See also 1snuff  2snuff  4snuff
3snuff ಸ್ನಹ್‍
ನಾಮವಾಚಕ
  1. ನಸ್ಯ; ನಶ್ಯ; ನಾಸೀಪುಡಿ.
  2. ನಸ್ಯೌಷಧ; ನಸ್ಯದಂತೆ ಮೂಗಿನಲ್ಲಿ ಸೇದಿ ತೆಗೆದು ಕೊಳ್ಳಬೇಕಾದ ಔಷಧ.
ಪದಗುಚ್ಛ
  1. give (person) snuff (ವ್ಯಕ್ತಿಯನ್ನು) ತರಾಟೆಗೆ ತೆಗೆದುಕೊ; ಕಟುವಾಗಿ ಟೀಕಿಸು; ಉಗ್ರವಾಗಿ ಖಂಡಿಸು: gave me snuff about my extravagance ನನ್ನ ದುಂದುಗಾರಿಕೆಯ ಬಗ್ಗೆ ನನ್ನನ್ನು ತರಾಟೆಗೆ ತೆಗೆದುಕೊಂಡ.
  2. take (thing) in snuff (ಪ್ರಾಚೀನ ಪ್ರಯೋಗ) (ಒಂದರಿಂದ) ಅಸಮಾಧಾನಪಟ್ಟುಕೊ; (ಒಂದನ್ನು) ಅಪಚಾರವಾಗಿ ಭಾವಿಸು.
  3. up to snuff
    1. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಹುಷಾರಿ; ಹಸುಗೂಸಲ್ಲದ; ಚಾಲಾಕಾದ; ಎಳೆಯ ಮಗುವಲ್ಲದ; ಏನೂ ಅರಿಯದವನಲ್ಲದ; ಸುಲಭವಾಗಿ ಮರುಳುಗೊಳಿಸಲಾಗದ.
    2. (ಅಮೆರಿಕನ್‍ ಪ್ರಯೋಗ) (ಆರೋಗ್ಯ, ಕೆಲಸ, ನಿರ್ವಹಣೆ, ಮೊದಲಾದವುಗಳ ವಿಷಯದಲ್ಲಿ) ತೃಪ್ತಿಕರವಾದ; ಒಪ್ಪಿಗೆಯಾಗುವ ಮಟ್ಟದ.