exception ಇ(ಎ)ಕ್ಸೆಪ್ಷನ್‍
ನಾಮವಾಚಕ
  1. ಬಿಟ್ಟುಬಿಡುವುದು; ಹೊರತುಪಡಿಸುವುದು; ವಿನಾಯಿತಿ ಮಾಡುವುದು.
  2. ವಿನಾಯಿತಿ; ಅಪವಾದ; ಹೊರತು; ನಿಯಮಕ್ಕೆ ವಿರುದ್ಧವಾದದ್ದು ಯಾ ಒಳಪಡದ್ದು.
ಪದಗುಚ್ಛ
  1. liable to exception ಆಕ್ಷೇಪಕ್ಕೆ ಒಳಪಡುವ.
  2. subject to exception = ಪದಗುಚ್ಛ \((1)\).
  3. the exception proves the rule
    1. ಅಪವಾದವು ನಿಯಮವನ್ನು ಸಮರ್ಥಿಸುತ್ತದೆ.
    2. ಅಪವಾದಗಳನ್ನು ಬಿಟ್ಟು ಉಳಿದವಕ್ಕೆಲ್ಲ ನಿಯಮವು ಅನ್ವಯಿಸುತ್ತದೆ.
  4. with the exception of (ಒಂದನ್ನು) ಹೊರತು.
ನುಡಿಗಟ್ಟು

take exception to ಆಕ್ಷೇಪಿಸು; ವಿರೋಧಿಸು; ಪ್ರತಿಭಟಿಸು.