See also 2grant
1grant ಗ್ರಾನ್ಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾರ್ಥನೆ ಮೊದಲಾದವನ್ನು ಈಡೇರಿಸಲು, ಸಲ್ಲಿಸಲು, ಪೂರಯಿಸಲು) ಒಪ್ಪು; ಸಮ್ಮತಿಸು.
  2. ದಯಪಾಲಿಸು; ಅನುಗ್ರಹಿಸು; ನೀಡು; (ವಸ್ತು) ಹೊಂದಲು (ವ್ಯಕ್ತಿಗೆ) ಅವಕಾಶಕೊಡು.
  3. (ಸ್ವಾಮ್ಯವನ್ನು, ಹಕ್ಕನ್ನು) ವಿಧಿವಿಹಿತವಾಗಿ – ನೀಡು, ಕೊಡು, ದಯಪಾಲಿಸು, ಕೊಡಮಾಡು, ಅನುಗ್ರಹಿಸು.
  4. (ಆಸ್ತಿಯನ್ನು) ಕಾನೂನುರೀತ್ಯಾ – ವರ್ಗಾಯಿಸು, ವಹಿಸಿಕೊಡು.
  5. ವಾದಕ್ಕೆ ಆಧಾರವಾಗಿ (ಪ್ರಮೇಯವನ್ನು) – ಅಂಗೀಕರಿಸು, ಇಟ್ಟುಕೊ, ಭಾವಿಸು, ಒಪ್ಪಿಕೊ: I grant you ನಾನು ಒಪ್ಪಿಕೊಳ್ಳುತ್ತೇನೆ.
ಪದಗುಚ್ಛ

take for granted

  1. ಹಾಗೆಂದು ಇಟ್ಟುಕೊ, ಭಾವಿಸು; ಸಿದ್ಧವಾದದ್ದೆಂದು, ಪ್ರಮಾಣ ಬೇಕಿಲ್ಲವೆಂದು – ಭಾವಿಸು; ಸಾಮಾನ್ಯವಾಗಿ ಒಪ್ಪಿಕೊಳ್ಳಬಹುದಾದದ್ದೆಂದು ತಿಳಿ; ನಿಜವೆಂದು, ನಿರ್ಧಾರವಾಗಿದೆಯೆಂದು – ಪರಿಗಣಿಸು; ಯಥಾಕ್ರಮದಲ್ಲಿ ಆಗತಕ್ಕದ್ದೆಂದು ತಿಳಿ.
  2. ಅತಿ ಪರಿಚಯದಿಂದ (ಒಂದರ) ವೈಶಿಷ್ಟ್ಯವನ್ನು ಗಮನಿಸದಿರು, ಗೌರವಿಸದಿರು, ಉಪೇಕ್ಷಿಸು.