See also 2head  3head
1head ಹೆಡ್‍
ನಾಮವಾಚಕ
  1. (ಮನುಷ್ಯ ಯಾ ಪ್ರಾಣಿಯ) ತಲೆ; ಮಂಡೆ; ಶಿರ; ಶಿರಸ್ಸು; ರುಂಡ.
  2. ತಲೆ; ಬುದ್ಧಿ; ಬುದ್ಧಿಯ, ಕಲ್ಪನೆಯ – ನೆಲೆ: created out of his own head ಅವನ ಸ್ವಂತ ತಲೆಯಿಂದಲೇ, ಕಲ್ಪನೆಯಿಂದಲೇ ಸೃಷ್ಟಿಸಿದ್ದು.
  3. ತಲೆ; ಸಹಜವಾದ ಮನಃಪ್ರವೃತ್ತಿ ಯಾ ಬುದ್ಧಿಕೌಶಲ: a good head for business ವ್ಯವಹಾರ ನಡೆಸುವುದರಲ್ಲಿ ಚುರುಕಾದ ತಲೆ, ಬುದ್ಧಿ.
  4. (ಆಡುಮಾತು) (ಮುಖ್ಯವಾಗಿ ಏಟಿನ ಯಾ ಕುಡಿದು ಅಮಲೇರಿದ್ದರ ಫಲವಾಗಿ ಬರುವ) ತಲೆ – ನೋವು, ಶೂಲೆ.
  5. (ಆಕಾರ, ಸ್ಥಾನ ಯಾ ರಚನೆಯಲ್ಲಿ) ಶಿರ; ತಲೆ; ತಲೆಯಂಥ ಭಾಗ, ಮುಖ್ಯವಾಗಿ:
    1. ಆಯುಧದ ಕತ್ತರಿಸುವ ಯಾ ಹೊಡೆಯುವ ಭಾಗ.
    2. ಮೊಳೆಯ ತಲೆ; ಮೊಳೆಯ ಚಪ್ಪಟೆ ಭಾಗ.
    3. ಕಂಬ ಯಾ ಸ್ತಂಭದ ಆಲಂಕಾರಿಕ ಮೇಲ್ಭಾಗ ಯಾ ಅಗ್ರ.
    4. (ಸಸ್ಯಗಳ ವಿಷಯದಲ್ಲಿ) ತಲೆ; ಗೊಂಡೆ; ಗುಚ್ಛ; ಗೊಂಚಲು; ಕಾಂಡದ ಮೇಲ್ತುದಿಯಲ್ಲಿರುವ ಎಲೆ ಯಾ ಹೂಗಳ ಒತ್ತಾದ ಗುಂಪು: a fine head of cabbage ಎಲೆಕೋಸಿಸ ಒಳ್ಳೆಯ ಗೊಂಡೆa flower head ಹೂಗೊಂಡೆ; ಪುಷ್ಪಗುಚ್ಛ.
    5. ಪೀಪಾಯಿ ಮೊದಲಾದವುಗಳ ತಲೆ, ಚಪ್ಪಟೆಯ ಭಾಗ.
    6. ಬಿಯರು ಮೊದಲಾದವುಗಳ (ಲೋಟದ ಮೇಲ್ಭಾಗದಲ್ಲಿ ಕಟ್ಟಿಕೊಳ್ಳುವ) ನೊರೆ, ಬುರುಗು.
    7. (ಕಿಟಕಿ, ಬಾಗಿಲು, ಮೊದಲಾದವುಗಳ) ಚೌಕಟ್ಟುಗಳ ಮೇಲಿನ ಅಡ್ಡಪಟ್ಟಿ.
  6. ಪ್ರಾಣ; ಜೀವ; ತಲೆ; ಶಿರ: it cost him his head ಅದು ಅವನ ತಲೆಗೆ, ಪ್ರಾಣಕ್ಕೆ ಸಂಚಕಾರ ತಂದಿತು.
  7. ಅಧಿಪತಿ; ರಾಜ; ನಾಯಕ; ಯಜಮಾನ: head of the family ಕುಟುಂಬದ ಯಜಮಾನhead of the state ರಾಜ; ರಾಜ್ಯಾಧಿಪತಿ.
  8. ಮುಖಂಡ; ನಾಯಕ; ತಲೆಯಾಳು; ಮುಖ್ಯಸ್ಥ; ಮುಂದಾಳು.
  9. (ಕಾಲೇಜಿನ) ಅಧ್ಯಕ್ಷ; ಪ್ರಧಾನಾಧಿಕಾರಿ; ಪ್ರಾಂಶುಪಾಲ.
  10. (ಶಾಲೆಯ) ಮುಖ್ಯೋಪಾಧ್ಯಾಯ.
