See also 2part  3part
1part ಪಾರ್ಟ್‍
ನಾಮವಾಚಕ
  1. ಭಾಗ; ಖಂಡ; ಅಂಶ; ಪಾಲು: a part of them have arrived ಅವರಲ್ಲಿ ಒಂದಂಶ ಜನ ಬಂದು ಸೇರಿದ್ದಾರೆ. most part of this is true ಇದರಲ್ಲಿ ಬಹುಭಾಗ ಸತ್ಯ.
  2. (ಮುಖ್ಯವಾಗಿ ಒಂದು ಬಾರಿಗೆ ಪ್ರಕಟ ಮಾಡಿದ ಪುಸ್ತಕ, ಸಂಚಿಕೆ, ಧಾರಾವಾಹಿ, ಮೊದಲಾದವುಗಳ ಒಂದು) ಭಾಗ; ಕಂತು.
  3. (ಪ್ರಾಣಿ ಯಾ ಮನುಷ್ಯ ದೇಹದ) ಭಾಗ; ಅಂಗ.
  4. (ವಸ್ತುವಿನ) ಸಮ ಭಾಗಗಳಲ್ಲೊಂದು: take 3 parts of sugar, 7 of flour ಮೂರು ಭಾಗ ಸಕ್ಕರೆಯನ್ನು, ಏಳು ಭಾಗ ಹಿಟ್ಟನ್ನು ತೆಗೆದುಕೊ.
  5. (ಒಬ್ಬನಿಗೆ ಬಂದ) ಪಾಲು; ಭಾಗ; ಪಾಲಿಗೆ ಬಂದ ಹಿಸ್ಸೆ.
  6. (ಒಬ್ಬನ) ಪಾಲಿನ, ಭಾಗದ ಕೆಲಸ, ಕರ್ತವ್ಯ: I have done my part ನನ್ನ ಪಾಲಿನ ಕೆಲಸ ಮಾಡಿದ್ದೇನೆ.
  7. [ನಾಟಕದಲ್ಲಿ) (ಒಬ್ಬ) ನಟನಿಗೆ ಕೊಟ್ಟಿರುವ] ಪಾತ್ರ.
  8. (ರಂಗಸ್ಥಳದಲ್ಲಿ) ನಟನು ಆಡುವ ಮಾತುಗಳು: the actor learned his part well ಪಾತ್ರಧಾರಿ ತನ್ನ ಮಾತುಗಳನ್ನು ಚೆನ್ನಾಗಿ (ಬಾಯಿಪಾಠ) ಕಲಿತ, ಗಟ್ಟಿ ಮಾಡಿದ.
  9. (ರಂಗಸ್ಥಳದಲ್ಲಿ ನಟನು ಆಡುವ ಮಾತಿನ ಪ್ರತಿ: the director handed him the part ನಿರ್ದೇಶಕ ಅವನಿಗೆ (ನಟನಿಗೆ) ಅವನ ಮಾತಿನ ಭಾಗವನ್ನು ಕೊಟ್ಟ.
  10. (ಸಂಗೀತ) ನಿಯತನಾದ; ನಿರ್ದಿಷ್ಟ ಶಾರೀರಕ್ಕಾಗಲಿ ವಾದ್ಯಕ್ಕಾಗಲಿ ನಿಗದಿಯಾದ ನಾದ.
  11. (ಬಹುವಚನದಲ್ಲಿ) ಸಾಮರ್ಥ್ಯ; ಬುದ್ಧಿಶಕ್ತಿ: a man of many parts ತುಂಬ ಬುದ್ಧಿಶಕ್ತಿಯ ಮನುಷ್ಯ.
  12. (ಬಹುವಚನದಲ್ಲಿ) ಪ್ರದೇಶ; ಪ್ರಾಂತ; ಭಾಗ; ಕಡೆ: a stranger in these parts ಈ ಪ್ರಾಂತದಲ್ಲಿ, ಭಾಗದಲ್ಲಿ, ಈ ಕಡೆಯಲ್ಲಿ ಅವನು ಅಪರಿಚಿತ.
  13. (ವ್ಯಾಜ್ಯ, ವಾದ, ಮೊದಲಾದವುಗಳಲ್ಲಿ ಒಂದು) ಪಕ್ಷ; ಕಕ್ಷಿ.
  14. (ಸಂಗೀತ) ರಾಗಸ್ವರ; ಒಟ್ಟಿಗೆ ಮಧುರ ನಾದ ಕೊಡುವ ಸ್ವರಪರಂಪರೆಯ ಒಂದು ಸ್ವರ.
  15. (ಅಮೆರಿಕನ್‍ ಪ್ರಯೋಗ) ಬೈತಲೆ (ಗೆರೆ); ಸೀಮಂತ(ರೇಖೆ).
  16. (ನಡವಳಿಕೆಯ) ಕ್ರಮ, ರೀತಿ: I thought silence the better part ಮೌನವೇ ಹೆಚ್ಚು ಉಚಿತ ಕ್ರಮವೆಂದು ಭಾವಿಸಿದೆ.
  17. ಯಾವುದರದೇ ಅಗತ್ಯವಾದ, ಆವಶ್ಯಕವಾದ ಅಂಗ, ಭಾಗ: part of the family ಕುಟುಂಬದ ಅಂಗ. a large part of the job ಕೆಲಸದ ಬಹುಭಾಗ.
