proctor ಪ್ರಾಕ್ಟರ್‍
ನಾಮವಾಚಕ

ಪ್ರಾಕ್ಟರು:

  1. (ಬ್ರಿಟಿಷ್‍ ಪ್ರಯೋಗ) ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಶಿಸ್ತಿನಲ್ಲಿಡುವ ಕರ್ತವ್ಯಗಳುಳ್ಳ ಮತ್ತು ಪ್ರತಿವರ್ಷ ನೇಮಕಗೊಳ್ಳುವ ಅಧಿಕಾರಿ, ಸಾಮಾನ್ಯವಾಗಿ ಇಬ್ಬರಲ್ಲಿ ಒಬ್ಬ.
  2. (ಅಮೆರಿಕನ್‍ ಪ್ರಯೋಗ) ಪರೀಕ್ಷೆ ಮೊದಲಾದವುಗಳಲ್ಲಿ ವಿದ್ಯಾರ್ಥಿಗಳ ಉಸ್ತುವಾರಿ ನೋಡುವವನು; ವಿದ್ಯಾರ್ಥಿ ಮೇಲ್ವಿಚಾರಕ.
  3. (ನ್ಯಾಯಶಾಸ್ತ್ರ) (ಈಗ ಮುಖ್ಯವಾಗಿ ಚರ್ಚಿನ) ನ್ಯಾಯಸ್ಥಾನದಲ್ಲಿ ಮೊಕದ್ದಮೆಗಳ ನಿರ್ವಾಹಕ.
  4. ಚರ್ಚ್‍ ಆಹ್‍ ಇಂಗ್ಲಂಡಿನ ಆಲೋಚನಾ ಸಭೆಯಲ್ಲಿ ಪಾದ್ರಿಗಳ ಪ್ರತಿನಿಧಿ.
ಪದಗುಚ್ಛ

King’s (or Queen’s) Proctor (ಬ್ರಿಟಿಷ್‍ ಪ್ರಯೋಗ) ಸರ್ಕಾರಿ ಪ್ರಾಕ್ಟರ್‍; ಉಯಿಲುಗಳನ್ನು ರುಜುವಾತು ಪಡಿಸುವುದು, ವಿವಾಹ ವಿಚ್ಛೇದನ, ಮೊದಲಾದ ವಿಷಯಗಳಲ್ಲಿ ಒಳಸಂಚಿನ ಇಲ್ಲವೆ ನಿಜವನ್ನು ಮುಚ್ಚಿರುವ ದೂರು ಬಂದಿದ್ದರೆ ಅಂತಹ ಮೊಕದ್ದಮೆಯಲ್ಲಿ ಪ್ರವೇಶಮಾಡುವ ಅಧಿಕಾರವುಳ್ಳ ಕೋರ್ಟಿನ ಅಧಿಕಾರಿ.