  11. ನಾಯಕ ಸ್ಥಾನ; ಅಧಿಪತಿ: at the head of ಅಧಿಪತಿಯಾಗಿ; ನಾಯಕನಾಗಿ; ತಲೆಯಾಳಾಗಿ.
  12. (ಮೆರವಣಿಗೆ, ಸೈನ್ಯ, ಸಾಲು, ಮೊದಲಾದವುಗಳ) ಮುಂಭಾಗ: ಮುಂಚೂಣಿ; ಅಗ್ರ(ಭಾಗ).
  13. (ಹಾಸಿಗೆ, ಮಂಚ, ಗೋರಿ ಮೊದಲಾದವುಗಳ) ತಲೆಭಾಗ; ತಲೆಯಿಡುವ ಭಾಗ.
  14. (ಮೇಜಿನ) ಅಗ್ರಭಾಗ; ಮೇಲ್ಭಾಗ.
  15. (ಮೆಟ್ಟಿಲು ಸಾಲು, ಪುಸ್ತಕದ ಪುಟ, ಧ್ವಜ ಸ್ತಂಭ, ಕೂವೆಮರ, ಯಾದಿ, ಮೊದಲಾದವುಗಳ) ತುದಿ; ತಲೆ; ಶಿರ; ಅಗ್ರ; ಮೇಲುಭಾಗ: at the head of staircase ಮೆಟ್ಟಿಲು ಸಾಲಿನ ಮೇಲ್ತುದಿಯಲ್ಲಿ.
  16. ತಲೆ; (ಒಬ್ಬ) ವ್ಯಕ್ತಿ, ಮನುಷ್ಯ: two rupees a (or per) head ತಲಾ ಎರಡು ರೂಪಾಯಿ; ತಲೆಗೆರಡು ರೂಪಾಯಿ; ಒಬ್ಬ ವ್ಯಕ್ತಿಗೆ ಎರಡು ರೂಪಾಯಿ.
  17. (ಬಹುವಚನ ಅದೇ) ತಲೆ; (ಒಂದು ಯಾ ಬಿಡಿ) ಪ್ರಾಣಿ.
  18. (ಬಹುವಚನದಲ್ಲಿ) ಸಂಖ್ಯೆ; ಪ್ರಮಾಣ: large head of game ತುಂಬು ಬೇಟೆ; ಅಧಿಕ ಸಂಖೆಯ ಬೇಟೆ(ಯ ಮೃಗಗಳು) good head of shell ಅಧಿಕ ಸಂಖೆಯ (ಚಿಪ್ಪು) ಕವಡೆ, ಶಂಖ.
  19. (ಸಾಮೂಹಿಕವಾಗಿ) ದನಗಳು ಯಾ ಬೇಟೆ ಪ್ರಾಣಿಗಳು: twenty head ಇಪ್ಪತ್ತು ದನಗಳು ಯಾ ಬೇಟೆಮೃಗಗಳು.
  20. (ನಾಣ್ಯದ ಒಂದು ಮುಖದಲ್ಲಿರುವ) ತಲೆಯ ಚಿತ್ರ.
  21. (ಸಾಮಾನ್ಯವಾಗಿ ಬಹುವಚನದಲ್ಲಿ) ನಾಣ್ಯದ ತಲೆ ಚಿಮ್ಮಿದಾಗ ಮೇಲ್ಮುಖವಾಗಿ ಬೀಳುವ ತಲೆಯ ಭಾಗ, ಪಕ್ಕ.
  22. (ನದಿ, ಹೊಳೆ, ಮೊದಲಾದವುಗಳ) ಮೂಲ; ಉಗಮಸ್ಥಾನ.
  23. ಸರೋಮುಖ; ನದಿಯು ಬಂದು ಸೇರುವ ಸರೋವರದ ಶಿರೋಭಾಗ, ಮೇಲ್ತುದಿ.
  24. (ಅಳತೆಯ ಮಾನವಾಗಿ) ತಲೆ; ತಲೆಯುದ್ದ: taller by a head ಒಂದು ತಲೆ ಹೆಚ್ಚು ಎತ್ತರhorse won by a head ಕುದುರೆ ಒಂದು ತಲೆಯಷ್ಟು ಉದ್ದದಿಂದ, ಅಂತರದಿಂದ ಗೆದ್ದಿತು.
  25. ಹೆಡ್‍; ತಲೆ:
    1. ಟೇಪ್‍ರಿಕಾರ್ಡರನ್ನು ಚಾಲೂ ಮಾಡಿದಾಗ (‘ಪ್ೇ’ ಗುಂಡಿಯನ್ನು ಒತ್ತಿದಾಗ) ಸುತ್ತುತ್ತಿರುವ ಟೇಪಿನೊಡನೆ ಸಂಪರ್ಕ ಉಂಟಾಗಿ ಸಂಕೇತಗಳನ್ನು ಪರಿವರ್ತಿಸುವ ಸಾಧನ.
