See also 2hand
1hand ಹ್ಯಾಂಡ್‍
ನಾಮವಾಚಕ
  1. ಕೈ; ಕರ; ಹಸ್ತ; ಮಣಿಕಟ್ಟಿನಿಂದ ಮುಂದಿರುವ ತೋಳಿನ ಭಾಗ.
  2. (ಕೋತಿಯ) ಕೈ; ನಾಲ್ಕೂ ಅಂಗಗಳ ತುದಿಯಲ್ಲಿರುವ ಹಸ್ತದಂಥ ಭಾಗ.
  3. (ಚತುಷ್ಪಾದಿಗಳಲ್ಲಿ) ಮುಂಗಾಲಿನ ಅಡಿ, ಪಾದ.
  4. ಹಂದಿಯ ಮಾಂಸದ ಮುಂಗಾಲು ಭಾಗ.
  5. (ಸಾಮಾನ್ಯವಾಗಿ ಬಹುವಚನದಲ್ಲಿ) ಅಧಿಕಾರ; ಅಧೀನ; ವಶ: in the hands of ಯಾರೋ ಒಬ್ಬರ, ಒಂದರ – ಕೈಯಲ್ಲಿ, ವಶದಲ್ಲಿ, ಅಧೀನದಲ್ಲಿ.
  6. (ಯಾವುದೋ ಒಂದರ) ಕೈ; ಕರ್ತೃತ್ವ; ಸಾಧನ; ಸಲಕರಣೆ: death by his own hand ತನ್ನ ಕೈಯಿಂದಲೇ (ತನಗೆ ಸಂಬಂಧಿಸಿದ) ಮರಣ: by the hands of (ಯಾರೋ ಒಬ್ಬರ) ಕೈಯಿಂದ; ಮೂಲಕ. pass through many hands ಹಲವರ ಕೈಹಾದುಹೋಗು.
  7. (ಯಾವುದೇ ಕೆಲಸದಲ್ಲಿ) ಪಾಲು; (ಕಾರ್ಯ) ಭಾಗ; ಸಂಬಂಧ; ಕೈವಾಡ: I have a hand in it ಅದರಲ್ಲಿ ನನ್ನ ಕೈವಾಡವೂ ಇದೆ.
  8. ಮದುವೆಯ – ವಾಗ್ದಾನ, ವಚನ, ಪ್ರಮಾಣ: given one’s hand to (ಒಬ್ಬನನ್ನು) ಕೈಹಿಡಿ, ಮದುವೆಯಾಗು. ask for (or seek) woman’s hand (ಹೆಂಗಸನ್ನು) ಮದುವೆಯಾಗಲು ಕೇಳು.
  9. ಬಾಳೆಹಣ್ಣಿನ ಚಿಪ್ಪು.
  10. (ಸಾಮಾನ್ಯವಾಗಿ ಬಹುವಚನದಲ್ಲಿ) (ಕಾರ್ಖಾನೆ, ಜಮೀನು, ಮೊದಲಾದವುಗಳ) ಕೆಲಸಗಾರ; ಕಾರ್ಮಿಕ; ಕರ್ಮಚಾರಿ; ಕೆಲಸದವನು.
  11. (ಯಾವುದೇ ಒಂದು ಕೃತಿಯ) ಕರ್ತ; ಕೈ: a picture by the same hand ಅದೇ ಕೈ ರಚಿಸಿದ ಚಿತ್ರ; ಅದೇ ಕಲಾವಿದ ಬರೆದ ಚಿತ್ರ.
  12. ಚತುರ; ಪಳಗಿದ, ನುರಿತ – ಕೈ: a good hand at single stick or acrosticks ಲಾಠಿವರಸೆಯಲ್ಲಿ ಯಾ ಚಿತ್ರಬಂಧ ಪದ್ಯರಚನೆಯಲ್ಲಿ ಪಳಗಿದ ಕೈ, ಚತುರ ಕೈ.
  13. (ಯಾವುದಾದರೂ ಒದಗಿ ಬರುವ) ಮೂಲ; ಮೂಲಾಧಾರ; ಮೂಲವ್ಯಕ್ತಿ ಯಾ ಮೂಲ ವಸ್ತು: second hand ಎರಡನೆ ಕೈ; ಎರಡನೆ ಮೂಲ ಯಾ ಆಧಾರ.
  14. ಚಾತುರ್ಯ; ಕೌಶಲ; ಕಾರ್ಯ ಪಟುತ್ವ; ನೈಪುಣ್ಯ; ಜಾಣತನ: he has a hand for pastry ಅವನು ಹಿಟ್ಟಿನ ಭಕ್ಷ್ಯಗಳನ್ನು ಮಾಡುವುದರಲ್ಲಿ ಎತ್ತಿದ ಕೈ, ನಿಪುಣ.
