See also 2have  3have
1have ಹ್ಯಾ (ಹ)ವ್‍
ಕ್ರಿಯಾಪದ

(ವರ್ತಮಾನ ಕಾಲ I, we, you, they have ಪ್ರಾಚೀನ ಪ್ರಯೋಗ thou hast; he, she, it has;ಪ್ರಾಚೀನ ಪ್ರಯೋಗhe, she, it hath, ಭೂತರೂಪ ಮತ್ತು ಭೂತಕೃದಂತ had; (ಪ್ರಾಚೀನ ಪ್ರಯೋಗ) ಭೂತರೂಪ (thou) hadst; ಸಂಕ್ಷಿಪ್ತ ರೂಪಗಳು: I’ve, we’ve ಇತ್ಯಾದಿ; I’d, we’d ಇತ್ಯಾದಿ; ’s = has ಆಡುಮಾತುನಲ್ಲಿ ನಿಷೇಧ ರೂಪಗಳು: haven’t, hasn’t, hadn’t ಇತ್ಯಾದಿ).

ಸಕರ್ಮಕ ಕ್ರಿಯಾಪದ
  1. ಪಡೆದಿರು; ಹೊಂದಿರು; ವಶವಲ್ಲಿ ಯಾ ಸ್ವಾಧೀನದಲ್ಲಿ ಇಟ್ಟುಕೊಂಡಿರು: all the money that I had ನನ್ನ ಬಳಿ ಇದ್ದ ಎಲ್ಲ ಹಣವೂ.
  2. ತಿಳಿದಿರು; ಅರಿತಿರು; ತಿಳಿವಳಿಕೆ ಹೊಂದಿರು; ಅರಿವು ಉಳ್ಳವನಾಗಿರು; ಬಲ್ಲವನಾಗಿರು: he has no Latin ಅವನು ಲ್ಯಾಟಿನ್‍ ಭಾಷೆಯ ತಿಳಿವಳಿಕೆ ಹೊಂದಿಲ್ಲ; ಅವನಿಗೆ ಲ್ಯಾಟಿನ್‍ ಭಾಷೆ ತಿಳಿಯದು.
  3. (ವಿವಿಧ ಸಂಬಂಧಗಳಲ್ಲಿ ವ್ಯಕ್ತಿಗಳು ಮೊದಲಾದವರ) ಸ್ವಾಮ್ಯವನ್ನು, ಒಡೆತನವನ್ನು, ಒಡೆತನದ ಸಂಬಂಧವನ್ನು – ಅನುಭವಿಸು ಯಾ ಹೊಂದಿರು: I have two sons ನಾನು ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದೇನೆ; ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. I have no equals ನನಗೆ ಸಮನಾದವರು ಯಾರೂ ಇಲ್ಲ.
  4. (ಕೂಸನ್ನು) ಪಡೆ; ಹೆರು: she had a baby yesterday ಆಕೆ ನಿನ್ನೆ ಒಂದು ಕೂಸನ್ನು ಪಡೆದಳು, ಹೆತ್ತಳು
  5. ಹಿಡಿ; ಮೇಲುಗೈ ಹೊಂದು; ಪಡೆ; ಮೇಲುಗೈಯಾಗಿರು:I had him there ಆ ವಿಷಯದಲ್ಲಿ ನಾನು ಅವನನ್ನು ಹಿಡಿದು ಹಾಕಿದೆ; ಅವನಿಗಿಂತ ಮೇಲುಗೈಯಾದೆ.
  6. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಗಸ್ತು ಕೊಡು; ಕೈಕೊಡು; ಟೋಪಿ ಹಾಕು; ಮೋಸ ಮಾಡು; ವಂಚಿಸು: you were had by me ನಾನು ನಿನಗೆ ಗಸ್ತು ಕೊಟ್ಟೆ.
