speech ಸ್ಪೀಚ್‍
ನಾಮವಾಚಕ
  1. ಮಾತು; ಮಾತನಾಡುವ ಶಕ್ತಿ; ವಾಕ್‍ ಶಕ್ತಿ: recover one’s speech (ಕಳೆದುಕೊಂಡಿದ್ದ) ವಾಕ್‍ಶಕ್ತಿಯನ್ನು ಪುನಃ ಪಡೆದುಕೊ.
  2. ಮಾತನಾಡುವುದು; ಮಾತುಕತೆ.
  3. ಹೇಳಿದ್ದು; ಹೇಳಿಕೆ; ಮಾತು; ವಾಕ್ಕು; ಉಕ್ತಿ; ವಚನ: after this speech he remained silent ಈ ಮಾತನ್ನು ಹೇಳಿದ ಬಳಿಕ ಅವನು ಸುಮ್ಮನಿದ್ದುಬಿಟ್ಟ, ಮೌನವಾಗಿದ್ದುಬಿಟ್ಟ.
  4. ಮಾತನಾಡುವ – ರೀತಿ, ವಿಧಾನ: a man of blunt speech ನೇರವಾಗಿ, ಮುಚ್ಚುಮರೆ ಇಲ್ಲದೆ ಮಾತ ನಾಡುವವ್ಯಕ್ತಿ; ಇದ್ದದ್ದನ್ನು ಇದ್ದಂತೆ ಹೇಳುವ ವ್ಯಕ್ತಿ.
  5. (ಸಾರ್ವಜನಿಕ) ಭಾಷಣ; ಉಪನ್ಯಾಸ: after-dinner speech ಭೋಜನೋತ್ತರ ಭಾಷಣ; ಭೋಜನ ಕೂಟದಲ್ಲಿ ಊಟದ ಅನಂತರ ಮಾಡುವ ಭಾಷಣ. impromptu speech ಆಶುಭಾಷಣ; ಪೂರ್ವಸಿದ್ಧತೆಯಿಲ್ಲದೆ, ಸಮಯಸ್ಫೂರ್ತಿಯಿಂದ ಮಾಡುವ ಭಾಷಣ. speech for the defence ಸಮರ್ಥನ ಭಾಷಣ; ಆಪಾದಿತನ ಪರವಾಗಿ ಅವನ ವಕೀಲನು ಮಾಡುವ ಭಾಷಣ.
  6. (ಒಂದು ರಾಷ್ಟ್ರ, ಜನಾಂಗ, ಪಂಗಡ, ಮೊದಲಾದವುಗಳ) ಭಾಷೆ; ನುಡಿ.
  7. (ಸಂಗೀತ) (ಆರ್ಗನ್‍ ವಾದ್ಯದ ನಳಿಕೆ ಮೊದಲಾದವುಗಳಿಂದ ಹೊರಡುವ) ನಾದ; ಉಲಿ; ನುಡಿತ; ಧ್ವನಿ.
ಪದಗುಚ್ಛ
  1. freedom of speech ವಾಕ್‍ ಸ್ವಾತಂತ್ರ; ತನ್ನ ಅಭಿಪ್ರಾಯಗಳನ್ನು ಅಡ್ಡಿ ಆತಂಕಗಳಿಲ್ಲದೆ ವ್ಯಕ್ತಪಡಿಸುವ ಹಕ್ಕು.
  2. have speech with ಒಡನೆ ಮಾತನಾಡು; ಮಾತುಕತೆ ನಡೆಸು.
  3. make a speech ಭಾಷಣವನ್ನು ಮಾಡು, ನೀಡು.
  4. $^1$part of speech.
  5. Queen’s (or King’s) (gracious) speech ರಾಜ ಭಾಷಣ; ಪಾರ್ಲಿಮೆಂಟಿನ ಅಧಿವೇಶನದ ಆರಂಭದಲ್ಲಿ ಆ ಸಭೆಯ ಪರ್ಯಾಲೋಚನೆಗಾಗಿ ಸರ್ಕಾರವು ಸಿದ್ಧಪಡಿಸುವ, ರಾಜ, ರಾಣಿ ಯಾ ಅವರ ಪ್ರತಿನಿಧಿಯ ಸಭೆಯ ಮುಂದೆ ಓದುವ, ವಿದೇಶಾಂಗ ಮತ್ತು ಒಳ ಆಡಳಿತಗಳ ಬಗ್ಗೆ ಸರ್ಕಾರದ ನೀತಿಯೇನೆಂಬಉದನ್ನೂ ಅದನ್ನು ಕಾರ್ಯಗತ ಮಾಡಲು ಸರ್ಕಾರವು ಕೈಗೊಳ್ಳಲಿರುವ ಕ್ರಮಗಳನ್ನೂ ವಿವರಿಸುವ ಭಾಷಣ.