    2. ರೆಕಾರ್ಡ್‍ ಪ್ಲೇಯರ್‍ನಲ್ಲಿ ಕಾರ್ಟ್‍ರಿಡ್ಜ್‍ ಮತ್ತು ಸ್ಟೈಲಸ್‍ ಅನ್ನು ಹೊತ್ತಿರುವ ಭಾಗ.
    3. = printhead.
  26. (ಸುತ್ತುವ ಯಂತ್ರ ಮೊದಲಾದವುಗಳ ಚಾಲನೆಗೆ ಒದಗಿಸುವ) ಜಲ ಯಾ ಹಬೆಯ ರಾಶಿ, ಸಂಗ್ರಹ; ಎತ್ತರದಲ್ಲಿಟ್ಟ ನೀರಿನ ಯಾ ಹಬೆಯ ರಾಶಿ, ಮೊತ್ತ.
  27. (ಸುತ್ತುವ ಯಂತ್ರ ಮೊದಲಾದವುಗಳ ಚಾಲನೆಗೆ ನೀರೊದಗಿಸುವ) ಹಬೆಯ ಯಾ ಜಲರಾಶಿಯ ಒತ್ತಡ.
  28. (ಮುಖ್ಯವಾಗಿ ಅಂಕಿತನಾಮಗಳಲ್ಲಿ) ಭೂಶಿರ; ಭೂಚಾಚು; ಸಮುದ್ರದೊಳಕ್ಕೆ ಚಾಚಿಕೊಂಡಿರುವ ಗುಡ್ಡನಾಡಿನ ಭಾಗ: Beachy Head (ಇಂಗ್ಲಂಡಿನ) ಬೀಚಿಯಲ್ಲಿರುವ ಭೂಚಾಚು.
  29. (ನೌಕಾಯಾನ):
    1. ಹಡಗಿನ ಮುಂಗೋಟು, ಮೂತಿ.
    2. (ಹಡಗಿನ ಮೂತಿಯ ಭಾಗದಲ್ಲಿರುವ) ನಾವಿಕರ – ಕಕ್ಕಸು, ಶೌಚಾಲಯ.
  30. (ನಿರೂಪಿಸಿದ ಯಾ ರಚಿಸಿದ ಪ್ರಬಂಧ, ಪ್ರಸಂಗ, ಮೊದಲಾದವುಗಳಲ್ಲಿ) ಪ್ರಧಾನ – ಪ್ರಕರಣ, ಅಧಿಕರಣ, ವಿಭಾಗ.
  31. (ಪತ್ರಿಕೋದ್ಯಮ) = headline.
  32. ತುದಿಗಟ್ಟು; ಬಿಕ್ಕಟ್ಟು; ಉತ್ಕಟಾವಸ್ಥೆ; ತುದಿಗೇರಿದ ಸ್ಥಿತಿ.
  33. (ಕುರು ಮೊದಲಾದವುಗಳ) ಮೂತಿ; ತುದಿ; ಪಕ್ವ ಸ್ಥಿತಿಗೆ ಬಂದು ಒಡೆಯುವ ಯಾ ಬಿರಿಯುವ ಭಾಗ.
  34. (ಅಶಿಷ್ಟ) ಮಾದಕ ವ್ಯಸನಿ; ಮಾದಕ ವಸ್ತುಗಳ ಚಟಕ್ಕೆ ಬಿದ್ದವನು.
  35. ಜಿಂಕೆಯ ಕವಲುಗೊಂಬು: deer of the first head ಹೊಸದಾಗಿ ಕೊಂಬೊಡೆದ ಜಿಂಕೆ.
  36. (ನಿರ್ದಿಷ್ಟ ರೀತಿಯ, ಅಂತಹ ತಲೆಯುಳ್ಳ) ಮನುಷ್ಯ; ವ್ಯಕ್ತಿ: crowned heads ರಾಜರು; ಕಿರೀಟಧಾರಿಗಳುsome hot head ಯಾವನೋ ಬಿಸಿತಲೆಯವನು; ದುಡುಕು ಮನುಷ್ಯ.
  37. ಹಾಲಿನ (ಮೇಲಿನ) ಕೆನೆ.
  38. (ಗುಳ ಸೇರಿದ ನೇಗಿಲಿನ) ಮುಂಭಾಗ; ನೇಗಿಲ ತುದಿ.