  7. (ಅಶಿಷ್ಟ) ಒಬ್ಬನೊ(ಳೊ)ಡನೆ ಸಂಭೋಗ ಪಡೆ, ನಡೆಸು: I had her ನಾನು ಅವಳೊಡನೆ ಸಂಭೋಗ ಮಾಡಿದೆ.
  8. ಅನುಬಂಧಿ, ಭಾಗ ಯಾ ಅಂಶ, ಗುಣ ಮೊದಲಾದವನ್ನಾಗಿ – ಪಡೆದಿರು, ಹೊಂದಿರು: June has 30 days ಜೂನ್‍ ತಿಂಗಳಲ್ಲಿ 30 ದಿನಗಳಿವೆ; ಜೂನ್‍ ತಿಂಗಳು 30 ದಿನಗಳನ್ನು ಹೊಂದಿದೆ. she has black eyes ಆಕೆಗೆ ಕಪ್ಪು ಕಣ್ಣುಗಳಿವೆ. it has its own advantages ಅದಕ್ಕೆ ಅದರದೇ ಆದ ಅನುಕೂಲಗಳಿವೆ.
  9. ಅನುಭವಿಸು; ಪಡೆ:I had that pleasure ನಾನು ಆ ಸಂತೋಷವನ್ನು ಪಡೆದೆ. have a good time! ಖುಶಿಯಾಗಿರು! ಸಂತೋಷವನ್ನನುಭವಿಸು!
  10. ನೋವು, ರೋಗ, ದುಃಖ, ಮೊದಲಾದವನ್ನು ಅನುಭವಿಸು: I had a headache ನನಗೆ ತಲೆ ನೋವಾಗಿತ್ತುI had an accident ನಾನು ಒಂದು ಅಪಘಾತವನ್ನು ಅನುಭವಿಸಿದೆ.
  11. ಅಂತಾಗು; ಹಾಗಾಗು; (ಹೆಸರಿಸಿದ) ಸ್ಥಿತಿಗೆ ಗುರಿಯಾಗು; (ಹೇಳಿದ) ಸ್ಥಿತಿ – ಒದಗು; ಸಂಭವಿಸು: I had my car stolen ನನ್ನ ಕಾರು ಕಳವಾಗಿ ಹೋಯಿತುನಾನು ನನ್ನ ಕಾರನ್ನು ಕಳೆದುಕೊಂಡೆI had my leg broken ನನ್ನ ಕಾಲು ಮುರಿದುಕೊಂಡೆ, ಮುರಿದು ಹೋಯಿತುI have it coming to me ನನಗೆ ಆ ಸ್ಥಿತಿ ಒದಗಲಿದೆ.
  12. ಮಾಡಗೊಡು; ಮಾಡಲು – ಎಡೆಗೊಡು, ಅವಕಾಶ ಕೊಡು, ಆಸ್ಪದ ಕೊಡು, ಒಪ್ಪು, ಸಮ್ಮತಿಸು: I will not have you say such things ನಾನು ನಿನಗೆ ಅಂಥ ಮಾತುಗಳನ್ನು ಆಡಗೊಡುವುದಿಲ್ಲI won’t have it ನಾನು ಅದಕ್ಕೆ ಒಪ್ಪುವುದಿಲ್ಲ.
  13. ಜವಾಬ್ದಾರಿ, ಕರ್ತವ್ಯ, ಹೊಣೆ, ಬಾರ – ಹೊತ್ತಿರು: I had my work to do ನನಗೆ ಮಾಡಬೇಕಾದ ಕೆಲಸದ ಹೊಣೆ ಇತ್ತು.
  14. ಉಳ್ಳವನಾಗಿರು; ಹೊಂದಿರು: I have nothing to wear ನಾನು ಉಡಲು ತೊಡಲು ಏನನ್ನೂ ಹೊಂದಿಲ್ಲ; ನನಗೆ ಉಡಲು ತೊಡಲು ಏನೂ ಇಲ್ಲ.
