See also 2mark  3mark
1mark ಮಾರ್ಕ್‍
ನಾಮವಾಚಕ
  1. ಗುರಿ; ಲಕ್ಷ್ಯ; ಗುರಿಯಾಗಿ ಉಪಯೋಗಿಸುವ ಗುರಿಹಲಗೆ ಯಾ ಇತರ ವಸ್ತು.
  2. (ಮುಷ್ಟಿಕಾಳಗ) ಹೊಟ್ಟೆಯ ಕುಳಿ.
  3. ಗುರಿ; ಉದ್ದೇಶ; ಉದ್ದಿಷ್ಟ ವಸ್ತು.
  4. (ಗುಣ, ಭಾವ, ಸ್ವಭಾವ, ಮೊದಲಾದವುಗಳ) ಗುರುತು; ಕುರುಹು; ಚಿಹ್ನೆ; ಸೂಚನೆ.
  5. (ವಿಶೇಷಿಸಲು ಯಾ ಗುರುತಿಸಲು) ಹೆಚ್ಚಿದ, ಹಾಕಿದ, ಒತ್ತಿದ – ಗುರುತು, ಮುದ್ರೆ, ಛಾಪು, ಅಂಕನ, ಠಸ್ಸೆ, ಮೊದಲಾದವು.
  6. (ಅನಕ್ಷರಸ್ಥನು ತನ್ನ ರುಜುವಿಗೆ ಬದಲಾಗಿ ಹಾಕುವ) ಕತ್ತರಿ ಗುರುತು ಮೊದಲಾದವು.
  7. ಲಿಖಿತ ಯಾ ಮುದ್ರಿತ – ಸಂಕೇತ, ಚಿಹ್ನೆ, ಗುರುತು: a mark of interrogation ಪ್ರಶ್ನಾರ್ಥಕ ಚಿಹ್ನೆ.
  8. (ಶ್ರೇಷ್ಠತೆ, ನೈಪುಣ್ಯ, ನಡತೆ, ಮೊದಲಾದವನ್ನು ತೋರಿಸುವ) ಸಂಖ್ಯಾತ್ಮಕ ಯಾ ಅಕ್ಷರರೂಪದ ಸಂಕೇತ, ಚಿಹ್ನೆ: black mark ದುರ್ನಡತೆಯ ಚಿಹ್ನೆ; ಅವಗುಣದ ಗುರುತು.
  9. (ಪರೀಕ್ಷೆಯಲ್ಲಿ ಯೋಗ್ಯತೆಯನ್ನು ಸೂಚಿಸಲು ಕೊಡುವ) ಅಂಕ; ಗುಣಾಂಕ; ನಂಬರು: he gained 46 marks ಅವನು 46 ಅಂಕಗಳನ್ನು ಪಡೆದನು.
  10. ಸ್ಥಾನ ಸೂಚಕ – ಗೆರೆ, ರೇಖೆ, ಮೊದಲಾದವು.
  11. (ರಗ್ಬಿಕಾಲ್ಚೆಂಡಾಟ) (ಎದುರಾಳಿಯು ಒದ್ದ ಯಾ ಮುಂದಕ್ಕೆ ಎಸೆದ ಚೆಂಡನ್ನು ನೇರವಾಗಿ ಹಿಡಿದ ಆಟಗಾರನ) ನೆಲದ ಮೇಲಿನ ಹಿಮ್ಮಡಿ ಗುರುತು.
  12. ಕರೆ; ಕಲೆ; ಮಚ್ಚೆ.
  13. ಟ್ಯೂಟನರ ಹಳ್ಳಿ ಸಮುದಾಯದ ಸ್ವಾಮ್ಯದಲ್ಲಿದ್ದ ಜಮೀನು, ಪ್ರದೇಶ, ಭೂಮಿ.
  14. (ವ್ಯಾಯಾಮ ಕ್ರೀಡೆಗಳಲ್ಲಿ) ಆರಂಭಗೆರೆ; ಶುರುರೇಖೆ; ಪ್ರಾರಂಭಿಸುವ ಸ್ಥಳವನ್ನು ಸೂಚಿಸುವ ಗೆರೆ.
  15. ಸಾಧನೆಯ ಮಟ್ಟ, ಗುರುತು: his work falls below the mark ಅವನ ಕೆಲಸ ಸಾಧನೆಯ ಮಟ್ಟಕ್ಕಿಂತ ಕೆಳಗಿದೆ.
  16. (ಸಾಮಾನ್ಯವಾಗಿ Mark) (ಈ ಪದದ ನಂತರ ಅಂಕಿ ಬರುತ್ತದೆ) ಮಾರ್ಕ್‍; ಕಾರು, ವಿಮಾನ, ಮೊದಲಾದವುಗಳ ನಿರ್ದಿಷ್ಟ – ನಮೂನೆ, ಮಾದರಿ, ರೂಪ: this is the Mark 2 model ಇದು ಮಾರ್ಕ್‍ 2ರ ನಮೂನೆ.
  17. (ನೌಕಾಯಾನ) (ನೀರಿನ ಆಳ ಅಳೆಯುವಾಗ) ಧ್ವನಿರೇಖೆ (sounding-line)ಯಲ್ಲಿನ ಸ್ಥಾನ ಗುರುತಿಸಲು ಬಳಸುವ ವಸ್ತುವಿನ ಚೂರು.