  39. (ಕಲ್ಲಿದ್ದಲ ಗಣಿಯಲ್ಲಿ ಕೆಲಸ ಮಾಡಲು ನಿರ್ಮಿಸಿದ) ಸುರಂಗಮಾರ್ಗ.
  40. (ಸಂಗೀತ) (ಸ್ವರಪ್ರಸ್ತಾರ ಪಟದ ದಂಡದ ತುದಿಯಲ್ಲಿನ) ತಲೆ; ತಲೆಯಂಥ ದುಂಡು ಯಾ ಅಂಡಾಕಾರದ ಭಾಗ.
  41. (ಬ್ರಿಟಿಷ್‍ ಪ್ರಯೋಗ) ಮೋಟಾರುಕಾರಿನ ಚಾವಣಿ, ಮಾಡ.
  42. (ಪಂಪು ಯಾ ಎಂಜಿನ್ನಿನಲ್ಲಿ) ಸಿಲಿಂಡರಿನ ತಲೆ, ಮುಚ್ಚಿದ ತುದಿ.
  43. ಕೇಶ; ತಲೆಗೂದಲು.
  44. (ಆಡುಮಾತು) = headlight.
ಪದಗುಚ್ಛ
  1. above one’s head = ಪದಗುಚ್ಛ \((17e)\).
  2. at the head of:
    1. (ಸೇನೆ, ಮೆರವಣಿಗೆ, ಮೊದಲಾದವುಗಳ) ತಲೆಯಾಳಾಗಿ; ಮುಂಭಾಗದಲ್ಲಿ; ಮುಂಚೂಣಿಯಲ್ಲಿ.
    2. ಮುಖ್ಯ, ಅಗ್ರ, ಪ್ರಮುಖ, ಪ್ರಚಂಡ, ಪ್ರಧಾನ, ನಾಯಕ – ಸ್ಥಾನದಲ್ಲಿ: at the head of the administration ಆಡಳಿತದ ಮುಖಂಡ ಸ್ಥಾನದಲ್ಲಿ.
  3. by the head:
    1. (ನೌಕಾಯಾನ) (ಹಿಂಭಾಗಕ್ಕಿಂತ) ಮೂತಿಯು ಹೆಚ್ಚಾಗಿ ನೀರಿನಲ್ಲಿ ಮುಳುಗಿ.
    2. ಸ್ವಲ್ಪ ಅಮಲೇರಿ.
  4. count heads (ಸುಮ್ಮನೆ) ತಲೆ ಎಣಿಸು; (ಹಾಜರಿವವರು, ಓಟು ಮಾಡುವವರು, ಮೊದಲಾದವರ) ಸಂಖ್ಯೆ ಎಣಿಸು; ಲೆಕ್ಕ ಹಾಕು.
  5. head and shoulders.
    1. ಬಲವಂತವಾಗಿ; ಬಲಾತ್ಕಾರದಿಂದ: drag in (irrelevant topic) by the head and shoulders (ಅಸಂಬದ್ಧ ಪ್ರಸಂಗವನ್ನು ಮಧ್ಯೆ) ಎಳೆದು ತರು.
    2. (ಆಕಾರದಲ್ಲಿ) ಭುಜ ಮತ್ತು ತಲೆಯಷ್ಟು ಹೆಚ್ಚು ಎತ್ತರವಾಗಿ.
    3. (ಬುದ್ಧಿ ಯಾ ಸಾಮರ್ಥದಲ್ಲಿ) ತಲೆಮುಟ್ಟಿ; ಈರಿ; ಉನ್ನತವಾಗಿ; ಸಾಕಷ್ಟು ಹೆಚ್ಚಾಗಿ: in intelligence he was head and shoulders above the others ಬುದ್ಧಿಯಲ್ಲಿ ಅವನು ಇತರರನ್ನು ಈರಿಸಿದ್ದ.
  6. head first or foremost:
    1. (ಮುಳುಗುವಾಗ) ತಲೆ – ಮೊದಲು, ಮುಂದಾಗಿ.
    2. ದುಡುಮ್ಮನೆ; ಹಠಾತ್ತಾಗಿ; ದಿಢೀರನೆ; ಹಿಂದುಮುಂದು ಆಲೋಚಿಸದೆ.
  7. head for heights ಎತ್ತರವಾದ ಪ್ರಪಾತ, ಬೆಟ್ಟದ ಕೋಡು, ಕಟ್ಟಡದ ಚಾವಣಿ, ಮೊದಲಾದವುಗಳ ಅಂಚಿನ ಹತ್ತಿರ ನಿಲ್ಲುವ ಯಾ ಇರಬಲ್ಲ ಶಕ್ತಿ.
  8. head of hair (ಸಾಮಾನ್ಯವಾಗಿ ತುಂಬ ಇರುವ) ತಲೆಗೂದಲು; (ವಿಪುಲ) ಕೇಶರಾಶಿ.