  15. ಕೆಲಸಗಾರಿಕೆ; ಹಸ್ತಕೌಶಲ; ಕೈಚಳಕ; ಕೆಲಸದ – ರೀತಿ, ಶೈಲಿ.
  16. (ಕ್ರಿಕೆಟ್‍, ಬಿಲಿಯರ್ಡ್ಸ್‍, ಮೊದಲಾದ ಆಟಗಳಲ್ಲಿ) ಆಟದ ಸರದಿ; ಇನ್ನಿಂಗ್ಸ್‍; ಸೂಳು: they got M.C.Cout for 80 in their second hand ತಮ್ಮ ಎರಡನೆ ಇನ್ನಿಂಗ್ಸ್‍ನಲ್ಲಿ ಅವರು ಎಂಸಿಸಿತಂಡವನ್ನು ಕೇವಲ 80ಕ್ಕೆ ಔಟ್‍ ಮಾಡಿದರು. he has four or five hand to score ಸ್ಕೋರು ಮಾಡಲು ಅವನಿಗೆ ನಾಲ್ಕೈದು ಸರದಿಗಳು ಸಿಕ್ಕಿದವು.
  17. ಕೈಬರವಣಿಗೆ; ಕೈಬರೆಹದ ರೀತಿ: a legible hand ತಿಳಿಬರಹ; ಸ್ಪಷ್ಟ ಬರವಣಿಗೆ.
  18. ರುಜು; ಸಹಿ; ದಸ್ಕತ್ತು: witness the hand of Kavya ಕಾವ್ಯ ಎಂಬುವಳ ರುಜುವಿಗೆ ಸಾಕ್ಷಿ ಹಾಕು.
  19. ಕೈ; ಕೈಯಂಥ ವಸ್ತು (ಮುಖ್ಯವಾಗಿ ಗಡಿಯಾರದ ಮುಳ್ಳು).
  20. ಹಿಡಿ; ಕಂತೆ; ಪಿಂಡಿ; ಕಟ್ಟು (ಉದಾಹರಣೆಗೆ ಹೊಗೆಸೊಪ್ಪಿನ ಪಿಂಡಿ).
  21. (ಕುದುರೆಯ) ಎತ್ತರದ ಅಳತೆ: one hand = ನಾಲ್ಕು ಇಂಚು, ಅಂಗುಲ.
  22. (ಇಸ್ಟೀಟಾಟ)
    1. ಆಟಗಾರನಿಗೆ ಹಾಕಿದ ಎಲೆಗಳು.
    2. ಈ ಎಲೆಗಳನ್ನು ಹಿಡಿದಿರುವ ಆಟಗಾರ; ಆಟದ ಕೈ: first hand ಮೊದಲನೆಯ ಕೈ (ಆಟಗಾರ).
    3. ಆಟಗಾರರಿಗೆ ಹಂಚಿದ ಎಲೆಗಳ ತಂಡ.
  23. (ವಸ್ತುವಿನ ಯಾ ವ್ಯಕ್ತಿಯ ಎಡ ಯಾ ಬಲ) ಪಕ್ಕ: ಕಕ್ಷೆ; ದಿಕ್ಕು : ಸ್ಥಾನ: left hand ಎಡಗಡೆ: ಎಡಪಕ್ಕ. right hand ಬಲಗಡೆ; ಬಲಪಕ್ಕ.
  24. (ಆಡುಮಾತು) (ಶ್ಲಾಘನೆಯನ್ನು ಸೂಚಿಸುವ) ಚಪ್ಪಾಳೆ; ಕರತಾಡನ: got a big hand ಭಾರಿ ಚಪಾಳೆ ಗಿಟ್ಟಿಸಿದ.
ನುಡಿಗಟ್ಟು
  1. a good hand (ಯಾವುದೇ ಕೆಲಸದಲ್ಲಿ ಯಾ ಕಸುಬಿನಲ್ಲಿ) ನಿಪುಣ; ಕುಶಲ; ಒಳ್ಳೆಯ ಕೈ; ಉತ್ತಮ ಕೆಲಸಗಾರ.
  2. allow a free hand (ಕೆಲಸ ಮಾಡಲು) ಪೂರ್ತಿ ಸ್ವಾತಂತ್ರ್ಯ ನೀಡು; ಮುಕ್ತಾವಕಾಶ ಕೊಡು; ಬೇರೊಬ್ಬರ ಸಲಹೆಗಾಗಿ ಕಾಯದೆ ತನ್ನ ವಿವೇಚನೆಯ ಅನುಸಾರ ಕಾರ್ಯ ನೆರವೇರಿಸಲು ಬಿಡು.
