See also 2turn
1turn ಟರ್ನ್‍
ಸಕರ್ಮಕ ಕ್ರಿಯಾಪದ
  1. ಸುತ್ತಿಸು; ತಿರುಗಿಸು; ಸುತ್ತುತಿರುಗಿಸು: turned the wheel ಚಕ್ರವನ್ನು ತಿರುಗಿಸಿದ. turn the key in the lock ಬೀಗದ ಕೈಯನ್ನು ಬೀಗದೊಳಗೆ ತಿರುಗಿಸು.
  2. ಮಗುಚು; ತಿರುವು; ಮಗುಚಿ ಹಾಕು; ತಿರುವಿ ಒಳಪಕ್ಕ ಹೊರಗೆ ಕಾಣುವಂತೆ ಮಗುಚಿ, ಕೆಳಗಿನದು ಮೇಲೆ ಬರುವಂತೆ ತಲೆಕೆಳಗು ಮಾಡು( ಅಕರ್ಮಕ ಕ್ರಿಯಾಪದ ಸಹ): turned inside out ಒಳಗಿನದು ಹೊರಗೆ ಕಾಣುವಂತೆ ಮಗುಚಿದ; ಒಳಗು ಹೊರಗು ಮಾಡಿದ. turned it upside down ಅದನ್ನು ತಲೆಕೆಳಗು ಮಾಡಿದ.
  3. ಬೇರೆ ಕಡೆಗೆ, ದಿಕ್ಕಿಗೆ ತಿರುಗಿಸು: turn your eyes this way ನಿನ್ನ ಕಣ್ಣುಗಳನ್ನು ಇತ್ತ ತಿರುಗಿಸು.
  4. ಒಂದು ದಿಕ್ಕಿಗೆ ಗುರಿಯಿಡು: turned the hose on them ನೀರ್ಕೊಳವಿಯನ್ನು ಅವರ ಮೇಲೆ ಬಿಟ್ಟ.
  5. (ಸ್ವಭಾವ, ಸ್ವರೂಪ ಯಾ ಸ್ಥಿತಿಯನ್ನು) ಬದಲಾಯಿಸು; ಪರಿವರ್ತಿಸು; ಮಾರ್ಪಡಿಸು: then turned him into a frog ಆಮೇಲೆ ಅವನನ್ನು ಕಪ್ಪೆಯನ್ನಾಗಿ ಮಾಡಿದರು. turned novel into a play ಕಾದಂಬರಿಯನ್ನು ನಾಟಕವನ್ನಾಗಿ ಮಾರ್ಪಡಿಸಿದ.
  6. ಆಗಿಸು; ಆಗುವಂತೆ ಮಾಡು: your comment turned them angry ನಿನ್ನ ಟೀಕೆ ಅವರನ್ನು ಕೋಪಿಸಿಕೊಳ್ಳುವಂತೆ ಮಾಡಿತು.
  7. ವಿರೋಧ ಹುಟ್ಟಿಸು; ವಿರೋಧಿಗಳನ್ನಾಗಿ ಮಾಡು: turned them against us ಅವರನ್ನು ನಮ್ಮ ವಿರೋಧಿಗಳನ್ನಾಗಿ ಮಾಡಿತು.
    1. (ಹಾಲನ್ನು) ಹುಳಿಯಾಗಿಸು; ಹುಳಿಯಿಡಿಸು.
    2. (ಹೊಟ್ಟೆಯನ್ನು) ತೊಳಸುವಂತೆ ಮಾಡು.
    3. (ತಲೆ) ಸುತ್ತುವಂತೆ, ಗಿರಕಾಯಿಸುವಂತೆ ಮಾಡು.
  8. ಭಾಷಾಂತರ ಮಾಡು; ಅನುವಾದಿಸು: turn it into Kannada ಅದನ್ನು ಕನ್ನಡಕ್ಕೆ ಅನುವಾದಿಸು.
  9. ಆಚೆ ಕಡೆಗೆ, ಪಕ್ಕಕ್ಕೆ–ಹೋಗು; ಸುತ್ತಿ ಹೋಗು; ದಾಟು; ಹಾದುಹೋಗು: turned the corner ಮೂಲೆಯನ್ನು ಸುತ್ತಿಹೋದ; ಮೂಲೆಯಾಚೆ ಹೋದ.
  10. ವಯಸ್ಸು ತುಂಬಉ ಯಾ ಕಾಲ ಆಗು: he has turned 40 ಅವನಿಗೆ 40 (ವರ್ಷ) ಆಯಿತು. it has turned 4 0’ clock ಈಗ ನಾಲ್ಕು ಗಂಟೆಯಾಯಿತು.
  11. ಕಳುಹಿಸು; ಹೋಗುವಂತೆ ಮಾಡು; ನಿರ್ದಿಷ್ಟ ಸ್ಥಳಕ್ಕೆ ಯಾ ಸ್ಥಿತಿಗೆ ತರು ಯಾ ಹೋಗುವಂತೆ ಮಾಡು: was turned loose ಕಟ್ಟು ಕಳಚಿ, ಸ್ವತಂತ್ರವಾಗಿ ಬಿಡಲಾಯಿತು. turned the water into a basin ನೀರನ್ನು ಪಾತ್ರೆಗೆ ಹರಿಸಲಾಯಿತು.
  12. ಲಾಗ ಹಾಕು; ಪಲ್ಟಿ ಹೊಡೆ.