  9. head of the river (ಬ್ರಿಟಿಷ್‍ ಪ್ರಯೋಗ) ಮುಂದಿನ ದೋಣಿಯನ್ನು ಮುಟ್ಟಿ ಹಾದುಹೋಗುವ ದೋಣುಪಂದ್ಯದಲ್ಲಿ ಅಗ್ರಸ್ಠಾನ.
  10. head over ears (or heels) ಆಳವಾಗಿ ಯಾ ಸಂಪೂರ್ಣವಾಗಿ ಮುಳುಗಿ (ರೂಪಕವಾಗಿ ಸಹ): head over ears (or heels) in debt or love ಸಾಲದಲ್ಲಿ ಯಾ ಪ್ರೇಮದಲ್ಲಿ ಆಳವಾಗಿ ಯಾ ಸಂಪೂರ್ಣವಾಗಿ ಮುಳುಗಿ.
  11. head over heels:
    1. ತಲೆಕೆಳಗಾಗಿ; ಅಡಿಮೇಲಾಗುವಂತೆ.
    2. ಪಲ್ಟಿ, ಲಾಗ – ಹಾಕುತ್ತ; ದೊಂಬರಾಟದಲ್ಲಿ.
    3. ಸಂಫೂರ್ಣವಾಗಿ; ಪೂರಾ.
  12. heads up! (ಆಡುಮಾತು) ಜೋಕೆ! ಜೋಪಾನ! ಹುಷಾರು!
  13. from head to foot (or toe):
    1. ತಲೆಯಿಂದ ಕಾಲಿನವರೆಗೆ; ಅಡಿಯಿಂದ ಮುಡಿಯವರೆಗೆ; ಆಪಾದಮಸ್ತಕವಾಗಿ; ಮೈತುಂಬ.
    2. (ರೂಪಕವಾಗಿ) ಆಮೂಲಾಗ್ರ; ಮೊದಲಿಂದ ಕೊನೆಯವರೆಗೆ.
  14. in one’s head ತಲೆಯಲ್ಲಿ; ಆಲೋಚನೆಯಲ್ಲಿ; ಎಣಿಕೆಯಲ್ಲಿ; ಭೌತಿಕ ಸಾಧನಗಳ ಸಹಾಯವಿಲ್ಲದೆ ಮಾನಸಿಕ ಪ್ರಕ್ರಿಯೆಯಿಂದ.
  15. on one’s head:
    1. ತಲೆಯ ಮೇಲೆ; ಕಾಲುಗಳನ್ನು ಮೇಲೆತ್ತಿ ತಲೆ ಮತ್ತು ತೋಳುಗಳ ಮೇಲೆ.
    2. (ಅಶಿಷ್ಟ) ಬಹಳ ಸುಲಭವಾಗಿ; ಸ್ವಲ್ಪವೂ ಶ್ರಮವಿಲ್ಲದೆ: can do it on my head ಬಹಳ ಸುಲಭವಾಗಿ ಮಾಡಬಲ್ಲೆ.
    3. = ಪದಗುಚ್ಛ \((17)\).
  16. on one’s own head (ಸೇಡು, ತಪ್ಪು, ಜವಾಬ್ದಾರಿ, ಮೊದಲಾದವು) ತಲೆಯ ಮೇಲೆ (ಬಿದ್ದು, ಅವನ್ನು ಹೊತ್ತು, ಧರಿಸಿ).
  17. over one’s head:
    1. ತಲೆಯ, ನೆತ್ತಿಯ – ಮೇಲೆ; ಆಕಾಶದಲ್ಲಿ; ಮೇಲೆ ಎತ್ತರದಲ್ಲಿ.
    2. (ನೀರಿನ ವಿಷಯದಲ್ಲಿ)ತಲೆ ಮುಳುಗುವಂತೆ.
    3. (ಅಪಾಯ, ಗಂಡಾಂತರ, ಮೊದಲಾದವುಗಳ ವಿಷಯದಲ್ಲಿ) ತಲೆಯ ಮೇಲೆ ತೂಗುವ, ಎರಗುವ; ಸದ್ಯದಲ್ಲಿಯೇ ಸಂಭವಿಸುವ.
    4. (ಬಡ್ತಿಯ ವಿಷಯದಲ್ಲಿ) ತಲೆಯ ಮೇಲೆ; ಹೆಚ್ಚಿನ ಅರ್ಹತೆ, ನ್ಯಾಯವಾದ ಹಕ್ಕುಗಳಿರುವವನನ್ನು ಕಡೆಗಣಿಸಿ: he is promoted over my head ಅವನಿಗೆ ಬಡ್ತಿ ಕೊಟ್ಟು ನನ್ನ ತಲೆಯ ಮೇಲೆ ಕೂರಿಸಿದ್ದಾರೆ.
