See also 2queen
1queen ಕ್ವೀನ್‍
ನಾಮವಾಚಕ
  1. (ಬಿರುದಾಗಿ ಸಾಮಾನ್ಯವಾಗಿ Queen) (ಸ್ವತಂತ್ರ ರಾಷ್ಟ್ರವನ್ನಾಳುವ, ಮುಖ್ಯವಾಗಿ ವಂಶಪಾರಂಪರ್ಯವಾಗಿ ಬರುವ) ರಾಣಿ; ಅರಸಿ: Queen Elizabeth ಎಲಿಜಬೆತ್‍ ರಾಣಿ.
  2. ರಾಣಿ; ದೊರೆಯ, ಅರಸನ – ಹೆಂಡತಿ; ರಾಜಪತ್ನಿ.
  3. ಪೂಜ್ಯಳು; ಪೂಜಾರ್ಹಳು; ದೇವಿ: Virgin Queen ಮೇರಿದೇವಿ; ಮೇರಿಕನ್ಯೆ; ಯೇಸು ಶಿಶುವಿನ ತಾಯಿ, ಮೇರಿ.
  4. (ಪುರಾತನರ) ಒಂದು ಸ್ತ್ರೀದೇವತೆ: Venus, Queen of love ಪ್ರೇಮದೇವತೆ, ವೀನಸ್‍.
  5. ಮನೋವಲ್ಲಭೆ:
    1. ಒಬ್ಬನ ನಲ್ಲೆ; ಪ್ರೇಯಸಿ.
    2. ಹೆಂಡತಿ; ಪತ್ನಿ.
    3. ಉಪಪತ್ನಿ.
  6. (ಒಂದು ಉತ್ಸವದ ಅಧ್ಯಕ್ಷಸ್ಥಾನಕ್ಕೆ ಆರಿಸಿದ) ರಾಣಿ; ಸುಂದರಿ; ಚೆಲುವೆ; ಅಧ್ಯಕ್ಷೆ: beauty queen ಸೌಂದರ್ಯರಾಣಿ; ಸೊಬಗಿನ ಚೆಲುವೆ.
  7. ಸ್ತ್ರೀವ್ಯಕ್ತಿಯಾಗಿ; ಮೂರ್ತೀಕರಿಸಿದ, ಯಾವುದೇ ಜಾತಿಯ ಸರ್ವಶ್ರೇಷ್ಠ ವಸ್ತು: the queen of roses ಗುಲಾಬಿಗಳ ರಾಣಿ. the queen of nurses ದಾದಿಯರ ರಾಣಿ.
  8. ಯಾವುದೇ ಕ್ಷೇತ್ರದಲ್ಲಿ ಯಾ ವರ್ಗದಲ್ಲಿ ಉತ್ಕೃಷ್ಟವೆಂದು ಭಾವಿಸುವ ಸ್ತ್ರೀ, ದೇಶ, ವಸ್ತು, ಇತ್ಯಾದಿ: the queen of hearts ಹೃದಯೇಶ್ವರಿ; ಜನಗಳ ಹೃದಯದ ಅಧಿಷ್ಠಾತ್ರಿ. tennis queen ಟೆನ್ನಿಸ್‍ (ಕ್ಷೇತ್ರದ) ರಾಣಿ.
  9. (ಇರುವೆ, ಜೇನುಹುಳು, ಮೊದಲಾದವುಗಳಲ್ಲಿ) ಪೂರ್ಣವಿಕಾಸ ಹೊಂದಿರುವ, ಮರಿ ಹಾಕುವ ಹೆಣ್ಣು; ರಾಣಿ ಜೇನು, ಇರುವೆ, ಮೊದಲಾದವು.
  10. (ಚದುರಂಗ) ರಾಣಿ (ಕಾಯಿ).
  11. (ಇಸ್ಪೀಟು) (ಪ್ರತಿ ರಂಗಿನ) ರಾಣಿ ಎಲೆ.
  12. (ಅಶಿಷ್ಟ)
    1. ಸಲಿಂಗಕಾಮಿ ಗಂಡಸು.
    2. ಮುಖ್ಯವಾಗಿ ಹೆಣ್ಣಿಗ, ಪುಂಸ್ತ್ವವಿಲ್ಲದವ.
  13. (the Queen) (United Kingdomಯಲ್ಲಿ) ರಾಣಿ ಆಳುತ್ತಿರುವಾಗಿನ ರಾಷ್ಟ್ರಗೀತೆ.
ಪದಗುಚ್ಛ
  1. Queen Anne’s bounty.
  2. Queen Anne’s lace = cow-parsley.