  13. ತಿರುಗುಮುರುಗು, ಒಳಹೊರಗು–ಮಾಡು; (ಉಡುಪು, ಬಟ್ಟೆ, ಮೊದಲಾದವುಗಳ) ಹಳತಾದ, ಜೀರ್ಣವಾದ, ಕೊಳೆಯಾದ ಹೊರ ಪಕ್ಕವನ್ನು ಒಳಮಡಚಿ ರಿಪೇರಿ ಮಾಡು, ಹೊಸದನ್ನಾಗಿ ಮಾಡು.
  14. (ಲಾಭ) ಗಳಿಸು.
  15. ಬಂದೂಕಿನ ಗುಂಡನ್ನು ತಡೆ; ತಪ್ಪಿಸು; ದಿಕ್ಕು ತಪ್ಪುವಂತೆ, ಗುರಿ ತಪ್ಪುವಂತೆ ಮಾಡು.
  16. (ಚಾಕುವಿನ ಅಲಗು, ಸ್ಕ್ರೂ ಮೊಳೆಯ ಗಾಡಿ, ಮೊದಲಾದವನ್ನು) ಮೊಂಡು ಮಾಡು; ಮೊಂಡಾಗಿಸು.
  17. ಚರಕಿ ಯಂತ್ರದಿಂದ ಕಡೆ; ಕಡೆತದ ಯಂತ್ರದಲ್ಲಿ–(ವಸ್ತುವನ್ನು) ರೂಪಿಸು, ಕಡೆ, ನಿರ್ಮಿಸು.
  18. (ಮುಖ್ಯವಾಗಿ ಸುಂದರ) ರೂಪ ಕೊಡು, ರಚಿಸು: turn a compliment ಒಳ್ಳೆಯ ಪ್ರಶಂಸೆ ರಚಿಸು. well turned phrase ಸೊಗಸಾದ ಉಕ್ತಿ.
  19. (ಮುದ್ರಣ) (ಮುಖ್ಯವಾಗಿ ಭೂತಕೃದಂತ ರೂಪದಲ್ಲಿ ಗುಣವಾಚಕವಾಗಿ ಪ್ರಯೋಗ) (ಅಚ್ಚನ್ನು) ತಲೆಕೆಳಗಾಗಿಸು; ಉಲ್ಟಾ ಮಾಡು; ತಲೆಕೆಳಗಾಗಿ ಮುದ್ರಿಸುವಂತೆ ಮಾಡು: a turned comma ತಲೆಕೆಳಗಾದ ಅರ್ಧವಿರಾಮ ಚಿಹ್ನೆ.
  20. ಪಕ್ಕದಿಂದ ಯಾ ಹಿಂಬದಿಯಿಂದ ಆಕ್ರಮಣ ನಡೆಸಲು (ಸೈನ್ಯದ ಪಕ್ಕ ಮೊದಲಾದವುಗಳನ್ನು) ಸುತ್ತಿಹೋಗು, ಹಾದುಹೋಗು.
ಅಕರ್ಮಕ ಕ್ರಿಯಾಪದ
  1. ಸುತ್ತು; ತಿರುಗು; ಸುತ್ತು ತಿರುಗು: the wheel turns ಚಕ್ರ ಸುತ್ತುತ್ತದೆ. the key turns in the lock ಬೀಗದ ಕೈ ಬೀಗದಲ್ಲಿ ತಿರುಗುತ್ತದೆ.
  2. ತಿರುಗು; ಬೇರೆ ದಿಕ್ಕು–ಹಿಡಿ, ತೆಗೆದುಕೊ; ಬೇರೆ ಕಡೆಗೆ, ದಿಕ್ಕಿಗೆ–ತಿರುಗು, ಹೋಗು: turn left here ಇಲ್ಲಿ ಎಡಕ್ಕೆ ತಿರುಗು. my thoughts often turn to you ನನ್ನ ಯೋಚನೆಗಳು ಅನೇಕ ವೇಳೆ ನಿನ್ನತ್ತ ತಿರುಗುತ್ತವೆ.
  3. ತೊಡಗು; ಕೈಹಚ್ಚು; ಕಾರ್ಯಾರಂಭ ಮಾಡು: turned to doing the ironing ಇಸ್ತ್ರಿ ಮಾಡಲು–ತೊಡಗಿದ, ಪ್ರಾರಂಭಿಸಿದ.
  4. ಮಾರ್ಪಡು; ರೂಪಾಂತರ ಪಡೆ; ಮಾರ್ಪಾಡಾಗು: turn into a snake ಹಾವಾಗು; ಹಾವಾಗಿ ಮಾರ್ಪಾಡಾಗು.
  5. ತಿರುಗು; ಚಾಳಿಗೆ, ಚಟಕ್ಕೆ–ಬೀಳು; ಅಭ್ಯಾಸ ಮಾಡಿಕೊ: turn to drink ಕುಡಿತಕ್ಕೆ ತಿರುಗಿದ, ಕುಡಿತದ ಚಟಕ್ಕೆ ಬಿದ್ದ.
  6. ಅವಲಂಬಿಸು; ಮರೆಹೊಗು; ಆಶ್ರಯಿಸು; ತಿರುಗು: turn to me for help ಸಹಾಯಕ್ಕೆ ನನ್ನ ಕಡೆ ತಿರುಗಿದ (ನನ್ನನ್ನು ಅವಲಂಬಿಸಿದ). turned to God in her trouble ತನ್ನ ಕಷ್ಟದಲ್ಲಿ ದೇವರ ಮರೆ ಹೊಕ್ಕಳು.