    5. ಬುದ್ಧಿಗೆ, ತಿಳಿವಳಿಕೆಗೆ ಈರಿ: he talked over our heads ಅವನು ನಮ್ಮ ತಿಳಿವಳಿಕೆಗೆ ಈರಿ ಮಾತನಾಡಿದ.
ನುಡಿಗಟ್ಟು
  1. beat (person’s) head off (ಒಬ್ಬನನ್ನು) ಪೂರ್ತಿ ದಣಿಸು, ಸುಸ್ತು ಮಾಡಿ ಬಿಡು.
  2. (be) weak in the head ಮಂದಬುದ್ಧಿ(ಯವನಾಗಿರು); ಅಂತಹುದೇನೂ ಬುದ್ಧಿವಂತನಾಗಿರದಿರು.
  3. bring to a head:
    1. ಪಕ್ವಸ್ಥಿತಿಗೆ ತರು.
    2. ಉತ್ಕಟಸ್ಥಿತಿಗೆ, ವಿಷಮಸ್ಥಿತಿಗೆ – ತರು; ತುದಿಗಟ್ಟಕ್ಕೆ ತರು.
  4. by the head and ears (ದನವನ್ನೆಳೆಯುವಂತೆ) ಬಲವಂತವಾಗಿ; ಕಿವಿಮೂಗು ಹಿಡಿದು; ಬಲಾತ್ಕಾರದಿಂದ; ದರದರನೆ: an utterly irrelevant story lugged in by head and ears ಬಲವಂತವಾಗಿ ಎಳೆದು ತಂದ ಶುದ್ಧ ಅಸಂಬದ್ದ ಕಥೆ.
  5. cannot make head or tail of (ವಿಷಯ ಮೊದಲಾದವುಗಳ) ತಲೆ ಬಾಲ ಒಂದೂ ತಿಳಿಯುವುದಿಲ್ಲ; ಏನೂ ಅರ್ಥವಾಗುವುದಿಲ್ಲ.
  6. come into (or enter) one’s head (ಆಲೋಚನೆ ಯಾ ಭಾವನೆ) ಮನಸ್ಸಿಗೆ ಬರು, ತೋರು, ಸುಳಿ.
  7. come to a head:
    1. ಪಕ್ವಸ್ಥಿತಿಗೆ ಬರು.
    2. ಉತ್ಕಟ ಸ್ಥಿತಿ ತಲುಪು; ವಿಷಮ ಸ್ಥಿತಿಗೆ ಬರು; ತುದಿಗಟ್ಟಕ್ಕೆ ಬರು.
  8. get one’s head down (ಅಶಿಷ್ಟ).
    1. ಹಾಸಿಗೆಯ ಮೇಲೆ ಬಿದ್ದುಕೊ, ತಲೆಹಾಕು.
    2. ಮಾಡಬೇಕಾಗಿರುವ ಕೆಲಸದ ಮೇಲೆ ನಿಗಾ ಇಡು; ಕೈಯಲ್ಲಿರುವ ಕೆಲಸದ ಮೇಲೆ ಕೇಂದ್ರೀಕರಿಸು.
  9. give a (person) his or her head (ಒಬ್ಬನನ್ನು) ಇಷ್ಟಬಂದಂತೆ ನಡೆಯಲು ಬಿಡು; ಸ್ವೇಚ್ಛೆಯಾಗಿ ಬಿಡು; ಸ್ವತಂತ್ರವಾಗಿ ವರ್ತಿಸುವಂತೆ ಬಿಡು; (ಅವನನ್ನು) ನಿಯಂತ್ರಿಸದಿರು.
  10. give (horse) his head (ಕುದುರೆಯನ್ನು) ಸ್ವೇಚ್ಛೆಯಾಗಿ ಬಿಡು; ಇಷ್ಟ ಬಂದಂತೆ ಹೋಗಲು ಬಿಡು; ನಿಯಂತ್ರಿಸದಿರು.
  11. go out of one’s head (ವಿಷಯ) ಮರೆತು ಹೋಗು; ವಿಸ್ಮೃತನಾಗು; ವಿಸ್ಮೃತಿ ಹೊಂದು.
  12. go to one’s head:
    1. (ಮದ್ಯದ ವಿಷಯದಲ್ಲಿ) ತಲೆಗೇರು; ನೆತ್ತಿಗೇರು; ಅಮಲೇರು; ಮತ್ತೇರು.
