See also 2do  3do
1do ಡೂ
ಕ್ರಿಯಾಪದ ಮತ್ತು ಸಹಾಯಕ ಕ್ರಿಯಾಪದ

[ಮಧ್ಯಮಪುರುಷ ವರ್ತಮಾನ ಕಾಲ ಏಕವಚನ dost (ಉಚ್ಚಾರಣೆ, ಡಸ್ಟ್‍), (ಪ್ರಾಚೀನ ಪ್ರಯೋಗ) doest (ಉಚ್ಚಾರಣೆ ಡೂಇಸ್ಟ್‍) ಪ್ರಥಮ ಪುರುಷ; does (ಉಚ್ಚಾರಣೆ ಡಸ್‍) ಆಡುಮಾತು’s, (ಪ್ರಾಚೀನ ಪ್ರಯೋಗ) doth (ಉಚ್ಚಾರಣೆ ಡತ್‍), (ಪ್ರಾಚೀನ ಪ್ರಯೋಗ) doeth (ಉಚ್ಚಾರಣೆ ಡೂಇತ್‍); ಭೂತರೂಪ; did, ಮಧ್ಯಮ ಪುರುಷ ಏಕವಚನ (ಪ್ರಾಚೀನ ಪ್ರಯೋಗ) didst; ಭೂತಕೃದಂತ done; ನಿಷೇಧಾರ್ಥಕ ಪ್ರಯೋಗ do not ಯಾ (ಆಡುಮಾತು) don’t (ಉಚ್ಚಾರಣೆ ಡೋಂಟ್‍), does not ಯಾ (ಆಡುಮಾತು) dosen’t (ಉಚ್ಚಾರಣೆ ಡಸಂಟ್‍) ಯ (ಅಸಂಸ್ಕೃತ) don’t, did not ಯಾ (ಆಡುಮಾತು) didn’t (ಉಚ್ಚಾರಣೆ ಡಿಡಂಟ್‍)].

ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಹಾಕು; ಇಡು.
  2. ನೀಡು; ಕೊಡು; ಈಯು; ದಯಪಾಲಿಸು; ಸಲ್ಲಿಸು; ಉಂಟುಮಾಡು; ತಂದುಕೊಡು; ತರು: does him credit ಅವನಿಗೆ ಕೀರ್ತಿ, ಹೆಸರು – ತರುತ್ತದೆ. does credit to his intelligence ಅವನ ಜಾಣ್ಮೆಗೆ ಯಶಸ್ಸು ತರುತ್ತದೆ. do me a favour ನನಗೊಂದು ಸಹಾಯ, ಅನುಗ್ರಹ – ಮಾಡು. does me good ನನಗೆ ಶುಭ ಯಾ ಲೇಸನ್ನು ಉಂಮಾಡುತ್ತದೆ. does me harm ನನಗೆ ಕೆಡುಕನ್ನುಂಟುಮಾಡುತ್ತದೆ. did a service to his country ತನ್ನ ದೇಶಕ್ಕವನು ಸೇವೆ ಸಲ್ಲಿಸಿದ. do justice to ನ್ಯಾಯಸಲ್ಲಿಸು.
  3. (ವಸ್ತು, ವಿಷಯ, ಕೆಲಸ, ಒಳ್ಳೆಯದು, ಸರಿಯಾದದ್ದು, ತಪ್ಪಾದದ್ದು, ಕರ್ತವ್ಯ, ಅಜ್ಞೆ, ಪ್ರಾಯಶ್ಚಿತ್ತ – ಇವುಗಳ ವಿಷಯದಲ್ಲಿ) ಮಾಡು; ನಡೆಸು; ನೆರವೇರಿಸು; ಜರುಗಿಸು; ಆಗಮಾಡು; ಆಗಗೊಳಿಸು: easier said than done ಹೇಳುವುದು ಸುಲಭ, ಮಾಡುವುದು ಕಷ್ಟ; ಮಾಡುವುದಕ್ಕಿಂತ ಹೇಳುವುದು ಸುಲಭ.
  4. (ಭೂತಕೃದಂತದಲ್ಲಿ) ಮುಗಿಸು; ಪೂರ್ತಿಮಾಡು; ಪೂರ್ಣಗೊಳಿಸು; ಮುಕ್ತಾಯ ಮಾಡು; ಪರಿಸಮಾಪ್ತಿ ಮಾಡು: it is done ಅದನ್ನು ಮಾಡಿಆಯಿತು. I have done ನಾನು ಮಾಡಿ ಮುಗಿಸಿದ್ದೇನೆ.
  5. ಮಾಡು; ಯತ್ನಿಸು; ಶ್ರಮಿಸು; ಪ್ರಯತ್ನಪಡು; ಪ್ರಯೋಗಿಸು.