  15. (ಭಾವ ಮೊದಲಾದವಕ್ಕೆ) ಮನಸ್ಸಿನಲ್ಲಿ ಎಡೆಗೊಡು, ಆಸ್ಪದಕೊಡು, ಆಶ್ರಯಕೊಡು: I have no doubt in my mind ನನ್ನ ಮನಸ್ಸಿನಲ್ಲಿ ಸಂಶಯಕ್ಕೆ ಎಡೆಯೇ ಇಲ್ಲhas a grudge against me ನನ್ನ ಮೇಲೆ ಅಸಮಾಧಾನ ಹೊಂದಿದ್ದಾನೆ.
  16. (ಗುಣ ಮೊದಲಾದವುಗಳ) ಪ್ರಭಾವಕ್ಕೆ ಒಳಪಟ್ಟಿರುವುದನ್ನು ಕ್ರಿಯೆಯಲ್ಲಿ ತೋರಿಸು; (ಗುಣ ಮೊದಲಾದವುಗಳ) ಪ್ರಭಾವವನ್ನು ನಡವಳಿಕೆಯಲ್ಲಿ ತೋರಿಸು: he has the impudence to disobey ಅವನಿಗೆ ಅವಿಧೇಯನಾಗಿ ವರ್ತಿಸುವಷ್ಟು ಧೂರ್ತತೆ, ಧಾರ್ಷ್ಟ್ಯ ಇದೆ have mercy on me ನನ್ನ ಮೇಲೆ ದಯೆ ಇಡುhave the goodness or kindness to do ಯಾವುದನ್ನೇ ಮಾಡುವ ಒಳ್ಳೆಯತನ ಯಾ ಕರುಣೆ ತೋರಿಸು.
  17. (ಕೆಲಸದಲ್ಲಿ) ತೊಡಗಿರು; ನಿರತನಾಗಿರು; ಉದ್ಯುಕ್ತನಾಗಿರು: I had some conversation with him ನಾನು ಅವನೊಡನೆ ಸಂಭಾಷಣೆಯಲ್ಲಿ ತೊಡಗಿದ್ದೆ, ನಿರತನಾಗಿದ್ದೆ. she had an affair with him ಅವಳು ಅವನೊಡನೆ ಪ್ರಣಯ ನಡೆಸಿದ್ದಳು. have a look at this ಇದನ್ನು ನೋಡುhave a game ಒಂದಾಟ ಆಡುhave a try ಒಂದು ಕೈ ನೋಡು; ಒಂದು ಸಲ ಪ್ರಯತ್ನಿಸು; ಒಂದು ಪ್ರಯತ್ನ ಮಾಡುhave a wash.ಸ್ನಾನ ಮಾಡು.
  18. ಪಡೆ; ಹೊಂದು: we had news ನಾವು ಸುದ್ದಿಯನ್ನು ಪಡೆದೆವು; ನಮಗೆ ಸುದ್ದಿ ಬಂತು.
  19. ತೆಗೆದುಕೊ; ಸ್ವೀಕರಿಸು; ತಿನ್ನು, ಕುಡಿ, ಮೊದಲಾದವು : a cup of tea ಒಂದು ಬಟ್ಟಲು ಚಾ ತೆಗೆದುಕೊಳ್ಳಿ.
  20. (ಬೇರೊಬ್ಬರಿಂದ) ಮಾಡಿಸು; (ಬೇರೊಬ್ಬರನ್ನು) ಮಾಡಲು ಹೇಳು, ಸೂಚಿಸು: I had her make a copy ಆಕೆಯಿಂದ ಒಂದು ಪ್ರತಿಯನ್ನು ಮಾಡಿಸಿದೆhave him dismissed ಅವನನ್ನು ವಜಾ ಮಾಡಿಸುhad me guessing ನನ್ನನ್ನು ಊಹಿಸುವಂತೆ ಮಾಡಿದ have one’s shoes mended ಷೂಗಳನ್ನು ರಿಪೇರಿ ಮಾಡಿಸು.
