothes-peg.
  6. (ಬ್ರಿಟಿಷ್‍ ಪ್ರಯೋಗ) ಪೆಗ್ಗು; (ಬ್ರಾಂದಿ ಮೊದಲಾದವುಗಳ) ಮದ್ಯದ ಒಂದು ಪ್ರಮಾಣ. ಮೊತ್ತ: poured himself out a stiff peg (ಬ್ರಾಂದಿ ಮೊದಲಾದ ಯಾವುದೇ) ಚುರುಕು ಮದ್ಯದ ಒಂದು ಪೆಗ್ಗನ್ನು ಲೋಟಕ್ಕೆ ತುಂಬಿಕೊಂಡ.
ಪದಗುಚ್ಛ
  1. a peg to hang an idea on (ಭಾಷಣ ಮೊದಲಾದವುಗಳಿಗೆ ಉಚಿತವಾದ) ಸಂದರ್ಭ; ವಿಷಯ; ನೆಪ; ವ್ಯಾಜ.
  2. a square peg in a round hole = ಪದಗುಚ್ಛ\((3)\).
  3. a round peg in a square hole ಎಡವಟ್ಟಾದ; ಸನ್ನಿವೇಶಕ್ಕೆ ಹೊಂದದ.
  4. off the peg (ಉಡುಗೆತೊಡುಗೆಯ ವಿಷಯದಲ್ಲಿ) ಸಿದ್ಧ; ರೆಡಿಮೇಡ್‍.
  5. peg top trousers ಬೆಣೆ ಷರಾಯಿ; ಸೊಂಟದ ಹತ್ತಿರ ಸಡಿಲವೂ ಹರಡಿನ ಬಳಿ ಬಿಗಿಯೂ ಆಗಿರುವ ಷರಾಯಿ
  6. put (a man) on the peg (ಸೈನ್ಯ) (ಅಶಿಷ್ಟ) ಅಪರಾಧ ಮಾಡಿದ್ದಕ್ಕಾಗಿ (ಒಬ್ಬನನ್ನು) ಕಮಿಷನ್ಡ್‍ ಆಹೀಸರನ ಮುಂದೆ ನಿಲ್ಲಿಸು, ಹಾಜರು ಪಡಿಸು.
  7. take a person down a peg or two (ಒಬ್ಬನ) ಅಹಂಕಾರವಿಳಿಸು; ಸೊಕ್ಕುಮುರಿ;ದೈನ್ಯಾವಸ್ಥೆಗೆ ತರು; ಸ್ವಲ್ಪ ಕೆಳಕ್ಕಿಳಿಸು.