  3. at hand
    1. ಬಳಿ; ಹತ್ತಿರ; ಸಮೀಪದಲ್ಲಿ: he lives close at hand ಅವನು ಬಹಳ ಹತ್ತಿರದಲ್ಲೇ ವಾಸಮಾಡುತ್ತಾನೆ.
    2. ಹತ್ತಿರದಲ್ಲಿ; ಸದ್ಯದಲ್ಲೇ ನಡೆಯಲಿರುವ, ಜರುಗಲಿರುವ: the examinations are at hand ಪರೀಕ್ಷೆಗಳು ಹತ್ತಿರ ಬಂದಿವೆ.
  4. at the hand(s) of ಒಬ್ಬನ ಕೈಯಿಂದ, ದೆಸೆಯಿಂದ; ಒಬ್ಬನ ಮೂಲಕ, ಕೈಯಲ್ಲಿ.
  5. bear a hand (in) (ಒಂದು ಕೆಲಸದಲ್ಲಿ) ಕೈಹಚ್ಚು; ಭಾಗವಹಿಸು; ನೆರವಾಗು: ಸಹಾಯ ನೀಡು; ಸಹಕರಿಸು.
  6. be hand and glove with ಅನ್ಯೋನ್ಯವಾಗಿರು; ಒಬ್ಬರನ್ನೊಬ್ಬರು ಎಡಬಿಡದೆ ಇರು.
  7. be hand in glove with = ನುಡಿಗಟ್ಟು \((6)\).
  8. bind (one) hand and foot:
    1. ಕೈಕಾಲು ಕಟ್ಟಿಹಾಕು; ಸಂಪೂರ್ಣವಾಗಿ ಬಂಧಿಸು.
    2. ಪೂರ್ತಿ ನಿಸ್ಸಹಾಯಕನನ್ನಾಗಿ ಮಾಡು.
  9. bring up by hand (ಮಗುವಿನ ವಿಷಯದಲ್ಲಿ) ಕೈಹಾಲಿನಿಂದ ಬೆಳೆಸು; ಸೀಸೆಯ ಹಾಲಿನಿಂದ ಸಾಕು.
  10. by hand:
    1. (ಯಂತ್ರದಿಂದ ಆಗಿರದೆ) ಕೈಯಿಂದ ಮಾಡಿದ: socks knitted by hand ಕೈಯಿಂದ ಹೆಣೆದ ಕಾಲುಚೀಲಗಳು.
    2. (ಮಗುವಿನ ವಿಷಯದಲ್ಲಿ) (ಎದೆಹಾಲಿನಿಂದಲ್ಲದೆ) ಬುಡ್ಡಿಯ ಹಾಲಿನಿಂದ ಸಾಕಿದ, ಬೆಳೆಸಿದ.
    3. ಮುದ್ದಾಂ; ಅಂಚೆ ಮೂಲಕವಲ್ಲದೆ: the letter was delivered by hand ಪತ್ರವನ್ನು ಮುದ್ದಾಂ ತಲುಪಿಸಲಾಯಿತು.
  11. change hands:
    1. ಕೈ ಬದಲಾಯಿಸು; ಪರಭಾರೆಯಾಗು.
    2. (ಯಾವುದೇ ಕೆಲಸಮಾಡಲು) ಒಂದು ಕೈ ತರುವಾಯ ಇನ್ನೊಂದು ಕೈ ಬಳಸು; ಒಂದು ಕೈ ಬಿಟ್ಟು ಇನ್ನೊಂದು ಕೈ ಬಳಸು.
  12. clean hands ಶುದ್ಧಹಸ್ತ; ಪ್ರಾಮಾಣಿಕತೆ.
  13. come to hand:
    1. ಬಂದು ಸೇರು; ತಲುಪು.
    2. ಕೈಸೇರು.
    3. ಕಣ್ಣಿಗೆ ಬೀಳು; ಗೋಚರವಾಗು; ಕಾಣಿಸು.
  14. cool hand ಅಳುಕದ ಯಾ ಧೂರ್ತ ವ್ಯಕ್ತಿ.
  15. do a hand’s turn (ಸಾಮಾನ್ಯವಾಗಿ ನಿಷೇಧಾರ್ಥಕ ಪ್ರಯೋಗ) (ಸಹಾಯ ಮಾಡಲು) ಕೈ ಎತ್ತು; ಸ್ವಲ್ಪವಾದರೂ ಪ್ರಯತ್ನಿಸು.
