ವಿಶೇಷ ಸೂಚನೆಗಳು

  1. ನಿಘಂಟಿನಲ್ಲಿ ಕೆಳಕಂಡ ನಾಲ್ಕು ಸಂಕೇತಗಳನ್ನು ಬಳಸಲಾಗಿದೆ:

    letter ಆ with ya vottu slashed-bat (ಬಾಟ್‍) ಎನ್ನುವಲ್ಲಿ a ಧ್ವನಿಯ ಸಂಕೇತ.

    letter ಪ  with two dots below-confirm (ಕನ್‍ಹರ್ಮ್‍) ಎನ್ನುವಲ್ಲಿ f ಧ್ವನಿಯ ಸಂಕೇತ.

    letter ಷ  with two dots below-azure (ಏಷರ್‍) ಎನ್ನುವಲ್ಲಿ z ಧ್ವನಿಯ ಸಂಕೇತ.

    letter ಸ  with two dots below-ablaze (ಅಬ್ಲೆಸ್‍) ಎನ್ನುವಲ್ಲಿ z ಧ್ವನಿಯ ಸಂಕೇತ.

  2. ಉಚ್ಚಾರಣೆಯ ವ್ಯತ್ಯಾಸಗಳನ್ನು ಕಂಸಗಳಲ್ಲಿ ತೋರಿಸಿದೆ. ಉದಾಹರಣೆಗೆ co-exist ಕೋಇ(ಎ)ಗ್‍ಸಿ ಸ್ಟ್‍ (ಅಂದರೆ ಇದನ್ನು ಕೋಇಗ್‍ಸಿ ಸ್ಟ್‍ ಎಂದೂ, ಕೋಎಗ್‍ಸಿ ಸ್ಟ್‍ ಎಂದೂ ಉಚ್ಚರಿಸಬಹುದು). ಹಾಗೆ ವ್ಯತ್ಯಾಸಗಳನ್ನು ಕಂಸಗಳಲ್ಲಿ ತೋರಿಸಲು ಸಾಧ್ಯವಿಲ್ಲದ ಕಡೆಗಳಲ್ಲಿ ಅವನ್ನು ಅಲ್ಪವಿರಾಮ (,) ಹಾಕಿ ತೋರಿಸಲಾಗಿದೆ. ಉದಾಹರಣೆಗೆ adiabatic ಏಡೈಅಬಾ ಟಿಕ್‍, ಆ ಡಿಆಬಾ ಟಿಕ್‍.