  7. ಪ್ರತಿಕೂಲವಾಗು; ಎದುರು, ತಿರುಗಿ–ಬೀಳು; ಮೇಲೆ ಬೀಳು; ಆಕ್ರಮಣ ಮಾಡು: suddenly turned on them ಇದ್ದಕ್ಕಿದ್ದಂತೆ ಅವರ ಮೇಲೆ ತಿರುಗಿಬಿದ್ದ, ಆಕ್ರಮಣ ಮಾಡಿದ.
  8. (ಕೂದಲು ಯಾ ಎಲೆಗಳ ವಿಷಯದಲ್ಲಿ) ಬಣ್ಣ ಬದಲಾಯಿಸು; ಬಣ್ಣ ತಿರುಗು: turned white ಬಿಳಿದಾಯಿತು; ಬಿಳಿಚಿತು.
  9. (ಹಾಲಿನ ವಿಷಯದಲ್ಲಿ) ಹುಳಿಯಾಗು; ಹುಳಿ ತಿರುಗು.
  10. ತಿರುಗು; ಮುಂದಿನದನ್ನು ನೋಡಲು, ಪರಿಶೀಲಿಸಲು–ತೊಡಗು: let us now turn to your report ಈಗ ನಾವು ನಿನ್ನ ವರದಿಯತ್ತ ತಿರುಗೋಣ, ವರದಿಯನ್ನು ನೋಡೋಣ.
  11. (ಹೊಟ್ಟೆಯ ವಿಷಯದಲ್ಲಿ) ತೊಳಸು; ವಾಕರಿಕೆ ಬರು.
  12. (ತಲೆಯ ವಿಷಯದಲ್ಲಿ) ತಿರುಗು; ಸುತ್ತು; ಗಿರಕಿ ಹೊಡೆ.
  13. ಅವಲಂಬಿಸು; ಆಧರಿಸು; ನಿರ್ಧಾರಿತವಾಗು: it all turns on the weather tomorrow ಇದೆಲ್ಲಾ ನಾಳಿನ ಹವಾಮಾನವನ್ನು ಆಧರಿಸಿದೆ.
  14. (ಗಾಲ್ಫ್‍ ಆಟ) ಒಂದು (ವರಿಸೆ) ಆಟದ ಎರಡನೆಯ ಹಂತ, ಸೂಳು ಪ್ರಾರಂಭಿಸು.
  15. (ಉಬ್ಬರವಿಳಿತದ ವಿಷಯದಲ್ಲಿ) ಉಬ್ಬಿ ಇಳಿ; ಇಳಿದು ಏರು; ಉಬ್ಬರ ಮತ್ತು ಇಳಿತ–ಮರಳು, ಪುನರಾವರ್ತನೆಯಾಗು.
ಪದಗುಚ್ಛ
  1. not know which way (or where) to turn ಯಾವ ಕಡೆ ತಿರುಗಬೇಕೋ ತಿಳಿಯದು; ಏನು ಮಾಡಬೇಕೆಂಬಉದೇ ತೋರದಾಗಿದೆ; ದಿಕ್ಕೇ ತೋಚದಂತಾಗಿದೆ.
  2. not turn a hair.
  3. turn about ಸುತ್ತ ತಿರುಗು, ಬೇರೆ ದಿಕ್ಕಿಗೆ ತಿರುಗು, ಮುಖ ಮಾಡು; ಹಿಂದುಮುಂದಾಗು.
  4. turn a deaf ear.
  5. turn against ಪ್ರತಿಕೂಲ, ವಿರೋಧಿ–ಆಗು; ಎದುರುಬೀಳು.
  6. turn and turn about ಅನುಕ್ರಮವಾಗಿ ಆ ಕಡೆ ಈ ಕಡೆ ತಿರುಗು; ಹೀಗೆಹಾಗೆ ತಿರುಗು.
  7. turn an honest penny.
  8. turn a person’s $^1$head (or brain).
  9. turn around = (ಪದಗುಚ್ಛ 25).
  10. turn away
    1. ಬೇರೊಂದು ಕಡೆಗೆ ತಿರುಗು, ಮುಖ ಮಾಡು.
    2. ನೋಡಲು ಯಾ ಅಂಗೀಕರಿಸಲು ನಿರಾಕರಿಸು.
    3. ಕಳುಹಿಸಿಬಿಡು.
  11. turn back
    1. ಹಿಮ್ಮೆಟ್ಟು; ಹಿಂದಕ್ಕೆ ಹೋಗಲು ಪ್ರಾರಂಭಿಸು.
    2. ಹಿಮ್ಮೆಟ್ಟುವಂತೆ ಮಾಡು; ಹಿಂದಕ್ಕೆ ಅಟ್ಟು.
    3. ಹಿಂದಕ್ಕೆ, ಒಳಕ್ಕೆ–ಮಡಿಚು.
  12. turn down
    1. (ಸಲಹೆ, ಮನವಿ, ಮೊದಲಾದವನ್ನು) ನಿರಾಕರಿಸು; ತಿರಸ್ಕರಿಸು.
