See also 2leaf
1leaf ಲೀಹ್‍
ನಾಮವಾಚಕ

(ಬಹುವಚನ leaves ಉಚ್ಚಾರಣೆ ಲೀವ್ಸ್‍).

  1. (ಸಾಮಾನ್ಯವಾಗಿ ಹಸುರು) ಎಲೆ; ಪರ್ಣ; ಪತ್ರ.
  2. ಎಸಳು; ದಳ; ಪಕಳೆ: floral leaf ಹೂವಿನ ದಳ. rose leaf ಗುಲಾಬಿ ಎಸಳು.
  3. ಎಲೆಗಳು; ಎಲೆಗುಂಪಲು; ತಳಿರಿಕೆ; ಪತ್ರಾವಳಿ; ಪರ್ಣಸಮೂಹ.
  4. ಎಲೆಬಿಟ್ಟಿರುವ ಸ್ಥಿತಿ; ಪರ್ಣಭರಿತ ಸ್ಥಿತಿ: a tree in leaf ಎಲೆಬಿಟ್ಟಿರುವ ಮರ. comes into leaf ಎಲೆ ಬಿಡಲಿದೆ.
  5. (ಸಾಮೂಹಿಕವಾಗಿ) ಹೊಗೆಸೊಪ್ಪು ಯಾ ಟೀ ಎಲೆ.
  6. (ಮುಖ್ಯವಾಗಿ ಪುಸ್ತಕದ) ಹಾಳೆ; ಪಾನು, ಮುಖ್ಯವಾಗಿ ಎರಡು ಪುಟ.
  7. (ಮುಖ್ಯವಾಗಿ ಚಿನ್ನ ಯಾ ಬೆಳ್ಳಿಯ, ಅಥವಾ ಕೊಂಬು, ಅಮೃತಶಿಲೆ, ಬಳಪದಕಲ್ಲು, ಮೊದಲಾದವುಗಳ) ರೇಕು; ವರಕು; ತಗಡು; ಬಹು ತೆಳುವಾದ ಪದರ, ಹಾಳೆ.
  8. (ಬಾಗಿಲು, ಮುಚ್ಚಳ, ಮೇಜು, ಮೊದಲಾದವುಗಳ) ಹಾಳೆ; ರೆಕ್ಕೆ; ಕಪಾಟು; ಕವಾಟ; ತಿರುಗಣಿ ಹಾಕಿ ಸೇರಿಸಿದ ಭಾಗ; ಸರಿಯುವ ಯಾ ಕೀಲುಗೂಡಿಸಿರುವ ಭಾಗ.
  9. ಎತ್ತುಸೇತುವೆಯ ಚಲಿಸುವ ಭಾಗ ಯಾ ಚಲಭಾಗಗಳಲ್ಲೊಂದು.
  10. (ಬಂದೂಕಿಗೆ, ಕೀಲುಗೂಡಿಸಿ ಸೇರಿಸಿರುವ) ಗುರಿದೃಷ್ಟಿ; (ಕೀಲಿನಿಂದಾಗಿ ಅತ್ತಿತ್ತ ಸರಿಯುವ) ಗುರಿಯಿಡುವ ಭಾಗ.
  11. (ಚಾಲಕ ಚಕ್ರಕ್ಕೆ ಸಂಬಂಧಿಸಿದ) ಹಲ್ಲುಚಕ್ರದ ಹಲ್ಲು(ಗಳಲ್ಲೊಂದು).
  12. ಮೇಜನ್ನು ವಿಸ್ತರಿಸಲು ಅದಕ್ಕೆ ತೂರಿಸಿದ, ಜಂಟಿಸಿದ ಹೆಚ್ಚುವರಿ ಭಾಗ.
  13. (ಅಮೆರಿಕನ್‍ ಪ್ರಯೋಗ) ಹಂದಿಯ ಮೂತ್ರಪಿಂಡಗಳ ಸುತ್ತಲೂ ಇರುವ ಕೊಬ್ಬು ಯಾ ಕೊಬ್ಬಿನ ಪದರ.
ಪದಗುಚ್ಛ

fall of the leaf ಮಾಗಿಕಾಲ; ಎಲೆ ಉದುರುವ ಕಾಲ.

ನುಡಿಗಟ್ಟು
  1. take a leaf out of person’s $^1$book. ಒಬ್ಬನನ್ನು ಅನುಕರಿಸು; ಒಬ್ಬನ ಮೇಲ್ಪಂಕ್ತಿಯನ್ನು ಅನುಸರಿಸು; ಒಬ್ಬನು ನಡೆದಂತೆ ನಡೆ, ಮಾಡಿದಂತೆ ಮಾಡು.
  2. turn over a new leaf ನಡತೆ ತಿದ್ದಿಕೊ; ಒಳ್ಳೆಯ ಹಾದಿಗೆ ತಿರುಗು; ಸನ್ಮಾರ್ಗದಲ್ಲಿ ತೊಡಗು.