See also 2mind
1mind ಮೈಂಡ್‍
ನಾಮವಾಚಕ
  1. ಮನಸ್ಸು; ಜ್ಞಾನ, ಆಲೋಚನೆ, ಇಚ್ಛೆ, ಸಂಕಲ್ಪ ಮತ್ತು ಭಾವದ ಆಶ್ರಯಸ್ಥಾನ; ದೇಹಕ್ಕೆ ವ್ಯತಿಕರಿಕ್ತವಾದ ಚೇತನ.
  2. ನೆನಪು; ಸ್ಮೃತಿ; ಜ್ಞಾಪಕ; ಸ್ಮರಣೆ: call it to mind ಅದನ್ನು ನೆನಪಿಗೆ ತಂದುಕೊ.
  3. ಮನಸ್ಸಿನಲ್ಲಿರುವ (ನಿಜವಾದ) ಅಭಿಪ್ರಾಯ: speak one’s mind (ತನ್ನ) ಮನಸ್ಸಿನ ಅಭಿಪ್ರಾಯ ಹೇಳಿಬಿಡು; ಮನಸ್ಸಿನಲ್ಲಿರುವುದನ್ನು ಒಡೆದು ಯಾ ಬಿಚ್ಚಿಹೇಳು.
  4. (ಮನಸ್ಸಿನ) ಇಚ್ಛೆ; ಸಂಕಲ್ಪ.
  5. ಮನೋಭಾವ; ಮನೋವೃತ್ತಿ; ಆಲೋಚಿಸುವ ಯಾ ಭಾವಿಸುವ ಮಾರ್ಗ, ರೀತಿ: opposed to the Indian mind ಭಾರತೀಯ ಮನೋವೃತ್ತಿಗೆ ವಿರುದ್ಧವಾದ.
  6. ಸಹಜ ಮಾನಸಿಕ – ಪ್ರವೃತ್ತಿ, ಸ್ಥಿತಿ, ವೃತ್ತಿ: lose one’s mind ಮಾನಸಿಕ ಸ್ವಾಸ್ಥ್ಯ ಕಳೆದುಕೊ. in one’s right mind ಸರಿಯಾದ ಮನಃಸ್ಥಿತಿಯಲ್ಲಿ.
  7. ಬುದ್ಧಿ; ಬುದ್ಧಿಶಕ್ತಿ; ಬೌದ್ಧಿಕ ಸಾಮರ್ಥ್ಯ: men of minds ಬೌದ್ಧಿಕ ಸಾಮರ್ಥ್ಯಗಳುಳ್ಳವರು.
  8. ಬುದ್ಧಿ; ವಿಚಾರ; ಆಲೋಚನೆ; ವಿವೇಕ: to lose one’s mind ವಿವೇಕ ತಪ್ಪುವುದು; ವಿಚಾರಹೀನರಾಗುವುದು.
  9. ಗಮನ; ಚಿತ್ತೈಕಾಗ್ರತೆ: my mind keeps wandering ನನ್ನ ಮನಸ್ಸು ಹರಿದಾಡುತ್ತಿರುತ್ತದೆ. don’t pay him any mind ಅವನತ್ತ ಗಮನ ಹರಿಸಬೇಡ.
  10. ಮೇಧಾವಿ; ಧೀಮಂತ; ಮಾನಸಿಕ ಗುಣಗಳ ಸಾಕಾರವೆಂದು ಭಾವಿಸಿರುವ ವ್ಯಕ್ತಿ: the world’s best minds ಜಗತ್ತಿನ ಅತ್ಯಂತ ಶ್ರೇಷ್ಠ ಮೇಧಾವಿಗಳು.
ಪದಗುಚ್ಛ
  1. absence of mind.
  2. be in two minds ಇಬ್ಬಗೆಯಾಗಿರು; ಅನಿಶ್ಚಯದಲ್ಲಿರು; ಮನಸ್ಸು – ತೂಗಾಡುತ್ತಿರು, ಡೋಲಾಯಮಾನವಾಗಿರು.
  3. be of a (or) one’s mind ಒಂದೇ ಅಭಿಪ್ರಾಯವಿರು.
  4. be of (person’s) mind (ಒಬ್ಬನೊಂದಿಗೆ) ಒಮ್ಮತಹೊಂದಿರು; ಏಕಾಭಿಪ್ರಾಯವಿರು; (ಒಬ್ಬನ ಅಭಿಪ್ರಾಯವನ್ನು) ಒಪ್ಪು, ‘ಸರಿ’ಎನ್ನು.
  5. bring to mind ನೆನಪಿಗೆ ತರು; ನೆನಪಿಸು.
  6. to mind= ಪದಗುಚ್ಛ\((5)\).
  7. cast one’s mind back ಹಿಂದಾಲೋಚಿಸು; ಹಿಂದಿನ ಕಾಲವನ್ನು ನೆನೆಸಿಕೊ.
