See also 2nothing  3nothing
1nothing ನತಿಂಗ್‍
ನಾಮವಾಚಕ
  1. (ಗುಣವಾಚಕದ ಹಿಂದೆ ಬಂದಾಗ) ಯಾವುದೇ ವಸ್ತು ಅಲ್ಲ, ಇಲ್ಲ(ದ್ದು): nothing great is easy ಮಹತ್ವವಾದದ್ದು ಯಾವುದೂ ಸುಲಭವಲ್ಲ. nothing has been done ಏನನ್ನೂ ಮಾಡಲಾಗಿಲ್ಲ; ಯಾವುದೂ ಆಗಿಲ್ಲ. have nothing to do ಮಾಡಲು (ಕೆಲಸ) ಏನೂ ಇಲ್ಲ.
  2. (ಕೆಲಮೊಮ್ಮೆ ಪೂರಕವಾಕ್ಯದ ಜೊತೆಲ್ಲಿ) ಯಾವುದೂ, ಏನೂ ಇಲ್ಲ: I see nothing that I want ನನಗೆ ಬೇಕಾದ ಯಾವುದೂ ನನಗೆ ಕಾಣುತ್ತಿಲ್ಲ. can find nothing useful ಉಪಯುಕ್ತವಾದ ಯಾವುದೂ ಇಲ್ಲ.
    1. ಕ್ಷುಲ್ಲಕವಾದ – ವಸ್ತು, ಸಂಗತಿ, ಮಾತು ಯಾ ವ್ಯಕ್ತಿ: was nothing to me ಅದು ನನಗೆ ಕ್ಷುಲ್ಲಕವಾದ ವಿಷಯವಾಗಿತ್ತು. the little nothings of life ಜೀವನದ ಕ್ಷುಲ್ಲಕ ವಿಷಯಗಳು. he is nothing without his money ಅವನ ಬಳಿ ಹಣವಿಲ್ಲದೆ ಹೋಗಿದ್ದರೆ ಅವನೊಬ್ಬ ಕೆಲಸಕ್ಕೆ ಬಾರದ ವ್ಯಕ್ತಿ.
    2. (ವಿಶೇಷಣವಾಗಿ, ಆಡುಮಾತು) ಅಗಣ್ಯ; ಬೆಲೆಯಿಲ್ಲದ: a nothing sort of day ಒಂದು ರೀತಿ ಅಗಣ್ಯವಾದ ದಿನ.
  3. ಅಭಾವ; ಇಲ್ಲಮೆ; ಇಲ್ಲದಿರುವಿಕೆ; ಇಲ್ಲದಿರುವುದು; ನಾಸ್ತಿ.
  4. (ಅಂಕಗಣಿತ, ಲೆಕ್ಕಾಚಾರದಲ್ಲಿ) ಸೊನ್ನೆ – ಅಂಕ, ಮೊಬಲಗು, ಇತ್ಯಾದಿ: multiply 6 by nothing, and the result is nothing ಆರನ್ನು ಸೊನ್ನೆಯಿಂದ ಗುಣಿಸಿದರೆ ಸೊನ್ನೆ ಬರುತ್ತದೆ. a third of nothing is nothing ಸೊನ್ನೆಯ ಮೂರನೇ ಒಂದು ಭಾಗ ಸೊನ್ನೆಯೇ.
ಪದಗುಚ್ಛ
  1. be nothing(ಧರ್ಮದ ವಿಷಯದಲ್ಲಿ)
    1. ಯಾವ ನಿರ್ದಿಷ್ಟ ಪಂಗಡಕ್ಕೂ ಸೇರದಿರು.
    2. ನಾಸ್ತಿಕನಾಗಿರು.
    3. ಅಜ್ಞೇಯತಾವಾದಿಯಾಗಿರು.
  2. be nothing to
    1. ಸಂಬಂಧ ಬೇಡದಿರು; ಸಂಬಂಧಿಸಿರದಿರು: it is nothing to do with me ಅದಕ್ಕೂ ನನಗೂ ಸಂಬಂಧವಿಲ್ಲ.