    2. (ಜಯ, ಏಳಿಗೆ, ಮೊದಲಾದವುಗಳ ವಿಷಯದಲ್ಲಿ) ತಲೆಗೇರು; ಅಮಲೇರು; ಸೊಕ್ಕೇರು; ದುರಹಂಕಾರ ಮಿತಿಈರು.
  13. hang one’s head (ಅವಮಾನದಿಂದ) ತಲೆತಗ್ಗಿಸು.
  14. have a good head on one’s shoulders ಒಳ್ಳೆಯ ತಲೆ ಹೊಂದಿರು; ಲೌಕಿಕ ಜ್ಞಾನ, ವ್ಯಾವಹಾರಿಕ ಸಾಮರ್ಥ್ಯ, ಮೊದಲಾದವನ್ನು ಹೊಂದಿರು.
  15. head and front:
    1. (ಪ್ರಾಪ್ರ) ಅಪರಾಧದ ತಿರುಳು, ಮುಖ್ಯಾಂಶ.
    2. (ಯಾವುದೇ ಕಾರ್ಯದ) ಮುಖಂಡ; ಮುಂದಾಳು; (ಸಾಮಾನ್ಯವಾಗಿ ಪುಂಡರ) ತಲೆಯಾಳು.
    3. (ಷೇಕ್ಸ್‍ಪಿಯರ್‍ನಲ್ಲಿ) ಅತಿ ಹೆಚ್ಚಿನ ಪ್ರಮಾಣ; ಪರಮಾವಧಿ.
  16. head in the sand ಎದುರಿಗಿರುವ ಅಪಾಯವನ್ನು ನಂಬಲು ಮನಸ್ಸಿಲ್ಲದೆ; ಎದುರಿಗಿರುವ ಅಪಾಯಕ್ಕೆ ಕಣ್ಣು ಮುಚ್ಚಿಕೊಂಡು.
  17. heads I win, tails you lose ಏನೇ ಆದರೂ ನನ್ನದೇ ಗೆಲುವು; ತಲೆಭಾಗ ಮೇಲಾಗಿ ಬಿದ್ದರೆ ನಾನು ಗೆಲ್ಲುತ್ತೇನೆ, ಹಿಂಭಾಗ ಮೇಲಾಗಿ ಬಿದ್ದರೆ ನೀನು ಸೋಲುತ್ತೀಯ.
  18. heads will roll (ಆಡುಮಾತು) ಕೆಲವರ ತಲೆಗಳು ಬೀಳುತ್ತವೆ; ಕೆಲವರು ವಜಾ ಆಗುವುದರಲ್ಲಿದ್ದಾರೆ ಯಾ ಅವಮಾನಕ್ಕೆ ಒಳಗಾಗುವವರಿದ್ದಾರೆ.
  19. hold one’s head high ತಲೆ ಎತ್ತಿಕೊಂಡು ಓಡಾಡು; ಮರ್ಯಾದೆಯಿಂದ ಇರು; ಗೌರವದಿಂದ ಬದುಕು.
  20. hold up one’s head ತಲೆ ಎತ್ತಿಕೊಂಡಿರು; ಅವಮಾನಕ್ಕೆ ಈಡಾಗದಿರು, ಒಳಗಾಗದಿರು.
  21. keep one’s head ಶಾಂತತೆಯಿಂದಿರು; ತಲೆ ಕೆಡಿಸಿಕೊಳ್ಳದಿರು; ದುಡುಕದಿರು.
  22. keeps one’s head above water (ಆಡುಮಾತು) ಸಾಲಕ್ಕೆ ಸಿಕ್ಕಿಕೊಳ್ಳದಿರು, ಬೀಳದಿರು.
  23. keep one’s head down (ಆಡುಮಾತು) ತಲೆ ಸರಿಯಾಗಿಟ್ಟುಕೊ, ನೆಟ್ಟಗಿಟ್ಟುಕೊ:
    1. ಏಕಾಗ್ರತೆ ಕಳೆದುಕೊಳ್ಳದಿರು; ಬೇರೆಡೆಗೆ ಗಮನ ಹರಿಸದಿರು.
    2. ಅಪಾಯಕ್ಕೆ ಎಡೆಗೊಡದಿರು, ಸಿಕ್ಕದಿರು.
  24. lay heads together ಪರಸ್ಪರ ಸಮಾಲೋಚಿಸು.
  25. laugh one’s head off ನಕ್ಕು ನಕ್ಕು ಸುಸ್ತಾಗು; ತಲೆ ಬಿದ್ದುಹೋಗುವಷ್ಟು ಗಟ್ಟಿಯಾಗಿ ನಗು.
  26. let him have his head:
    1. (ಕುದುರೆಯ ವಿಷಯದಲ್ಲಿ) = ನುಡಿಗಟ್ಟು \((10)\).
