See also 2sun
1sun ಸನ್‍
ನಾಮವಾಚಕ
  1. ಸೂರ್ಯ; ರವಿ:
    1. ಭೂಮಿ ಮತ್ತು ಇತರ ಗ್ರಹಗಳು ಸುತ್ತು ಹಾಕುತ್ತಿರುವ ತಾರೆ; ಹೊತ್ತು: the sun rises ಸೂರ್ಯನು ಹುಟ್ಟುತ್ತಾನೆ, ಮೂಡುತ್ತಾನೆ, ಉದಯಿಸುತ್ತಾನೆ, ಹೊತ್ತು ಹುಟ್ಟುತ್ತದೆ. the sun sets ಸೂರ್ಯನು ಮುಳುಗು ತ್ತಾನೆ, ಅಸ್ತಮಿಸುತ್ತಾನೆ; ಹೊತ್ತು ಮುಳುಗುತ್ತದೆ.
    2. ವಿಶ್ವದಲ್ಲಿನ (ಗ್ರಹಗಳಿರುವ ಯಾ ಇಲ್ಲದ) ಅಂಥ ಯಾವುದೇ ತಾರೆ.
  2. (ಸೂರ್ಯನ) ಬೆಳಕು; ಬಿಸಿಲು; ಶಾಖ: let in the sun ಸೂರ್ಯನ ಬೆಳಕನ್ನು ಒಳಕ್ಕೆ ಬರಗೊಡು. keep out the sun ಬಿಸಿಲನ್ನು ಒಳಕ್ಕೆ ಬರದಂತೆ ತಡೆ.
  3. (ಕಾವ್ಯಪ್ರಯೋಗ) ದಿನ ಯಾ ವರ್ಷ.
  4. (ಕಾವ್ಯಪ್ರಯೋಗ) ಸೂರ್ಯ; ವೈಭವ, ಪ್ರಭೆ, ತೇಜಸ್ಸು, ಮೊದಲಾದವುಗಳ ಆಕರವೆಂದು ಭಾವಿಸಲಾದ ವ್ಯಕ್ತಿ ಯಾ ವಸ್ತು.
ಪದಗುಚ್ಛ
  1. against the sun = $^1$anti-clockwise.
  2. a place in the sun ಅನುಕೂಲ ಸನ್ನಿವೇಶ ಯಾ ಸ್ಥಿತಿ.
  3. beneath (or under) the sun ಪ್ರಪಂಚದಲ್ಲಿ ಎಲ್ಲಾದರೂ; ಲೋಕದಲ್ಲೆಲ್ಲಾದರೂ.
  4. catch the sun
    1. ಬಿಸಿಲು ಬೀಳುವ ಸ್ಥಳದಲ್ಲಿರು.
    2. ಬಿಸಿಲಲ್ಲಿ ಬಾಡು, ಕಂದು.
  5. hail (or adore) the rising sun ಹೊಸ ಯಾ ಬರಲಿರುವ ಅಧಿಕಾರಿಯನ್ನು ಹೊಗಳು, ಒಲಿಸಿಕೊ, ಅವನ ಅನುಗ್ರಹ ಕೋರು.
  6. in the sun ಬಿಸಿಲಿನಲ್ಲಿ; ಬಿಸಿಲು ಬೀಳುವಂತೆ.
  7. let not the sun go down upon your wrath ನಿನ್ನ ಕೋಪ ಒಂದು ದಿನದ ಮಟ್ಟಿಗಿರಲಿ; ನಿನ್ನ ಕ್ರೋಧವು ಸಂಜೆಯೊಳಗಾಗಿ ಶಾಂತವಾಗಲಿ, ಅಡಗಲಿ.
  8. make $^1$hay while the sun shines.
  9. on which the sun never sets (ಚಕ್ರಾಧಿಪತ್ಯ ಮೊದಲಾದವುಗಳ ವಿಷಯದಲ್ಲಿ) ಸೂರ್ಯ ಮುಳುಗದ; ವಿಶ್ವವ್ಯಾಪಿಯಾದ.
  10. rise with the sun ಸೂರ್ಯೋದಯಕ್ಕೆ ಏಳು; ಹೊತ್ತಿಗೆ ಮುಂಚೆ ಏಳು.
  11. see the sun ಬದುಕಿರು; ಜೀವಂತವಾಗಿರು: you’ll never see the sun again ನೀನು ಮತ್ತೆ ಸೂರ್ಯನನ್ನು ಕಾಣುವುದಿಲ್ಲ; ನೀನು ಇನ್ನು ಮುಂದೆ ಬದುಕಲಾರೆ.
  12. sun and planet ಸೌರವ್ಯೂಹದ, ಸೂರ್ಯ ಮತ್ತು ಗ್ರಹಗಳ ವ್ಯವಸ್ಥೆಯ – ಗೇರು, ಗಿಯರು; ಮಧ್ಯದಲ್ಲಿ ಹಲ್ಲುಗಳಿರುವ ಅಕ್ಷದಂಡದ ಸುತ್ತಲೂ ಒಂದೋ ಹಲವೋ ಚಿಕ್ಕ ಚಕ್ರಗಳಿದ್ದು, ಅಕ್ಷದಂಡವು ತನ್ನ ಅಕ್ಷದ ಮೇಲೂ, ಉಳಿದ ಚಕ್ರಗಳು ಅದರ ಸುತ್ತಲೂ ತಿರುಗುತ್ತಾ ಚಾಲನೆಯನ್ನು ಒದಗಿಸುವ ಏರ್ಪಾಡು, ವ್ಯವಸ್ಥೆ.
  13. sun in splendour (ವಂಶಲಾಂಛನ ವಿದ್ಯೆ) ಕಿರಣಗಳುಳ್ಳ, ಮಾನವ ಮುಖವಿರುವ ಸೂರ್ಯ.
  14. sun is set ಅವನ, ಅದರ, ಮೊದಲಾದವುಗಳ – ಏಳಿಗೆಯ, ಅಭಿವೃದ್ಧಿಯ, ಉಚ್ಛಾ ಯದ, ಉತ್ಕರ್ಷದ, ಕಾಲ ಆಗಿಹೋಯಿತು; ಮುಗಿದು ಹೋಯಿತು.
  15. take [or (ashiSaTx) shoot] the sun (ನೌಕಾಯಾನ) ಅಕ್ಷಾಂಶವನ್ನು ಗೊತ್ತುಮಾಡುವುದಕ್ಕಾಗಿ ಸೂರ್ಯನ ಕೋನೋನ್ನತಿಯನ್ನು ಕಂಡುಹಿಡಿ.
  16. with the sun = $^1$clockwise.