See also 1have  3have
2have ಹ್ಯಾ (ಹ)ವ್‍
ಕ್ರಿಯಾಪದ
  1. ಭೂತಕೃದಂತಗಳೊಡನೆ ಭೂತಕಾಲವನ್ನು ಸೂಚಿಸಲು ಪ್ರಯೋಗ: I have, had, shall have seen ನಾನು ನೋಡಿದ್ದೇನೆ, ನೋಡಿದ್ದೆ, ನೋಡಿರುತ್ತೇನೆ; ನಾನು ನೋಡಿ – ಮುಗಿಸಿದ್ದೇನೆ, ಮುಗಿಸಿದ್ದೆ ಮುಗಿಸಿರುತ್ತೇನೆ had I known ನನಗೆ ತಿಳಿದಿದ್ದರೆ, ಗೊತ್ತಿದ್ದಿದ್ದರೆ.
  2. (ಭೂತಕಾಲದಲ್ಲಿ) ಇಚ್ಛೆ, ಸಂಕಲ್ಪಗಳನ್ನು ಸೂಚಿಸುವ ಪದವಾಗಿ ಪ್ರಯೋಗ had better or best or rather go(ಹೋಗದಿರುವುದಕ್ಕಿಂತ) ಹೋಗುವುದೇ ಲೇಸು, ವಾಸಿ, ಒಳ್ಳೆಯದು, ಮೇಲು, ಉತ್ತಮ; ಅವನು ಹೋಗಬೇಕು I had rather or sooner he went with you ಅವನು ನಿನ್ನ ಜತೆಯಲ್ಲಿ ಹೋಗುವುದು ನನಗೆ ಇಷ್ಟಒಳ್ಳೆಯದೆಂದು ನನಗೆ ಅನಿಸುತ್ತದೆ.
  3. ಗೆಲುವನ್ನು, ಜಯವನ್ನು ಯಾ ಸೋಲನ್ನು – ಹೊಂದು:the ayes have it(ವಿಷಯಕ್ಕೆ) ಪರವಾದವರು ಗೆಲುವನ್ನು ಪಡೆದಿದ್ದಾರೆ, ಜಯಿಸಿದ್ದಾರೆ.
ನುಡಿಗಟ್ಟು
  1. as luck would have it.
  2. have a $^1$care.
  3. have a good $^1$mind.
  4. have an $^1$eye for.
  5. have an $^1$eye to.
  6. have at (ಒಬ್ಬನ ಮೇಲೆ) ಆಕ್ರಮಣ ಮಾಡು; ಎರಗು; ಮೇಲೆ ಬೀಳು.
  7. have a $^1$time of it.
  8. have $^2$done.
  9. have $^2$done.
  10. have $^1$eyes for.
  11. have got to = ನುಡಿಗಟ್ಟು \((28)\).
  12. have had it (ಅಶಿಷ್ಟ)
    1. ಸಾಕೆನಿಸಿರು; ಇನ್ನೂ ಹೆಚ್ಚು ಸಹಿಸಲು ಇಚ್ಛಿಸದಿರು ಯಾ ಶಕ್ತನಲ್ಲದಿರು.
    2. ಸೋಲನುಭವಿಸು; ಅಯಶಸ್ವಿಯಾಗು; ವಿಫಲವಾಗು.
  13. have it:
    1. ಅಅಭಿಪ್ರಾಯ ತಳೆದಿರು ಯಾ ಸೂಚಿಸು.
    2. ಬಹುಮತ ಮೊದಲಾದವುಗಳ ಮೂಲಕ ಗೆಲ್ಲು: the ayes have it ವಿಷಯಕ್ಕೆ ಪರವಾದವರು ಬಹುಮತದಿಂದ ಜಯಿಸಿದ್ದಾರೆ.
    3. (ಆಡುಮಾತು) (ಇನ್ನೊಬ್ಬನಿಗಿಂತ) ಮೇಲುಗೈ ಪಡೆ, ಹೊಂದು.
    4. (ಯಾವುದೇ ಅಪರಾಧಕ್ಕಾಗಿ) ಶಿಕ್ಷೆ – ಮಾಡು ಯಾ ಹೊಂದು: let him have it ಅವನಿಗೆ ತಕ್ಕ ಶಿಕ್ಷೆ, ಶಾಸ್ತಿ – ಆಗಲಿ; ಅವನಿಗೆ ತಕ್ಕ ಶಾಸ್ತಿ ಮಾಡು.
    5. (ಆಡುಮಾತು) ಸಿಕ್ಕಿತು ಉತ್ತರ ನನಗೆ, ಇತ್ಯಾದಿ.
  14. have it (all) one’s own way (ಎಲ್ಲಾ) ತಾನು ಹೇಳಿದಂತೆಯೇ ಆಗಲಿ: have it (all) your own way (ಎಲ್ಲಾ) ನೀನು ಹೇಳಿದಂತೆಯೇ, ನಿನ್ನ ಇಷ್ಟದಂತೆಯೇ ಆಗಲಿ.