    2. (ಬಿರಡೆ ಮೊದಲಾದವನ್ನು ತಿರುಗಿಸಿ ಶಬ್ದ, ಶಾಖ, ಮೊದಲಾದವುಗಳ ತೀವ್ರತೆಯನ್ನು) ಕಡಮೆ ಮಾಡು; ತಗ್ಗಿಸು.
    3. ಕೆಳಕ್ಕೆ ಮಡಿಸು; (ಮಗ್ಗಲು ಹಾಸಿಗೆ, ಪುಟ, ಮೊದಲಾದವುಗಳ) ಅಂಚನ್ನು ಕೆಳಕ್ಕೆ ಮಡಿಸು.
    4. ಬೋರಲು ಹಾಕು; ಬೋರಲಾಗಿಡು; ಕೆಳಮುಖವಾಗಿ ಇಡು.
    5. (ಅನಿಲ, ದೀಪ, ಮೊದಲಾದವುಗಳ ತಿರುಪು ತಿರುಗಿಸಿ) ಜ್ವಾಲೆ, ಬೆಳಕು–ಕಡಮೆ ಮಾಡು, ಸಣ್ಣದು ಮಾಡು.
  13. turn in
    1. ಕೊಡು; ಒಪ್ಪಿಸು; ಸಲ್ಲಿಸು: turn in a resignation ರಾಜೀನಾಮೆ ಸಲ್ಲಿಸು.
    2. ಒಳಕ್ಕೆ ಮಡಿಸು.
    3. ವಶಕ್ಕೆ ಕೊಡು; ವಶಪಡಿಸು.
    4. (ಗೆಲ್ಲಂಕ) ಪಡೆ; ಸಾಧಿಸು; ಗಳಿಸು.
    5. (ಕಾರ್ಯ ಮೊದಲಾದವನ್ನು) ಮಾಡು; ಸಾಧಿಸು; ನಡೆಸು.
    6. (ಆಡುಮಾತು) (ರಾತ್ರಿ) ಹೋಗಿ ಮಲಗಿಕೊ.
    7. ಒಳಮುಖವಾಗಿರು; ಒಳಬಾಗಿರು: his toes turn in ಅವನ ಕಾಲ್ಬೆರಳುಗಳು ಒಳಬಾಗಿವೆ.
    8. (ಆಡುಮಾತು) (ಯೋಜನೆ ಮೊದಲಾದವನ್ನು) ಕೈಬಿಡು.
  14. make one turn in his $^1$grave.
  15. turn off
    1. (ನಲ್ಲಿ, ಬಿರಡೆ, ಸ್ವಿಚ್‍, ಮೊದಲಾದವನ್ನು ಒತ್ತಿ, ತಿರುಗಿಸಿ ನೀರಿನ ಹರಿವು, ರೇಡಿಯೋ, ವಿದ್ಯುತ್ತು, ಮೊದಲಾದವನ್ನು) ನಿಲ್ಲಿಸು; ಬಂದು ಮಾಡು; ಸ್ಥಗಿತಗೊಳಿಸು.
    2. (ನಿಲ್ಲಿಸಲು, ಬಂದುಮಾಡಲು ನಲ್ಲಿ, ಸ್ವಿಚ್‍, ಮೊದಲಾದವನ್ನು) ಒತ್ತು; ತಿರುಗಿಸು.
    3. ಪಕ್ಕದ ರಸ್ತೆಗೆ, ಅಡ್ಡರಸ್ತೆಗೆ–ತಿರುಗು, ಪ್ರವೇಶಿಸು.
    4. (ಅಡ್ಡರಸ್ತೆಯ ವಿಷಯದಲ್ಲಿ) ಇನ್ನೊಂದು ರಸ್ತೆಯಿಂದ ಬೇರೆಡೆಗೆ–ಒಯ್ಯು, ಸಾಗು, ಹೋಗು.
    5. (ಆಡುಮಾತು) ದೂರಮಾಡು; ಆಸಕ್ತಿ ಇಲ್ಲದಂತೆ ಯಾ ಕಳೆದುಕೊಳ್ಳುವಂತೆ–ಮಾಡು: turned me right off with their complaining ಅವರ ದೂರಾಟದಿಂದ ನನ್ನ ಆಸಕ್ತಿ ಇಲ್ಲದಂತಾಯಿತು.
    6. (ಆಡುಮಾತು) (ಸೇವಕರು ಮೊದಲಾದವರನ್ನು) ಕೆಲಸದಿಂದ–ತೆಗೆದುಹಾಕು, ವಜಾಮಾಡು.
  16. turn on (or upon)
    1. (ನಲ್ಲಿ, ಸ್ವಿಚ್ಚು, ಮೊದಲಾದವನ್ನು ತಿರುಗಿಸಿ, ಒತ್ತಿ ನೀರು ಯಾ ವಿದ್ಯುತ್ತು ಮೊದಲಾದವನ್ನು) ಹರಿಸು; (ಹರಿಯ)ಬಿಡು.
    2. ಹರಿಸಲು, ಬಿಡಲು (ನಲ್ಲಿ, ಸ್ವಿಚ್ಚು, ಮೊದಲಾದವನ್ನು)–ತಿರುಗಿಸು, ಒತ್ತು.
    3. (ಆಡುಮಾತು) ಉದ್ರೇಕಿಸು; ಆಸಕ್ತಿ, ಕಾಮ–ಕೆರಳಿಸು; (ಮುಖ್ಯವಾಗಿ ಕಾಮ) ಪ್ರಚೋದಿಸು; ಸ್ವಾರಸ್ಯ ಉಂಟುಮಾಡು.