  6. ತಯಾರಿಸು; ಉತ್ಪಾದಿಸು; ಮಾಡು; ಸಿದ್ಧಪಡಿಸು: do six copies ಆರು ಪ್ರತಿಗಳನ್ನು ಮಾಡು, ತಯಾರಿಸು.
  7. ತೊಡಗಿರು; ಉದ್ಯುಕ್ತವಾಗಿಸು; ನಿರತನಾಗಿರು: he is doing his lessons ಅವನು ತನ್ನ ಪಾಠಗಳಲ್ಲಿ ತೊಡಗಿದ್ದಾನೆ, ಪಾಠಗಳನ್ನು ಓದುತ್ತಿದ್ದಾನೆ.
  8. ರಿಪೇರಿ ಮಾಡು; ಸರಿಪಡಿಸು; ವ್ಯವಸ್ಥೆಗೊಳಿಸು; ಒಪ್ಪಮಾಡು; ಓರಣಮಾಡು; ಓರಣಗೊಳಿಸು: the decorator does a house ಅಲಂಕರಣಕಾರ ಮನೆಯನ್ನು ಒಪ್ಪ ಮಾಡುತ್ತಾನೆ. house-maid does a room ಮನೆಗೆಲಸದವಳು ಕೊಠಡಿಯನ್ನು ಒಪ್ಪ ಮಾಡುತ್ತಾಳೆ. do one’s hair ತಲೆ(ಗೂದಲು) ಬಾಚು, ಬಾಚಿಕೊ; ಒಪ್ಪಮಾಡಿಕೊ.
  9. (ಹದ ಬರುವಷ್ಟು) ಬೇಯಿಸು; ಅಡು; ಸುಡು; ಕರಿ; ಹುರಿ: chop done to a turn ಸರಿಯಾದ ಹದಕ್ಕೆ ಬೇಯಿಸಿದ ಮಾಂಸದ ಚೂರು. well done ಚೆನ್ನಾಗಿ ಬೆಂದಿದೆ. over done ಅತಿ ಬೆಂದಿದೆ. under done ಅರೆ ಬೆಂದಿದೆ.
  10. (ಲೆಕ್ಕ, ಸಮಸ್ಯೆ, ಮೊದಲಾದವನ್ನು) ಮಾಡು; ಬಿಡಿಸು; ಬಗೆಹರಿಸು; ಉತ್ತರಿಸು; ಪರಿಹರಿಸು: do a sum ಲೆಕ್ಕ ಮಾಡು. do a problem ಸಮಸ್ಯೆ ಬಿಡಿಸು.
  11. ತರ್ಜುಮೆ ಮಾಡು; ಅನುವಾದಿಸು; ಭಾಷಾಂತರಿಸು: do into English ಇಂಗ್ಲಿಷಿಗೆ ಭಾಷಾಂತರ ಮಾಡು.
  12. ವ್ಯವಹರಿಸು; ಗಮನ ಕೊಡು: I will do you next ಅನಂತರ ನಮಗೆ ಗಮನ ಕೊಡುತ್ತೇನೆ.
  13. (ಸಂಬಂಧಿಸಿದ ಕಾರ್ಯ) ಮಾಡು: do the lesson ಪಾಠ – ಓದು, ಕಲಿ, ಅಭ್ಯಾಸಮಾಡು, ವ್ಯಾಸಂಗಮಾಡು, ಮನನ ಮಾಡು. he is doing science at school ಅವನು ಶಾಲೆಯಲ್ಲಿ ವಿಜ್ಞಾನ ಓದುತ್ತಿದ್ದಾನೆ.
  14. ಪಾತ್ರ – ತಾಳು, ಧರಿಸು, ನಟಿಸು, ಹಾಕು, ನಿರ್ವಹಿಸು, ವಹಿಸು, ಅಭಿನಯಿಸು. did Lear ಲಿಯರ್‍ ಪಾತ್ರ ಅಭಿನಹಿಸಿದ. did the cicerone ಮಾರ್ಗದರ್ಶಕನ ಪಾತ್ರ ಆಡಿದ ನಿರ್ದೇಶಕನ ಪಾತ್ರ ವಹಿಸಿದ. do the polite ಸಭ್ಯನ ಪಾತ್ರ ನಿರ್ವಹಿಸು; ಮರ್ಯಾದೆಯಿಂದ ನಡೆದುಕೊ.
  15. ಬಳಲಿಸು; ದಣಿಸು; ಸುಸ್ತಾಗಿಸು; ಆಯಾಸಗೊಳಿಸು: I am done up after the hard ride ಪ್ರಯಾಸದ ಸವಾರಿ ಮಾಡಿ ನಾನು ಸುಸ್ತಾಗಿ ಹೋಗಿದ್ದೇನೆ.