  16. fall into the hands of (ಒಬ್ಬನ) ಕೈಗೆ ಬೀಳು; ಸಿಕ್ಕು; ಸ್ವಾಧೀನವಾಗು.
  17. first hand ನೇರ(ವಾಗಿ); ಪ್ರತ್ಯಕ್ಷ(ವಾಗಿ): I have the story at first hand ಆ ಸುದ್ದಿ ಯಾ ವರದಿ ನನಗೆ ನೇರವಾಗಿ ಬಂದದ್ದು. first hand information ನೇರವಾದ ಸಮಾಚಾರ.
  18. force one’s hand (ಏನಾದರೂ ಒಂದು ಕ್ರಮ ಕೈಗೊಳ್ಳುವಂತೆ ಯಾ ಮನಸ್ಸಿನಲ್ಲಿ ಏನಿದೆ ಎಂದು ತಿಳಿಸುವಂತೆ ಒಬ್ಬನನ್ನು) ಒತ್ತಾಯಿಸು; ಬಲವಂತಕ್ಕೆ ಸಿಕ್ಕಿಸು; ಒಬ್ಬನ ಮೇಲೆ ಒತ್ತಡ ಹೇರು.
  19. for one’s own hand ತನಗಾಗಿಯೇ; ಸ್ವಂತಕ್ಕಾಗಿಯೇ; ಸ್ವಪ್ರಯೋಜನಕ್ಕಾಗಿಯೇ.
  20. from hand to hand ಕೈಯಿಂದ ಕೈಗೆ; ವ್ಯಕ್ತಿಯಿಂದ ವ್ಯಕ್ತಿಗೆ: buckets were passed from hand to hand to put out the fire ಬೆಂಕಿಯನ್ನು ಆರಿಸಲು ಬಕೆಟ್ಟುಗಳನ್ನು ಕೈಯಿಂದ ಕೈಗೆ ಸಾಗಿಸಲಾಯಿತು.
  21. get one’s hand in ತನ್ನ ರೂಢಿಯ ಮಟ್ಟದ ಕೌಶಲವನ್ನು ಅಭ್ಯಾಸದಿಂದ ಗಳಿಸಿಕೊ ಯಾ ಮತ್ತೆ ಪಡೆದುಕೊ.
  22. give a free hand = ನುಡಿಗಟ್ಟು \((2)\).
  23. give a hand ಸಹಾಯಹಸ್ತನೀಡು; ಯಾವುದೇ ಕೆಲಸ ಯಾ ಉದ್ಯಮದಲ್ಲಿ ಸಹಾಯ ಮಾಡು.
  24. go hand in hand ಜತೆಜತೆಯಾಗಿ ಹೋಗು; ಒಟ್ಟಿಗೇ ಇರು.
  25. hand and foot ಸಂಪೂರ್ಣವಾಗಿ; ಪೂರಾ; ಬಹಳ ನಿಷ್ಠೆಯಿಂದ, ಶ್ರದ್ಧೆಯಿಂದ.
  26. hand in hand ಕೈ ಕೈ ಜೋಡಿಸಿಕೊಂಡು; ಅನ್ಯೋನ್ಯ ಸ್ೇಹದಿಂದ.
  27. hand of glory ಮಾಟದ ಕೈ; ಮಂತ್ರಿಸಿದ ಹಸ್ತ; ಮಾಟಮಂತ್ರಕ್ಕಾಗಿ ಬಳಸುವ ‘ಮ್ಯಾಂಡ್ರೇಕ್‍’ ಬೇರಿನಿಂದ ಮಾಡಿದ ವಸ್ತು, ಯಾ ಒಣಗಿಹೋದ, ನೇಣು ಹಾಕಿದ ಕೈ.
  28. hand over hand (or fist).
    1. (ಹಗ್ಗ ಮೊದಲಾದಗಳ ಮೇಲೆ ಏರುವಾಗ ಹೇಗೋ ಹಾಗೆ) ಒಂದು ಕೈಮೇಲೆ ಒಂದು ಕೈ ಇರುವಂತೆ.
    2. ಎಡೆಬಿಡದೆ ಯಾ ಬೇಗ ಬೇಗನೆ – ಸಾಗುತ್ತ, ಮುಂದುವರೆಯುತ್ತ, ಅಭಿವೃದ್ಧಿ ಹೊಂದುತ್ತ, ಪ್ರಗತಿ ಸಾಧಿಸುತ್ತ.