  8. change one’s mind ಮನಸ್ಸು (ಉದ್ದೇಶ, ಗುರಿ) ಬದಲಾಯಿಸು.
  9. come into a person’s mind ಸ್ಮರಿಸಿಕೊಳ್ಳಲ್ಪಡು; ವ್ಯಕ್ತಿಯ ನೆನಪಿಗೆ ಬರು; ವ್ಯಕ್ತಿಗೆ ನೆನಪಾಗು.
  10. come to mind (ಭಾವನೆ, ಕಲ್ಪನೆ, ಮೊದಲಾದವು) ಮನಸ್ಸಿಗೆ ಬರು, ಹೊಳೆ.
  11. cross one’s mind ಮನಸ್ಸಿನಲ್ಲಿ ಸುಳಿ; ಮನಸ್ಸಿನಲ್ಲಿ ಹಾಯಿ; ಮನಸ್ಸಿಗೆ ಬರು: a disturbing thought crossed her mind ಕಲಕುವ ಯೋಚನೆಯೊಂದು ಅವಳ ಮನಸ್ಸಿನಲ್ಲಿ ಸುಳಿಯಿತು.
  12. don’t mind me (ವ್ಯಂಗ್ಯವಾಗಿ) ನಿನಗೆ ತೋರಿದಂತೆ, ನಿನಗಿಷ್ಟ ಬಂದಂತೆ – ಮಾಡು; ನನ್ನನ್ನೇನೂ ಗಮನಿಸಬೇಡ, ಗಮನಿಸಬೇಕಾಗಿಲ್ಲ.
  13. do you mind! (ವ್ಯಂಗ್ಯವಾಗಿ) ಸ್ವಲ್ಪ – ಕೇಳು, ಗಮನ ಕೊಡು! (ಕಿರಿಕಿರಿಯನ್ನು ಸೂಚಿಸುವ ಉದ್ಗಾರ).
  14. frame of mind ಚಿತ್ತವೃತ್ತಿ; ಮನೋಭಾವ.
  15. give one’s mind to ಗಮನ ಯಾ ಲಕ್ಷ್ಯ – ಕೊಡು.
  16. give (person) a piece of one’s mind ಒಬ್ಬನನ್ನು ಬಯ್ಯು, ಖಂಡಿಸು.
  17. go out of mind ಮರೆತು ಹೋಗು.
  18. have a good mind to (ಸಾಮಾನ್ಯವಾಗಿ ಪೂರ್ತಿಮಾಡದ ಬೆದರಿಕೆಯಾಗಿ) (ಏನನ್ನಾದರೂ ಮಾಡಲು) ಮನಸ್ಸು ಮಾಡು; ಉದ್ದೇಶಿಸು; ಆಸೆಯುಳ್ಳವನಾಗಿರು; ಮನಸ್ಸಿರು; ಇಷ್ಟಪಡು: I have a good mind to leave you here alone ನನಗೆ ನಿನ್ನನ್ನು ಒಂಟಿಯಾಗಿ ಇಲ್ಲಿ ಬಿಟ್ಟು ಹೋಗುವ ಮನಸ್ಸಾಗಿದೆ.
  19. have a great mind to= ಪದಗುಚ್ಛ\((18)\).
  20. have half a mind to= ಪದಗುಚ್ಛ\((18)\).
  21. have a mind of one’s own ಸ್ವಂತ ಅಭಿಪ್ರಾಯ ಹೊಂದಿರು; ಸ್ವತಂತ್ರ ಅಭಿಪ್ರಾಯ ತಳೆಯುವ ಶಕ್ತಿಯಿರು.
  22. have (it) in mind ಉದ್ದೇಶವಿಟ್ಟುಕೊಂಡಿರು; ಉದ್ದೇಶಿಸು.
  23. have in one’s mind’s eye ಒಬ್ಬನ ಕಲ್ಪನೆಯಲ್ಲಿ ಯಾ ಮನಸ್ಸಿನಲ್ಲಿ ಇಟ್ಟುಕೊ, ಇಟ್ಟುಕೊಂಡಿರು.
  24. have on one’s mind (ಯಾವುದರದೇ) ಯೋಚನೆಯಿಂದ ಚಿಂತೆಗೆ – ಸಿಲುಕಿರು, ಒಳಗಾಗಿರು, ಚಿಂತಾಕ್ರಾಂತನಾಗಿರು.
  25. in one’s right mind ತಲೆ ಸರಿಯಾಗಿದ್ದು; ಬುದ್ಧಿ ನೆಟ್ಟಗಿದ್ದು.
  26. keep in mind ಜ್ಞಾಪಕದಲ್ಲಿಟ್ಟುಕೊ; ನೆನಪಿನಲ್ಲಿಡು.
