See also 1scale  2scale  4scale  5scale  6scale  7scale
3scale ಸ್ಕೇಲ್‍
ನಾಮವಾಚಕ
  1. ತಕ್ಕಡಿಯ, ತ್ರಾಸಿನ – ತಟ್ಟೆ ಯಾ ಬಟ್ಟಲು.
  2. (ಅನೇಕವೇಳೆ ಬಹುವಚನದಲ್ಲಿ) ತಕ್ಕಡಿ; ತ್ರಾಸು; ಚಿಂತಾಲು; ತೂಕಮಾಡುವ ಯಂತ್ರ ಯಾ ಸಾಧನ.
  3. (the Scales) ತುಲಾರಾಶಿ; ತಕ್ಕಡಿಯ ಆಕಾರದಲ್ಲಿರುವ ನಕ್ಷತ್ರಗಳ ಗುಂಪು.
ಪದಗುಚ್ಛ
  1. hold the scale(s) even
    1. ತಕ್ಕಡಿಯನ್ನು ಸಮವಾಗಿ ಹಿಡಿ.
    2. (ಉಭಯ ಪಕ್ಷಗಳ ನಡುವೆ) ಸಮಾನವಾಗಿ, ನಿಷ್ಪಕ್ಷಪಾತವಾಗಿ, ನ್ಯಾಯವಾಗಿ – ವರ್ತಿಸು.
  2. pair of scales ತಕ್ಕಡಿ; ತ್ರಾಸು.
  3. throw into the scale (ವಾದವಿವಾದದಲ್ಲಿ, ವ್ಯಾಜ್ಯದಲ್ಲಿ, ಪರಸ್ಪರ ಸ್ಪರ್ಧೆ, ಹೋರಾಟ, ಮೊದಲಾದವುಗಳಲ್ಲಿ) ಒಂದು ಅಂಶವಾಗಿಸು; ಒಂದು ವಿಷಯವನ್ನಾಗಿ ಸೇರಿಸು.
  4. throw sword into the scale (ತನ್ನ ಹಕ್ಕನ್ನು, ಧ್ಯೇಯೋದ್ದೇಶ, ಮೊದಲಾದವುಗಳನ್ನು) ಶಸ್ತ್ರಬಲದಿಂದ ಸಮರ್ಥಿಸಿಕೊಳ್ಳಲು ಯತ್ನಿಸು.
  5. tip (or turn) the scale(s)
    1. ಎದುರು -ತಟ್ಟೆಯ ಯಾ ಬಟ್ಟಲಿನ ತೂಕವನ್ನು ಇಂತಿಷ್ಟು ತೂಕದಷ್ಟು ಮೀರಿಸು; ಎದುರು – ತಟ್ಟೆ ಯಾ ಬಟ್ಟಲಿಗಿಂತ ಇಂತಿಷ್ಟು ಹೆಚ್ಚು ತೂಗು.
    2. (ರೂಪಕವಾಗಿ) (ಅಂತಃಪ್ರೇರಣೆ, ಸನ್ನಿವೇಶ, ಮೊದಲಾದವುಗಳ ವಿಷಯದಲ್ಲಿ) ನಿರ್ಣಾಯಕವಾಗಿ ಪರಿಣಮಿಸು: the new reinforcements tipped or turned the scale(s) in our favour ಹೊಸದಾಗಿ ಬಂದ ಸಹಾಯಕ ಬಲ ಸನ್ನಿವೇಶವನ್ನು ನಿರ್ಣಾಯಕವಾಗಿ ನಮ್ಮ ಪರ ತಿರುಗಿಸಿತು.