  16. (ಅಶಿಷ್ಟ) ಮೋಸ ಮಾಡು: ಕೈಕೊಡು; ವಂಚಿಸು; ಗಸ್ತು ಕೊಡು: the rascal did him in ಆ ಫಟಿಂಗ ಅವನಿಗೆ ಗಸ್ತುಕೊಟ್ಟ. the dealer did me over the sale of that picture ವ್ಯಾಪಾರಿ ಆ ಚಿತ್ರದ ಮಾರಾಟದಲ್ಲಿ ನನಗೆ ಕೈಕೊಟ್ಟ.
  17. (ದೂರ) ಕ್ರಮಿಸು; ನಡೆ; ಸಾಗು: he does full five miles ಸರಿಯಾಗಿ ಐದು ಮೈಲಿ ನಡೆಯುತ್ತಾನೆ.
  18. (ಆಡುಮಾತು) (ನಗರ, ಮ್ಯೂಸಿಯಮ್‍, ಮೊದಲಾದವುಗಳಿಗೆ) ಭೇಟಿಕೊಡು; (ಅವುಗಳ) ದೃಶ್ಯಗಳನ್ನು ನೋಟಗಳನ್ನು – ನೋಡು: he did the city and its suburbs ನಗರ ಮತ್ತು ಅದರ ಸುತ್ತು ಮುತ್ತಲ ಪ್ರದೇಶದ ದೃಶ್ಯಗಳನ್ನೆಲ್ಲ ನೋಡಿದ.
  19. (ಅಶಿಷ್ಟ) (ವಿಧಿಸಿದ ಅವಧಿಯ) ಶಿಕ್ಷೆ ಅನುಭವಿಸು: did two years in the prison ಎರಡು ವರ್ಷ ಜೈಲುಶಿಕ್ಷೆ ಅನುಭವಿಸಿದ.
  20. (ಅಶಿಷ್ಟ)ಕದಿ; ದೋಚು; ಲೂಟಿಮಾಡು; ದರೋಡೆ ಮಾಡು: he did a shop in the city ನಗರದಲ್ಲಿಅವನು ಒಂದು ಅಂಗಡಿಯನ್ನು ಲೂಟಿ ಮಾಡಿದ.
  21. (ಅಶಿಷ್ಟ) (ಕೋರ್ಟಿನಲ್ಲಿ) ಕ್ರಮಜರುಗಿಸು; ಖಟ್ಲೆ ನಡೆಸು.
  22. (ಅಶಿಷ್ಟ) (ಕೋರ್ಟಿನಲ್ಲಿ ಶಿಕ್ಷೆ ವಿಧಿಸು.
  23. (ಅಶಿಷ್ಟ) ಸಂಭೋಗಿಸು; ಮೈಥುನ ನಡೆಸು; ಸಂಭೋಗ ಮಡು.
  24. (ಅಶಿಷ್ಟ) ಸೋಲಿಸು; ಪರಾಭವಗೊಳಿಸು.
  25. (ಅಶಿಷ್ಟ) ಹಾಳುಮಾಡು; ನಾಶಮಾಡು.
  26. (ಅಶಿಷ್ಟ) ಕೊಲ್ಲು; ಸಾಯಿಸು; ಕೊಲೆ ಮಾಡು; ಹತ್ಯೆಮಾಡು.
  27. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಆಹಾರ ಒದಗಿಸು; ತಿನ್ನಿಸು; ಅನ್ನಹಾಕು: they do you very well ಅವರು ನಿನಗೆ ಚೆನ್ನಾಗಿ ಯ ಪುಷ್ಕಳವಾಗಿ ತಿನ್ನಿಸುತ್ತಾರೆ.
  28. ಅನುಕೂಲ ಮಾಡಿಕೊಂಡು, ಒದಗಿಸು: do bed and lunch ಹಾಸಿಗೆ ಮತ್ತು ಊಟ ಒದಗಿಸು.
  29. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ತೃಪ್ತಿಗೊಳಿಸು; ತೃಪ್ತಿಕರವಾಗಿಸು; ಸಾಕೆಂದೆನಿಸು; ಸರಿಹೋಗು: that will do me nicely ಅದು ನನಗೆ ಸಾಕಾಗಿದೆ. these shoes won’t do ಈ ಷೂಗಳು ಸರಿಯಾಗಿಲ್ಲ.
  30. ಮಾರ್ಪಡಿಸು; ರೂಪಾಂತರಿಸು: do a novel into a film ಕಾದಂಬರಿಯೊಂದನ್ನು ಸಿನಿಮಾಚಿತ್ರವಾಗಿ ಮಾರ್ಪಡಿಸು.
ಅಕರ್ಮಕ ಕ್ರಿಯಾಪದ
  1. ( ಕ್ರಿಯಾವಿಶೇಷಣ ಮೊದಲಾದವುಗಳೊಡನೆ) ಮಾಡು; ವರ್ತಿಸು; ನಡೆ; ಆಚರಿಸು: do as they do at Rome ರೋಮ್‍ನಲ್ಲಿ ರೋಮನರ ಹಾಗೆ ನಡೆದುಕೊ. would do wisely to with draw ಹಿಂದಕ್ಕೆ ಸರಿಯುವುದು ಜಾಣತನ(ದ ವರ್ತನೆ).
