See also 2minute  3minute
1minute ಮಿನಿಟ್‍
ನಾಮವಾಚಕ
  1. ನಿಮಿಷ; ಮಿನಿಟ್ಟು; ಗಂಟೆಯ $\frac{ 1}/{ 60}$ನೆಯ ಭಾಗ.
  2. ಒಂದು ಕ್ಷಣ (ಕಾಲ); ಒಂದು ನಿಮಿಷ; ಕ್ಷಣ ಮಾತ್ರ: the bus leaves in a minute ಬಸ್ಸು ಇನ್ನೊಂದು ನಿಮಿಷದಲ್ಲಿ ಹೊರಡುತ್ತದೆ.
  3. ಒಂದು ನಿಮಿಷದಲ್ಲಿ ಕ್ರಮಿಸಬಹುದಾದ ದೂರ: twenty minutes from the station ಸ್ಟೇಷನ್ನಿನಿಂದ 20 ನಿಮಿಷಗಳ ದೂರದಲ್ಲಿ.
  4. ಹೊತ್ತು; ಗಳಿಗೆ; ಕ್ಷಣ; ಕಾಲದ ಒಂದು – ಅಂಶ, ಭಾಗ: he may come any minute ಅವನು ಯಾವುದೇ ಕ್ಷಣದಲ್ಲಿ ಬರಬಹುದು.
  5. (ಆಡುಮಾತು) ಈಗ; ಸದ್ಯದ ಕಾಲ: what are you doing at the minute ನೀನು ಸದ್ಯದಲ್ಲಿ ಏನು ಮಾಡುತ್ತಿದ್ದೀಯೆ?
  6. (ಕೋನಗಳ ವಿಷಯದಲ್ಲಿ) ಮಿನಿಟ್ಟು; ಡಿಗ್ರಿಯ $\frac{ 1}/{ 60}$ನೆಯ ಭಾಗ.
  7. ಕರಡು ಲೇಖನ; ಕರಡು ಪತ್ರ.
  8. (ಲಿಖಿತ) ಟಿಪ್ಪಣಿ; ವರದಿ; ಸಾರಾಂಶ.
  9. (ಬಹುವಚನದಲ್ಲಿ) (ಸಭೆ, ಸಮಿತಿ, ಮೊದಲಾದವುಗಳ ಕಾರ್ಯಕಲಾಪಗಳ) ಸಂಕ್ಷಿಪ್ತ ವರದಿ; ಸಾರಾಂಶ; ಗೋಷ್ವಾರೆ.
  10. ಜ್ಞಾಪಕ ಪತ್ರ; ಸೂಚನೆ ಪತ್ರ; (ಒಂದು ಮಾರ್ಗ, ರೀತಿ ಅನುಸರಿಸಬೇಕೆಂದು ಅಧಿಕಾರಿ ಕೊಡುವ ಯಾ ಶಿಫಾರಸು ಮಾಡುವ) ಕಚೇರಿಯ ಸೂಚನೆ ಪತ್ರ: treasury minute ಖಜಾನೆಯ – ಸೂಚನೆಯ ಪತ್ರ, ಜ್ಞಾಪಕ ಪತ್ರ, ಜ್ಞಾಪನ ಪತ್ರ.
ಪದಗುಚ್ಛ
  1. just (or wait) a minute
    1. (ಸ್ವಲ್ಪ ಕಾಲ, ತುಸು ಕಾಲ ಕಾಯಬೇಕೆಂದು ಕೋರುವಾಗ ಹೇಳುವ ಮಾತು) ಒಂದು ನಿಮಿಷ (ತಡೆಯಿರಿ, ತಾಳಿ).
    2. ಪ್ರಶ್ನೆ ಯಾ ಆಕ್ಷೇಪ ಎತ್ತುವುದಕ್ಕೆ ಮುಂಚೆ ಹೇಳುವ ಮಾತು.
  2. the minute (that) ತತ್‍ಕ್ಷಣವೇ; ಒಡನೆಯೇ; ಕೂಡಲೇ; ಆ ಗಳಿಗೆಯೇ; ಆ ಕ್ಷಣದಲ್ಲೇ: wash them the minute you are through using them ನೀನು ಅವುಗಳನ್ನು ಉಪಯೋಗಿಸಿದ ಕೂಡಲೇ ತೊಳೆದುಬಿಡು.
  3. upto the minute ಇದುವರೆಗೆ; ಇಂದಿನವರೆಗೆ; ಈ ದಿನದವರೆಗೆ ಪೂರ್ತಿಯಾಗಿ; ಈ ಗಳಿಗೆಯವರೆಗೆ; ಈ ನಿಮಿಷದವರೆಗೆ.