  15. have it away (or off) (ಅಶಿಷ್ಟ) ಮೈಥುನ ಮಾಡು; ಸಂಭೋಗಿಸು.
  16. have it $^1$both ways.
  17. have it $^2$in for.
  18. have it in mind.
  19. have it $^1$in one.
  20. have it out (with person) (ವ್ಯಕ್ತಿಯೊಡನೆ) ಚರ್ಚೆನಡೆಸಿ ಯಾ ಹೊಡೆದಾಡಿ ವಿವಾಹವನ್ನು, ವ್ಯಾಜ್ಯವನ್ನು – ತೀರ್ಮಾನಿಸಿಕೊ, ಇತ್ಯಾರ್ಥ ಮಾಡಿಕೊ, ಬಗೆಹರಿಸಿಕೊ.
  21. have it so good (ಆಡುಮಾತು) ಅಷ್ಟೊಂದು, ಅಷ್ಟೆಲ್ಲ – ಅನುಕೂಲತೆಗಳನ್ನು ಪಡೆದಿರು.
  22. have $^1$nothing on.
  23. have nothing to do with ಸಂಬಂಧ ಯಾ ವ್ಯವಹಾರ – ಇಲ್ಲದಿರು, ಇಟ್ಟುಕೊಳ್ಳದಿರು: after the disagreement he had nothing to do with his father ಜಗಳವಾದ ಮೇಲೆ ಅವನಿಗೂ ಅವರ ತಂದೆಗೂ ಯಾವ ಸಂಬಂಧವೂ ಇರಲಿಲ್ಲ.
  24. have on:
    1. ಉಡಿಗೆ ತೊಡಿಗೆಗಳನ್ನು ಹಾಕಿಕೊ.
    2. (ಕೆಲಸ, ಕಾರ್ಯ) ಇರು; ಹೊಂದಿರು; ನಿಶ್ಚಿತವಾಗಿರು: I have nothing on tomorrow evening ನಾಳೆ ಸಂಜೆ ನನಗೆ ಕೆಲಸ ಕಾರ್ಯಗಳೇನೂ ಇಲ್ಲ, ನಾನು ಬಿಡುವಾಗಿದ್ದೇನೆ.
    3. (ಆಡುಮಾತು)(ಒಬ್ಬನನ್ನು) ವಂಚಿಸು ಯಾ ಗೋಳು ಹುಯ್ಯು.
  25. have out:
    1. (ಹಲ್ಲು) ಕೀಳಿಸಿಕೊ.
    2. ಪೂರ್ತಿಕಾಲ (ನಿದ್ದೆ ಮೊದಲಾದವನ್ನು) ಮಾಡು, ಮುಗಿಸು: let her have out her sleep ಅವಳು ಪೂರ್ತಿ ನಿದ್ದೆ ಮಾಡಲಿ, ರೂಢಿಯಾಗಿ ಯಾ ಸಹಜವಾಗಿ ಎಚ್ಚರಗೊಳ್ಳುವವರೆಗೂ ನಿದ್ರಿಸಲಿ.
  26. have sex (ಆಡುಮಾತು) ಸಂಭೋಗಿಸು; ಕೇಯು; ಮೈಥುನ ಮಾಡು.
  27. have something (or nothing) on a person ಒಬ್ಬ ವ್ಯಕ್ತಿಯ ಬಗ್ಗೆ ಅಪಖ್ಯಾತಿ ತರುವಂಥ ವಿಷಯ ತಿಳಿದಿರು (ಯಾ ಏನೂ ತಿಳಿದಿಲ್ಲದಿರು).
  28. have to (ಕಡ್ಡಾಯವಾಗಿ ಯಾ ಕರ್ತವ್ಯವಾಗಿ) ಮಾಡಲೇಬೇಕಾಗಿರು.
  29. have to $^1$do with.
  30. have up (ಬ್ರಿಟಿಷ್‍ ಪ್ರಯೋಗ)
    1. (ವ್ಯಕ್ತಿಯನ್ನು) ಕೋರ್ಟಿನಲ್ಲಿ ಹಾಜರುಪಡಿಸು; ನ್ಯಾಯಾಲಯದಲ್ಲಿ, ನ್ಯಾಯಾಧೀಶನ ಮುಂದೆ ಹಾಜರು ಮಾಡು: he was had up for exceeding the speed limit ವೇಗದ ಮಿತಿ ಮೀರಿದ್ದಕ್ಕಾಗಿ ಅವನನ್ನು ಕೋರ್ಟಿನಲ್ಲಿ ಹಾಜರುಪಡಿಸಲಾಯಿತು, ಅವನ ಮೇಲೆ ಖಟ್ಲೆ ಹೂಡಿದ್ದಾಯಿತು, ಅವನ ಮೇಲೆ ಕ್ರಮ ಜರುಗಿಸಲಾಯಿತು.
  31. have what it $^1$takes.
  32. I have it (ಆಡುಮಾತು) ಉತ್ತರ, ಅರಿಹಾರ ಮೊದಲಾದವು ನನಗೆ ಸಿಕ್ಕಿತು.
  33. not having $^2$any.