deaf ಡೆಹ್‍
ಗುಣವಾಚಕ
ಪದಗುಚ್ಛ
  1. ಕಿವುಡಾದ; ; ಕೆಪ್ಪ; ಕಿವಿಮದಡಾದ; ಕಿವಿ ಕೇಳಿಸದ; ಬಧಿರನಾದ: deaf in one ear ಒಂದು ಕಿವಿ ಕಿವುಡಾದ.
  2. (ನಾದ, ಲಯ, ಮೊದಲಾದವನ್ನು) ಹಿಡಿಯದ; ಗ್ರಹಿಸದ; ಆಸ್ವಾದಿಸದ.
  3. ಕಿವಿಗೊಡದ; ಗಮನಿಸದ; ಲಕ್ಷ್ಯ ಕೊಡದ; ಗಮನ ಕೊಡದ; ಕೇಳಿಸಿಕೊಳ್ಳದ; ಕೇಳಲೊದ; ಕಿವಿಗೆ ಹಾಕಿಕೊಳ್ಳದ.
ಪದಗುಚ್ಛ
  1. deaf and dumb ಕಿವುಡಮೂಗರು; ಬಧಿರಮೂಕರು; ಹುಟ್ಟು ಕಿವುಡರಾದ್ದರಿಂದ ಮಾತು ಸಹ ಬಾರದಿರುವವರು.
  2. deaf and dumb alphabet ಕೈಸನ್ನೆಭಾಷೆ; ಕಿವುಡ ಮೂಗರ ಸಂಕೇತ ಭಾಷೆ.
  3. deaf and dumb language = ಪದಗುಚ್ಛ(2).
  4. the deaf ಕಿವುಡರು.
ನುಡಿಗಟ್ಟು
  1. deaf as an adder (or a post) ಪೂರಾ ಕಿವುಡಾದ; ಸ್ವಲ್ಪವೂ ಕೇಳಿಸದ; ಮರಗಿವುಡಾದ; ಕಂಬಗಿವುಡಾದ.
  2. fall on deaf ears ಕಿವಿಗೆ ಬೀಳದೆ ಹೋಗು; ಕೇಳಿಸದೆ ಹೋಗು; ಅಲಕ್ಷ್ಯವಾಗು; ನಿರ್ಲಕ್ಷಿತವಾಗು; ಅಸಡ್ಡೆಗೆ ಗುರಿಯಾಗು.
  3. none so deaf as those won’t hear ಕಿವಿಗೊಡದವರಷ್ಟು ಕಿವುಡರು ಯಾರೂ ಇಲ್ಲ.
  4. turn a deaf ear (ಮನವಿ ಮೊದಲಾದವುಗಳಿಗೆ) ಕಿವಿಗೊಡದಿರು; ಕಿವಿಯ ಮೇಲೆ ಹಾಕಿಕೊಳ್ಳದಿರು; ಗಮನವನ್ನು ಕೊಡದಿರು.