honest ಆನಿಸ್ಟ್‍
ಗುಣವಾಚಕ
  1. (ನಡೆನುಡಿಗಳಲ್ಲಿ ನ್ಯಾಯಪರವಾದ; ಅಜುಮಾರ್ಗದ;) ಸುಳ್ಳು, ಮೋಸ, ವಂಚನೆ, ಕಳವು – ಇಲ್ಲದ.
  2. ನಿಷ್ಕಪಟ; ನೇರ; ಪ್ರಾಮಾಣಿಕ; ಮುಚ್ಚುಮರೆಯಿಲ್ಲದ: an honest face ನಿಷ್ಕಪಟವಾದ ಮುಖ.
  3. (ಕಾರ್ಯ, ಭಾವ, ಮೊದಲಾದವುಗಳ ವಿಷಯದಲ್ಲಿ) ಪ್ರಾಮಾಣಿಕ; ಸತ್ಯವಾದ; ಸಾಚಾ; ತ್ರಿಮವಲ್ಲದ: honest dealings ಪ್ರಾಮಾಣಿಕ ನಡವಳಿಕೆ; ಸಾಚಾ ವ್ಯಾಪಾರ, ವ್ಯವಹಾರ.
  4. (ಪ್ರಶಂಸೆ ಮಾಡುವಂತೆ, ಅನುಗ್ರಹ ತೋರುವಂತೆ ಬಳಸುವಾಗ) ಒಳ್ಳೆಯ; ಸಾಧು; (ವೈಶಿಷ್ಟ್ಯವಿಲ್ಲದಿದ್ದರೂ) ನಿಷ್ಕಳಂಕ; ಶುದ್ಧ.
  5. ಗೌರವಾರ್ಹ; ಒಳ್ಳೆಯ ಹೆಸರಿರುವ: an honest name ಗೌರವಾರ್ಹ ಹೆಸರು.
  6. ಸಾಮಾನ್ಯ; ಸಾಧಾರಣ; ನಿರಲಂತ.
  7. ಸತ್ಯವಾದ; ನಿಜವಾದ; ನಂಬಬಹುದಾದ; ವಿಶ್ವಸನೀಯ.
  8. (ಲಾಭ ಮೊದಲಾದವುಗಳ ವಿಷಯದಲ್ಲಿ) ನ್ಯಾಯವಾಗಿ ಪಡೆದ, ಗಳಿಸಿದ.
  9. (ಪದಾರ್ಥ ಮೊದಲಾದವುಗಳ ವಿಷಯದಲ್ಲಿ) ಬೆರಕೆಯಿಲ್ಲದ; ಅಪ್ಪಟ: honest weights ಸರಿಯಾದ ತೂಕಗಳುhonest commodities ಅಪ್ಪಟ ಸರಕು, ಮಾಲು.
  10. (ಹೆಂಗಸಿನ ವಿಷಯದಲ್ಲಿ) (ಪ್ರಾಚೀನ ಪ್ರಯೋಗ) ಪರಿಶುದ್ಧಳಾದ; ಸಾಧ್ವಿಯಾದ; ಶೀಲವಂತಳಾದ.
  11. (ಅನುಗ್ರಹ ತೋರುವಲ್ಲಿ ಹಾಸ್ಯ ಪ್ರಯೋಗ) ಒಳ್ಳೆಯ; ಐನಾತಿ; ಸಂಭಾವಿತ: honest fellows! ಒಳ್ಳೆಯ ಜನ! ಬಹಳ ಸಂಭಾವಿತರು! ಐನಾತಿ ಆಸಾಮಿಗಳು!
ಪದಗುಚ್ಛ
  1. honest Injun (ಆಡುಮಾತು)
    1. (ಪ್ರಶ್ನಾರ್ಥಕವಾಗಿ) ನಿಜವಾಗಿಯೂ ಹೌದೇ? ದೇವರಾಣೆಗೂ ಹೌದೇ?
    2. (ಒತ್ತಿ ಹೇಳುವಾಗ) ನಿಜವಾಗಿ ಹೌದು, ದೇವರಾಣೆಗೂ ನಿಜ.
  2. honest to God (or goodness) = ಪದಗುಚ್ಛ \((1)\).
  3. turn(or earn) an honest penny ನ್ಯಾಯವಾಗಿ ಕಾಸನ್ನು ಗಳಿಸು, ಸಂಪಾದಿಸು.
ನುಡಿಗಟ್ಟು

make an honest woman of (ತಾನು ಕೆಡಿಸಿದವಳನ್ನು) ಸಾಧ್ವಿಯಾಗಿ ಮಾಡು; ಮದುವೆಯಾಗು.