  27. know one’s own mind ನಿಶ್ಚಿತಾಭಿಪ್ರಾಯ ತಳೆದಿರು; ದೃಢ ಮನಸ್ಸಿನಿಂದಿರು; ನಿರ್ಧಾರವನ್ನು ರೂಪಿಸಿಕೊಂಡು ಅದಕ್ಕೆ ಅಂಟಿಕೊಂಡಿರು: she may be only a child, but she knows her mind ಅವಳು ಕೇವಲ ಮಗುವಾಗಿರಬಹುದು, ಆದರೆ ಅವಳದು ದೃಢವಾದ ಮನಸ್ಸು.
  28. lose one’s mind ತಲೆಕೆಡು; ಹುಚ್ಚು ಹಿಡಿ.
  29. make up one’s mind
    1. ಮನಸ್ಸು ಮಾಡು; ನಿರ್ಧರಿಸು; ನಿರ್ಣಯಕ್ಕೆ ಬರು.
    2. ಮನಸ್ಸು ಗಟ್ಟಿಮಾಡಿಕೊ; ಅನಿವಾರ್ಯವಾದುದಕ್ಕೆ ಹೊಂದಿಕೊ; ಸಮಾಧಾನ ಮಾಡಿಕೊ: the crop is ruined and we must make up our minds to that ಬೆಳೆ ಹಾಳಾಯಿತು, ನಾವು (ಚಿಂತಿಸಿ ಫಲವಿಲ್ಲ) ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು.
  30. out of one’s mind ತಲೆಕೆಟ್ಟ; ಹುಚ್ಚು ಹಿಡಿದ.
  31. mind over matter ಜಡಜಗತ್ತಿನ ಮೇಲೆ ಮನಸ್ಸಿನ ಪ್ರಭುತ್ವ; ಅಚೇತನ ವಿಶ್ವದ ಮೇಲೆ ಪ್ರಭುತ್ವ ಸ್ಥಾಪಿಸುವ ಮನಸ್ಸಿನ ಶಕ್ತಿ.
  32. open (or close) one’s mind to ಹೊಸ ಭಾವನೆಗಳು, ಬದಲಾವಣೆಗಳು, ಮೊದಲಾದವುಗಳಿಗೆ ಕಣ್ಣು ತೆರೆದಿರು (ಯಾ ಮುಚ್ಚಿರು), ಸ್ವೀಕರಿಸುವಂತಿರು (ಯಾ ಸ್ವೀಕರಿಸದಂತಿರು).
  33. pass out of mind = ಪದಗುಚ್ಛ\((17)\).
  34. presence of mind.
  35. put a person in mind of ಒಬ್ಬನಿಗೆ ನೆನಪುಕೊಡು, ನೆನಪು ಮಾಡು.
  36. put (or set) a person’s mind at rest ಒಬ್ಬ ವ್ಯಕ್ತಿಯ ಮನಸ್ಸನ್ನು ಸಮಾಧಾನಗೊಳಿಸು, ನಿರಾತಂಕಗೊಳಿಸು; ಮನಸ್ಸಿಗೆ – ಸಮಾಧಾನ, ನೆಮ್ಮದಿ ತರು; ಮನಸ್ಸಿನ ಚಿಂತೆ, ಕಳವಳ, ದುಗುಡ – ಕಳೆ, ಪರಿಹರಿಸು.
  37. put a person (or) thing out of one’s mind ಉದ್ದೇಶಪೂರ್ವಕವಾಗಿ ಒಬ್ಬ ವ್ಯಕ್ತಿಯನ್ನು (ಯಾ ವಸ್ತುವನ್ನು) ಮರೆ.
  38. read a person’s mind ಒಬ್ಬನ ಮನಸ್ಸನ್ನು, ಅಭಿಪ್ರಾಯಗಳನ್ನು ತಿಳಿದುಕೊ; ಒಬ್ಬನ ಇಂಗಿತ ಅರಿ.
  39. set one’s mind on (ಏನನ್ನಾದರೂ ಪಡೆಯಲು) ಮನಸ್ಸು ಮಾಡು; ಇಚ್ಛಿಸು; ಸಂಕಲ್ಪಿಸು.
  40. state of mind ಮನಃಸ್ಥಿತಿ.
  41. time out of mind ಅನಾದಿ ಕಾಲ; (ನೆನಪಿಲ್ಲದಷ್ಟು) ಪ್ರಾಚೀನ ಕಾಲ.
  42. to be on (one’s) mind ಮನಸ್ಸಿಗೆ ಭಾರವಾಗಿರು; ಆತಂಕವಾಗಿರು; ಚಿಂತೆಯಾಗಿರು; ಯೋಚನೆಯುಂಟು ಮಾಡು: the approaching trial was on his mind ಸದ್ಯದಲ್ಲೇ ಬರಲಿದ್ದ ವಿಚಾರಣೆ ಅವನಿಗೆ ಯೋಚನೆಯುಂಟು ಮಾಡಿತ್ತು.
  43. to my mind ನನ್ನ ಮನಸ್ಸಿಗೆ ತೋರುವಂತೆ; ನನ್ನ ಅಭಿಪ್ರಾಯದಲ್ಲಿ.