  3. queen bee
    1. ರಾಣಿಜೇನು; ಮರಿಹಾಕುವ ಹೆಣ್ಣುಜೇನು.
    2. ಸಂಸ್ಥೆ ಯಾ ಸಾಮಾಜಿಕ ವರ್ಗವೊಂದರ ಮುಖಂಡೆ, ನಾಯಕಿ ಯಾ ಅಧ್ಯಕ್ಷೆ.
  4. queen consort = 1queen\((2)\).
  5. queen dowager ಗತರಾಜನ ಪತ್ನಿ; ಮೃತನಾದ ಅರಸನ ಪತ್ನಿ.
  6. queen mother ರಾಜಮಾತೆ; ಆಳುವ ಅರಸನ ತಾಯಿ ಹಾಗೂ ಮೃತನಾದ ಅರಸನ ಹೆಂಡತಿ.
  7. queen of puddings ಬ್ರೆಡ್ಡು, ಜ್ಯಾಮು, ಮೊಟ್ಟೆ, ಮೊದಲಾದವುಗಳನ್ನು ಹಾಕಿ ತಯಾರಿಸಿದ ಕಡುಬು.
  8. queen of the meadows = meadowsweet.
  9. Queen’s bench (United Kingdomಯಲ್ಲಿ) ಹೈಕೋರ್ಟ್‍ ಅಹ್‍ ಜಸ್ಟಿಸ್‍ನ ಒಂದು ವಿಭಾಗ, ಪೀಠ.
  10. Queen’s bishop, knight, etc. (ಚದುರಂಗ) ಮಣೆಯಲ್ಲಿ ರಾಣಿಯ ಪಕ್ಕದ ಬಿಷಪ್‍, ಕುದುರೆ, ಮೊದಲಾದ ಕಾಯಿ.
  11. Queen’s bounty.
  12. Queen’s colour.
  13. Queen’s $^1$counsel.
  14. Queen’s $^1$evidence.
  15. Queen’s $^1$guide.
  16. Queen’s highway ಹೆದ್ದಾರಿ; ರಾಜಮಾರ್ಗ.
  17. Queen’s messenger.
  18. queen’s pawn (ಚದುರಂಗ) ಆಟದ ಆರಂಭದಲ್ಲಿ ರಾಣಿಯ ಎದುರು ಇರುವ ಕಾಯಿ.
  19. Queen’s proctor.
  20. Queen’s $^1$scout.
  21. Queen’s speech.
  22. the Queen’s $^2$english.
See also 1queen
2queen ಕ್ವೀನ್‍
ಸಕರ್ಮಕ ಕ್ರಿಯಾಪದ
  1. (ಹೆಂಗಸೊಬ್ಬಳನ್ನು) ರಾಣಿಯಾಗಿಸು; ರಾಣಿಯನ್ನಾಗಿ ಮಾಡು.
  2. (ಚದುರಂಗ) ಪ್ಯಾದೆಯನ್ನು ಎದುರುಬದಿಯ ಕೊನೆಯ ಸಾಲಿಗೆ ನಡೆಸಿ ರಾಣಿಯನ್ನಾಗಿ – ಮಾಡು, ಪರಿವರ್ತಿಸು; ರಾಣಿಕಾಯಾಗಿಸು.
ಅಕರ್ಮಕ ಕ್ರಿಯಾಪದ

(ಚದುರಂಗ) (ಪ್ಯಾದೆಯ ವಿಷಯದಲ್ಲಿ) (ಎದುರು ಬದಿಯ ಕೊನೆಯ ಸಾಲು ತಲುಪಿ) ರಾಣಿ ಕಾಯಿಯಾಗು.

ಪದಗುಚ್ಛ

queen it ರಾಣಿಯಂತೆ ನಡೆದುಕೊ, ವರ್ತಿಸು; ರಾಣಿಯ ಪಾತ್ರ ನಿರ್ವಹಿಸು.