    2. ಹೋಲಿಕೆಯಾಗದಿರು; ಹೋಲಿಕೆ ಇಲ್ಲದಿರು.
  3. be (or have) nothing to do with
    1. (ವಸ್ತು ಯಾ ವ್ಯಕ್ತಿಯ ವಿಷಯದಲ್ಲಿ) ಸಂಬಂಧ ಇಲ್ಲದಿರು; ಗೊಡವೆ ಇಲ್ಲದಿರು; ಉಸಾಬರಿ ಬೇಡದಿರು.
    2. (ಯಾವುದೇ ಒಂದರಲ್ಲಿ ಯಾ ಒಂದರೊಡನೆ) ಸಂಬಂಧ ಹೊಂದದಿರು, ಸೇರದಿರು.
  4. come to nothing ನಿಷ್ಫಲವಾಗು; ವ್ಯರ್ಥವಾಗಿ ಪರಿಣಮಿಸು; ಏನೂ ಪ್ರಯೋಜನವಾಗದಿರು: hopes that come to nothing ವ್ಯರ್ಥವಾಗಿ ಪರಿಣಮಿಸುವ ಭರವಸೆಗಳು; ನಿಷ್ಪಲ ನಿರೀಕ್ಷೆಗಳು.
  5. count (or go) for nothing ಗಣನೆಗೆ ಬಾರದಿರು; ವ್ಯರ್ಥವಾಗು.
  6. feel like nothing on earth(ಆಡುಮಾತು) ತೀವ್ರವಾದ ಅಸ್ವಸ್ಥತೆ ಯಾ ಮುಜುಗರ ಅನುಭವಿಸು.
  7. for nothing
    1. ಪುಕ್ಕಟೆಯಾಗಿ.
    2. ವ್ಯರ್ಥವಾಗಿ; ಏನೂ ಪ್ರಯೋಜನವಿಲ್ಲದೆ.
  8. has nothing in him ಅವನೊಬ್ಬ ನಗಣ್ಯ; ಯಃಕಶ್ಚಿತ್‍ ಮನುಷ್ಯ; ಅವನಿಗೆ ಯಾವ ವ್ಯಕ್ತಿತ್ವವೂ ಇಲ್ಲ.
  9. have nothing on
    1. (ಯಾವುದೋ ಒಂದಕ್ಕಿಂತ) ಹೆಚ್ಚು ಅನುಕೂಲ ಹೊಂದಿಲ್ಲದಿರು.
    2. (ಒಬ್ಬನ ಬಗ್ಗೆ) ಆಕ್ಷೇಪಣೀಯವಾದ ಏನನ್ನೂ ಹೊಂದದಿರು, ಗೊತ್ತಿಲ್ಲದಿರು.
    3. (ವ್ಯಂಗ್ಯ) (ಯಾವುದೋ ಒಂದಕ್ಕಿಂತ) ತೀರಾ ಕೀಳಾಗಿರು.
    4. ಬರಿ ಮೈಯಲ್ಲಿರು; ಬೆತ್ತಲೆಯಾಗಿರು.
    5. ಬಿಡುವಾಗಿರು; ಯಾವುದೇ ಕೆಲಸಕಾಗಳಿಲ್ಲದಿರು.
  10. is nothing to
    1. ಏನೂ ಲೆಕ್ಕವಿಲ್ಲ; ಯಾವುದಕ್ಕೂ ಇಲ್ಲ; ತೃಣಸಮಾನ: money is nothing to him ಹಣ ಎಂದರೆ ಅವನಿಗೆ ತೃಣಸಮಾನ.
    2. (ಅದರ) ಸಮಾನಕ್ಕೆ ಬರಲಾರದು; (ಅದಕ್ಕೂ, ಇದಕ್ಕೂ) ಹೋಲಿಕೆ ಇಲ್ಲ.
  11. like nothing on earth(ಆಡುಮಾತು) (ಕುರೂಪ ಮೊದಲಾದವುಗಳ ವಿಷಯದಲ್ಲಿ) ಅತ್ಯಂತ; ವಿಪರೀತವಾದ; ಅತಿ ಹೆಚ್ಚಿನ: look like nothing on earth(ಆಡುಮಾತು):
    1. ತೀರಾ ಅವಲಕ್ಷಣವಾಗಿರು; ಬಹಳ ಕುರೂಪಿಯಾಗಿರು.