  18. ಯಂತ್ರ ಮೊದಲಾದವುಗಳ ಭಾಗ: spare parts ಬಿಡಿಭಾಗಗಳು.
  19. (ಬಹುವಚನದಲ್ಲಿ) = private parts.
ಪದಗುಚ್ಛ
  1. $^2$art and part.
  2. for my part ನನ್ನ ಮಟ್ಟಿಗೆ; ನಾನಂತೂ; ನಾನಾದರೋ: for my part, I don’t mind where we stay ನನ್ನ ಮಟ್ಟಿಗೆ ಹೇಳುವುದಾದರೆ, ನಾವು ಎಲ್ಲಿ ಇಳಿದುಕೊಂಡರೂ ಸರಿ.
  3. for one’s part ಒಬ್ಬನ ಮಟ್ಟಿಗೆ ಹೇಳುವುದಾದರೆ.
  4. for the most part ಬಹುತೇಕ; ಬಹಳಷ್ಟು; ಬಹಳ ಮಟ್ಟಿಗೆ; ಅನೇಕ ಸಂದರ್ಭಗಳಲ್ಲಿ.
  5. have neither part nor lot ಒಂದರಲ್ಲಿ ಸಂಬಂಧವಿಲ್ಲದಿರು.
  6. in part (or parts) ಕೊಂಚ ಮಟ್ಟಿಗೆ; ಭಾಗಶಃ; ಒಂದು ಭಾಗದಲ್ಲಿ.
  7. look the part ಒಂದು ಪಾತ್ರಕ್ಕೆ ಸೂಕ್ತವಾಗಿ ಕಾಣು, ಅನುಗುಣವಾಗಿರು, ಉಚಿತವಾಗಿರು.
  8. on the part of (ಒಬ್ಬ ವ್ಯಕ್ತಿ ಮೊದಲಾದವರ) ಕಡೆಯಿಂದ: there was no objection on my part ನನ್ನಿಂದ, ನನ್ನ ಕಡೆಯಿಂದ – ಏನೂ ಆಕ್ಷೇಪಣೆಯಿಲ್ಲ.
  9. part and parcel ಮುಖ್ಯಭಾಗ; ಅವಿಭಾಜ್ಯ – ಅಂಶ, ಅಂಗ.
  10. part time ಅರೆಕಾಲಿಕ; ಒಂದು ಕೆಲಸಕ್ಕೆ ಬೇಕಾದ ಪೂರ್ಣ ಕಾಲಕ್ಕಿಂತ ಕಡಮೆಯ.
  11. play a part
    1. ನಟನೆ ಮಾಡು; ನಟಿಸು; ಸೋಗು ಹಾಕು; ಕಪಟದಿಂದ ವರ್ತಿಸು.
    2. ಒಂದು ಪಾತ್ರ ವಹಿಸು, ಮಹತ್ವಪೂರ್ಣ ಯಾ ಸಹಾಯಕವಾದ ಪಾತ್ರವಹಿಸು.
    3. (ನಟ ಮೊದಲಾದ) ಪಾತ್ರ ವಹಿಸು.
  12. take (word, action) in good part (ಮಾತನ್ನು, ಕಾರ್ಯವನ್ನು) ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊ; ಒಳ್ಳೆಯ ಅರ್ಥದಲ್ಲಿ ಗ್ರಹಿಸು; ಅಸಮಾಧಾನ ಪಡದಿರು.
  13. take part
    1. ಹಂಚಿಕೊ; ಭಾಗಿಯಾಗು: he took part in her sorrow ಅವನು ಅವಳ ದುಃಖದಲ್ಲಿ ಭಾಗಿಯಾದ.
    2. ಭಾಗವಹಿಸು; ಪಾತ್ರವಹಿಸು; ನೆರವಾಗು: he did not take part in the discussion ಅವನು ಚರ್ಚೆಯಲ್ಲಿ ಭಾಗವಹಿಸಲಿಲ್ಲ.
  14. take the part of (ಒಬ್ಬನ, ಒಂದರ) ಪಕ್ಷ ವಹಿಸು; ಬೆಂಬಲ ಕೊಡು: he took your part in the discussion ಅವನು ಚರ್ಚೆಯಲ್ಲಿ ನಿನ್ನ ಪಕ್ಷ ವಹಿಸಿದ.
  15. the parts ಗುಹ್ಯಾಂಗಗಳು; ಜನನಾಂಗಗಳು.
  16. three parts ಮುಕ್ಕಾಲು ಭಾಗ.
  17. the privy parts = ಪದಗುಚ್ಛ\((15)\).
  18. play a noble part (ರೂಪಕವಾಗಿ) (ಯಾವುದೋ ಕೆಲಸದಲ್ಲಿ) ಉದಾತ್ತ ಪಾತ್ರವಹಿಸು; ಘನತೆಯಿಂದ ನಡೆದುಕೊ.
  19. play an unworthy part (ಒಂದು ಕೆಲಸದಲ್ಲಿ) ಅಯೋಗ್ಯನಾಗಿ ವರ್ತಿಸು; ಅಗೌರವದ ಪಾತ್ರವಹಿಸು.
  20. part of speech (ನಾಮ, ಗುಣ, ಕ್ರಿಯೆ, ಮೊದಲಾದ) ಪದವಾಚಕ; ಪದವರ್ಗ ವಾಚಕ.