See also 2hook
1hook ಹುಕ್‍
ನಾಮವಾಚಕ
  1. ಕೊಕ್ಕೆ; ಕೊಂಡಿ.
  2. (ಅಶಿಷ್ಟ) ಲಂಗರು.
  3. (ಸಾಮಾನ್ಯವಾಗಿ ಮುಳ್ಳುಳ್ಳ) ಗಾಳದ ಕೊಕ್ಕೆ; ಮೀನುಗಾಳ.
  4. (ರೂಪಕವಾಗಿ) ಬೋನು; ಜಾಲ; ಗಾಳ;
  5. (ಕ್ರಿಕೆಟ್‍ ಯಾ ಗಾಲ್‍ ಆಟದಲ್ಲಿ) ಕೊಕ್ಕೆ ಹೊಡೆತ; ಹುಕ್‍ (ಹೊಡೆತ).
  6. (ಮುಷ್ಟಿ ಕಾಳಗದಲ್ಲಿ ಮೊಣಕೈ ಬಾಗಿಸಿ ತೂಗಿ ಹತ್ತಿರದಿಂದ ಹೊಡೆಯುವ) ಹುಕ್‍ (ಹೊಡೆತ); ಕೊಕ್ಕೆ ಹೊಡೆತ.
  7. ಕುಡುಗೋಲು: reaping hook ಕೊಯ್ಲಿನ ಕುಡುಗೋಲು.
  8. ಕಡಿದಾದ – ಬಾಗು, ತಿರುವು, ಮುರುವು: river hook ನದಿಯ ತಿರುವು.
  9. ಕೊಂಡಿಚಾಚು; ನೀರಿನೊಳಕ್ಕೆ ಕೊಂಡಿಯಂತೆ ಬಾಗಿ ಚಾಚಿರುವ ಕೊಂಡಿ ನೆಲ, ನೆಲದ ಚಾಚು(ಮುಖ್ಯವಾಗಿ) Hook of Holland ಹಾಲಂಡ್‍ ನೆಲಕೊಂಡಿ.
  10. (ಬಹುವಚನದಲ್ಲಿ) (ಅಶಿಷ್ಟ) ಬೆರಳುಗಳು.
  11. ಮರಳ – ಕೊಕ್ಕೆ, ಕೊಂಡಿ; ಸಮುದ್ರದ ತಿರುವಿನಲ್ಲಿ ಹರಡಿಕೊಂಡಿರುವ ಕೊಂಡಿಯ, ಕೊಕ್ಕೆಯ ಆಕಾರದ ಮರಳ ರಾಶಿ, ದಿಬ್ಬ.
  12. (ಸಂಗೀತ) (ಅರ್ಧಪಾದ ಸ್ವರದ ಚಿಹ್ನೆಯಲ್ಲಿ ದಂಡಚಿಹ್ನೆಗೆ ಅಡ್ಡಡ್ಡಲಾಗಿ ಹಾಕುವ) ಕೊಕ್ಕೆ ಗೆರೆ; ಕೊಂಡಿಗೆರೆ.
  13. = pot-hook.
ಪದಗುಚ್ಛ
  1. by hook or (by) crook ನ್ಯಾಯವೋ ಅನ್ಯಾಯವೋ; ಏನಕೇನ ಪ್ರಕಾರೇಣ; ಹೇಗಾದರೂ ಸರಿ.
  2. off the hooks
    1. (ಟೆಲಿಹೋನಿನ ವಿಷಯದಲ್ಲಿ) ರಿಸೀವರನ್ನು ತೆಗೆದಿರಿಸಿದ; ಪೀಠದ ಮೇಲಿಟ್ಟಿಲ್ಲದ (ಎಂದರೆ ಹೊರಗಡೆಯಿಂಡ ಬರುವ ಕರೆಗಳಿಗೆ ಉತ್ತರ ಹೇಳಲಾಗದ).
    2. ಕಷ್ಟಗಳಿಂದ ಪಾರಾದ; ಇನ್ನೇನೂ ಕಷ್ಟವಿಲ್ಲದ; ನಿಷ್ಕಂಟಕವಾದ.
    3. (ಅಶಿಷ್ಟ) ಸತ್ತುಹೋಗಿ.
ನುಡಿಗಟ್ಟು
  1. drop off the hooks (ಅಶಿಷ್ಟ) ಸಾಯಿ; ಕಂತೆ ಒಗೆ; ಸತ್ತುಬೀಳು.
  2. get the hook (ಅಶಿಷ್ಟ) ಕೆಲಸದಿಂದ ವಜಾ ಆಗು.
  3. give the hook ಕೆಲಸದಿಂದ ವಜಾ ಮಾಡು.
  4. hook, line and sinker ಪೂರ್ತಿಯಾಗಿ; ಪೂರಾ; ಸಂರ್ಪೂವಾಗಿ: he fell for the story, hook line, and sinker ಆ ಕಥೆಯನ್ನು ಸಂಪೂರ್ಣವಾಗಿ ನಂಬಿಬಿಟ್ಟ, ಮೋಸಹೋದ, ಬೇಸ್ತುಬಿದ್ದ.
  5. on one’s own hook (ಅಶಿಷ್ಟ) ಸ್ವತಃ; ತಾನೇ; ಒಬ್ಬರ ಹಂಗಿಲ್ಲದೆ; ಯಾರ ಸಹಾಯವನ್ನೂ ಬೇಡದೆ; ಸ್ವಂತ ಜವಾಬ್ದಾರಿಯ ಮೇಲೆ: he would rather begin on his own hook ಅವನಿಗೆ ಸ್ವಂತ ಜವಾಬ್ದಾರಿಯ ಮೇಲೆ ಪ್ರಾರಂಭಿಸುವುದೇ ಮೇಲೆನಿಸುತ್ತದೆ.
  6. sling (or take) one’s hook (ಅಶಿಷ್ಟ) ಹೊರಟು ಹೋಗು; ಪರಾರಿಯಾಗು; ಓಟಕೀಳು; ಕಂಬಿಕೀಳು; ನಿಕಲಾಯಿಸು.