  29. hands down ನಿರ್ವಿವಾದವಾಗಿ; ನಿಸ್ಸಂದೇಹವಾಗಿ: it was hands down the best game I have ever seen ನಾನು ನೋಡಿರುವುದರಲ್ಲಿ ಅದು ನಿಸ್ಸಂದೇಹವಾಗಿಯೂ ಅತ್ಯುತ್ತಮ ಪಂದ್ಯ.
  30. hands off!:
    1. ಕೈ ತೆಗೆ! ಮುಟ್ಟದಿರು! ಮುಟ್ಟೀಯೆ!.
    2. ಮಧ್ಯೆ ಪ್ರವೇಶಿಸಿದಿರು; ನಡುವೆ – ಕೈ ಹಾಕಬೇಡ, ಬರದಿರು.
  31. hands up! ಕೈ(ಗಳನ್ನು) ಎತ್ತು! ಕೈ(ಗಳನ್ನು) ಎತ್ತಿ! (ಶರಣಾಗತನಾಗು ಯಾ ಎದುರುಬೀಳಬೇಡ ಎಂದು ಎಚ್ಚರಿಕೆ ಕೊಡುವ ಕೊಡುವ ಕೂಗು).
  32. hand to hand (ಕುಸ್ತಿ, ಕಾಳಗ, ಮೊದಲಾದವುಗಳಲ್ಲಿ) ಕೈಕ್ಕೆಮಿಲಾಯಿಸಿ; ಹಸ್ತಾಹಸ್ತಿ.
  33. have a free hand (ಕೆಲಸ ಮಾಡುವಲ್ಲಿ) ಮುಕ್ತಾವಕಾಶ ಪಡೆದಿರು; ಪೂರ್ಣ ಸ್ವಾತಂತ್ರ ಯಾ ಜವಾಬ್ದಾರಿ ಹೊಂದಿರು.
  34. have (or keep) one’s hand in (ಯಾವುದಾದರೂ ವಿಷಯದಲ್ಲಿ) ಅಭಾಸವಿಟ್ಟುಕೊಂಡಿರು; ಆಸಕ್ತಿ, ಆಸ್ಥೆ ಉಳಿಸಿಕೊಂಡಿರು: I play enough golf to keep my hand in it ಗಾಲ್‍ ಆಟದಲ್ಲಿ ಆಸಕ್ತಿ ಉಳಿಸಿಕೊಂಡಿರಲು ನಾನು ಅದರ ಅಭ್ಯಾಸ ಇಟ್ಟಿಕೊಂಡಿದ್ದೇನೆ.
  35. have one’s hands full ಕೈತುಂಬ ಕೆಲಸವಿರು; ಬಿಡುವಿಲ್ಲದಷ್ಟು ಕೆಲಸ ಇರು.
  36. hold hands ಕೈಕೈ ಜೋಡಿಸು; ಕೈಕೈ ಹಿಡಿದುಕೊ.
  37. hold one’s hand ಕೈಹಿಡಿ; ಕೈತಡೆ; ಕಾರ್ಯಕ್ರಮವನ್ನು, ಮುಖ್ಯವಾಗಿ ಶಿಕ್ಷೆಯನ್ನು, ತಡೆಹಿಡಿ, ಮಾಡದಿರು.
  38. hold person’s hand:
    1. ಒಬ್ಬನ ಕೈಹಿಡಿದುಕೊ.
    2. ಒಬ್ಬನ ಕೈಹಿಡಿ; ಒಬ್ಬನಿಗೆ ಮಾರ್ಗದರ್ಶನವನ್ನು ಮಾಡು ಯಾ ನೈತಿಕ ಬೆಂಬಲವನ್ನು ನೀಡು.
  39. in hand:
    1. ಕೈಯಲ್ಲಿ ಇರುವ, ಹಿಡಿದ.
    2. ಕೈಯಲ್ಲಿರುವ; ಇನ್ನೂ ಖರ್ಚುಮಾಡದ; ಇನ್ನೂ ಬಳಸದಿರುವ; ತನಗೆ ಬೇಕಾದಂತೆ ಬಳಸಬಹುದಾದ.
  40. in person’s hands:
    1. ವ್ಯಕ್ತಿಯ ಕೈಯಲ್ಲಿರುವ, ಅಧೀನದಲ್ಲಿರುವ.
    2. ವ್ಯಕ್ತಿಯು ಪರಿಶೀಲಿಸಬೇಕಾದ, ನಿಶ್ಚಯಿಸಬೇಕಾದ, ನಿರ್ವಹಿಸಬೇಕಾದ.