ಪದ ಮತ್ತು ಅರ್ಥಗಳ ಬಗ್ಗೆ

  1. ಇಂಗ್ಲಿಷ್‍ ಪದಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನೂ ಪದಗುಚ್ಛಗಳನ್ನೂ ಕೊಡುವಲ್ಲಿ ಮೂಲ ಪದಕ್ಕೆ ಬದಲು ಅಲೆಗೆರೆ $\sim$ ಬಳಸಿದೆ. ಮೂಲಪದದ ರೂಪ ಬದಲಾವಣೆಯಾಗುವ ಕಡೆ (ಉದಾಹರಣೆಗೆ build ಎನ್ನುವ ಕ್ರಿಯಾಪದದಡಿಯಲ್ಲಿ built ಎಂಬ ಪ್ರಯೋಗವನ್ನು ಕೊಡುವಾಗ) ಮತ್ತು ಮೂಲಪದದ ಕೊನೆಯ ಅಕ್ಷರ ಪುನರಾವೃತ್ತಿಯಾಗುವ ಕಡೆ (ಉದಾಹರಣೆಗೆ 2 budನಲ್ಲಿ budding horns) ಇಂಥ ಅಲೆಗೆರೆ ಬಳಸಿಲ್ಲ. ಮೂಲ ಉಲ್ಲೇಖ ಸಣ್ಣಕ್ಷರದಲ್ಲಿದ್ದು ಅದರಲ್ಲಿ ಬರುವ ಪದಗುಚ್ಛ ಅಥವಾ ನುಡಿಗಟ್ಟಿನಲ್ಲಿ ಆ ಉಲ್ಲೇಖ ದೊಡ್ಡಕ್ಷರದಲ್ಲಿ ಬಳಸುವ ರೂಢಿಯಿದ್ದರೆ ಆಗ ಮೂಲ ಉಲ್ಲೇಖದ ಮೊದಲ ಅಕ್ಷರವನ್ನು ದೊಡ್ಡಕ್ಷರದಲ್ಲಿ ಬರೆದು ಅಲೆಗೆರೆ ಬಳಸಲಾಗಿದೆ (ಉದಾಹರಣೆಗೆ alpha ಎಂಬ ಪದದ ನುಡಿಗಟ್ಟಿನಲ್ಲಿ A sim and Omega).
  2. ಅರ್ಥಗಳನ್ನು ಕೊಡುವಾಗ ಅನಗತ್ಯ ಪುನರಾವರ್ತನೆಯನ್ನು ತಪ್ಪಿಸುವ ಸಲುವಾಗಿ ಅಡ್ಡಗೆರೆಯನ್ನು (—) ಬಳಸಿದೆ. ಅಂಥಲ್ಲಿ ಪದಗಳನ್ನು ಅಧ್ಯಾಹಾರ ಮಾಡಿ ಓದಿಕೊಳ್ಳಬೇಕು. ಉದಾಹರಣೆಗೆ chamois ಎಂಬಲ್ಲಿ ಕಾಡು — ಎರಳೆ, ಜಿಂಕೆ ಎಂಬುದನ್ನು ಕಾಡು ಎರಳೆ, ಕಾಡು ಜಿಂಕೆ ಎಂದು ಓದಿಕೊಳ್ಳಬೇಕು.
  3. ಸಮಾನಾರ್ಥಕ ಪದಗಳನ್ನು ಅರೆಕೋಲನ್‍ಗಳಿಂದ ಬೇರ್ಪಡಿಸಿದೆ. ಉದಾಹರಣೆಗೆ $^1$centric ಕೇಂದ್ರಸ್ಥ; ಕೇಂದ್ರೀಯ; ಕೇಂದ್ರಸ್ಥಾನದಲ್ಲಿರುವ.
  4. ಇಂಗ್ಲಿಷ್‍ ಪದದ ಎಡ ಮೇಲ್ತುದಿಯಲ್ಲಿ ನಕ್ಷತ್ರಚಿಹ್ನೆ $(\ast)$ ಬಳಸಿದರೆ ಆಗ ಆ ಪದ ಅಮೆರಿಕನ್‍ ರೂಪಾಂತರ ಎಂದು ತಿಳಿಯಬೇಕು (ಉದಾಹರಣೆಗೆ $\ast$ cooperate).
  5. ಸ್ಥಳ ಉಳಿಸುವ ಉದ್ದೇಶದಿಂದ ಅಥವಾ ಎನ್ನುವುದಕ್ಕೆ ಯಾ ಎನ್ನುವುದನ್ನು ಬಳಸಲಾಗಿದೆ.
  6. ಇಂಗ್ಲಿಷ್‍ ಭಾಷೆಗೆ ವಿದೇಶೀ ಭಾಷೆಯಿಂದ ಅನಾಮತ್ತಾಗಿ ತೆಗೆದುಕೊಂಡು ಅದೇ ರೂಪದಲ್ಲಿ ಬಳಕೆಯಲ್ಲಿರುವ ಪದಗಳನ್ನು ಓರೆಯಾದ ದಪ್ಪಕ್ಷರದಲ್ಲಿ ಕೊಡಲಾಗಿದೆ (ಉದಾಹರಣೆಗೆ ad valorem).
  7. ಅಡ್ಡ ಉಲ್ಲೇಖ (cross-reference) ಕೊಡುವಾಗ ಪದದ ಎಲ್ಲ ಅಕ್ಷರಗಳನ್ನೂ ದೊಡ್ಡ ಅಕ್ಷರಗಳಲ್ಲಿ ಕೊಟ್ಟಿದ್ದರೆ ಆಗ ಅರ್ಥಕ್ಕಾಗಿ ಆ ದೊಡ್ಡಕ್ಷರದ ಪದವನ್ನು ನೋಡಬೇಕೆಂದರ್ಥ (ಉದಾಹರಣೆಗೆ $^1$coat ಎಂಬ ಪದದಡಿಯಲ್ಲಿ ಬರುವ cut coat according to CLOTH ಎಂಬ ನುಡಿಗಟ್ಟಿನ ಅರ್ಥಕ್ಕಾಗಿ CLOTH ಎಂಬ ಪದದಡಿಯಲ್ಲಿ ನೋಡಬೇಕೆಂದರ್ಥ).
  8. ಒಂದೇ ಕಾಗುಣಿತವಿದ್ದು ಬೇರೆಬೇರೆ ಅರ್ಥ ಇಲ್ಲವೆ ವ್ಯುತ್ಪತ್ತಿ ಇರುವ ಪದಗಳನ್ನು ಮೇಲಂಕಿ ಕೊಟ್ಟು (superior number) ಬೇರೆಬೇರೆ ಉಲ್ಲೇಖಗಳಾಗಿ ಕೊಟ್ಟಿದೆ. ಉದಾಹರಣೆಗೆ

    1 are ಆರ್‍ ನಾ. ಆರ್‍; ಮೆಟ್ರಿಕ್‍ ಪದ್ಧತಿಯಲ್ಲಿ ಚದರಳತೆಯ ಒಂದು ಮಾನ (100 ಚದರಮೀಟರ್‍).

