See also 2up  3up  4up  5up
1up ಅಪ್‍
ಕ್ರಿಯಾವಿಶೇಷಣ
  1. ಮೇಲೆ; ಮೇಲಕ್ಕೆ; ಮೇಲುಗಡೆ (ಯಲ್ಲಿ); ಮೇಲುಗಡೆಗೆ: high up in the air (ಮೇಲೆ) ಆಕಾಶದಲ್ಲಿ. what are they doing up there? ಅಲ್ಲಿ ಮೇಲೆ ಅವರು ಏನು ಮಾಡುತ್ತಿದ್ದಾರೆ? lives four floors up ಮೇಲೆ ನಾಲ್ಕನೆಯ ಅಂತಸ್ತಿನಲ್ಲಿ ವಾಸಿಸುತ್ತಾನೆ. went up three places in class ಅವನು ತರಗತಿಯಲ್ಲಿ ಮೂರು ಸ್ಥಾನ(ದಷ್ಟು) ಮೇಲಕ್ಕೇರಿದ.
  2. (ಆಡುಮಾತು) ಅಲ್ಲಿ ಮುಂದುಗಡೆ; ಅಲ್ಲಿ ಮೇಲುಗಡೆ: went up front ಮುಂದಿನ ಸಾಲಿಗೆ ಹೋದ.
  3. (ಹಿಂದೆ) ಯಾವುದೋ ಕಾಲದವರೆಗೆ.
  4. ನದಿಯ ಮೇಲಕ್ಕೆ, ಮೂಲದವರೆಗೆ: follow a stream up to its source ನದಿಯ ಮೇಲಕ್ಕೆ, ಮೂಲದವರೆಗೆ (ಜಾಡು ಹಿಡಿದು) ಹೋಗು.
  5. ಒಳನಾಡಿನಲ್ಲಿ.
  6. (ಜೂಜುಕುದುರೆಯ ಸವಾರನ ವಿಷಯದಲ್ಲಿ) ಕುದುರೆ ಏರಿ, ಹತ್ತಿ.
  7. ಒಂದು ಸಮರ್ಥ ಯಾ ಕಾರ್ಯಾತ್ಮಕವಾದ ಯಾ ಪ್ರಗತಿಯ ಸ್ಥಿತಿಯಲ್ಲಿ ಯಾ ಸ್ಥಿತಿಗೆ: stirred up trouble ಸಮಸ್ಯೆ ಹುಟ್ಟು ಹಾಕಿದ. the house is up for sale ಮನೆ ಮಾರಾಟಕ್ಕಿದೆ. the hunt is up ಬೇಟೆ ಯಾ ಶೋಧನೆ ಶುರು ಆಗಿದೆ.
  8. ಕಲಿತು ಯಾ ತಿಳಿದು: is well up in French ಹ್ರೆಂಚನ್ನು ಚೆನ್ನಾಗಿ ಕಲಿತುಕೊಂಡಿದ್ದಾನೆ.
  9. (ರಸ್ತೆ ಮೊದಲಾದವುಗಳ ವಿಷಯದಲ್ಲಿ) ರಿಪೇರಿಯಲ್ಲಿ; ದುರಸ್ತಿನಲ್ಲಿ.
    1. (ಆಟದ ಗೆಲ್ಲಂಕ ಯಾ ಸ್ಕೋರಿನ ವಿಷಯದಲ್ಲಿ) ಸ್ಕೋರ್‍ ಬೋರ್ಡಿನಲ್ಲಿ ದಾಖಲೆ ಮಾಡಿ, ನೋಂದಣಿಸಿ; ಯಾವುದೋ ಒಂದು ಸಮಯದಲ್ಲಿ ಒಟ್ಟು ಮೊತ್ತವಾಗಿ; ಒಂದು ತಂಡ ಯಾ ಒಬ್ಬ ಆಟಗಾರನ ಇನ್ನೊಂದು ತಂಡ ಯಾ ಆಟಗಾರನ ಮೊತ್ತಕ್ಕಿಂತ ಮೀರಿಸಿದ ಮೊತ್ತವಾಗಿ: our team is 3 goals up ನಮ್ಮ ತಂಡ ಮೂರು ಗೋಲು ಗಳಿಸಿದೆ ಯಾ ಮೂರು ಗೋಲುಗಳಿಂದ ಮುಂದಿದೆ.