  2. (ಕಾರ್ಯವನ್ನು ಸಫಲವಾಗಿ) ಮಾಡು; ನೆರವೇರಿಸು: do or die ಮಾಡು ಇಲ್ಲವೆ ಮಡಿ.
  3. ಮುಗಿಸು; ಕೊನೆಗಾಣಿಸು; ನಿಲ್ಲಿಸು: have done! ನಿಲ್ಲಿಸು! ಮುಗಿಸು! let us have done with it ಅದನ್ನಿಷ್ಟಕ್ಕೆ ಮುಗಿಸೋಣ; ಅದನ್ನು ಇಲ್ಲಿಗೆ ನಿಲ್ಲಿಸೋಣ.
  4. (ಆರೋಗ್ಯ, ವ್ಯಕ್ತಿ, ಸ್ಥಿತಿಗಳು, ಮೊದಲಾದವುಗಳ ವಿಷಯದಲ್ಲಿ) ಚೆನ್ನಾಗಿ ಯಾ ಚೆನ್ನಾಗಿಲ್ಲದೆ ಮೊದಲಾದವುಗಳಾಗಿ) ಇರು: how do your do? (ಪರಿಚಯ ಮಾಡಿಸಿದಾಗ ಔಪಚಾರಿಕವಾಗಿ ಕೇಳುವ ಪ್ರಶ್ನೆ) ಚೆನ್ನಾಗಿದ್ದೀರಾ? ಸೌಖ್ಯವೆ? ಕ್ಷೇಮವಾಗಿದ್ದೀರಾ?
  5. ತಕ್ಕಂತಿರು; ತಕ್ಕುದಾಗಿರು; ಅನುಗುಣವಾಗಿರು; ಅನುರೂಪವಾಗಿರು; ಅನುಕೂಲವಾಗಿರು; ಉದ್ದೇಶಕ್ಕೆ-ಒದಗಿಬರು, ಕೂಡಿಬರು; ಸಾಕಷ್ಟು ಯ ತಕ್ಕಷ್ಟು ಇರು: that will do for this job ಈ ಕೆಲಸಕ್ಕೆ ಅಷ್ಟು ಸಾಕು. if nothing better is available, he must make this do ಇನ್ನೂ ಉತ್ತಮವಾದದ್ದು ಯಾವುದೊ ಸಿಕ್ಕದಿದ್ದರೆ, ಅವನು ಇದನ್ನೇ ಸಾಕಾಗುವಂತೆ ಮಾಡಿಕೊಳ್ಳಬೇಕು.
  6. ನಡೆಯುತ್ತಿರು; ಆಗುತ್ತಿರು; ಪ್ರಗತಿ ತೋರು; ಅಭಿವೃದ್ಧಿ ಹೊಂದು: nothing doing
    1. ಏನೂ ಆಗುತ್ತಿಲ್ಲ; ಯಥಾಸ್ಥಿತಿಯಾಗಿದೆ.
    2. (ಆಡುಮಾತು) ಯಶಸ್ಸಿನ ಸೂಚನೆಯೇನೂ ಕಾಣುತ್ತಿಲ್ಲ.
    3. ಇಲ್ಲ; ಆಗುವುದಿಲ್ಲ; ಸುತಾರಾಂ ಆಗುವುದಿಲ್ಲ; ಬಿಲ್‍ಕುಲ್‍ ಆಗುವುದಿಲ್ಲ.

ಪ್ರತಿನಿಧಿ ಕ್ರಿಯಾಪದವಾಗು:

  1. ಹಿಂದೆ ಉಪಯೋಗಿಸಿದ ಕ್ರಿಯಾಪದಕ್ಕೆ ಬದಲಾಗಿ ಅದರ ಅರ್ಥವನ್ನು ತಂದುಕೊಡಲು ಬಳಸುವ ಪದ: I choose my wife as she did her saree ನನ್ನ ಹೆಂಡತಿ ಸೀರೆಯನ್ನು ಆಯ್ಕೆ ಮಾಡಿ ದಂತೆಯೇ ನಾನು ಅವಳನ್ನು ಆಯ್ಕೆ ಮಾಡಿದೆ (ಈ ವಾಕ್ಯದಲ್ಲಿ did ಎಂಬುದರ ಅರ್ಥ chose ಎಂದು).
  2. ಕ್ರಿಯಾಪದ, ಅದರ ಕರ್ಮಪದ ಮೊದಲಾದವಕ್ಕೆ ಬದಲಾಗಿ: if you saw the truth as clearly as I did ನಾನು ಕಂಡಷ್ಟು ಸ್ಪಷ್ಟವಾಗಿ ನೀನು ಸತ್ಯವನ್ನು ಕಂಡಿದ್ದರೆ.