    2. ಅತಿ ಆಡಂಬರದಿಂದ ತುಂಬಿರು; ಕಣ್ಣಿಗೆ ರಾಚುವಂತಿರು.
  12. make nothing of
    1. ಲಘುವಾಗೆಣಿಸು; ಅಲ್ಪವೆಂದು ಭಾವಿಸು.
    2. ಹಿಂಜರಿಯದೆ – ಮಾಡು, ನಡೆಸು.
    3. ಏನೂ ಮಾಡಲು ತೋಚದಿರು, ಅರ್ಥವಾಗದಿರು.
    4. ಉಪಯೋಗಿಸಲು, ಬಳಸಲು ಸಾಧ್ಯವಿಲ್ಲವಾಗು.
    5. ವ್ಯವಹರಿಸಲು ಸಾಧ್ಯವಿಲ್ಲವಾಗು.
  13. mean nothing to
    1. ಅರ್ಥವಿಲ್ಲವಾಗು.
    2. ಮೆಚ್ಚದಂತಾಗು.
    3. ಆಶಿಸದಂತಾಗು.
  14. neck or nothing ಆದದ್ದಾಗಲೆಂದು; ಸರ್ವಸ್ವವನ್ನೂ ಪಣವಾಗಿ ಒಡ್ಡಿ.
  15. no nothing(ಆಡುಮಾತು) (ಇಲ್ಲದ ಪದಾರ್ಥಗಳ ಪಟ್ಟಿಯಲ್ಲಿ ಹೇಳುವ ಕೊನೆಯ ಮಾತು) ಯಾವುದೂ ಇಲ್ಲ; ಒಂದೂ ಇಲ್ಲ: no bread, no butter, no cheese, no nothingಬ್ರೆಡ್‍ ಇಲ್ಲ, ಬೆಣ್ಣೆ ಇಲ್ಲ, ಚೀಸ್‍ ಇಲ್ಲ, ಯಾವುದೂ ಇಲ್ಲ.
  16. nothing but = ಪದಗುಚ್ಛ\((18)\).
  17. nothing doing
    1. (ಆಡುಮಾತು) ಮುಖ್ಯವಾದದ್ದು ಏನೂ ಸಾಧ್ಯವಾಗದು; ಗಮನಾರ್ಹವಾದುದೇನೂ ಆಗುತ್ತಿಲ್ಲ: there was nothing doing in town ಊರಿನಲ್ಲಿ ಗಮನಾರ್ಹವಾದುದೇನೂ ನಡೆಯುತ್ತಿಲ್ಲ.
    2. ಖಂಡಿತ ಇಲ್ಲ; ಎಂದೆಂದಿಗೂ ಸಾಧ್ಯವಿಲ್ಲ.
  18. nothing else but (or than) ಸುಮ್ಮನೆ; ಕೇವಲ; ಬರಿದೆ; ನಿಸ್ಸಂದೇಹವಾಗಿ; ನಿಸ್ಸಂಶಯವಾಗಿ: did nothing but grumble ಗೊಣಗುವುದನ್ನು ಬಿಟ್ಟು ಏನನ್ನೂ ಮಾಡಲಿಲ್ಲ; ಸುಮ್ಮನೆ (ಗೊಣಗಿದ).
  19. nothing for it but to ವಿಧಿಯಿಲ್ಲ; ಉಪಾಯವಿಲ್ಲ; ಅದನ್ನು ಬಿಟ್ಟು ಬೇರೆ ಮಾರ್ಗವಿಲ್ಲ.
  20. nothing if not ಮುಖ್ಯವಾಗಿ; ಮೂಲತಃ: it is nothing if not critical ತಪ್ಪು ಕಂಡುಹಿಡಿಯುವುದು ಬಿಟ್ಟು ಬೇರೇನೂ ಅಲ್ಲ; ತಪ್ಪು ಕಂಡು ಹಿಡಿಯುವುದೊಂದೇ ಮುಖ್ಯ ಲಕ್ಷಣ.