  21. (ಬೇರೊಬ್ಬರನ್ನು) ಇರಲು, ಮಾಡಲು, ಮೊದಲಾದವುಗಳಿಗಾಗಿ ಹೇಳು, ಕರೆ; I had them stay to dinner ಅವರನ್ನು ಊಟಕ್ಕೆ ಇರುವಂತೆ ಹೇಳಿದೆ, ಊಟಕ್ಕೆ ಕರೆದೆ.
  22. (ಎಂದು) ವಾದಿಸು; ಸಮರ್ಥಿಸು; ಒತ್ತಾಯಪೂರ್ವಕವಾಗಿ ಹೇಳು: he will have it that etc. ಅವನು..ಎಂದು ವಾದಿಸುತ್ತಾನೆ.
  23. ಹೇಳು; ಅಭಿಪ್ರಾಯಪಡು; ನಿರೂಪಿಸು; ಪ್ರತಿಪಾದಿಸು: as Plato has it ಪ್ಲೇಟೋ ಹೇಳುವಂತೆ, ಪ್ರತಿಪಾದಿಸುವಂತೆ.
See also 1have  3have
2have ಹ್ಯಾ (ಹ)ವ್‍
ಕ್ರಿಯಾಪದ
  1. ಭೂತಕೃದಂತಗಳೊಡನೆ ಭೂತಕಾಲವನ್ನು ಸೂಚಿಸಲು ಪ್ರಯೋಗ: I have, had, shall have seen ನಾನು ನೋಡಿದ್ದೇನೆ, ನೋಡಿದ್ದೆ, ನೋಡಿರುತ್ತೇನೆ; ನಾನು ನೋಡಿ – ಮುಗಿಸಿದ್ದೇನೆ, ಮುಗಿಸಿದ್ದೆ ಮುಗಿಸಿರುತ್ತೇನೆ had I known ನನಗೆ ತಿಳಿದಿದ್ದರೆ, ಗೊತ್ತಿದ್ದಿದ್ದರೆ.
  2. (ಭೂತಕಾಲದಲ್ಲಿ) ಇಚ್ಛೆ, ಸಂಕಲ್ಪಗಳನ್ನು ಸೂಚಿಸುವ ಪದವಾಗಿ ಪ್ರಯೋಗ had better or best or rather go(ಹೋಗದಿರುವುದಕ್ಕಿಂತ) ಹೋಗುವುದೇ ಲೇಸು, ವಾಸಿ, ಒಳ್ಳೆಯದು, ಮೇಲು, ಉತ್ತಮ; ಅವನು ಹೋಗಬೇಕು I had rather or sooner he went with you ಅವನು ನಿನ್ನ ಜತೆಯಲ್ಲಿ ಹೋಗುವುದು ನನಗೆ ಇಷ್ಟಒಳ್ಳೆಯದೆಂದು ನನಗೆ ಅನಿಸುತ್ತದೆ.
  3. ಗೆಲುವನ್ನು, ಜಯವನ್ನು ಯಾ ಸೋಲನ್ನು – ಹೊಂದು:the ayes have it(ವಿಷಯಕ್ಕೆ) ಪರವಾದವರು ಗೆಲುವನ್ನು ಪಡೆದಿದ್ದಾರೆ, ಜಯಿಸಿದ್ದಾರೆ.
ನುಡಿಗಟ್ಟು
  1. as luck would have it.
  2. have a $^1$care.
  3. have a good $^1$mind.
  4. have an $^1$eye for.
  5. have an $^1$eye to.
  6. have at (ಒಬ್ಬನ ಮೇಲೆ) ಆಕ್ರಮಣ ಮಾಡು; ಎರಗು; ಮೇಲೆ ಬೀಳು.
  7. have a $^1$time of it.
  8. have $^2$done.
  9. have $^2$done.
  10. have $^1$eyes for.
  11. have got to = ನುಡಿಗಟ್ಟು \((28)\).
  12. have had it (ಅಶಿಷ್ಟ)
    1. ಸಾಕೆನಿಸಿರು; ಇನ್ನೂ ಹೆಚ್ಚು ಸಹಿಸಲು ಇಚ್ಛಿಸದಿರು ಯಾ ಶಕ್ತನಲ್ಲದಿರು.
