See also 2corner
1corner ಕಾರ್ನರ್‍
ನಾಮವಾಚಕ
  1. ಮೂಲೆ; ಏಣು; ತಿರುವು; ಕೋನ; ಎರಡು ಮುಖಗಳು ಯಾ ತುದಿಗಳು ಸೇರುವ ಸ್ಥಳ.
  2. ರಸ್ತೆಕೂಡು; ಬೀದಿಗಳ ಸೇರುವೆ.
  3. ಮೂಲೆ; ಎರಡು ಗೋಡೆಗಳು ಮೊದಲಾದವು ಸೇರುವ ಸ್ಥಳ.
  4. ಸಂದುಗೊಂದು; ಸಂದುಕಟ್ಟು; ಮೂಲೆತಾಕು.
  5. ಏಣು; ಬದಿ; ತುದಿ; ಅಂಚು; ಒಂದು ಕೊನೆ.
  6. ಇಕ್ಕಟ್ಟು; ತಪ್ಪಿಸಿಕೊಳ್ಳಲಾರದ ಪರಿಸ್ಥಿತಿ.
  7. ಮೂಲೆ; ಗುಟ್ಟಿನ ಜಾಗ ಯಾ ಯಾವುದೋ ದೂರದ ಜಾಗ; ಗುಪ್ತ ಯಾ ದೂರದ ಪ್ರದೇಶ: done in a corner ಗುಟ್ಟಿನಲ್ಲಿ ಮಾಡಿದ. hole and corner transactions ಮುಚ್ಚುಮರೆಯ, ಗುಟ್ಟಿನ–ವ್ಯಾಪಾರ; ಸಂಚಿನ ವ್ಯಾಪಾರ.
  8. ದಿಕ್ಕು; ಪ್ರದೇಶ: all the corners of the earth ಭೂಮಿಯ ಎಲ್ಲಾ ದಿಕ್ಕುಗಳು, ಭಾಗಗಳು.
  9. ಮೀಸಲು ಸ್ಥಳ; ಯಾವುದಾದರೂ ವಿಶಿಷ್ಟ ಉದ್ದೇಶಕ್ಕೆ ನಿಗದಿಯಾದ ಸ್ಥಳ: poet’s corner
    1. (ಪತ್ರಿಕೆಯಲ್ಲಿ) ಕವಿತೆಗಳಿಗೆ ಮೀಸಲಾದ ಸ್ಥಳ.
    2. (ಲಂಡನ್ನಿನ ವೆಸ್ಟ್‍ ಮಿನಿಸ್ಟರ್‍ ಆಬೆಯಲ್ಲಿ) ಕವಿಗಳ ಸಮಾಧಿಗಳಿರುವ ಜಾಗ.
  10. ಮೂಲೆಗಾಪು; ಮೂಲೆಗಟ್ಟು; ಒಂದು ವಸ್ತುವಿನ (ಉದಾಹರಣೆಗೆ ಪುಸ್ತಕದ) ಮೂಲೆಯನ್ನು ರಕ್ಷಿಸಲು ಬಳಸುವ ಸಾಧನ.
  11. (ವ್ಯಾಪಾರ) ಸ್ವಾಮ್ಯ ಪಡೆಯುವುದು; ಇಡೀ ಸರಕನ್ನು ಕೊಂಡು ತನ್ನಿಂದಲೇ ಹೇಳಿದ ಬೆಲೆಗೆ ಕೊಂಡುಕೊಳ್ಳುವಂತೆ ನಿರ್ಬಂಧಿಸುವುದು.
  12. (ವ್ಯಾಪಾರ) ಸಾಟೆಕೂಟ; ಸಗಟುಗಾರರ ಕೂಟ; ಬೆಲೆಯೇರಿಕೆ ಕೂಟ; ಸರಕಿನ ಒಟ್ಟು ಸ್ವಾಮ್ಯ ಪಡೆದು ಅದರ ಬೆಲೆಯನ್ನು ಏರಿಸುವ ಕೂಟ.
  13. (ಹುಟ್‍ಬಾಲ್‍ ಮತ್ತು ಹಾಕಿ ಆಟಗಳಲ್ಲಿ) ಕಾರ್ನರು; ಮೂಲೆ–ಹೊಡೆತ; ಒದೆತ; ಆಟಗಾರನು ತನ್ನದೇ ಪಕ್ಕದ ಗೋಲು ರೇಖೆಯಾಚೆ ಚೆಂಡನ್ನು ಹೊಡೆದಾಗ ಆ ರೇಖೆಯ ಮೂಲೆಯಿಂದ ಚೆಂಡನ್ನು ಹೊಡೆಯಲು ಎದುರು ಪಕ್ಷದವರಿಗೆ ಕೊಡುವ ಅವಕಾಶ.
  14. ಮೂಲೆಕಂಬ; ಮೂಲೆ ಗುರುತಿಸಲು ಇಟ್ಟಿರುವ ಮರ, ಕಂಬ ಮೊದಲಾದವು.
  15. (ಚುನಾವಣೆಯಲ್ಲಿ) ಉಮೇದುವಾರನ ಬೆಂಬಲಿಗರ ಗುಂಪು.
