See also 2stock  3stock
1stock ಸ್ಟಾಕ್‍
ನಾಮವಾಚಕ
  1. (ಮರ, ಗಿಡ, ಮೊದಲಾದವುಗಳ ಮುಖ್ಯ) ಕಾಂಡ; ತಾಳು; ಬೊಡ್ಡೆ.
  2. ಕಸಿರೆಂಬೆ ಮೊದಲಾದವನ್ನು ಅಂಟಿಸುವ ಮೂಲ ಗಿಡ, ಸಸ್ಯ.
    1. (ಯಂತ್ರದ) ಪೀಠ; ಆಧಾರ ಭಾಗ: stock of an anvil ಅಡಿಗಲ್ಲಿನ ಪೀಠ, ಮರ.
    2. (ಆಯುಧ, ಸಾಧನ, ಮೊದಲಾದವುಗಳ) ಹಿಡಿ(ಕೆ); ಕಾವು: stock of a rifle ಬಂದೂಕಿನ ಹಿಡಿ. stock of a plough ನೇಗಿಲಿನ ಕಾವು.
    1. = headstock.
    2. = tailstock.
  3. ಲಂಗರಿನ ಅಡ್ಡ – ತೊಲೆ, ದಿಮ್ಮಿ.
    1. ವಂಶ (ಪರಂಪರೆ); ಕುಲ; ಬಉಡಕಟ್ಟು; ಮನೆತನ.
    2. ವಂಶ(ಮೂಲ); ಕುಟುಂಬದ ಮೂಲ: comes of Tamil stock ತಮಿಳು ಮೂಲದಿಂದ ಬಂದಿದ್ದಾನೆ; ತಮಿಳು ಮನೆತನದವನು. comes of a good stock ಒಳ್ಳೆಯ ಮನೆತನದವನು, ಸತ್ಕುಲಪ್ರಸೂತ.
  4. (ವ್ಯಾಪಾರ, ವಿತರಣೆ, ಮೊದಲಾದವುಗಳಿಗಾಗಿ ಸಿದ್ಧವಾಗಿರುವ) ಸಾಮಾನು, ಪದಾರ್ಥ, ಮೊದಲಾದವುಗಳ – ಸಂಗ್ರಹ, ಸಂಚಯ, ದಾಸ್ತಾನು.
  5. (ಬೇಕಾದಾಗ ಬಳಸಿಕೊಳ್ಳಲು ಶೇಖರಿಸಿರುವ ಯಾವುದರದೇ) ಶೇಖರಣೆ; ದಾಸ್ತಾನು; ಸಂಗ್ರಹ; ರಾಶಿ: lay in winter stocks of fuel ಚಳಿಗಾಲಕ್ಕಾಗಿ ಸೌದೆ(ರಾಶಿ) ಶೇಖರಿಸಿಡು. a great stock of information ಮಾಹಿತಿಯ ಭಾರಿ ಸಂಗ್ರಹ.
  6. (ತಯಾರಿಕೆ, ವ್ಯಾಪಾರ, ಮೊದಲಾದವುಗಳ) a. ಮೂಲ ಸಾಮಗ್ರಿ; ಕಚ್ಚಾ ಮಾಲು. b. ಸಜ್ಜು; ಸಾಧನಪರಿಕರ.
  7. (ಅಮೆರಿಕನ್‍ ಪ್ರಯೋಗ)
    1. = stock company.
    2. ಅದು ಪ್ರದರ್ಶಿಸುವ ನಾಟಕಗಳು ಯಾ ನಾಟಕಗಳ ಸಂಗ್ರಹ.
  8. (ಪ್ರಾಣಿವಿಜ್ಞಾನ) ಹವಳದ ಹುಳು ಮೊದಲಾದ ಸೂಕ್ಷ ಜೀವಿಗಳ ಸಂಚಯ.
  9. (ಮೂಳೆಗಳು, ಮಾಂಸ, ಮೀನು, ತರಕಾರಿಗಳು, ಮೊದಲಾದವನ್ನು) ಕುದಿಸಿ ತಯಾರಿಸಿದ ದ್ರವ, ಪಾಕ.
    1. (ಬೇಸಾಯದಲ್ಲಿ ಬಳಸುವ) ಬೇಸಾಯದ ಪ್ರಾಣಿಗಳು, ರಾಸುಗಳು, ಕುದುರೆ, ಮೊದಲಾದವು.
