See also 1hold  3hold
2hold ಹೋಲ್ಡ್‍
ನಾಮವಾಚಕ
  1. ಹಿಡಿತ (ರೂಪಕವಾಗಿ ಸಹ).
  2. ಹಿಡಿದುಕೊಳ್ಳುವ ಅವಕಾಶ, ಅಧಿಕಾರ.
  3. ಹಿಡಿ; ಹಿಡಿಕೆ; ಹಿಡಿದುಕೊಳ್ಳುವ ಆಸರೆ, ಸಾಧನ.
  4. (ರೂಪಕವಾಗಿ) (ಒಬ್ಬರ ಮೇಲೆ) ಪ್ರಭಾವ; ವಶೀಲಿ.
  5. (ಪುಸ್ತಕ ಭಂಡಾರದಲ್ಲಿ ಪುಸ್ತಕ ಮೊದಲಾದವನ್ನು) ಕಾದಿರಿಸುವ ಆಜ್ಞೆ: put a hold on a book ಪುಸ್ತಕವನ್ನು ಕಾದಿರಿಸಬೇಕೆಂದು ಆಜ್ಞಾಪಿಸು.
  6. (ಕುಸ್ತಿ ಮೊದಲಾದವುಗಳಲ್ಲಿ) ವರಿಸೆ; ಪಟ್ಟು: a toe hold ಕಾಲ್ಬೆರಳ ಪಟ್ಟು.
  7. (ಪ್ರಾಚೀನ ಪ್ರಯೋಗ) ಕೋಟೆ; ದುರ್ಗ.
ಪದಗುಚ್ಛ

hold on (or over) (ಒಬ್ಬನ ಮೇಲೆ) ಪ್ರಭಾವ ಹೊಂದು; ಅಧಿಕಾರ ಪಡೆ.

ನುಡಿಗಟ್ಟು
  1. get hold of
    1. (ವ್ಯಕ್ತಿ ಯಾ ವಸ್ತುವನ್ನು) ಹಿಡಿದುಕೊ; ಪಡೆದುಕೊ.
    2. (ವ್ಯಕ್ತಿಯೊಡನೆ) ಸಂಪರ್ಕ ಪಡೆ; ಸಂಪರ್ಕಿಸು.
  2. take hold ಭದ್ರವಾಗಿ ನೆಲಸು; ದೃಢವಾಗಿ ಸ್ಥಾಪನೆಗೊಳ್ಳು; ಸ್ಥಿರವಾಗಿ ಬೇರೂರು.
  3. with no holds barred
    1. (ಕುಸ್ತಿಯಲ್ಲಿ) ಎಲ್ಲ ಪಟ್ಟಿನ; ಯಾವುದೇ ಪಟ್ಟನ್ನು ನಿರಾಕರಿಸದ; ಎಲ್ಲ ಬಗೆಯ ವರಿಸೆಗಳಿಗೂ ಅವಕಾಶ ನೀಡಿರುವ.
    2. ಮುಕ್ತಾವಕಾಶದ; ಯಾವುದೇ – ತಡೆಯಿಲ್ಲದ, ನಿರ್ಬಂಧವಿಲ್ಲದ; ನ್ಯಾಯವೋ ಅನ್ಯಾಯವೋ ಎಲ್ಲ ವಿಧಾನಗಳಿಗೂ ಮಾರ್ಗಗಳಿಗೂ ಉಪಾಯಗಳಿಗೂ ಅವಕಾಶ ನೀಡಿರುವ.
  4. keep hold of ಹಿಡಿತವನ್ನಿಟ್ಟುಕೊಂಡಿರು; ಹಿಡಿತ – ಬಿಡದಿರು, ಸಡಲಿಸದಿರು.