    2. (ಮನುಷ್ಯನ ವಿಷಯದಲ್ಲಿ) = ನುಡಿಗಟ್ಟು \((9)\).
  27. lose one’s head;
    1. ತಲೆ ಕಳೆದುಕೊ; ಶಿರಚ್ಛೇದಕ್ಕೆ ಗುರಿಯಾಗು.
    2. ದಿಕ್ಕು ತೋರದಾಗು; ತಲೆಕೆಡು; ಗೊಂದಲಕ್ಕೆ ಬೀಳು.
  28. make head:
    1. ಮುಂದುವರಿ; ಮುಂದೆ ಮುಂದೆ ಹೋಗು; ಪ್ರಗತಿಸಾಧಿಸು.
    2. ಎದುರಾಳಿಗಳನ್ನು ಪ್ರತಿಭಟಿಸಿ ಮುನ್ನುಗ್ಗು, ಮುಂದೆಸಾಗು.
  29. off one’s head (ಅಶಿಷ್ಟ) ತಲೆಕೆಟ್ಟು; ಹುಚ್ಚು ಹಿಡಿದು.
  30. off the top of one’s head (ಆಡುಮಾತು) ತಲೆಯಿಂದ ಪುಟಿದಂತೆ; ಪೂರ್ವಇಸಿದ್ಧತೆ ಇಲ್ಲದೆ; ಸಮಯ ಸ್ಫೂರ್ತಿಯಿಂದ; ಮೊದಲೇ ವಿಚಾರಣೆ ಮಾಡದೆ ಯಾ ಪೂರ್ವಚಿಂತನೆಯಿಲ್ಲದೆ.
  31. old head on young shoulders ಎಳೆಯ ವಯಸ್ಸು, ಬೆಳೆದ ಬುದ್ಧಿ; ವಯೋವೃದ್ಧನಲ್ಲದಿದ್ದರೂ ಜ್ಞಾನವೃದ್ಧ.
  32. out of one’s head:
    1. (ಅಶಿಷ್ಟ) ತಲೆಕೆಟ್ಟು; ಹುಚ್ಚು ಹಿಡಿದು.
    2. ಒಬ್ಬನ ಸ್ವಂತ ಕಲ್ಪನೆಯಿಂದ.
    3. ವಿಸ್ಮೃತವಾಗಿ; ಮರೆತುಹೋಗಿ.
  33. put heads together = ನುಡಿಗಟ್ಟು \((24)\).
  34. put into person’s head (ಅಭಿಪ್ರಾಯ ಮೊದಲಾದವನ್ನು ಒಬ್ಬನ). ತಲೆಯೊಳಕ್ಕೆ ಹಾಕು; (ಒಬ್ಬನಿಗೆ) ಸೂಚಿಸು; ಸಲಹೆಕೊಡು.
  35. put out of (one’s) head:
    1. (ಯಾವುದಾದರೂ ಒಂದರ) ಚಿಂತೆಬಿಡು; ತಲೆಗೆ ಹಚ್ಚಿಕೊಳ್ಳದಿರು; ವಿಷಯ ಕೈಬಿಡು; ತಲೆಯಿಂದ ಹೊರದೂಡು; ಮನಸ್ಸಿನಿಂದ ಹೊರಹಾಕು.
    2. (ಯಾವುದನ್ನಾದರೂ) ಮರೆತುಬಿಡು.
  36. take (or get) it into one’s head (ಎಂದು) ಅಂದುಕೊ; ಭಾವಿಸು, ಕಲ್ಪಿಸಿಕೊ; ನಿರ್ದಿಷ್ಟವಾದ, ಖಚಿತವಾದ ಅಭಿಪ್ರಾಯ ಯಾ ಯೋಜನೆ ಹಾಕಿಕೊ, ರೂಪಿಸಿಕೊ.
  37. talk (person’s) head off ಮಾತಾಡಿ ಮಾತಾಡಿ ಕೇಳುವವನನ್ನು – ದಣಿಸು, ಸುಸ್ತುಮಾಡು(ಕೇಳುವವನಿಗೆ) ಬೇಸರ ಹುಟ್ಟಿಸು; ಚಿಟ್ಟುಬರಿಸು.
  38. turn a person’s head ದುರಹಂಕಾರಿಯನ್ನಾಗಿ ಮಾಡು; ತಲೆ ತಿರುಗುವಂತೆ ಮಾಡು.
  39. two heads are better than one (ಆಲೋಚನೆ ಮೊದಲಾದವುಗಳ ವಿಷಯದಲ್ಲಿ) ಒಬ್ಬನಿಗಿಂತ ಇಬ್ಬರು ಮೇಲು; ಎರಡು ತಲೆ ಉತ್ತಮ.
  40. with one’s head in the CLOUDs.