    2. (ಆಟಗಾರನ ವಿಷಯದಲ್ಲಿ) (ಹಾಗೆ ಇನ್ನೊಂದು ತಂಡ ಯಾ ಆಟಗಾರನಿಗಿಂತ) ಹೆಚ್ಚು ಗೆಲ್ಲಂಕ ಗಳಿಸಿ.
  10. ನ್ಯಾಯಾಲಯ ಯಾ ನ್ಯಾಯಾಧೀಶನ ಮುಂದೆ ಹಾಜರುಪಡಿಸಿ: was brought up for speeding ಅತಿ ವೇಗವಾಗಿ ಓಡಿಸಿದ ಕಾರಣಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
  11. (ಬ್ರಿಟಿಷ್‍ ಪ್ರಯೋಗ) (ಯಾವುದೋ ಒಂದು) ಬೆಲೆ ಉತ್ತಮ ಸ್ಥಿತಿಯಲ್ಲಿ ಏರಿ: Rs.5 up on the transaction (ವ್ಯಾಪಾರದ) ವಹಿವಾಟಿನಲ್ಲಿ ೫ ರೂ.ಗಳಷ್ಟು ಮುಂದಾಗಿ, ಹೆಚ್ಚಾಗಿ.
  12. (ಪದಾರ್ಥ ಮೊದಲಾದವುಗಳ ವಿಷಯದಲ್ಲಿ) ಬೆಲೆ ಏರಿ: meat is up this week ಈ ವಾರ ಮಾಂಸದ ಬೆಲೆ ಏರಿದೆ.
  13. (ನಾಟಕಶಾಲೆಯ ಪರದೆ) (ರಂಗಸ್ಥಳ ಕಾಣಿಸುವಂತೆ) ಪರದೆ – ಮೇಲಕ್ಕೆ ಏರಿ, ಮೇಲೆದ್ದು.
  14. (ಮಾತನಾಡುವವನು ನಿಂತಿರುವ ಯಾ ಸೂಚಿಸಿದ) ಸ್ಥಳದ ಯಾ ಕಾಲದವರೆಗೆ ಬಂದು, ಸಮೀಪಿಸಿ: the child came up and asked me the time ಮಗು ನನ್ನ ಬಳಿ ಬಂದು ‘ಎಷ್ಟು ಗಂಟೆ’ ಎಂದು ಕೇಳಿತು. went straight up to the door ನೇರವಾಗಿ ಬಾಗಿಲವರೆಗೆ ಹೋದ. has been up till now ಇದುವರೆಗೆ ಚೆನ್ನಾಗಿ, ಆರೋಗ್ಯವಾಗಿದ್ದಾನೆ.
    1. (ಹಾಸಿಗೆ ಮೊದಲಾದವುಗಳಿಂದ) ಮೇಲಕ್ಕೆದ್ದು.
    2. (ಪೀಠದಲ್ಲಿ ಕುಳಿತವನು, ಮಂಡಿಯೂರಿ ಕುಳಿತವನು) ಮೇಲೆದ್ದು ನಿಂತು: sprang up from his seat ಅವನು ಪೀಠದಿಂದ ಫಕ್ಕನೆ ಮೇಲೆದ್ದು ನಿಂತ.
    3. (ಚಟುವಟಿಕೆಯ ಸೂಚನೆಯಾಗಿ) ಮೇಲೆದ್ದು; ಮೇಲಕ್ಕೆ ಎಬ್ಬಿಸಿ (ಮೊದಲಾದ್ದಾಗಿ): put your umbrella up ನಿನ್ನ ಛತ್ರಿ ಬಿಚ್ಚಿ ಮೇಲೆತ್ತು.