    2. ಸೋಲನುಭವಿಸು; ಅಯಶಸ್ವಿಯಾಗು; ವಿಫಲವಾಗು.
  13. have it:
    1. ಅಅಭಿಪ್ರಾಯ ತಳೆದಿರು ಯಾ ಸೂಚಿಸು.
    2. ಬಹುಮತ ಮೊದಲಾದವುಗಳ ಮೂಲಕ ಗೆಲ್ಲು: the ayes have it ವಿಷಯಕ್ಕೆ ಪರವಾದವರು ಬಹುಮತದಿಂದ ಜಯಿಸಿದ್ದಾರೆ.
    3. (ಆಡುಮಾತು) (ಇನ್ನೊಬ್ಬನಿಗಿಂತ) ಮೇಲುಗೈ ಪಡೆ, ಹೊಂದು.
    4. (ಯಾವುದೇ ಅಪರಾಧಕ್ಕಾಗಿ) ಶಿಕ್ಷೆ – ಮಾಡು ಯಾ ಹೊಂದು: let him have it ಅವನಿಗೆ ತಕ್ಕ ಶಿಕ್ಷೆ, ಶಾಸ್ತಿ – ಆಗಲಿ; ಅವನಿಗೆ ತಕ್ಕ ಶಾಸ್ತಿ ಮಾಡು.
    5. (ಆಡುಮಾತು) ಸಿಕ್ಕಿತು ಉತ್ತರ ನನಗೆ, ಇತ್ಯಾದಿ.
  14. have it (all) one’s own way (ಎಲ್ಲಾ) ತಾನು ಹೇಳಿದಂತೆಯೇ ಆಗಲಿ: have it (all) your own way (ಎಲ್ಲಾ) ನೀನು ಹೇಳಿದಂತೆಯೇ, ನಿನ್ನ ಇಷ್ಟದಂತೆಯೇ ಆಗಲಿ.
  15. have it away (or off) (ಅಶಿಷ್ಟ) ಮೈಥುನ ಮಾಡು; ಸಂಭೋಗಿಸು.
  16. have it $^1$both ways.
  17. have it $^2$in for.
  18. have it in mind.
  19. have it $^1$in one.
  20. have it out (with person) (ವ್ಯಕ್ತಿಯೊಡನೆ) ಚರ್ಚೆನಡೆಸಿ ಯಾ ಹೊಡೆದಾಡಿ ವಿವಾಹವನ್ನು, ವ್ಯಾಜ್ಯವನ್ನು – ತೀರ್ಮಾನಿಸಿಕೊ, ಇತ್ಯಾರ್ಥ ಮಾಡಿಕೊ, ಬಗೆಹರಿಸಿಕೊ.
  21. have it so good (ಆಡುಮಾತು) ಅಷ್ಟೊಂದು, ಅಷ್ಟೆಲ್ಲ – ಅನುಕೂಲತೆಗಳನ್ನು ಪಡೆದಿರು.
  22. have $^1$nothing on.
  23. have nothing to do with ಸಂಬಂಧ ಯಾ ವ್ಯವಹಾರ – ಇಲ್ಲದಿರು, ಇಟ್ಟುಕೊಳ್ಳದಿರು: after the disagreement he had nothing to do with his father ಜಗಳವಾದ ಮೇಲೆ ಅವನಿಗೂ ಅವರ ತಂದೆಗೂ ಯಾವ ಸಂಬಂಧವೂ ಇರಲಿಲ್ಲ.
  24. have on:
    1. ಉಡಿಗೆ ತೊಡಿಗೆಗಳನ್ನು ಹಾಕಿಕೊ.
    2. (ಕೆಲಸ, ಕಾರ್ಯ) ಇರು; ಹೊಂದಿರು; ನಿಶ್ಚಿತವಾಗಿರು: I have nothing on tomorrow evening ನಾಳೆ ಸಂಜೆ ನನಗೆ ಕೆಲಸ ಕಾರ್ಯಗಳೇನೂ ಇಲ್ಲ, ನಾನು ಬಿಡುವಾಗಿದ್ದೇನೆ.