  3. ಅಧ್ಯಾಹಾರ ಪೂರೈಸುವ ಸಹಾಯಕ ಕ್ರಿಯೆಗಾಗಿ: ‘did you see him? I did’ ‘ನೀನು ಅವನನ್ನು ಕಂಡೆಯಾ? ನಾನು ಕಂಡೆ’.
  4. so, it, which, ಮೊದಲಾದವುಗಳೊಡನೆ:
    1. I wanted to see him, and I did so ನಾನು ಅವನನ್ನು ನೋಡಬೇಕೆಂದುಕೊಂಡೆ, ಮತ್ತು ಹಾಗೆಯೇ ಮಾಡಿದೆ.
    2. in passing through the market, which he seldom did ಮಾರ್ಕೆಟ್‍ ಮೂಲಕ ಹಾದುಹೋಗುವಾಗ, ಅವನು ಹಾಗೆ ಮಾಡಿದುದು ತೀರ ವಿರಳ. if you want to tell him, do it now ನೀನು ಅವನಿಗೆ ಹೇಳಬಯಸುವುದಾದರೆ ಅದನ್ನು ಈಗಲೇ ಮಾಡು.

(ಸಾಮಾನ್ಯ ವರ್ತಮಾನ ಮತ್ತು ಭೂತಗಳಲ್ಲಿ ಧಾತ್ವರ್ಥವಾಚಿಯೊಡನೆ ಪ್ರಯೋಗ)

  1. ಯಾವುದಾದರೂ ವಿಷಯವನ್ನು ಒತ್ತಿ ಹೇಳುವಾಗ: I do so wish I could ನನಗೆ ಮಾಡಲು ಸಾಧ್ಯವಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. I did see him ನಾನು ಅವನನ್ನು ಖಂಡಿತ ನೋಡಿದೆ.
  2. ಮಧ್ಯೆಬಂದ ಸರ್ವನಾಮವನ್ನು ಒತ್ತಿ ಹೇಳಬೇಕಾದಾಗ: you do go rather (ಬೇರೊಬ್ಬರಿಗಿಂತ) ನೀನೇ ಹೋಗು.
  3. ವಿಧಿರೂಪದಲ್ಲಿ ಒತ್ತಾಯ, ತುರ್ತು, ಮೊದಲಾದವನ್ನು ಸೂಚಿಸುವ ಬೇಡಿಕೆಗಳನ್ನು ಮಾಡಿ ಕೊಳ್ಳುವಾಗ: do tell me ನನಗೆ ದಯಮಾಡಿ ಹೇಳಬೇಕು. do but think ದಯಮಾಡಿ ಸ್ವಲ್ಪ ಯೋಚಿಸು; ಸ್ವಲ್ಪ ಯೋಚಿಸಿನೋಡು.
  4. ಪದವಿಪರ್ಯಯ ಮಾಡಬೇಕಾದಾಗ: rarely does it happen that ಹಾಗೆ ಆಗುವುದು ಅಪರೂಪ.
  5. have ಯಾ be ಕ್ರಿಯೆಗಳಿಂದಲ್ಲದೆ ಬೇರೆ ಕ್ರಿಯಾಪದಗಳಿಂದ ಆರಂಭವಾಗುವ ಪ್ರಶ್ನೆಗಳ ಸಾಮಾನ್ಯರೂಪದಲ್ಲಿ: did you rocognise her? ನಿನಗೆ ಆಕೆಯ ಗುರುತು ಸಿಕ್ಕಿತೇ? do you dare? ಧೈಯವುಂಟೆ ನಿನಗೆ?
  6. be, have, dare, need, ಮೊದಲಾದ ಕ್ರಿಯೆಗಳಲ್ಲದ, not ಸೇರಿದ ನಿಷೇಧವಾಕ್ಯಗಳಲ್ಲಿ: I do not like coffee ನನಗೆ ಕಾಹಿ ಸೇರುವುದಿಲ್ಲ. he does not play this time ಈ ಸಲ ಅವನು ಆಡುವುದಿಲ್ಲ.
  7. not ಕೂಡಿದ ಆಜ್ಞೆಗಳಲ್ಲಿ: do not worry over the past ಕಳೆದುಹೋದುದನ್ನು ಕುರಿತು ಚಿಂತಿಸಬೇಡ. do not waste your time ನಿನ್ನ ಕಾಲವನ್ನು ವ್ಯರ್ಥ ಮಾಡಬೇಡ.
ಪದಗುಚ್ಛ
  1. do a degree ಡಿಗ್ರಿ(ಪದವಿ)ಗಾಗಿ ಓದಿ ಅದನ್ನು ಪಡೆ; ಓದಿ ಡಿಗ್ರಿ ಪದವಿಗಳಿಸು.