    4. ನಿಲ್ಲಿಸಿ; ನಿಂತಿರುವ ಸ್ಥಿತಿಯಲ್ಲಿ: stood it up ಅದನ್ನು ನಿಲ್ಲಿಸಿದ.
  15. ( ಭಾವಸೂಚಕ ಅವ್ಯಯದಲ್ಲಿ) ಎದ್ದುನಿಂತು; ಮೇಲಕ್ಕೆ ನಿಂತು.
  16. ಪರಿಶ್ರಮ ಪಡೆದು; ಕಲಿತು; ಶಿಕ್ಷಣಹೊಂದಿ: he is well up in mathematics ಅವನಿಗೆ ಗಣಿತದಲ್ಲಿ ಒಳ್ಳೆಯ ಪರಿಶ್ರಮವಿದೆ.
  17. ಮುಂದುವರಿದು; ಏಳಿಗೆಯಾಗಿ: he is up with the leaders ಅವನು ಮುಂದುವರಿದು ಮುಖಂಡರ ಜತೆ ಇದ್ದಾನೆ.
  18. (ನೌಕಾಯಾನ) (ಚುಕ್ಕಾಣಿಯ ವಿಷಯದಲ್ಲಿ) ಗಾಳಿಗೆದುರಾಗಿ.
  19. ದಂಗೆಯೆದ್ದು.
  20. (ಬೇಟೆ ಮೊದಲಾದವು) ಮುಂದುವರಿಯುತ್ತ; ನಡೆಯುತ್ತ.
  21. (ಸೂರ್ಯ, ಚಂದ್ರ, ಮೊದಲಾದವು) ಉದಯಿಸಿ: the moon is up ಚಂದ್ರ ಮೂಡಿದ್ದಾನೆ.
  22. ಪೂರ್ತಿಯಾಗಿ ಯಾ ಪರಿಣಾಮಕಾರಿಯಾಗಿ: eat up ತಿಂದುಬಿಡು. drink up ಕುಡಿದುಬಿಡು. sawn up into logs ದಿಮ್ಮಿಗಳಾಗಿ ಕೊಯ್ದು ಬಿಟ್ಟ.
  23. ಅಡಕವಾದ, ಶೇಖರಿಸಿದ ಯಾ ಸುಭದ್ರವಾದ ಸ್ಥಿತಿಗೆ ತಂದು: pack up ಪೊಟ್ಟಣ ಕಟ್ಟು. bind up ಕಟ್ಟುಗಳನ್ನಾಗಿ ಮಾಡು. store up ಶೇಖರ ಮಾಡು. lock up ಸುರಕ್ಷಿತವಾಗಿ, ಭದ್ರವಾಗಿ – ಬೀಗ ಹಾಕಿ ಭದ್ರಪಡಿಸು.
  24. ಮೇಲಿನದು ಎಂದು ಭಾವಿತವಾದ ಸ್ಥಳಕ್ಕೆ ಯಾ ಸ್ಥಳದಲ್ಲಿ, ಮುಖ್ಯವಾಗಿ
    1. ಉತ್ತರಕ್ಕೆ, ಉತ್ತರದಲ್ಲಿ: is up in Kashmir ಉತ್ತರದ ಕಾಶ್ಮೀರದಲ್ಲಿ.
    2. (ಬ್ರಿಟಿಷ್‍ ಪ್ರಯೋಗ) ಪ್ರಮುಖ ನಗರಕ್ಕೆ ಯಾ ವಿಶ್ವವಿದ್ಯಾನಿಲಯಕ್ಕೆ: went up to London ಲಂಡನ್‍ ನಗರಕ್ಕೆ ಹೋದ. went up to Oxford ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯಕ್ಕೆ ಸೇರಿದ.
  25. ಸಿದ್ಧಪಡಿಸಿದ ಯಾ ಅಪೇಕ್ಷಿತ ಸ್ಥಿತಿಗೆ: wound up the watch ಗಡಿಯಾರಕ್ಕೆ ಕೀಲುಕೊಟ್ಟ.
  26. (ಗಣಕಯಂತ್ರದ ವಿಷಯದಲ್ಲಿ) ನಡೆಯುತ್ತ; ಬಳಕೆಗೆ ಸಿದ್ಧವಾದ.