  41. join hands (with) ನೆರವಾಗು; ಒಟ್ಟಿಗೆ, ಒಂದಿಗೆ ಸೇರು – ಕೆಲಸಮಾಡು, ಸಹಕರಿಸು.
  42. lay hands on:
    1. ಮುಟ್ಟು.
    2. ತುಡುಕು; ಕೈಮಾಡು.
  43. lay one’s hands on (ಯಾವುದೇ ವಸ್ತು) ಕೈಗೆ ಸಿಕ್ಕು; ದೊರೆ; ಲಭ್ಯವಾಗು.
  44. lend a hand = ನುಡಿಗಟ್ಟು \((23)\).
  45. (live) from hand to mouth ಕೈಯಿಂದ ಬಾಯಿಗೆ (ಬದುಕು); ಅಹನ್ಯಹನಿ ಕಾಲಕ್ಷೇಪ (ಮಾಡು); ತಕ್ಷಣದ, ಅಂದಂದಿನ ಅಗತ್ಯಗಳನ್ನು ಪೂರೈಸಿಕೊಂಡು (ಬದುಕು).
  46. man of his hands ಕೆಲಸಗಾರ; ವ್ಯವಹಾರ ಕುಶಲ; ಕಾರ್ಯತಃ ಮಾಡುವವನು.
  47. off hand ಪೂರ್ವಸಿದ್ಧತೆಯಿಲ್ಲದೆ; ಹಾಗಿಂದ ಹಾಗೆಯೇ.
  48. off one’s hands ತನ್ನ ಕೈದಾಟಿರುವ; ಸದ್ಯದಲ್ಲಿ ತನ್ನ ಹೊಣೆಗಾರಿಕೆಯಿಲ್ಲದ; ಈಗ ಜವಾಬ್ದಾರಿ ಕಳೆದ.
  49. on all hands:
    1. ಒಮ್ಮತದಿಂದ; ಸರ್ವಾನುಮತದಿಂದ: it was decided on all hands ಅದು ಸರ್ವಾನುಮತದಿಂದ ತೀರ್ಮಾನವಾಯಿತು.
    2. ಎಲ್ಲ ಕಡೆಗೂ; ಎಲ್ಲ ದಿಕ್ಕಿಗೂ; ಸರ್ವತೋಮುಖವಾಗಿ.
    3. ಎಲ್ಲ ಕಡೆಯಿಂದಲೂ; ಎಲ್ಲ ದಿಕ್ಕಿನಿಂದಲೂ: piercing glances on all hands ಎಲ್ಲ ಕಡೆಯಿಂದಲೂ ಬಂದ ಚುಚ್ಚುನೋಟ.
  50. one’s hands being out ಕೈಚಳಕ, ಕರಕುಶಲತೆ, ಹಸ್ತಕೌಶಲ, ಅಭ್ಯಾಸ – ತಪ್ಪು: his art has suffered, because his hand is out ಅವನ ಕಲಾವಂತಿಕೆ ಇಳಿದಿದೆ, ಏಕೆಂದರೆ ಅವನ ಕರಕುಶಲತೆಯೇ ತಪ್ಪಿದೆ.
  51. on every hand = ನುಡಿಗಟ್ಟು \((49)\).
  52. on hand:
    1. (ಒಬ್ಬನ) ಹತ್ತಿರವಿರುವ; ವಶದಲ್ಲಿರುವ.
    2. ಹಾಜರಿರುವ; ಉಪಸ್ಥಿತವಾಗಿರುವ.
  53. on one’s hand (ಒಬ್ಬನ) ಜವಾಬ್ದಾರಿಯಲ್ಲಿ; ಮೈ ಮೇಲೆ ಬಿದ್ದದ್ದಾಗಿ.
  54. on the one (or the other) hand ಒಂದು ಕಡೆಯಿಂದ (ಯಾ ಇನ್ನೊಂದು ಕಡೆಯಿಂದ) ನೋಡಿದರೆ; ಒಂದು (ಯಾ ಇನ್ನೊಂದು) ದೃಷ್ಟಿಯಲ್ಲಿ.
  55. out of hand:
    1. ತಡಮಾಡದೆ; ನಿಧಾನಿಸದೆ; ದಿಢೀರನೆ; ಒಡನೆಯೇ; ಕೂಡಲೇ; ತತ್‍ಕ್ಷಣದಲ್ಲೇ: the crisis obliged him to act out of hand ಆ ಗಂಡಾಂತರದಿಂದ ಅವನು ತತ್‍ಕ್ಷಣ ಕಾರ್ಯಕ್ರಮ ಕೈಗೊಳ್ಳಬೇಕಾಯಿತು.