    4. (ಆಡುಮಾತು) (ಮಾದಕ ವಸ್ತುಗಳನ್ನು ಸೇವಿಸಿ) ಅಮಲೇರು ಯಾ ಅಮಲೇರಿಸು.
  17. turn one’s $^1$back on.
  18. turn one’s $^1$coat.
  19. turn one’s $^1$hand to.
  20. turn on one’s $^1$heel.
  21. turn out
    1. ಹೊರಕ್ಕೆ ಹಾಕು; ಓಡಿಸು; ಆಚೆಗೆ ದೂಡು; ವಜಾಮಾಡು; ಉಚ್ಚಾಟನೆ ಮಾಡು.
    2. (ವಿದ್ಯುದ್ದೀಪ ಮೊದಲಾದವನ್ನು) ಆರಿಸು; ನಂದಿಸು.
    3. ಸಜ್ಜುಗೊಳಿಸು; ಬಟ್ಟೆಬರೆಯಿಂದ ಅಲಂಕರಿಸು: well turned out ಚೆನ್ನಾಗಿ ಅಲಂಕರಿಸಿಕೊಂಡ, ಉಡುಪು ಧರಿಸಿಕೊಂಡ.
    4. (ಸರಕು ಮೊದಲಾದವನ್ನು) ತಯಾರಿಸು; ಉತ್ಪಾದಿಸು.
    5. (ಕೊಠಡಿ ಮೊದಲಾದವನ್ನು ಸ್ವಚ್ಫಗೊಳಿಸಲು) ಖಾಲಿ ಮಾಡು; ತೆರವುಗೊಳಿಸು.
    6. (ಒಳಗಿರುವುದನ್ನು ತೋರಿಸಲು ಜೇಬನ್ನು) ಒಳಹೊರಗು ಮಾಡು; ಹೊರಕ್ಕೆ ತಿರುಗಿಸು.
    7. (ಆಡುಮಾತು) ಎದ್ದೇಳು; ಹಾಸಿಗೆಯಿಂದ ಏಳು; ಹಾಸಿಗೆ ಬಿಟ್ಟೇಳು.
    8. ಹೊರಮುಖ ಮಾಡು; ಹೊರತೋರಿಸು.
    9. (ಆಡುಮಾತು) ಮನೆ ಬಿಟ್ಟು ಹೊರಕ್ಕೆ ಹೋಗು; ಹೊರನಡೆ.
    10. (ಆಡುಮಾತು) (ಸಭೆ ಮೊದಲಾದವುಗಳಿಗೆ) ಗುಂಪುಗೂಡು; ನೆರೆ; ಸೇರು; ಹಾಜರಾಗು.
    11. ಆಗು; ಅಂತಾಗು; ಉಂಟಾಗು; ಪರಿಣಮಿಸು: he turned out to be a humbug ಅವನೊಬ್ಬ ಮೋಸಗಾರನಾದ. it turned out to be true ಅದು ನಿಜವಾಗಿ ಪರಿಣಮಿಸಿತು, ಅದು ನಿಜವಾಯಿತು.
    12. (ಸೈನ್ಯ) (ಕಾವಲುಗಾರನನ್ನು ಪಹರೆ ಕೊಠಡಿಯಿಂದ) ಹೊರಕ್ಕೆ, ಈಚೆ–ಕರೆ; ಹೊರಕ್ಕೆ ಬರುವಂತೆ ಹೇಳು.
  22. turn over
    1. ಇನ್ನೊಂದು ಪಕ್ಕ ತಿರುಗಿಸು ಯಾ ತಿರುಗು; ಮಗುಚು; ಮಗುಚಿಹಾಕು: turn over the page ಪುಟವನ್ನು ಮಗುಚು.
    2. ಬೋರಲಾಗು; ತಲೆಕೆಳಗಾಗು.
    3. ಅಸ್ತವ್ಯಸ್ತಗೊಳಿಸು; ಕೆಡಿಸು; ಹಾಳುಮಾಡು.
    4. ಬೀಳು ಯಾ ಬೀಳಿಸು.
    5. (ಯಂತ್ರವನ್ನು) ನಡೆಸು; ಓಡಿಸು; ಕೆಲಸ ಮಾಡುವಂತೆ ಮಾಡು.
    6. (ಯಂತ್ರದ ವಿಷಯದಲ್ಲಿ) ನಡೆ; ಓಡು; ಕೆಲಸ ಮಾಡಲು ಪ್ರಾರಂಭಿಸು.
    7. ಕೂಲಂಕಷವಾಗಿ ಪರಿಶೀಲಿಸು.
    8. (ಒಬ್ಬ ವ್ಯಕ್ತಿಯ ಯಾ ವಸ್ತುವಿನ ಪಾಲನೆ ಯಾ ವರ್ತನೆಯನ್ನು ಇನ್ನೊಬ್ಬನಿಗೆ) ವಶಪಡಿಸು; ವಹಿಸಿಕೊಡು; ವರ್ಗಾಯಿಸು; ಕೊಡು: shall turn it all over to my deputy ಅದೆಲ್ಲವನ್ನೂ ನನ್ನ ಪ್ರತಿನಿಧಿಗೆ ವಹಿಸಿಕೊಡುತ್ತೇನೆ. turned him over to the authorities ಅವನನ್ನು ಅಧಿಕಾರಿಗಳಿಗೆ ವರ್ಗಾಯಿಸಿದೆ.