  21. nothing less than
    1. ಕಡಿಮೆ ಏನಲ್ಲ: expected nothing less than a riot ಕಡೇ ಪಕ್ಷ ದೊಂಬಿ ಆಗುತ್ತದೆಂದೇ ನಿರೀಕ್ಷಿಸಿದ; ದೊಂಬಿಯಾದರೂ ಆಗಿಯೇ ತೀರುತ್ತದೆಂದು ನಿರೀಕ್ಷಿಸಿದ.
    2. (ವಿರಳ ಪ್ರಯೋಗ) ಇದಕ್ಕೆ ತೀರಾ ವಿರುದ್ಧವಾದ.
    3. (ವಿರಳ ಪ್ರಯೋಗ) ಎಂದೆಂದಿಗೂ ಇಲ್ಲ; ಸ್ವಲ್ಪವೂ ಇಲ್ಲ.
  22. nothing like leather ತನ್ನ ಸರಕು ಎಲ್ಲ ಕೆಲಸಕ್ಕೂ ಒದಗುತ್ತದೆ (ಎಂಬ ಸ್ವಾಭಿಮಾನದ ಅಭಿಪ್ರಾಯ).
  23. nothing venture nothing have(ಗೆಲ್ಲಬೇಕಾದರೆ ಮುನ್ನುಗ್ಗಬೇಕು ಎಂಬರ್ಥದಲ್ಲಿ) ಧೈರ್ಯವೂ ಇಲ್ಲ, ಲಾಭವೂ ಇಲ್ಲ.
  24. $^1$stop at nothing.
  25. there is nothing in it
    1. ಅದು ನಿಜವಲ್ಲ.
    2. ಅದೇನೂ ಮುಖ್ಯವಲ್ಲ.
    3. ಅದರಲ್ಲಿ ಏನೂ ತೊಡಕಿಲ್ಲ.
    4. (ಇಬ್ಬರ ಪೈಕಿ) ಯಾರಿಗೂ ಅದರಲ್ಲಿ ಹೆಚ್ಚಿನ ಪ್ರಯೋಜನ ಯಾ ಅನುಕೂಲ ಇಲ್ಲ.
  26. there is nothing to it ಅದು ನಿಜವಲ್ಲ; ಅದೇನೂ ಮುಖ್ಯವಲ್ಲ; ಅದು ತೀರಾ ಸರಳ, ನೇರ.
  27. think nothing of it(ಕ್ಷಮೆ ಕೇಳಬೇಡ ಯಾ ಕೃತಜ್ಞತೆ ತೋರಿಸಬೇಕೆಂಬ ಭಾವನೆಯಿಟ್ಟುಕೊಳ್ಳಬೇಡ ಎಂದು ಸೂಚಿಸಲು ಬಳಸುವ ಮಾತಾಗಿ) ಅದನ್ನು ಯೋಚಿಸಬೇಡ; ಹಾಗೆ ಚಿಂತಿಸಬೇಡ.
  28. to nothing ಕ್ರಮೇಣ ಸಂಪೂರ್ಣವಾಗಿ – ಹೊರಟುಹೋಗಿ, ಕಾಣದಾಗಿ, ಅದೃಶ್ಯವಾಗಿ.
  29. to say nothing (of)(ಅಷ್ಟು ಮುಖ್ಯವಲ್ಲದ ಅಂಶವನ್ನು ಹೇಳುವಾಗ ಯಾ ಮುಖ್ಯ ಅಂಶವನ್ನು ಆಲಂಕಾರಿಕವಾಗಿ ಹೇಳುವಾಗ) (ಅದನ್ನು) ಹೇಳಬೇಕಾದುದಿಲ್ಲ.
  30. with nothing on
    1. ಬೆತ್ತಲೆಯಾಗಿ; ಬರಿಮೈಯಲ್ಲಿ.
    2. ಸಾಕಷ್ಟು (ಮೈಮುಚ್ಚುವಷ್ಟು) ಬಟ್ಟೆ ಹಾಕಿಕೊಳ್ಳದೆ.