    2 are ಆರ್‍ ಕ್ರಿಯಾಪದ be ಧಾತುವಿನ ವರ್ತಮಾನ ಬಹುವಚನ.

  9. ಇಂಗ್ಲಿಷ್‍ ಪದದ ಕಾಗುಣಿತದಲ್ಲಿ ಕಂಸದೊಳಗೆ ಅಕ್ಷರವನ್ನು ಕೊಟ್ಟಿದ್ದಲ್ಲಿ ಆ ಪದಕ್ಕೆ ಎರಡು ಕಾಗುಣಿತಗಳು ಬಳಕೆಯಲ್ಲಿವೆಯೆಂದು ಗ್ರಹಿಸಬೇಕು. ಉದಾಹರಣೆಗೆ disenthral(l) ಎಂಬಲ್ಲಿ disenthral ಮತ್ತು disenthrall ಎಂಬ ಎರಡೂ ಕಾಗುಣಿತಗಳು ರೂಢಿಯಲ್ಲಿವೆಯೆಂದು ತಿಳಿಯಬೇಕು.
  10. ಒಂದು ನಾಮಪದದ ಬಹುವಚನ ರೂಪವು ಮಾಮೂಲಿನಂತೆ `s' ಸೇರಿ ಆದಾಗ ಅಂಥ ರೂಪವನ್ನು ಕೊಟ್ಟಿಲ್ಲ. ಆದರೆ ಬಹುವಚನ ರೂಪವು ಬೇರೆ ರೂಪ ತಳೆದರೆ ಅದನ್ನು ನಾಮವಾಚಕ ಎಂದು ಕೊಟ್ಟ ನಂತರ ಕಂಸಗಳಲ್ಲಿ ಕೊಡಲಾಗಿದೆ. ಉದಾಹರಣೆಗೆ phenomenon ಹಿನಾಮಿನನ್‍ ನಾಮವಾಚಕ (ಬಹುವಚನ phenomena ಉಚ್ಚಾರಣೆ- ಹಿನಾಮಿನ). ಬಹುವಚನ ರೂಪವು ಬದಲಾಗದೆ ಮೂಲರೂಪವೇ ಆಗಿರುವಾಗ `ಬಹುವಚನ ಅದೇ' ಎಂದು ಕೊಟ್ಟಿದೆ.
  11. ಮೊದಲ ಎರಡು ಸಂಪುಟಗಳಲ್ಲಿ ಪ್ರಧಾನ ಉಲ್ಲೇಖಗಳಡಿಯಲ್ಲಿ ಪದಗುಚ್ಛ(ಪಗು.) ಮತ್ತು ನುಡಿಗಟ್ಟು (ನುಗ.)ಗಳನ್ನು ಬೇರೆಬೇರೆಯಾಗಿ ಕೊಡಲಾಗಿತ್ತು. ಬಹುಪಾಲು ಓದುಗರು ಇವೆರಡನ್ನೂ ಒಟ್ಟಿಗೆ ಕೊಟ್ಟರೆ ಹುಡುಕಲು ಸುಲಭವಾಗುವುದೆಂದು ಬರೆದು ತಿಳಿಸಿದ್ದರಿಂದ ಈ ಸಂಪುಟದಲ್ಲಿ ಅವೆರಡನ್ನೂ ಸೇರಿಸಿ ಪದಗುಚ್ಛ (ಪಗು.) ಎಂದು ಮಾತ್ರ ಕೊಡಲಾಗಿದೆ.
  12. ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನಗಳ ವರ್ಗೀಕರಣದಲ್ಲಿ ಪದೇಪದೇ ಬಳಸುವ ಇಂಗ್ಲಿಷ್‍ ಪದಗಳಿಗೆ ಸಂವಾದಿಯಾಗಿ ಈ ಕೆಳಕಂಡ ಪಾರಿಭಾಷಿಕ ಪದಗಳನ್ನು ಬಳಸಲಾಗಿದೆ:

    genus - ಕುಲ
    family - ವಂಶ
    species - ಜಾತಿ
    class - ವರ್ಗ
    phylum - ವಿಭಾಗ

© 2016 University of Mysore.