    9. (ನಿರ್ದಿಷ್ಟ ಮೊತ್ತದ) ವ್ಯಾಪಾರ, ವ್ಯವಹಾರ–ಮಾಡು: turns over Rs. 5000 a week ವಾರಕ್ಕೆ 5000ರೂ.ಗಳಷ್ಟು ವ್ಯಾಪಾರ ಮಾಡುತ್ತಾನೆ.
  23. turn over a new $^1$leaf.
  24. turn person’s flank ವಾದ ಮೊದಲಾದವುಗಳಲ್ಲಿ ಸೋಲಿಸು; (ಒಬ್ಬನನ್ನು) ಬಉದ್ಧಿವಂತಿಕೆಯಲ್ಲಿ ಮೀರಿಸು.
  25. turn round
    1. = ಪದಗುಚ್ಛ \((3)\).
    2. (ವಾಣಿಜ್ಯ) (ಹಡಗು, ವಾಹನ, ಮೊದಲಾದವುಗಳಿಗೆ) ಸರಕು ತುಂಬಉ ಯಾ ತುಂಬಿದ ಸರಕನ್ನು ಇಳಿಸು.
    3. ಪರಿಷ್ಕರಿಸಿ ಕಳುಹಿಸು; ಸ್ವೀಕರಿಸಿ, ಸಂಸ್ಕರಿಸಿ–ಮತ್ತೆ ಕಳುಹಿಸು; ಪ್ರಕ್ರಿಯೆಯೊಂದರ ಮೂಲಕ ಉತ್ತಮಗೊಳಿಸು.
    4. ಹೊಸ ಅಭಿಪ್ರಾಯ, ಧೋರಣೆ, ಮೊದಲಾದವನ್ನು–ಹಿಡಿ, ಅನುಸರಿಸು.
  26. turn 1tail.
  27. turn the $^1$corner.
  28. turn the $^3$scale(s).
  29. turn the 1table(s) on.
  30. turn the tide (ರೂಪಕವಾಗಿ) ಘಟನೆಗಳ ದಿಕ್ಕನ್ನು (ಗತಿಯನ್ನು) ಬದಲಾಯಿಸು, ತಿರುಗುಮುರುಗು ಮಾಡು.
  31. turn to (ಕೆಲಸ ಮೊದಲಾದವುಗಳಲ್ಲಿ) ತೊಡಗು; ಕೈಹಚ್ಚು; ಕಾರ್ಯಾರಂಭ ಮಾಡು.
  32. turn to (good) $^2$account.
  33. turn 2turtle.
  34. turn up
    1. (ಗುಬಉಟು ಮೊದಲಾದವನ್ನು ತಿರುಗಿಸುವುದರ ಮೂಲಕ ಶಬ್ದ, ಶಾಖ, ಮೊದಲಾದವುಗಳ ಪ್ರಮಾಣವನ್ನು, ಮಟ್ಟವನ್ನು) ಹೆಚ್ಚಿಸು; ಅಧಿಕಗೊಳಿಸು; ಏರಿಸು.
    2. ಮೇಲ್ಮುಖವಾಗಿ ಮಾಡು.
    3. ಕಂಡುಹಿಡಿ; ಶೋಧಿಸು.
    4. ಹೊರಗೆಡವು; ಬಹಿರಂಗಗೊಳಿಸು; ಪ್ರಕಟಮಾಡು.
    5. (ಮುಖ್ಯವಾಗಿ ಆಕಸ್ಮಿಕವಾಗಿ, ಅನಿರೀಕ್ಷಿತವಾಗಿ) ಕಾಣಿಸಿಕೊ; ಕಣ್ಣಿಗೆ ಬೀಳು; ಗೋಚರವಾಗು: it turned up on a rubbish heap ಅದು ಕಸದ ರಾಶಿಯ ಮೇಲೆ ಕಾಣಿಸಿಕೊಂಡಿತು.
    6. (ಘಟನೆ, ಅವಕಾಶ, ಮೊದಲಾದವುಗಳ ವಿಷಯದಲ್ಲಿ) ಆಗು; ನಡೆ; ಸಂಭವಿಸು; ಸಿಗು; ಏರ್ಪಡು; ತಲೆದೋರು.
    7. (ವ್ಯಕ್ತಿಯ ವಿಷಯದಲ್ಲಿ) ಬರು; ಕಾಣಿಸಿಕೊ; ಮುಖ ತೋರಿಸು; ಹಾಜರಾಗು: a few people turned up late ಹೊತ್ತಾದ ಮೇಲೆ ಕೆಲವೇ ಕೆಲವು ಜನ ಬಂದರು.
    8. (ಆಡುಮಾತು) ಓಕರಿಕೆ ಬರಿಸು; ವಾಂತಿ ಉಂಟುಮಾಡು: the sight turned me up ಆ ದೃಶ್ಯ ನನಗೆ ವಾಂತಿ ಮಾಡಿಸಿತು.
    9. (ಅಂಚನ್ನು ಅಗಲ ಮಾಡುವ ಮೂಲಕ, ಉಡುಪನ್ನು) ಚಿಕ್ಕದು ಮಾಡು; ಮೊಟಕಾಗಿಸು.