    3. (ಆಡುಮಾತು)(ಒಬ್ಬನನ್ನು) ವಂಚಿಸು ಯಾ ಗೋಳು ಹುಯ್ಯು.
  25. have out:
    1. (ಹಲ್ಲು) ಕೀಳಿಸಿಕೊ.
    2. ಪೂರ್ತಿಕಾಲ (ನಿದ್ದೆ ಮೊದಲಾದವನ್ನು) ಮಾಡು, ಮುಗಿಸು: let her have out her sleep ಅವಳು ಪೂರ್ತಿ ನಿದ್ದೆ ಮಾಡಲಿ, ರೂಢಿಯಾಗಿ ಯಾ ಸಹಜವಾಗಿ ಎಚ್ಚರಗೊಳ್ಳುವವರೆಗೂ ನಿದ್ರಿಸಲಿ.
  26. have sex (ಆಡುಮಾತು) ಸಂಭೋಗಿಸು; ಕೇಯು; ಮೈಥುನ ಮಾಡು.
  27. have something (or nothing) on a person ಒಬ್ಬ ವ್ಯಕ್ತಿಯ ಬಗ್ಗೆ ಅಪಖ್ಯಾತಿ ತರುವಂಥ ವಿಷಯ ತಿಳಿದಿರು (ಯಾ ಏನೂ ತಿಳಿದಿಲ್ಲದಿರು).
  28. have to (ಕಡ್ಡಾಯವಾಗಿ ಯಾ ಕರ್ತವ್ಯವಾಗಿ) ಮಾಡಲೇಬೇಕಾಗಿರು.
  29. have to $^1$do with.
  30. have up (ಬ್ರಿಟಿಷ್‍ ಪ್ರಯೋಗ)
    1. (ವ್ಯಕ್ತಿಯನ್ನು) ಕೋರ್ಟಿನಲ್ಲಿ ಹಾಜರುಪಡಿಸು; ನ್ಯಾಯಾಲಯದಲ್ಲಿ, ನ್ಯಾಯಾಧೀಶನ ಮುಂದೆ ಹಾಜರು ಮಾಡು: he was had up for exceeding the speed limit ವೇಗದ ಮಿತಿ ಮೀರಿದ್ದಕ್ಕಾಗಿ ಅವನನ್ನು ಕೋರ್ಟಿನಲ್ಲಿ ಹಾಜರುಪಡಿಸಲಾಯಿತು, ಅವನ ಮೇಲೆ ಖಟ್ಲೆ ಹೂಡಿದ್ದಾಯಿತು, ಅವನ ಮೇಲೆ ಕ್ರಮ ಜರುಗಿಸಲಾಯಿತು.
  31. have what it $^1$takes.
  32. I have it (ಆಡುಮಾತು) ಉತ್ತರ, ಅರಿಹಾರ ಮೊದಲಾದವು ನನಗೆ ಸಿಕ್ಕಿತು.
  33. not having $^2$any.
See also 1have  2have
3have ಹ್ಯಾವ್‍
ನಾಮವಾಚಕ
  1. ಉಳ್ಳವನು; (ಮುಖ್ಯವಾಗಿ) ಹಣವಂತ; ಸ್ಥಿತಿವಂತ; ಆಸ್ತಿವಂತ.
  2. (ಅಶಿಷ್ಟ) ಮೋಸ; ವಂಚನೆ; ದಗಾ.
ಪದಗುಚ್ಛ

haves and have-nots ಉಳ್ಳವರೂ ಇಲ್ಲದವರೂ; ಧನಿಕರೂ ದರಿದ್ರರೂ; ಶ್ರೀಮಂತರೂ ಬಡವರೂ; ಬಡವರೂ ಭಾಗ್ಯವಂತರೂ.