See also 2counsel
1counsel ಕೌನ್ಸಲ್‍
ನಾಮವಾಚಕ
  1. ಆಲೋಚನೆ; ಮಂತ್ರಣ; ಮಂತ್ರಾಲೋಚನೆ; ವಿಚಾರ ವಿನಿಮಯ.
  2. ಸಲಹೆ; ಅಭಿಪ್ರಾಯ; ಬುದ್ಧಿವಾದ ; ಹಿತವಚನ.
  3. ಹಂಚಿಕೆ; ಯೋಜನೆ; ಹವಣಿಕೆ; ಯುಕ್ತಿ; ಉಪಾಯ; ಕಾರ್ಯವಿಧಾನ.
  4. (ಪ್ರಾಚೀನ ಪ್ರಯೋಗ) ವಿವೇಕ; ವಿವೇಚನೆ.
  5. (ಪ್ರಾಚೀನ ಪ್ರಯೋಗ) ಗೂಢ ಅಭಿಪ್ರಾಯ; ರಹಸ್ಯ ಆಲೋಚನೆ.
  6. ವಕೀಲರ ಮಂಡಳಿ; ಒಂದು ವ್ಯವಹಾರದಲ್ಲಿ ನಿಯಮಿತರಾದ ನ್ಯಾಯವಾದಿಗಳ ಮಂಡಲಿ.
  7. (ಬಹುವಚನ ಅದೇ) ವಕೀಲ; ಲಾಯರು; ನ್ಯಾಯವಾದಿ; ಬ್ಯಾರಿಸ್ಟರು.
ಪದಗುಚ್ಛ
  1. counsel of perfection
    1. ದುಸ್ಸಾಧ್ಯ ಸಲಹೆ; ಸಾಧಿಸಲಾಗದ ಆದರ್ಶ.
    2. (ಕ್ರೈಸ್ತಧರ್ಮ) (ಎಲ್ಲರೂ ಅನುಸರಿಸಲು ಸಾಧ್ಯವಾಗದೆಂದು ಎಣಿಸಿದ) ಕ್ರಿಸ್ತನ ಯಾ ಕ್ರಿಸ್ತದೂತರ–ಆಜ್ಞೆ, ಆದೇಶ.
    3. ಪರಿಪೂರ್ಣತೆಯನ್ನು ಸಾಧಿಸಲು ಕೊಡುವ ಸಲಹೆ.
  2. King’s, Queen’s Counsel (ಸಂಕ್ಷಿಪ್ತ K.C., Q.C.) (ಇತರ ಬ್ಯಾರಿಸ್ಟರುಗಳಿಗಿಂತ ಹೆಚ್ಚಿನ ಅಧಿಕಾರವುಳ್ಳ ಇಂಗ್ಲಂಡಿನ) ಸರ್ಕಾರಿ ವಕೀಲ.
  3. take councel ಸಮಾಲೋಚನೆ ನಡಸು; ಸಲಹೆ ತೆಗೆದುಕೊ; ಅಭಿಪ್ರಾಯ ಕೇಳು.
ನುಡಿಗಟ್ಟು
  1. counsel of despair ಹತಾಶಪ್ರಯತ್ನ; ಇತರ ಎಲ್ಲ ಪ್ರಯತ್ನಗಳೂ ಅಯಶಸ್ವಿಯಾದಾಗ ಕೈಗೊಳ್ಳುವ ಕ್ರಮ.
  2. keep one’s (own) or another’s counsel ತನ್ನ ಯಾ ಇತರರ ಇಂಗಿತವನ್ನು ಗೋಪ್ಯವಾಗಿಡು; ಅಭಿಪ್ರಾಯವನ್ನು ಬಿಟ್ಟುಕೊಡದಿರು; ಬಾಯಿ ಬಿಡದಿರು; ಮೌನವಾಗಿರು.