possession ಪಸೆಷನ್‍
ನಾಮವಾಚಕ
  1. ಪಡೆದಿರುವುದು; ಪಡಪು.
  2. ಒಡೆತನ; ವಶ; ಸ್ವಾಧೀನ; ಅನುಭೋಗ.
  3. (ನ್ಯಾಯಶಾಸ್ತ್ರ) ಪ್ರತ್ಯಕ್ಷಸ್ವಾಮ್ಯ; ಪ್ರತ್ಯಕ್ಷಾಧಿಕಾರ; ಕಾನೂನುಬದ್ಧವಾದ ಸ್ವಾಮ್ಯವನ್ನು ಹೋಲುವ, ಆದರೆ ಅದರಿಂದ ಸ್ವತಂತ್ರವಾಗಿ, ಪ್ರತ್ಯೇಕವಾಗಿ ಇರಬಹುದಾದ ಅಧಿಕಾರ ಯಾ ಹತೋಟಿ: prosecuted for possession of narcotic drugs ಮಾದಕ ವಸ್ತುಗಳನ್ನು ಹೊಂದಿದ್ದಕ್ಕಾಗಿ ಕಾನೂನುಕ್ರಮಕ್ಕೆ ಒಳಗಾದ.
  4. ಸ್ವಾಮ್ಯದಲ್ಲಿರುವ ವಸ್ತು, ಸ್ವತ್ತು.
  5. (ಕಾಲ್ಚೆಂಡಾಟ ಮೊದಲಾದವು) ಚೆಂಡು ತಾತ್ಕಾಲಿಕವಾಗಿ ಒಬ್ಬ ನಿರ್ದಿಷ್ಟ ಆಟಗಾರನ ವಶದಲ್ಲಿ, ಹತೋಟಿಯಲ್ಲಿ ಇರುವುದು.
  6. (ಬಹುವಚನದಲ್ಲಿ) ಆಸ್ತಿ; ಐಶ್ಚರ್ಯ; ಸಂಪತ್ತು; ಸಿರಿ.
  7. (ಮುಖ್ಯವಾಗಿ ಅನ್ಯದೇಶಗಳ) ಅಧೀನ ರಾಜ್ಯ ಮೊದಲಾದವು.
ಪದಗುಚ್ಛ
  1. demoniac possession ಭೂತ ಹಿಡಿದಿರುವುದು; ಭೂತಬಾಧೆ.
  2. in possession
    1. (ವಸ್ತುವಿನ ವಿಷಯದಲ್ಲಿ) ವಶದಲ್ಲಿರುವ; ಸ್ವಾಧೀನದಲ್ಲಿರುವ.
    2. (ವ್ಯಕ್ತಿಯ ವಿಷಯದಲ್ಲಿ) ಸ್ವಾಧೀನ ಪಡೆದಿರುವ.
  3. in possession of (ತನ್ನ) ಬಳಿ ಇರುವ: I am in possession of a fine specimen ನನ್ನ ಬಳಿ ಒಂದು ಸೊಗಸಾದ ಮಾದರಿಯಿದೆ.
  4. in the possession of ಸ್ವಾಮ್ಯದಲ್ಲಿರುವ; ಒಡೆತನದಲ್ಲಿರುವ; ವಶದಲ್ಲಿರುವ: the specimen is in the possession of the present writer ಮಾದರಿಯು ಪ್ರಸ್ತುತ ಲೇಖಕನ ವಶದಲ್ಲಿದೆ.
  5. possession is nine 1points of the law.
  6. possession order ಸ್ವಾಧೀನದ ಆದೇಶ; ಆಸ್ತಿಯ ಸ್ವಾಧೀನವನ್ನು ಅದರ ಒಡೆಯನಿಗೆ ಕೊಡಬೇಕೆಂಬ ನ್ಯಾಯಾಲಯದ ಆದೇಶ.
  7. rejoice in the possession of ಪಡೆಯುವಷ್ಟು ಅದೃಷ್ಟವಿರು, ಭಾಗ್ಯಪಡೆದಿರು.
  8. self possession ಸ್ವಸ್ಥಚಿತ್ತ(ತೆ); ಸಮಾಧಾನಚಿತ್ತತೆ; ಅಕ್ಷುಬ್ಧತೆ; ಶಾಂತತೆ; ಚಿತ್ತಸ್ವಾಸ್ಥ್ಯ; ಆತ್ಮಸಂಯಮ.
  9. take possession (ಅನೇಕವೇಳೆ of ಒಂದಿಗೆ) ಒಂದು ವಸ್ತುವಿನ ಒಡೆಯ ಅಗು, ಸ್ವಾಮ್ಯ ತೆಗೆದುಕೊ; ಒಂದು ವಸ್ತುವನ್ನು ವಶಪಡಿಸಿಕೊ.