  27. ಹೆಚ್ಚು ಗಟ್ಟಿಯಾಗಿ ಯಾ ಸ್ಪಷ್ಟವಾಗಿ: speak up ಗಟ್ಟಿಯಾಗಿ ಯಾ ಸ್ಪಷ್ಟವಾಗಿ ಹೇಳು, ಮಾತನಾಡು.
  28. ಮುಗಿದು ಹೋಗಿ; ಪೂರ್ತಿಯಾಗಿ; ಸಿಗದಂತಾಗಿ: time is up ಕಾಲ ಮುಗಿದುಹೋಯಿತು, ಹೊತ್ತಾಯಿತು; ವೇಳೆ ಮೀರಿತು.
  29. ಹಾಸಿಗೆಯಿಂದ ಎದ್ದು: are you up yet? ನೀನು ಇನ್ನೂ ಎದ್ದಿದ್ದೀಯಾ?
  30. (ಮುಖ್ಯವಾಗಿ ಅಸಾಧಾರಣವಾಗಿ ಯಾ ಅನಿರೀಕ್ಷಿತವಾಗಿ) ನಡೆಯತ್ತ; ಆಗುತ್ತ; ಸಂಭವಿಸುತ್ತ: something is up ಏನೋ ಆಗುತ್ತಿದೆ, ನಡೆಯುತ್ತಿದೆ.
ಪದಗುಚ್ಛ
  1. be all up with (ವ್ಯಕ್ತಿಗೆ) ವಿನಾಶಕರವಾಗಿ; ಪೂರ್ತಿ ಹಾನಿಕರವಾಗಿ; ಭರವಸೆ, ನಿರೀಕ್ಷೆ ಇಲ್ಲದಂತೆ: it is all up with him (ಆಡುಮಾತು) (ನಿರಾಶೆಯ ಸೂಚನೆಯಾಗಿ) ಅವನ ಕಥೆ ಪೂರೈಸಿತು. ಅವನ ಕಥೆ ಪೂರ್ತಿ ಮುಗಿದಂತೆಯೇ.
  2. something is up (ಆಡುಮಾತು) ಏನೋ ಕಾದಿದೆ; ಯಾವುದೋ ಅಸಾಧಾರಣವಾದುದು ಯಾ ಅನಪೇಕ್ಷಿತವಾದುದು ನಡೆಯುವುದರಲ್ಲಿದೆ, ಸಂಭವಿಸುವುದರಲ್ಲಿದೆ.
  3. up against
    1. ಹತ್ತಿರವಾಗಿ; ಸಮೀಪದಲ್ಲಿ.
    2. ಸಂಪರ್ಕದಲ್ಲಿ ಯಾ ಸಂಪರ್ಕಿಸಿ.
    3. (ಆಡುಮಾತು) ಮುಖಾಮುಖಿಯಾಗಿ; ಎದುರಾಗಿ; ಎದುರಿನಲ್ಲಿ: up against a problem ಸಮಸ್ಯೆಯನ್ನು ಎದುರಿಸಿ.
  4. up against it. (ಆಡುಮಾತು) ವಿಪರೀತ ಕಷ್ಟಕ್ಕೆ ಸಿಕ್ಕಿ.
  5. up and $^1$about (or doing).
  6. up and down
    1. ಅತ್ತಿತ್ತ; ಅಲ್ಲಿಂದಿಲ್ಲಿಗೆ; ಕೆಳಗಿಂದ ಮೇಲಕ್ಕೆ: marching up and down ಅತ್ತಿತ್ತ ನಡೆದಾಡುತ್ತ.
    2. ಎಲ್ಲೆಲ್ಲೂ; ಎಲ್ಲ ಕಡೆ: I have looked for it up and down ಅದಕ್ಕಾಗಿ ನಾನು ಎಲ್ಲ ಕಡೆ ಹುಡುಕಿದ್ದೇನೆ.
    3. (ಆಡುಮಾತು) ಆರೋಗ್ಯ ಯಾ ಉತ್ಸಾಹ ಏರುಪೇರಾಗುತ್ತ.