  16. ದೆಸೆ ತಿರುಗುವ ಕಾಲ; ಸಂಧಿಕಾಲ; ದುರ್ಗತಿ ಕಳೆದು ಉತ್ತಮಸ್ಥಿತಿ ಆರಂಭವಾಗುವ ಸಮಯ: turn the corner ಸಂಧಿಕಾಲ ದಾಟು.
  17. (ಕುದುರೆಗಳ) ದವಡೆ ಹಲ್ಲು.
  18. (ಪ್ರಾಚೀನ ಪ್ರಯೋಗ) ಗಾಳಿ ಬೀಸಿ ಬರುವ ದಿಕ್ಕು.
  19. (ಬಹುವಚನದಲ್ಲಿ) ವಕ್ರ; ಕೊಂಕು; ಸೊಟ್ಟ ಗುಣಗಳು, ಲಕ್ಷಣಗಳು, ಚರ್ಯೆಗಳು, ಕ್ರಿಯೆಗಳು, ವಕ್ರತೆಗಳು, ಮುಖ್ಯವಾಗಿ ದುರ್ಗುಣಗಳು.
  20. (ಉಪ್ಪು ಹಾಕಿ ಹೊಗೆಯಲ್ಲಿ ಒಣಗಿಸಿದ) ಹಂದಿಯ ತೊಡೆಯ ಮಾಂಸದ ತ್ರಿಕೋನಾಕಾರದ ತುಂಡು.
  21. (ಕುಸ್ತಿ, ಬಾಕ್ಸಿಂಗ್‍ ಮೊದಲಾದವಲ್ಲಿ) ವಿಶ್ರಾಂತಿ ಮೂಲೆ; ಕುಸ್ತಿಪಟು ಯಾ ಬಾಕ್ಸರನು ಒಂದು ಸುತ್ತು ಕುಸ್ತಿ ಯಾ ಬಾಕ್ಸಿಂಗ್‍ ಮಾಡಿದ ಮೇಲೆ ವಿಶ್ರಾಂತಿ ಪಡೆಯುವ ಅಖಾಡದ ಮೂಲೆ.
ಪದಗುಚ್ಛ
  1. cut (off) a corner
    1. ಹತ್ತಿರದ ದಾರಿಯಲ್ಲಿ ಹೋಗುವುದರ ಮೂಲಕ ಮೂಲೆಯ ಮಾರ್ಗವನ್ನು ತಪ್ಪಿಸಿಕೊ.
    2. (ರೂಪಕವಾಗಿ) ಕೆಲಸವನ್ನು ತಪ್ಪಿಸಿಕೊ; ಕೆಲಸಕ್ಕೆ ಹಿಂದೇಟು ಹಾಕು.
    3. ಮೂಲೆಯನ್ನು ಆದಷ್ಟು ಹತ್ತಿರ ಸುತ್ತಿ ಹೋಗು, ದಾಟು.
  2. the Corner ಬಾಜಿಕಟ್ಟೆ; ಹಿಂದೆ ಹೈಡ್‍ ಪಾರ್ಕಿನ ಮೂಲೆಯಲ್ಲಿದ್ದ ಲಂಡನ್ನಿನ ಜೂಜುಕಟ್ಟೆ.
ನುಡಿಗಟ್ಟು
  1. drive into a corner ಇಕ್ಕಟ್ಟಿಗೆ ಸಿಕ್ಕಿಸು; ಮೂಲೆಗೆ ಸಿಕ್ಕಿಸು; ಬಿಡಿಸಿಕೊಳ್ಳಲಾಗದಂಥ ಕಷ್ಟದ ಪರಿಸ್ಥಿತಿಗೆ ಸಿಕ್ಕಿಸು.
  2. just (a)round the corner (ಆಡುಮಾತು)
    1. ಬಹಳ ಹತ್ತಿರದಲ್ಲಿ; ಸಮೀಪದಲ್ಲಿ; ನಿಕಟವಾಗಿ.
    2. ಇನ್ನೇನು ಆಗುವ; ಹತ್ತಿರಕ್ಕೆ ಬಂದ; ಆಸನ್ನ; ಸನಿಹಿತ; ಸಂಭವಿಸುವಂತಿರುವ.
  3. put child in the corner (ಶಿಕ್ಷೆಗಾಗಿ) ಮಗುವನ್ನು ಮೂಲೆಯಲ್ಲಿ ಕೂಡಿಸು.
  4. turn the corner
    1. ಮೂಲೆ ತಿರುಗಿ, ಮೂಲೆದಾಟಿ–ಇನ್ನೊಂದು ರಸ್ತೆಗೆ ಹೋಗು.
    2. (ಕಾಯಿಲೆ ಮೊದಲಾದವುಗಳ ವಿಷಯದಲ್ಲಿ) ವಿಷಯ ಯಾ ಉತ್ಕಟ ಪರಿಸ್ಥಿತಿಯಿಂದ ಪಾರಾಗು; ಇಕ್ಕಟ್ಟಿನಿಂದ ಸುರಕ್ಷಿತವಾಗಿ ಪಾರಾಗು.
  5. within the four corners of ಒಂದು ವ್ಯಾಪ್ತಿಯೊಳಗೆ.