See also 2advantage
1advantage ಅಡ್ವಾಂಟಿಜ್‍
ನಾಮವಾಚಕ
  1. (ಅನ್ಯವ್ಯಕ್ತಿಗಿಂತ, ವಿಶೇಷವಾಗಿ ಎದುರಾಳಿಗಿಂತ) ಮೇಲ್ಮೆ; ಮೇಲ್ಗೈಯಾಗಿರುವಿಕೆ; ಮೇಲಾದ ಸ್ಥಿತಿ; ಪ್ರಾಧಾನ್ಯ; ಉತ್ತಮ ಸ್ಥಿತಿ; ಅನುಕೂಲ ಸ್ಥಿತಿ: the wrestler gained an advantage over his opponent ಜಟ್ಟಿಯ ತನ್ನ ಎದುರಾಳಿಗಿಂತ ಮೇಲ್ಗೈ ಪಡೆದನು.
  2. ಪ್ರಯೋಜನ; ಉಪಯೋಗ; (ಯಾವುದರಿಂದಲೇ ದೊರೆಯುವ) ಅನುಕೂಲ; ಲಾಭ.
  3. (ಟೆನಿಸ್‍) ಯಾವುದೇ ಆಟಗಾರ ಡ್ಯೂಸ್‍ ಯಾ ಸಮಸ್ಥಿತಿ ತಲುಪಿದ ತರುವಾಯ ಗಳಿಸುವ ಮೊದಲ ಪಾಯಿಂಟು; ಅನುಕೂಲಾಂಕ.
ಪದಗುಚ್ಛ
  1. advantage in (ಟೆನಿಸ್‍) ಡ್ಯೂಸ್‍ ಆದ ಮೇಲೆ ಸರ್ವರ್‍ ಯಾ ಚೆಂಡು ಹೊಡೆಯುವವನು ಗಳಿಸಿದ ಮೊದಲ ಪಾಯಿಂಟ್‍.
  2. advantage out (ಟೆನಿಸ್‍) ಡ್ಯೂಸ್‍ ಆದ ಮೇಲೆ ರಿಸೀವರ್‍ ಯಾ ಚೆಂಡನ್ನು ಪಡೆಯುವವನು ಗಳಿಸಿದ ಮೊದಲ ಪಾಯಿಂಟ್‍.
  3. have the advantage of (ಬೇರೊಬ್ಬನಿಗಿಂತ) ಮೇಲುಗೈಯಾಗು; ಅನುಕೂಲ ಸ್ಥಿತಿ ಪಡೆ, ಹೊಂದು: he has the advantage of all other merchants ಅವನು ಉಳಿದೆಲ್ಲ ವರ್ತಕರಿಗಿಂತ ಅನುಕೂಲ ಸ್ಥಿತಿ ಪಡೆದಿದ್ದಾನೆ, ಮೇಲುಗೈಯಾಗಿದ್ದಾನೆ.
ನುಡಿಗಟ್ಟು
  1. take advantage of
    1. (ಒಳ್ಳೆಯ) ಅವಕಾಶವನ್ನು-ಬಳಸಿಕೊ, ಉಪಯೋಗಿಸಿಕೊ; ಸಂದರ್ಭದ, ಸುಯೋಗದ ಪ್ರಯೋಜನವನ್ನು ಪಡೆ.
    2. ಇತರರ ಗುಣದೋಷಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊ; ಇತರರ ಗುಣದೋಷಗಳಿಂದ (ಮುಖ್ಯವಾಗಿ ಅನ್ಯಾಯವಾಗಿ) ಸ್ವಪ್ರಯೋಜನ ಪಡೆ.
    3. (ಸೌಮ್ಯೋಕ್ತಿ) ಪರಸ್ತ್ರೀ ಯಾ ಪರಪುರುಷನನ್ನು ಕಾಮತೃಪ್ತಿಗಾಗಿ ದುರುಪಯೋಗ ಮಾಡಿಕೊ, ಕೆಡಿಸು.
  2. take (a person) at advantage ಅನಿರೀಕ್ಷಿತವಾಗಿ, ಹಠಾತ್ತಾಗಿ–ಹಿಡಿ; ಮೈಮರೆ ತಿರುವುದರ, ಅಜಾಗರೂಕನಾಗಿರುವುದರ, ಸಿದ್ಧನಾಗಿಲ್ಲದಿರುವುದರ–ಪ್ರಯೋಜನ ಪಡೆ.
  3. to advantage (ಸೌಂದರ್ಯ, ಶ್ರೇಷ್ಠತೆ, ಮೊದಲಾದವು) ಎದ್ದು ಕಾಣುವಂತೆ; ಚೆನ್ನಾಗಿ ಕಾಣುವಂಥ: in the beauty contest each competitor revealed herself to advantage ಸೌಂದರ್ಯ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿ ಪ್ರದರ್ಶಿಸಿಕೊಂಡಳು.
  4. turn to advantage ಸಾಧಕವಾಗಿ, ಲಾಭದಾಯಕವಾಗಿ–ಮಾಡಿಕೊ; ಪ್ರಯೋಜನ ಪಡೆ; ಯಾವುದನ್ನೇ ಸ್ವಪ್ರಯೋಜನಕ್ಕಾಗಿ, ಸ್ವಹಿತಕ್ಕಾಗಿ–ಬಳಸಿಕೊ; ಕುಂದು ಕೊರತೆಗಳು, ವಿಫಲತೆಗಳು, ಮೊದಲಾದವನ್ನು ಸ್ವಹಿತಕ್ಕೆ ಸಾಧಕವಾಗಿ ತಿರುಗಿಸಿಕೊ: he turned even failures to his advantage ಅವನು ತನ್ನ ಸೋಲುಗಳನ್ನೂ ಸಹ ಲಾಭದಾಯಕವನ್ನಾಗಿ ತಿರುಗಿಸಿಕೊಂಡನು.
  5. you have the advantage of me (ಮುಖ್ಯವಾಗಿ ಪರಸ್ಪರ ಪರಿಚಯದ ವಿಷಯದಲ್ಲಿ) ನೀವು ನನ್ನನ್ನು ಬಲ್ಲಿರಿ, ಆದರೆ ನಾನು ನಿಮ್ಮನ್ನರಿಯೆ; ನಿಮಗೆ ನನ್ನ ಪರಿಚಯ ಇದೆ, ಆದರೆ ನನಗೆ ನಿಮ್ಮ ಪರಿಚಯ ಇಲ್ಲ.