See also 2piece
1piece ಪೀಸ್‍
ನಾಮವಾಚಕ
    1. (ಯಾವುದೇ ವಸ್ತುವಿನ) ಚೂರು; ತುಂಡು; ಮುರುಕು; ತುಣುಕು; ಖಂಡ: a piece of string ದಾರದ ತುಂಡು.
    2. ಖಂಡ; ವಿಭಾಗ; ಅಂಶ; ಅಂಗ; ಒಂದು ವರ್ಗ ಯಾ ತಂಡ ರಚಿತವಾಗಿರುವ ಭಾಗಗಳಲ್ಲೊಂದು: a five piece band ಐದು ಖಂಡದ ಬ್ಯಾಂಡು.
  1. ಒಂದು ನಿರ್ದಿಷ್ಟ ಮೌಲ್ಯದ ನಾಣ್ಯ: 5 rupee piece ಐದು ರೂಪಾಯಿ ನಾಣ್ಯ.
  2. (ಸಾಮಾನ್ಯವಾಗಿ ಸಣ್ಣ) ಸಾಹಿತ್ಯ ಯಾ ಸಂಗೀತ ಕೃತಿ ಯಾ ಚಿತ್ರ.
  3. ಉದಾಹರಣೆ; ನಮೂನೆ; ನಿದರ್ಶನ; ಮಾದರಿ: a piece of impudence ಸೊಕ್ಕಿನ ನಿದರ್ಶನ.
  4. (ಚದುರಂಗ, ಡ್ರಾಹ್ಟ್‍, ಮೊದಲಾದ ಆಟಗಳ) ಒಂದು ಕಾಯಿ; ಪಾನು.
  5. ಖಂಡ; ಒಂದು ವಸ್ತುವನ್ನು ಮಾರಾಟ ಮಾಡುವ ನಿರ್ದಿಷ್ಟ ಪ್ರಮಾಣ.
  6. (ಜಮೀನು ಮೊದಲಾದವುಗಳ) ಆವರಣ ಹಾಕಿದ ಭಾಗ.
  7. (ಹೀನಾರ್ಥಕ ಪ್ರಯೋಗ) (ಅಶಿಷ್ಟ) ಹೆಂಗಸು; ಹೆಣ್ಣು.
  8. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) (ಒಂದು ಸಂಸ್ಥೆ, ಕಂಪೆನಿ, ಮೊದಲಾದವುಗಳಲ್ಲಿ) ಆರ್ಥಿಕ ಪಾಲುದಾರಿಕೆ ಯಾ ಹೂಡಿಕೆ: has a piece of the new production ಹೊಸ ಉತ್ಪಾದನೆಯಲ್ಲಿ ಪಾಲು ಹೊಂದಿದ್ದಾನೆ.
ಪದಗುಚ್ಛ
  1. a piece of one’s mind ಒಬ್ಬನನ್ನು ಕುರಿತ ಛೀಮಾರಿ, ತೀವ್ರ ಖಂಡನೆ ಯಾ ವಾಗ್ದಂಡನೆ.
  2. break to pieces ಚೂರುಚೂರಾಗಿ ಒಡೆದುಹೋಗು.
  3. go to pieces (ವ್ಯಕ್ತಿಯ ವಿಷಯದಲ್ಲಿ) ಏಕಾಏಕಿ (ದೈಹಿಕ ಮಾನಸಿಕ) ಶಕ್ತಿಯೆಲ್ಲ ಉಡುಗಿ ಹೋಗು; ಸ್ವಾಸ್ಥ್ಯ ಕುಸಿದುಹೋಗು, ಕಳೆದುಕೊ.
  4. in one piece
    1. ಇಡಿಯಾಗಿ; ಒಡೆಯದೆ.
    2. ಹಾನಿಯಾಗದೆ; ಜಖಂ ಆಗದೆ.
  5. in pieces ಚಿಕ್ಕ ಚೂರಾಗಿ; ಚೂರು ಚೂರಾಗಿ; ಛಿನ್ನಭಿನ್ನವಾಗಿ.
  6. of a piece with ಏಕರೂಪವಾಗಿ; ಸಮನಾಗಿ; ಸುಸಂಗತವಾಗಿ; ಸಮಂಜಸವಾಗಿ.
  7. piece by piece ಒಂದೊಂದು ಭಾಗವಾಗಿ; ಖಂಡಖಂಡವಾಗಿ; ಭಾಗಭಾಗವಾಗಿ: the bridge was moved piece by piece to the new site ಸೇತುವೆಯನ್ನು ಭಾಗಭಾಗವಾಗಿ ಹೊಸ ಜಾಗಕ್ಕೆ ಸಾಗಿಸಲಾಯಿತು.
  8. pick (or pull) one to pieces (ಮುಖ್ಯವಾಗಿ ವ್ಯಕ್ತಿಯ ಗೈರುಹಾಜರಿನಲ್ಲಿ, ಬೆನ್ನು ಹಿಂದೆ) ಅವನನ್ನು ಟೀಕಿಸು.
  9. pick (or pull) something to pieces
    1. (ಒಂದರ) ವಿರುದ್ಧ ವಾದಿಸು.
    2. (ಒಂದರಲ್ಲಿ) ತಪ್ಪು ಕಂಡುಹಿಡಿ; ದೋಷ ಹುಡುಕು.
  10. paid by the piece ಕೆಲಸದ ಪ್ರಮಾಣಾನುಸಾರ ಕೂಲಿ ಕೊಡುವ; ಮಾಡಿದಷ್ಟು, ವಹಿಸಿದಷ್ಟು, ಕೆಲಸಕ್ಕೆ ಅನುಸಾರವಾಗಿ ವೇತನ ಕೊಡುವ; ಪ್ರಮಾಣಕ್ಕಿಷ್ಟೆಂದು ನಿಗದಿಯಾದಂತೆ ವೇತನ ಕೊಡುವ.
  11. piece of eight (ಚರಿತ್ರೆ) ಎಂಟು ರೇಆಲ್‍ (real) ಮೌಲ್ಯದ ಸ್ಪೇನಿನ ನಾಣ್ಯ.
  12. piece of goods (ಅಶಿಷ್ಟ) (ಹೀನಾರ್ಥಕ ಪ್ರಯೋಗ) ಹೆಂಗಸು.
  13. piece of water ಸಣ್ಣಕೊಳ ಮೊದಲಾದವು.
  14. piece of work ಕೆಲಸ; ಕೆಲಸ ಮಾಡಿ ಪಡೆದ ವಸ್ತು:nasty piece of work ಕಚಡ ಕೆಲಸ, ವಸ್ತು.
  15. say one’s piece
    1. ತನ್ನ ಅಭಿಪ್ರಾಯ ತಿಳಿಸು; ತಾನು ಹೇಳಬೇಕಾದ್ದನ್ನು ಹೇಳು.
    2. ಸಿದ್ಧ ಹೇಳಿಕೆ ಕೊಡು.
  16. take to pieces
    1. ಒಡೆದು ಹಾಕು.
    2. ಭಾಗಗಳಾಗಿ ಕಳಚು, ಬೇರ್ಪಡಿಸು.