  35. turn up one’s $^1$nose.
  36. turn up one’s 1toes.
See also 1turn
2turn ಟರ್ನ್‍
ನಾಮವಾಚಕ
    1. ಸುತ್ತುವಿಕೆ; ತಿರುಗುವಿಕೆ; ಆವರ್ತನ; ವರ್ತುಲಚಲನೆ; (ಪರಿ)ಭ್ರಮಣ; ವರ್ತುಲವಾಗಿ, ಚಕ್ರಾಕಾರದಲ್ಲಿ ಚಲಿಸುವುದು.
    2. (ಹಾಗೆ ಸುತ್ತಿದ) ಒಂದು ಸುತ್ತು; ಭ್ರಮಣ; ಆವರ್ತ: a single turn of the handle ಹಿಡಿಕೆಯ ಒಂದು ಸುತ್ತು ತಿರುವು. turn of the Fortune’s wheel ಅದೃಷ್ಟದ, ಭಾಗ್ಯಚಕ್ರದ–ಸುತ್ತು, ಆವರ್ತ, ಭ್ರಮಣ.
    1. ಪರಿವರ್ತನೆ; ದಿಕ್ಕಿನ ಯಾ ಪ್ರವೃತ್ತಿಯ ಬದಲಾವಣೆ: took a sudden turn to the left ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿದ, ಬದಲಾಯಿಸಿದ.
    2. ಬದಲಾಯಿಸಿದ ದಿಕ್ಕು ಯಾ ಪ್ರವೃತ್ತಿ.
    3. ಬಾಗು; ತಿರುವು ಯಾ ಬಾಗಿದ ಭಾಗ: full of twists and turns ಅಂಕುಡೊಂಕುಗಳಿಂದ ತುಂಬಿ; ತಿರುವುಮುರುವುಗಳಿಂದ ಕೂಡಿ.
  1. ರಸ್ತೆಯ ತಿರುವು.
  2. ಬದಲಾವಣೆಯುಂಟಾಗುವ ಸ್ಥಳ, ಘಟ್ಟ.
  3. ಉಬ್ಬರವಿಳಿತ; ಏರಿಳಿತದ ಬದಲಾವಣೆ; ಪ್ರವಾಹವು ಏರಿನಿಂದ ಇಳಿತಕ್ಕೆ ಇಳಿತದಿಂದ ಏರಿಗೆ ಬದಲಾಯಿಸುವುದು.
  4. ಘಟನಾಸರಣಿಯಲ್ಲಿನ–ಬದಲಾವಣೆ, ವ್ಯತ್ಯಾಸ.
  5. ಸ್ವಭಾವ; ಪ್ರಕೃತಿ; ಪ್ರವೃತ್ತಿ: was of a humorous turn ಹಾಸ್ಯಪ್ರವೃತ್ತಿಯವನಾಗಿದ್ದ. a mechanical turn of mind ಯಾಂತ್ರಿಕ ಸ್ವಭಾವದವನು.
  6. ಸಣ್ಣ ತಿರುಗಾಟ, ಸುತ್ತಾಟ; ಅಡ್ಡಾಟ; ಸವಾರಿ: take a turn in the garden ತೋಟದಲ್ಲಿ ಒಂದು ಸುತ್ತು ಅಡ್ಡಾಡಿ ಬಾ.
  7. (ರೂಪಕವಾಗಿ) (ರಂಗದ ಮೇಲೆ ಯಾ ಸರ್ಕಸ್‍ನಲ್ಲಿ) ಒಂದು ಸಣ್ಣ ಅಭಿನಯ, ಹಾಡುಗಾರಿಕೆ, ಪ್ರದರ್ಶನ, ಮೊದಲಾದವು.
  8. ಸರದಿ; ಸೂಳು; ಸರತಿ; ಪಟ್ಟು; ಅವಕಾಶ; ಸಮಯ: it was my turn to be angry ಕೋಪಿಸಿಕೊಳ್ಳುವ ಅವಕಾಶ ನನಗೆ ಬಂತು. wait for your turn ನಿನ್ನ ಸರದಿ ಬರುವ ತನಕ ಕಾದಿರು.
  9. ಉದ್ದೇಶ: it did not serve my turn ಅದು ನನ್ನ ಉದ್ದೇಶಕ್ಕೆ ಸಾಧಕವಾಗಲಿಲ್ಲ, ಒದಗಲಿಲ್ಲ.
  10. (ವಿಶಿಷ್ಟ) ಉಪಕಾರ; ನೆರವು; ಸಹಾಯ; ಸೇವೆ: did me a good turn ನನಗೊಂದು ಒಳ್ಳೆಯ ಸಹಾಯ ಮಾಡಿದ. ill turn ಅಪಕಾರ.
  11. (ಸಂಗೀತ) ಸ್ವರವಿನ್ಯಾಸದ ಒಂದು ಬೆಡಗು, ವಿಲಾಸ; ಪ್ರಧಾನ ಸ್ವರದ ಮೇಲಿನ ಮತ್ತು ಕೆಳಗಿನ ಸ್ಥಾಯಿಗಳ ಸ್ವರಗಳೊಡನೆ ಕೂಡಿದ, ಒಂದು ಬಗೆಯ ಅಲಂಕಾರ.
  12. (ಹಗ್ಗ, ತಂತಿ, ಮೊದಲಾದವುಗಳಲ್ಲಿ) ಒಂದು ಸುತ್ತು.