  7. up for
    1. (ನಿರ್ದೇಶಿಸುವ ಬೆಲೆಗೆ) ಸಿಗುವ; ದೊರಕುವ.
    2. (ಹುದ್ದೆ ಮೊದಲಾದವುಗಳಿಗೆ) ಪರಿಗಣನೆಯಲ್ಲಿರುವ.
  8. up in $^2$arms.
  9. up to
    1. ವರೆಗೆ; ತನಕ: up to the present ಇದುವರೆಗೆ; ಇಲ್ಲಿಯತನಕ.
    2. ಇಷ್ಟು ಸಂಖ್ಯೆಯ ತನಕ, ಸಂಖ್ಯೆಯ ಒಳಗೆ: can take up to six guests ಆರಕ್ಕೆ ಮೀರದಷ್ಟು ಅತಿಥಿಗಳನ್ನು ನಾನು ಬರಮಾಡಿಕೊಳ್ಳಬಲ್ಲೆ.
    3. (ಇಷ್ಟು) ಸಂಖ್ಯೆ ಯಾ ಮೊತ್ತಕ್ಕೆ ಮೀರದಂತೆ: sums up to Rs. 5 ಐದು ರೂಪಾಯಿಗಳಿಗೆ ಮೀರದಷ್ಟು ಮೊತ್ತ.
    4. (ಯಾವುದೋ ಕೆಲಸ) ಮಾಡುವ ಸ್ಥಿತಿಯಲ್ಲಿ, ಶಕ್ತನಾಗಿ: am not up to walking 20 miles ನಾನು ಇಪ್ಪತ್ತು ಮೈಲಿ ನಡೆಯುವ ಸ್ಥಿತಿಯಲ್ಲಿಲ್ಲ.
    5. ಮಟ್ಟಕ್ಕೆ ಸರಿಯಾಗಿ: not up to your usual standard ನಿಮ್ಮ ಮಾಮೂಲಿ ಮಟ್ಟಕ್ಕೆ ಏರಲಾರದು, ಬರಲಾರದು.
    6. ಒಂದು ಕೆಲಸದಲ್ಲಿ ತೊಡಗಿರು, ಉದ್ಯುಕ್ತನಾಗಿರು: what have you been up to? ನೀನು ಏನು ಮಾಡುತ್ತಾ ಇದ್ದೀಯೆ?
  10. up to $^2$date.
  11. up to one’s tricks.
  12. up to $^3$snuff.
  13. up to the knocker.
  14. up to the $^1$mark.
  15. up to the $^1$minute.
  16. up to us ನಮ್ಮ ಕೆಲಸ; ನಮಗೆ ಸೇರಿದ ಕೆಲಸ: it is up to us to do something ಈಗ ನಾವು ಏನಾದರೂ ಮಾಡಲೇಬೇಕು (ಈಗ ಏನಾದರೂ ಮಾಡುವುದು ನಮಗೆ ಸೇರಿದ್ದು).
  17. up with (it) ( ಭಾವಸೂಚಕ ಅವ್ಯಯ) (ನಿರ್ದಿಷ್ಟ ವ್ಯಕ್ತಿಗೆ ಯಾ ವಸ್ತುವಿಗೆ ಬೆಂಬಲ ಸೂಚಿಸುವಲ್ಲಿ) ಎತ್ತು! ಏಳು! ಮೇಲಕ್ಕೆತ್ತು! ಜಯ ಮೊದಲಾದವು ಆಗಲಿ! ಅದನ್ನೆತ್ತು; ಅದನ್ನು ಮೇಲಕ್ಕೆ ತೆಗೆ: up with the Revolution! ಕ್ರಾಂತಿ ಚಿರಾಯುವಾಗಲಿ! up with you ಮೇಲೇಳು; ಎದ್ದು ನಿಲ್ಲು.
  18. what’s up? (ಆಡುಮಾತು)
    1. ಏನು ಆಗುತ್ತಿದೆ?
    2. ಏನು ಸಮಾಚಾರ?