See also 1leave  2leave
3leave ಲೀವ್‍
ನಾಮವಾಚಕ
  1. ಅಪ್ಪಣೆ; ಅನುಜ್ಞೆ; ಅನುಮತಿ.
  2. (ಪೂರ್ಣ ಪ್ರಯೋಗ leave of absence) (ಗೈರುಹಾಜರಿ) ರಜೆ; ಸೂಟಿ; ಬಿಡತಿ; ಸೇನೆ, ನಾವೆ, ಕಚೇರಿ, ಪಾಠಶಾಲೆ, ಮೊದಲಾದವುಗಳಲ್ಲಿ ಕೆಲಸಕ್ಕೆ ಗೈರುಹಾಜರಾಗಲು ಪಡೆದ ಅನುಮತಿ.
  3. (ಹೀಗೆ ಪಡೆದ) ರಜಾಕಾಲ; ರಜಾವಧಿ.
ಪದಗುಚ್ಛ
  1. leave of absence = 3leave(2).
  2. on leave ರಜದ, ರಜೆಯ – ಮೇಲೆ.
  3. ticket of leave ಅನುಮತಿ ಚೀಟಿ; ಶಿಕ್ಷೆಯ ಅವಧಿಯ ಒಂದು ಭಾಗವನ್ನು ಅನುಭವಿಸಿರುವ ಸೆರೆಯಾಳಿಗೆ ಯಾ ಅಪರಾಧಿಗೆ, ಕೆಲವು ನಿರ್ಬಂಧಗಳನ್ನು ಹಾಕಿ ಸ್ವಾತಂತ್ರ್ಯ ಕೊಡುವ ಬಿಡತಿ, ಪರವಾನಗಿ.
ನುಡಿಗಟ್ಟು
  1. by (or with) your leave (ಸಲಿಗೆ ಯಾ ಸ್ವಾತಂತ್ರ್ಯ ವಹಿಸಿದುದಕ್ಕಾಗಿ, ಅಹಿತವಾದ ಹೇಳಿಕೆಗೆ ಪೀಠಿಕೆಯಾಗಿ, ಅನೇಕ ವೇಳೆ ವ್ಯಂಗ್ಯವಾಗಿ ಕ್ಷಮೆ ಬೇಡುವಾಗ ಹೇಳುವ) ತಮ್ಮ – ಅಪ್ಪಣೆಯಿಂದ, ಅಪ್ಪಣೆಯಂತೆ.
  2. take one’s leave ವಿದಾಯ ಹೇಳು; ಬೀಳ್ಕೊಡು.
  3. take one’s leave of (ಯಾರನ್ನಾದರೂ) ಬೀಳ್ಕೊಳ್ಳು; (ಒಬ್ಬನಿಗೆ) ವಿದಾಯ ಹೇಳು.
  4. take leave of one’s senses ಬುದ್ಧಿಕೆಡು; ತಲೆಕೆಡು; ಬುದ್ಧಿಗೆ ವಿದಾಯ ಹೇಳು.
  5. take leave to ಧೈರ್ಯ ಮಾಡು ಯಾ ಸಾಹಸಮಾಡು.
  6. on leave ರಜೆಯ ಮೇಲೆ; ರಜೆಯಲ್ಲಿ; ಅನುಮತಿ ಪಡೆದು ಕೆಲಸದಿಂದ ಗೈರುಹಾಜರಾಗಿರುವಾಗ.