  2. do a play ನಾಟಕ – ಆಡು. ಪ್ರದರ್ಶಿಸು.
  3. do a room ಕೊಠಡಿಯನ್ನು ಸ್ವಚ್ಛಮಾಡು ಯಾ ಅದಕ್ಕೆ ಬಣ್ಣ ಹೊಡೆ.
  4. do battle ಹೋರಾಡು; ಕಾಳಗವಾಡು; ಯುದ್ಧ ಮಾಡು.
  5. done (ಕರಾರು, ಪಣ, ಮೊದಲಾದವನ್ನು ಒಪ್ಪಿಕೊಳ್ಳುವಾಗ) ಆಯಿತು; ಒಪ್ಪಿದೆ; ಸರಿ; ಒಪ್ಪಿಕೊಂಡೆ; ಸಮ್ಮತ.
  6. do the dishes ತಟ್ಟೆಗಳನ್ನು ತೊಳೆ.
  7. do the flowers ಹೂಗಳನ್ನು ಅಲಂಕಾರವಾಗಿ ಜೋಡಿಸು.
ನುಡಿಗಟ್ಟು
  1. do a (ಆಡುಮಾತು) (ಒಬ್ಬರಂತೆ) ನಟಿಸು; ಅಭಿನಯಿಸು: do a Rajkumar ರಾಜಕುಮಾರನಂತೆ ಅಭಿನಯಿಸು: do away (with)
    1. ತೆಗೆದುಹಾಕು; ರದ್ದು ಮಾಡು; ತೀರಿಸು.
    2. ಕೊಲ್ಲು; ತೀರಿಸು; ಸಾಯಿಸು.
  2. do by (ಒಬ್ಬನೊಡನೆ, ಒಂದು ವಿಷಯದಲ್ಲಿ, ಒಂದುಗೊತ್ತಾದ ರೀತಿಯಲ್ಲಿ) ವರ್ತಿಸು; ನಡೆದುಕೊ; ವ್ಯವಹರಿಸು.
  3. do down (ಆಡುಮಾತು)
    1. ಮೋಸಮಾಡು; ವಂಚಿಸು; ಟೋಪಿಹಾಕು.
    2. (ಮೋಸದಿಂದ) ಮೇಲುಗೈಯಾಗು; ಜಯಿಸು; ಸೋಲಿಸು.
  4. do for
    1. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಮನೆವಾರ್ತೆಗಾರನಾಗಿರು; ಮನೆವಾರ್ತೆಮಾಡು; ಗೃಹಕೃತ್ಯ; ನೋಡಿಕೊ; ಮನೆಗೆಲಸಗಳನ್ನು ಮಾಡು. ನೋಡಿಕೊ.
    2. ನಿರ್ವಹಿಸು; ನಿಭಾಯಿಸು: what do you do for water’? ನೀನು ನೀರಿಗಾಗಿ ಏನು ಮಡುತ್ತೀಯೆ?
    3. ಸಾಕಷ್ಟಿರು; ಸಾಕಾಗಿರು; ತೃಪ್ತಿಕರವಾಗಿ.
    4. (ಆಡುಮಾತು) (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) ನಾಶಮಾಡು; ಕೊಲ್ಲು: the country is done for ದೇಶ ನಾಶವಾಗಿದೆ; ದೇಶದ ಕತೆ ಮುಗಿದಿದೆ. this shirt is done for ಈ ಷರ್ಟು ಜೀಣವಾಗಿದೆ. I’m afraid he is done for ನನಗನಿಸುವಂತೆ – ಅವನ ಕತೆ ಮುಗಿಯಿತು, ಅವನು ಹಾನಿಗೊಳಗಾಗಿದ್ದಾನೆ, ಅವನು ಸಾಯುವಂತಿದ್ದಾನೆ. ಮೊದಲಾದವು.
  5. do in (ಅಶಿಷ್ಟ)
    1. ಕೊಲ್ಲು.
    2. (ಆಡುಮಾತು) ಸೋತುಹೋಗು; ಸುಸ್ತಾಗು: ಆಯಾಸಗೊಳ್ಳು.
  6. do in the eye (ಅಶಿಷ್ಟ) ಮೋಸಮಾಡು; ವಂಚಿಸು; ಕೈಕೊಡು; ಗಸ್ತು ಕೊಡು.
  7. do it
    1. ಸಾಧಿಸು; ಜಯಗಳಿಸು: he has done it at last ಕೊನೆಗೂ ಆತ ಅದನ್ನು ಸಾಧಿಸಿದ.
    2. ಹಾನಿಮಾಡಿಕೊ; ವಿನಾಶತಂದುಕೊ: ಹಾಳುಮಾಡಿಕೊ: now, you have done it ಈಗ ನೀನು ವಿನಾಶ ತಂದುಕೊಂಡೆ.