    2. ಕೈಮೀರಿ; ಹತೋಟಿ ತಪ್ಪಿ; ಕೈಮಿಂಚಿ: the situation got out of hand ಪರಿಸ್ಥಿತಿ ಕೈಈರಿತು.
    3. ಮೂಲೆಗುಂಪಾಗು; ಮುಗಿದಿರು: the case has been out of hand for some time ಆ ಮೊಕದ್ದಮೆ ಸ್ವಲ್ಪ ಕಾಲದಿಂದ ಮೂಲೆಗುಂಪಾಗಿದೆ.
  56. $^1$play into a person’s hands.
  57. put one’s hands on = ನುಡಿಗಟ್ಟು \((43)\).
  58. put one’s hand to (ಯಾವುದೇ ಕೆಲಸಕ್ಕೆ) ಕೈಹಚ್ಚು; ನೆರವಾಗು; ಸಹಕರಿಸು.
  59. second hand ಪರೋಕ್ಷವಾಗಿ; ಎರಡನೆಯವನ ಮೂಲಕ; ಎರಡು ಕೈ ದಾಟಿ: beware of stories that you hear at second hand ಪರೋಕ್ಷವಾಗಿ ಕೇಳಿದ (ಎರಡನೆಯವರ ಮೂಲಕ ಕೇಳಿದ) ಸುದ್ದಿಗಳ ವಿಷಯದಲ್ಲಿ ಹುಷಾರಾಗಿರು.
  60. serve hand and foot ಶ್ರದ್ಧೆಯಿಂದ ಪೂರ್ತಿ ಸೇವೆಮಾಡು; (ಬೇರೊಬ್ಬನ) ಎಲ್ಲ ಬಗೆಯ ಸೇವೆಗಳನ್ನು ಮಾಡು.
  61. set one’s hand to = ನುಡಿಗಟ್ಟು \((58)\).
  62. shake hands ಕೈಕುಲುಕು; ಹಸ್ತಲಾಘವ ಕೊಡು.
  63. show one’s hand (ತನ್ನ) ಅಂತರಂಗ ಪ್ರಕಟಿಸು; ಅಂತರಂಗದ ಅಭಿಪ್ರಾಯ ಏನೆಂದು ತಿಳಿಸು; ಗುಟ್ಟು ಬಿಟ್ಟುಕೊಡು: the impending revolution forced him to show his hand ತಲೆಯ ಮೇಲೆ ಕಾದಿದ್ದ ಕ್ರಾಂತಿಯಿಂದಾಗಿ ಅವನು ತನ್ನ ಅಂತರಂಗದ ಅಭಿಪ್ರಾಯವೇನೆಂದು ತಿಳಿಸಬೇಕಾಯಿತು.
  64. sit on one’s hands:
    1. ನಿರುತ್ಸಾಹದಿಂದಿರು; ಏನೂ ಲವಲವಿಕೆ ತೋರದಿರು: the show was lively, but the audience sat on their hands ಪ್ರದರ್ಶನ ತುಂಬಾ ಲವಲವಿಕೆಯಿಂದ ಕೂಡಿತ್ತುಆದರೆ ಪ್ರೇಕ್ಷಕರು ನಿರುತ್ಸಾಹದಿಂದ ಕುಳಿತಿದ್ದರು.
    2. ಏನೊಂದೂ ಕ್ರಮ ಕೈಕೊಳ್ಳದಿರು; ತೆಪ್ಪಗಿದ್ದುಬಿಡು: the helpless country was being invaded, but great powers sat on their hands ಆ ನಿಸ್ಸಹಾಯಕ ದೇಶ ಆಕ್ರಮಣಕ್ಕೆ ಗುರಿಯಾಗಿತ್ತು, ಆದರೆ ಬೃಹತ್‍ ರಾಷ್ಟ್ರಗಳು ತೆಪ್ಪಗಿದ್ದವು.
  65. take a hand = ನುಡಿಗಟ್ಟು \((5)\).
  66. take in hand:
    1. (ಜವಾಬ್ದಾರಿ) ವಹಿಸಿಕೊ: the uncle took the youngster in hand ಹುಡುಗನ ಚಿಕ್ಕಪ್ಪ ಅವನ ಜವಾಬ್ದಾರಿ ವಹಿಸಿಕೊಂಡ.
    2. ಗಣನೆಗೆ ತೆಗೆದುಕೊ; ಪರಿಗಣಿಸು; ಪರಿಶೀಲಿಸು: we’ll take the matter in hand at the next meeting ಈ ವಿಷಯವನ್ನು ಮುಂದಿನ ಸಭೆಯಲ್ಲಿ ಪರಿಶೀಲಿಸೋಣ.