  13. (ಮುದ್ರಣ) (ಕೊರತೆಯಾದ ಅಕ್ಷರದ ಬದಲು ತಾತ್ಕಾಲಿಕವಾಗಿ) ತಲೆಕೆಳಗಾಗಿ ಹಾಕಿದ ಅಕ್ಷರ.
  14. (ತಪ್ಪಾಗಿ ಜೋಡಿಸಿದ) ತಲೆಕೆಳಗು ಅಕ್ಷರ.
  15. (ಆಡುಮಾತು) ಮನಸ್ಸಿನ (ತಾತ್ಕಾಲಿಕ)–ಆಘಾತ, ಧಕ್ಕೆ, ಬೆಬ್ಬಳ: gave me quite a turn ನನಗೆ ಸಾಕಷ್ಟು ಧಕ್ಕೆ ಕೊಟ್ಟಿತು.
  16. (ಬ್ರಿಟಿಷ್‍ ಪ್ರಯೋಗ)
    1. ಸ್ಟಾಕು, ಷೇರು, ಮೊದಲಾದವುಗಳ ವ್ಯಾಪಾರದಲ್ಲಿನ ಯಾ ಮಾರಾಟ ಕೊಳ್ಳುವಿಕೆಗಳ ನಡುವಣ ವ್ಯತ್ಯಾಸ.
    2. ವ್ಯಾಪಾರದಿಂದ ಬಂದ ಲಾಭ.
ಪದಗುಚ್ಛ
  1. a favourable turn (ಪರಿಸ್ಥಿತಿಯಲ್ಲಿ) ಅನುಕೂಲವಾದ ಬದಲಾವಣೆ.
  2. a new turn ಹೊಸಮುಖ; ಹೊಸ ತಿರುವು, ಬದಲಾವಣೆ.
  3. a sudden turn (ಪರಿಸ್ಥಿತಿಯ) ಅನಿರೀಕ್ಷಿತ ತಿರುವು, ಬದಲಾವಣೆ.
  4. at every turn ಉದ್ದಕ್ಕೂ; ಎಡೆಬಿಡದೆ; ಒಂದೊಂದು ಹೊಸ ಹಂತದಲ್ಲೂ.
  5. by turns ಒಬ್ಬರಾದ ಮೇಲೊಬ್ಬರು; ಒಂದು ಗುಂಪಿನ ನಂತರ ಇನ್ನೊಂದು; ಕ್ರಮವಾಗಿ; ಸರದಿಯ ಮೇಲೆ.
  6. in (one’s) turn ಒಬ್ಬನ ಸರದಿ ಯಾ ಅವಕಾಶ ಬಂದಾಗ.
  7. in turn ಒಂದಾದ ಮೇಲೊಂದರಂತೆ; ಅನುಕ್ರಮವಾಗಿ; ಒಂದರ ಹಿಂದೆ ಒಂದು.
  8. on the turn
    1. ತಿರುಗುತ್ತ; ಬದಲಾಯಿಸುತ್ತ.
    2. (ಹಾಲಿನ ವಿಷಯದಲ್ಲಿ) ಹುಳಿಯಾಗುವುದರಲ್ಲಿ; ಕೆಡುವುದರಲ್ಲಿ.
    3. ಬದಲಾವಣೆಯ ಘಟ್ಟದಲ್ಲಿ; ತಿರುವಿನಲ್ಲಿ.
  9. out of turn
    1. ಸರದಿ ತಪ್ಪಿಸಿ; ಸರದಿ ಬರುವ ಮೊದಲು ಯಾ ಸರದಿಯಾದ ಮೇಲೆ.
    2. ಬೇಡವಾದ ಸಮಯದಲ್ಲಿ; ಅನುಕೂಲವಲ್ಲದ ಸಮಯದಲ್ಲಿ.
    3. ಅನುಚಿತವಾಗಿ; ಅಸಮಂಜಸವಾಗಿ; ಸೂಕ್ತವಲ್ಲದ ರೀತಿಯಲ್ಲಿ: did I speak out of turn? ನಾನು ಅನುಚಿತವಾಗಿ ಮಾತನಾಡಿದೆನೇ?
  10. take turns (or take it in turns) ಒಬ್ಬರಾದ ಮೇಲೊಬ್ಬರು ಕೆಲಸ ಮಾಡಿ.
  11. the turn of a sentence ವಾಕ್ಯದ–ರಚನೆ, ರೂಪ.
  12. the turn of the ankle ಕಾಲಹರಡಿನ ಮಾಟ.
  13. to a turn (ಅಡುಗೆ ಮೊದಲಾದವುಗಳ ವಿಷಯದಲ್ಲಿ) ಸರಿಯಾದ ಹದದಲ್ಲಿ; ಹದವಾಗಿ.
  14. turn of speed (ಸಂದರ್ಭ ಬಿದ್ದರೆ) ವೇಗವಾಗಿ ಹೋಗಬಲ್ಲ–ಶಕ್ತಿಸಾಧ್ಯತೆ, ಸಾಮರ್ಥ್ಯ.
  15. (work) turn and turn about (ಇಬ್ಬರೂ) ಸರದಿಯ ಮೇಲೆ, ಒಬ್ಬರಾಗುತ್ತಲ್ಲೊಬ್ಬರು, ಕೆಲಸ ಮಾಡಿ.