  8. do one out of (ಅಶಿಷ್ಟ) ಮೋಸ ಮಾಡು; ವಂಚಿಸು.
  9. do one’s best ಕೈಲಾದುದನ್ನೆಲ್ಲ ಮಾಡು; ಶಕ್ತಿಯೆಲ್ಲ ಪ್ರಯೋಗಿಸಿ ಯತ್ನಿಸು.
  10. do one’s BIT.
  11. do one’s damnedest (ಅಶಿಷ್ಟ) ಕೈಲಾದುದನ್ನೆಲ್ಲ ಮಾಡು; ಶತಪ್ರಯತ್ನಮಾಡು; ಸರ್ವಶಕ್ತಿಯನ್ನೂ ಪ್ರಯೋಗಿಸು.
  12. do oneself well ಸಾಕಷ್ಟು ಅನುಕೂಲಗಳನ್ನು ಸಂಪಾದಿಸಿಕೊ; ಸುಖಕ್ಕೆ ಯಾ ಭೋಗಕ್ಕೆ ಬೇಕೆನಿಸುವಷ್ಟು ಒದಗಿಸಿಕೊ.
  13. do one’s head (or nut) (ಅಶಿಷ್ಟ)
    1. ತುಂಬ ಯೋಚನೆಯಲ್ಲಿರು; ಚಿಂತೆಯಲ್ಲಿ ಮುಳುಗಿರು.
    2. ಬಹಳ ಕೋಪದಲ್ಲಿರು: ಕೋಪೋದ್ರಿಕ್ತನಾಗಿರು.
  14. done to a turn
    1. (ಮಾಂಸ ಮೊದಲಾದವನ್ನು) ಸರಿಯಾಗಿ ಬೇಯಿಸಿದ.
    2. ಬಹಳ ಚೆನ್ನಾಗಿ ಮಾಡಿದ; ಉತ್ಕೃಷ್ಟವಾಗಿ ತಯಾರಿಸಿದ.
  15. do out (ಕೋಣೆಯನ್ನು) ಸ್ವಚ್ಛಗೊಳಿಸು ಯಾ ಮತ್ತೆ ಅಲಂಕರಿಸು.
  16. do over (ಅಶಿಷ್ಟ)
    1. ಹೊಡೆ; ಬಡಿ; ಚಚ್ಚು; ಮೇಲೆ ಬೀಳು; ಆಕ್ರಮಣ ಮಾಡು.
    2. (ಅಮೆರಿಕನ್‍ ಪ್ರಯೋಗ) (ಆಡುಮಾತು) ಮತ್ತೆ ಮಾಡು; ಪುನಃ ಮಾಡು.
  17. do something for (or to) (ಆಡುಮಾತು) ಯಾವುದರದೇ ಗುಣ ಯಾ ರೂಪವನ್ನು ಹೆಚ್ಚಿಸು, ವೃದ್ಧಿಸು.
  18. do the TRICK.
  19. do to = ನುಡಿಗಟ್ಟು \((3)\).
  20. do to death ಕೊಲ್ಲು; ಹೊಡೆದು ಸಾಯಿಸು.
  21. do unto = ಪ್ರಾಚೀನ ಪ್ರಯೋಗ
  22. do up
    1. ರಿಪೇರಿಮಾಡು; ಸರಿಮಾಡು; ನೇರಮಾಡು; ದುರಸ್ತಿಮಾಡು.
    2. ನವೀಕರಿಸು; ಮತ್ತೆ ಹೊಸದಾಗಿರುವಂತೆ ಮಾಡು.
    3. (ಭಾಂಗಿ ಮೊದಲಾದವನ್ನು) ಕಟ್ಟು; ಮೂಟೆಯಾಗಿ ಕಟ್ಟು; ಪೊಟ್ಟಣ ಕಟ್ಟು.
    4. ಅಲಂಕಾರ ಮಾಡಿಕೊ; ಅಂಕರಿಸಿಕೊ; ಉಡುಪು ಮೊದಲಾದವನ್ನು ತೊಡು, ಧರಿಸು.
    5. (ಅಶಿಷ್ಟ) ನಾಶಮಾಡು; ಹಾನಿಗೊಳಿಸು.
    6. (ಅಶಿಷ್ಟ) ಹೊಡೆ; ಚಚ್ಚು.
  23. do well for oneself ಮುಂದುವರಿ; ಏಳಿಗೆ ಹೊಂದು; ಅಭಿವೃದ್ಧಿ ಪಡೆ; ಮುಂದಕ್ಕೆ ಬರು.
  24. do well out of ಲಾಭ ಪಡೆ; ಲಾಭ ಹೊಂದು; ಪ್ರಯೋಜನ ಪಡೆ.