  67. throw up one’s hands (ನಿಸ್ಸಹಾಯಕ ಸ್ಥಿತಿಯಲ್ಲಿ) ಕೈಚೆಲ್ಲಿ ಬಿಡು; ಕೈ ಒದರಿಕೊಂಡು ಬಿಡು; ಕೈಯೆತ್ತಿಬಿಡು; ಸೋಲೊನೊಪ್ಪಿಕೊಂಡು ಸುಮ್ಮನಾಗು; ನಿಸ್ಸಹಾಯಕ ಸ್ಥಿತಿಯನ್ನು ವ್ಯಕ್ತಪಡಿಸು.
  68. tie one’s hands ಕೈ ಕಟ್ಟಿಹಾಕು; ಕೈಕಾಲು ಕಟ್ಟಿ ಕೂರಿಸು; ಏನೂ ಮಾಡದಂತಾಗಿಸು; ನಿಷ್ಕ್ರಿಯಗೊಳಿಸು; ನಿರುಪಾಯ ಸ್ಥಿತಿಉಂಟುಮಾಡು: the provisions of the will has tied his hands ಉಯಿಲಿನ ಷರತ್ತುಗಳು ಅವನ ಕೈಕಟ್ಟಿಹಾಕಿವೆ.
  69. to hand ಕೈಗೆ ಎಟಕುವಂತೆ, ನಿಲುಕುವಂತೆ; ತೀರ ಹತ್ತಿರದಲ್ಲಿ.
  70. to one’s hand ಪ್ರಯಾಸವಿಲ್ಲದೆ ಒಬ್ಬನಿಗೆ ಎಟಕುವಂತೆ, ನಿಲುಕುವಂತೆ.
  71. try one’s hand at ಯಾವುದಾದರೂ ಉದ್ಯಮಕ್ಕೆ ಕೈಹಾಕು; ಯಾವುದಾದರೂ ಒಂದರಲ್ಲಿ ತನ್ನ ಶಕ್ತಿಯನ್ನು, ಪ್ರತಿಭೆಯನ್ನು, ಯೋಗ್ಯತೆಯನ್ನು – ಪರೀಕ್ಷೆಮಾಡಿಕೊ.
  72. turn one’s hand to (ಹೊಸ ಬಗೆಯ ಕೆಲಸವನ್ನು) ಕೈಗೊಳ್ಳು; ಹಿಡಿ.
  73. upper hand ಮೇಲುಗೈ; ಒಬ್ಬನಿಗಿಂತ ಮಿಗಿಲಾಗುವಿಕೆ; ಒಬ್ಬನನ್ನು ಈರಿಸುವಿಕೆ.
  74. wash one’s hands (of) ಕೈ ತೊಳೆದುಕೊ: (ಯಾವುದೇ ವಿಷಯಕ್ಕೂ ತನಗೂ) ಸಂಬಂಧ ಕಡಿದುಹಾಕು.
  75. win a lady’s hand (ತನ್ನನ್ನು) ಮದುವೆಯಾಗಲು, ಮದುವೆಯಾಗುವಂತೆ ಹೆಂಗಸನ್ನು ಒಪ್ಪಿಸು.
  76. (win etc.) hands down ಸುಲಭವಾಗಿ, ಏನೂ ಶ್ರಮವಿಲ್ಲದೆ (ಗೆಲ್ಲು ಮೊದಲಾದವು).
  77. with a heavy hand:
    1. ಬಲವಂತದಿಂದ; ಜುಲುಮಿನಿಂದ: ನಿರ್ದಯೆಯಿಂದ; ಕಠೋರವಾಗಿ; ದಬ್ಬಾಳಿಕೆಯಿಂದ: the law will punish offenders with a heavy hand ಕಾನೂನು ತಪ್ಪಿತಸ್ಥರನ್ನು ನಿರ್ದಯೆಯಿಂದ ಶಿಕ್ಷಿಸುತ್ತದೆ.
    2. ಒಡ್ಡೊಡ್ಡಾಗಿ; ಒರಟೊರಟಾಗಿ; ನಯನಾಜೂಕಿಲ್ಲದೆ: the play was directed with a heavy hand ನಾಟಕವನ್ನು ಒಡ್ಡೊಡ್ಡಾಗಿ ನಿರ್ದೇಶಿಸಲಾಗಿತ್ತು.
  78. with a high hand ಸೊಕ್ಕಿನಿಂದ; ಜಬರ್ದಸ್ತಿನಿಂದ; ದರ್ಪದಿಂದ.