    2. ಬೇಸಾಯದ ಸಲಕರಣೆಗಳು, ಉಪಕರಣಗಳು; ವ್ಯವಸಾಯೋಪಕರಣಗಳು.
    3. = fatstock.
  10. (ಬಹುವಚನದಲ್ಲಿ) (ಚರಿತ್ರೆ) (ತಪ್ಪಿತಗಳನ್ನು ಮಾಡಿದ ಅಪರಾಧಿಗಳ ಕಾಲು ಗಳಿಗೆ,ಕೈಗಳಿಗೆ ಕಟ್ಟಿ, ಕೆಲವೊಮ್ಮೆ ಕುತ್ತಿಗೆಗೆ ಹಾಕಿ ಜನರ ಕಣ್ಣಿಗೆ ಬೀಳುವಂತೆ ಕೂರಿಸಿ ಶಿಕ್ಷಿಸುತ್ತಿದ್ದ) ಬೇಡಿ, ಕಾಲ್ಕೊರಡು, ಕೈ ಕೊರಡು; ಕೊರಡ – ಬೇಡಿ,ಸಂಕೋಲೆ. Figure: t-misc
  11. (ಬಹುವಚನದಲ್ಲಿ) (ನೌಕಾಯಾನ) ದಿಮ್ಮಿ ಚೌಕಟ್ಟು; ಕಟ್ಟುತ್ತಿರುವಾಗ ಹಡಗಿಗೆ ಆಧಾರವಾಗಿ ಕೊಡುವ ಊರೆದಿಮ್ಮಿಗಳು.
  12. (ಮುಖ್ಯವಾಗಿ ಕುದುರೆ ಸವಾರಿ ಪೋಷಾಕಿನಲ್ಲಿ ಯಾ ಪಾದ್ರಿಯ ಕೊರಳ ಪಟ್ಟಿಯ ಕೆಳಗೆ ಧರಿಸುವ) ಕೊರಳಪಟ್ಟಿ.
  13. ಸ್ಟಾಕ್‍ ಗಿಡ; ಮ್ಯಾತಿಯೊಲ ಕುಲದ, ಸುವಾಸನೆಯ ಹೂಗಳನ್ನು ಬಿಡುವ, ಶಿಲುಬೆಯಾಕಾರದ ಸಸ್ಯಗಳಲ್ಲೊಂದು.
    1. (ಒಂದು ಕಾರ್ಪೊರೇಷನ್‍, ಕಂಪನಿ, ಮೊದಲಾದ ಕೈಗಾರಿಕೆ ಯಾ ವಾಣಿಜ್ಯ ಸಂಸ್ಥೆಯ ಷೇರುಗಳ ರೂಪದಲ್ಲಿ ವ್ಯಕ್ತಿಗಳಿಂದ ಒಂದು ಉದ್ಯಮ ನಡೆಸುವ ಸಲುವಾಗಿ ಕೂಡಿಸಿದ, ಷೇರುದಾರರ ಕೊಡುಗೆಗಳ ಪ್ರಮಾಣಾನುಸಾರ ಲಾಭಾಂಶಗಳನ್ನು ತೆರಬೇಕಾದ) ಮೂಲಧನ; ಬಂಡವಾಳ; ಷೇರುಧನ.
    2. (ವಾಣಿಜ್ಯ ಸಂಸ್ಥೆಯೊಂದರ) ಷೇರುಗಳು.
