See also 1date  3date
2date ಡೇಟ್‍
ನಾಮವಾಚಕ
  1. (ದಾಖಲೆ, ಪತ್ರ, ಕಾಗದ, ಪುಸ್ತಕ, ಶಾಸನ, ಮೊದಲಾದವುಗಳಲ್ಲಿ ನಮೂದಿಸಿರುವ, ಕೆಲವೊಮ್ಮೆ ಸ್ಥಳವೂ ಸೇರಿದಂತೆ ಅವುಗಳನ್ನು ಬರೆದ ಯಾ ಪ್ರಕಟಿಸಿದ ಯಾ ಅನುಷ್ಠಾನಕ್ಕೆ ತಂದ) ತಾರೀಖು; ತೇದಿ; ದಿನಾಂಕ; ದಿನ; ತಿಥಿ.
  2. ಸಂಭವ ಕಾಲ; ಯಾವುದಾದರೊಂದು ಜರುಗುವ ಯಾ ಜರುಗಿದ ಕಾಲ.
  3. (ಆಡುಮಾತು) (ಕಾಲ, ಸ್ಥಳಗಳ ವಿಷಯದಲ್ಲಿ) ಗೊತ್ತುಪಾಡು; ಏರ್ಪಾಡು; ನಿರ್ಣಯ; ನಿಶ್ಚಯ.
  4. ವಯಸ್ಸು; ಜೀವಮಾನ; ಆಯುಸ್ಸು; ಜೀವಿತಕಾಲ.
  5. (ಯಾವುದೇ ವಸ್ತು, ವಿಷಯ, ಮೊದಲಾದವು ಉಳಿಯುವ) ಕಾಲ; ಅವಧಿ: sweet things have short date ಒಳ್ಳೆಯದರ ಅವಧಿ ಅಲ್ಪ.
  6. (ಪ್ರಾಚೀನ ವಸ್ತುಗಳು ಮೊದಲಾದವುಗಳ) ಅವಧಿ; ಕಾಲ; ಯುಗ.
  7. (ಅಮೆರಿಕನ್‍ ಪ್ರಯೋಗ) (ಆಡುಮಾತು) ನಿಶ್ಚಿತಕಾಲ; ವಿಹಾರದಿನಾಂಕ; ಗಂಡು ಹೆಣ್ಣುಗಳು ವಿಹಾರಕ್ಕೆ ಗೊತ್ತು ಮಾಡಿಕೊಂಡಿರುವ ಕಾಲ.
  8. ವಿಹಾರವ್ಯಕ್ತಿ; ನಿಶ್ಚಿತವ್ಯಕ್ತಿ; ವಿಹಾರಕ್ಕೆ ಗೊತ್ತು ಮಾಡಿಕೊಂಡ ಹೆಣ್ಣು ಯಾ ಗಂಡು.
ನುಡಿಗಟ್ಟು
  1. out of date ಹಿಂದಿನ ಕಾಲದ; ಹಳೆಯ ಕಾಲದ; ಗತಕಾಲದ; ಓಬೀರಾಯನ ಕಾಲದ: go out of date
    1. ಹಳೆಯದಾಗು; ಹಿಂದಿನ ಕಾಲದ್ದಾಗು; ಪ್ರಾಚೀನವಾಗು.
    2. ರೂಢಿ ಬಿಟ್ಟುಹೋಗು; ಬಳಕೆ ತಪ್ಪು; ಚಾಲ್ತಿಯಲ್ಲಿ ಇಲ್ಲದಾಗು.
  2. to date ಇದುವರೆಗೆ; ಇಂದಿನವರೆಗೆ; ತಹಲ್‍ವರೆಗೆ; ಇಂದಿನ ತನಕ; ಸದ್ಯದವರೆಗೆ.
  3. up to date
    1. ಸದ್ಯೋಚಿತವಾಗಿ; ಸದ್ಯಾನುಗುಣವಾಗಿ; ಇಂದಿನ ಆವಶ್ಯಕತೆಗಳಿಗೆ ಯಾ ಜ್ಞಾನಕ್ಕೆ ಅನುಗುಣವಾಗಿ.
    2. ಸದ್ಯದವರೆಗೆ; ಇದುವರೆಗೆ; ತಹಲ್‍ವರೆಗೆ; ಇಂದಿನತನಕ.
  4. up-to-date ( ಗುಣವಾಚಕ)
    1. ಸದ್ಯಾನುಗುಣವಾಗಿರುವ; ಸದ್ಯೋಚಿತವಾಗಿರುವ.
    2. ಇಂದಿನ; ಸದ್ಯದ.