  25. do with
    1. ಸರಿಮಾಡಿಕೊ: ಒಪ್ಪಿಕೊ; ಸಹಿಸಿಕೊ; ಸಾವರಿಸಿಕೊಂಡು ಹೋಗು.
    2. (ಆಡುಮಾತು) ತಡೆದುಕೊ; ಆಗು; ಸಂತೋಷವಾಗುವಷ್ಟು ಯಾ ಸುಧಾರಿಸುವಷ್ಟು ಇರು, ಸಿಕ್ಕು: could do with a drink ಒಂದು ಗುಟುಕು ಮದ್ಯ ಬಿದ್ದರೆ ಆದೀತು.
    3. ಸಾಕಷ್ಟು ಇದೆಯೆಂದು ಯಾ ಉಪಯೋಗಕ್ಕೆ ಸಾಕೆಂದು ಅನ್ನಿಸು: I can do with fifty rupees ಐವತ್ತು ರೂಪಾಯಿ ಇದ್ದರೆ (ದೊರೆತರೆ) ನನಗೆ ಸಾಕಾಗಬಹುದು ಅನ್ನಿಸುತ್ತದೆ.
  26. do without (ವಸ್ತು ಮೊದಲಾದವು) ಇಲ್ಲದೆಯೇ ನಡೆಸು, ನಿಭಾಯಿಸು; ಸಿಕ್ಕದಿದ್ದರೂ ನಿರ್ವಹಿಸು: I can do without his help ಅವನ ಸಹಾಯವಿಲ್ಲದೆಯೇ ನಡೆಸಬಲ್ಲೆ.
  27. have to do with
    1. ಒಡನೆ ಸಂಬಂಧ ಇರು; ಗೊಡವೆ ಇರು; ವ್ಯವಹಾರ ಹೊಂದಿರು; ಸಂಬಂಧವಿರು; ಸಂಬಂಧಿಸಿರು.
    2. ಫಲವಾಗಿರು; ಪರಿಣಾಮವಾಗಿರು: his bad manners has to do with his upbringing ಅವನ ಕೆಟ್ಟ ನಡತೆ ಅವನನ್ನು ಬೆಳೆಸಿದ ರೀತಿಯ ಫಲ.
    3. ಸಹಾಯಕವಾಗಿರು; ಕಾರಣವಾಗಿರು: hardwork has a great deal to do with his success ಕಷ್ಟದ ದುಡಿಮೆ ಅವನ ಯಶಸ್ಸಿಗೆ ಬಹುಮಟ್ಟಿಗೆ ಕಾರಣವಾಗಿರುತ್ತದೆ.
  28. it is not done ಅದು ವಿಹಿತ ವಿಧಾನವಲ್ಲ; ಅದು ಉಚಿತ ರೀತಿಯಲ್ಲ; ಅದು ಸೂಕ್ತ ಕ್ರಮವಲ್ಲ; ಅದು ಯೋಗ್ಯವರ್ತನೆಯಲ್ಲ, ಶಿಷ್ಟಾಚಾರವಲ್ಲ.
  29. make do (with) ಅಗತ್ಯ ಪೂರೈಸು; ಸಾಕಾಗುವಂತೆ ಮಾಡು; ಸಾಕಷ್ಟು ಅನ್ನಿಸು: can you make Rs. 10 do? ಹತ್ತು ರೂಪಾಯಿ ನಿನ್ನ ಅಗತ್ಯಕ್ಕೆ ಸಾಕಾಗುವಂತೆ ಮಾಡಿಕೊಳ್ಳುತ್ತೀಯಾ? can you make that shirt do for one more month? ಅ ಷರ್ಟು ಇನ್ನೂ ಒಂದು ತಿಂಗಳು ಬರುವಂತೆ ಮಾಡಿಕೊಳ್ಳುತ್ತೀಯಾ?
  30. not know what to do with ಮುಜುಗರ ಪಡು; ಬೇಸರಪಡು: I don’t know what to do with myself ನಾನೇನು ಮಾಡಬೇಕೆಂಬುದರ ಬಗ್ಗೆ ನನಗೆ ಮುಜುಗರವಾಗಿದೆ, ನನಗೆ ಬೇಸರವಾಗಿದೆ.
  31. that’s done it!
    1. (ಸಾಧನೆಯನ್ನು ಸೂಚಿಸುವ ಉದ್ಗಾರ) ಹೊಡೆದ! ಗಿಟ್ಟಿಸಿದ!
    2. (ದುಃಖಸೂಚಕ ಉದ್ಗಾರ) ಮುಗಿಯಿತು! ಆಗಿಹೋಯಿತು!
  32. what is to do? ಏನಾಗುತ್ತಿದೆ? ಏನು ನಡೆಯುತ್ತಿದೆ? ಏನು ವಿಷಯ?
  33. that will do! ಸಾಕು ಮಾಡು!