  14. (ಬ್ರಿಟಿಷ್‍ ಪ್ರಯೋಗ)
    1. ಸ್ಟಾಕು; ಸರ್ಕಾರಿ ಸಾಲಪತ್ರ; ಋಣ ಸಂಚಯ (ಪತ್ರ); ನಿಯತ ಕಾಲಾವಧಿಗಳಲ್ಲಿ ತನಗಾಗಲಿ ತನ್ನ ವಾರಸುದಾರರಿಗಾಗಲಿ, ನಿಗದಿಯಾದ ದರದಂತೆ ಬಡ್ಡಿ ತೆರುವ, ಪೂರ್ಣಾವಧಿ ಮುಗಿದೊಡನೆಯೇ ಅಸಲನ್ನು ವಾಪಸ್‍ ಮಾಡಬೇಕೆಂಬ ನಿಬಂಧನೆಗಳ ಮೇರೆಗೆ ಸರ್ಕಾರಕ್ಕೆ ಕೊಟ್ಟ ಸಾಲದ ಮೊತ್ತ(ವನ್ನು ನಮೂದಿಸಿರುವ ಸರ್ಕಾರೀ ಪತ್ರ: buy stock (ಸರ್ಕಾರಕ್ಕೆ ಸಾಲಕೊಟ್ಟು) ಸ್ಟಾಕನ್ನು, ಸಾಲಪತ್ರವನ್ನು – ಕೊಂಡುಕೊ. hold stock (ಸರ್ಕಾರಕ್ಕೆ ಸಾಲ ಕೊಟ್ಟು ಕೊಂಡುಕೊಂಡ) ಸಾಲಪತ್ರ ಹೊಂದಿರು, ಇಂಥ ಪತ್ರದ ಒಡೆಯನಾಗಿರು.
    2. ಸ್ಟಾಕ್‍ ಹಕ್ಕು; ಸಾಲ ಪತ್ರದ ಹಕ್ಕು; ಸರ್ಕಾರಕ್ಕೆ ಕೊಟ್ಟ ಸಾಲದ ಮೇಲೆ ಬಡ್ಡಿ ಪಡೆಯುವ ಹಕ್ಕು.
  15. (ಒಬ್ಬ ವ್ಯಕ್ತಿಯ) ಜನಪ್ರಿಯತೆ; ಹೆಸರು; ಖ್ಯಾತಿ; ಪ್ರಸಿದ್ಧಿ; ಕೀರ್ತಿ: his stock is rising steadily ಅವನ ಜನಪ್ರಿಯತೆ, ಖ್ಯಾತಿ ಒಂದೇ ಸಮನೆ ಹೆಚ್ಚುತ್ತಿದೆ.
  16. (ಬ್ರಿಟಿಷ್‍ ಪ್ರಯೋಗ) (ಅಚ್ಚಿನಲ್ಲಿ ರೂಪಿಸಿದ) ಅಚ್ಚು ಇಟ್ಟಿಗೆ; ಗಟ್ಟಿಯಾದ ಘನ ಇಟ್ಟಿಗೆ.)
ಪದಗುಚ್ಛ
  1. in stock (ಯಾವುದೇ ಸರಕಿನ, ಸರಕುಗಳ) ದಾಸ್ತಾನು, ಸಂಗ್ರಹ ಇರುವ.
  2. on the stocks (ಹಡಗಿನ ವಿಷಯದಲ್ಲಿ) ಕಟ್ಟುತ್ತಿರುವ; ನಿರ್ಮಾಣದ – ಸ್ಥಿತಿಯಲ್ಲಿರುವ, ತಯಾರಿಯಲ್ಲಿರುವ.
  3. out of stock (ಮಾರಾಟಕ್ಕೆ) ದಾಸ್ತಾನಿಲ್ಲದ.
  4. stocks and stones
    1. (ಮರದ ಮತ್ತು ಕಲ್ಲಿನ ವಿಗ್ರಹಗಳನ್ನು ಕುರಿತು ಹೇಳುವ ಮಾತಾಗಿ) ಕಲ್ಲು ಮತ್ತು ಕೊರಡುಗಳು.
    2. ತಾಮಸ (ಪ್ರಕೃತಿಯವ)ರು; ಛಾನಸದವರು; ಜಡರು.
  5. take stock ಇರುವ ಸರಕಿನ ಲೆಕ್ಕ ತೆಗೆದುಕೊ; ದಾಸ್ತಾನನ್ನು ಅಜಮಾಯಿಷಿ, ಜಡತಿ – ಮಾಡು.
  6. take stock in (ಒಂದರಲ್ಲಿ) ಆಸಕ್ತಿ – ವಹಿಸು, ತೆಗೆದುಕೊ, ಇಡು.
  7. take stock of (ಪರಿಸ್ಥಿತಿ ಮೊದಲಾದವುಗಳನ್ನು ಗೊತ್ತುಮಾಡಿಕೊಳ್ಳುವುದಕ್ಕಾಗಿ) ಸಂದರ್ಭಗಳನ್ನು – ಪರೀಕ್ಷಿಸು, ಪರಿಶೀಲಿಸು, ವಿಮರ್ಶಿಸು.