  18. (ಆಸ್ಟ್ರೇಲಿಯನ್‍ ರಗ್ಬಿ ಹುಟ್‍ಬಾಲ್‍) ಗುರುತು:
    1. ಕನಿಷ್ಠ ಪಕ್ಷ ಹತ್ತು ಮೀಟರುಗಳ ದೂರರಿಂದ ಒದ್ದ ಚೆಂಡನ್ನು ನೆಲಕ್ಕೆ ತಗುಲುವ ಮುನ್ನ ಹಿಡಿಯುವುದು.
    2. ತದನಂತರ ಚೆಂಡನ್ನು ಒದ್ದ ಯಾ ಒದೆಯುವ ಜಾಗ, ಸ್ಥಾನ.
  19. (ಅಶಿಷ್ಟ) ಗುರಿ; ದಗಾಕೋರ ಮೊದಲಾದವರ ದೃಷ್ಟಿಗೆ ಒಳಗಾಗಿರುವ ವ್ಯಕ್ತಿ.
ಪದಗುಚ್ಛ
  1. below the mark ಗೊತ್ತಾದ ಮಟ್ಟಕ್ಕಿಂತ ಕೆಳಗೆ.
  2. beside the mark
    1. ಗುರಿ ತಪ್ಪಿದ.
    2. ಗುರಿ – ಮುಟ್ಟದ, ತಲುಪದ.
    3. (ರೂಪಕವಾಗಿ) ವಿಷಯಕ್ಕೆ ಸಂಬಂಧಿಸಿರದ; ಅಸಂಬದ್ಧ; ಅನಪೇಕ್ಷಿತ.
    4. ಯಥಾರ್ಥವಾಗಿರದ; ಸರಿಯಾಗಿರದ; ತಪ್ಪಾದ.
  3. easy mark (ಆಡುಮಾತು) ಸುಲಭವಶ್ಯ; ಸುಲಭವಾಗಿ – ಹಳಕ್ಕೆ ಬೀಳುವವನು, ನಂಬುವವನು, ಮೋಸ ಹೋಗುವವನು; ಬೆಪ್ಪುತಕ್ಕಡಿ.
  4. get off the mark ಹೊರಡು; ಶುರು ಮಾಡು; ಪ್ರಾರಂಭಿಸು.
  5. (God) save the mark (ಘೋರವಾದ, ಆಡಬಾರದ, ಮೊದಲಾದ ವಿಷಯಗಳನ್ನು ಹೇಳುವಾಗ ಕ್ಷಮೆಗಾಗಿ ಆಡುವ ಮಾತು) ದೇವರು ತಪ್ಪಿಸಲಿ! ಹಾಗಾಗದಿರಲಿ! ಶಾಂತಂ ಪಾಪಂ! ( ಅನೇಕ ವೇಳೆ ವ್ಯಂಗ್ಯವಾಗಿ).
  6. hit the mark
    1. ಗುರಿ ಹೊಡೆ.
    2. (ರೂಪಕವಾಗಿ) ಉದ್ದೇಶ ಸಾಧಿಸು; ಯಶಸ್ವಿಯಾಗು.
  7. make one’s mark ಪ್ರಸಿದ್ಧಿಪಡೆ; ಖ್ಯಾತಿ, ಘನತೆ ಹೊಂದು; ಹೆಸರುಗಳಿಸು: as a young man he had determined to make his mark as a writer ತರುಣನಾಗಿದ್ದಾಗ ಅವನು ಲೇಖಕನಾಗಿ ಹೆಸರು ಪಡೆಯಬೇಕೆಂದು ನಿರ್ಧರಿಸಿದ್ದ.
  8. mark of mouth ಬಾಯಿ ಗುರುತು; ಕುದುರೆಯ ವಯಸ್ಸನ್ನು ಸೂಚಿಸುವ ಅದರ ಹಲ್ಲಿನಲ್ಲಿಯ ಕುಳಿ.
  9. miss the mark
    1. ಗುರಿ ತಪ್ಪು.
    2. (ರೂಪಕವಾಗಿ) ವಿಫಲನಾಗು; ಯಶಸ್ವಿಯಾಗದಿರು.
  10. off the mark
    1. ಶುರು ಮಾಡಿರುವ.
    2. = ಪದಗುಚ್ಛ\((2)\).
  11. of mark ಗಣ್ಯ; ಪ್ರಖ್ಯಾತ; ಪ್ರಸಿದ್ಧ; ಪ್ರಮುಖ; ಹೆಸರುವಾಸಿಯಾದ.
  12. one’s mark (ಆಡುಮಾತು)
    1. ಒಬ್ಬನಿಗೆ ಪ್ರಿಯವಾದುದು; ಒಬ್ಬನು ಇಷ್ಟಪಡುವುದು.
    2. ಸಮಾನ; ತನ್ನದೇ ಯಾ ಅದರದೇ ಗಾತ್ರ, ಅರ್ಹತೆ, ಮೊದಲಾದವುಗಳನ್ನು ಹೊಂದಿರುವ ವಿರೋಧಿ ಯಾ ವಸ್ತು ಮೊದಲಾದವು.
  13. on the mark ಗೆರೆಯ ಮೇಲೆ; ಒರಡುವುದಕ್ಕೆ ಸಿದ್ಧವಾಗಿ.
  14. on your mark (or marks) (ಮುಖ್ಯವಾಗಿ ರೇಸ್‍ನಲ್ಲಿ) (ಸೂಚನೆಯಾಗಿ) ಹೊರಡುವುದಕ್ಕೆ ಸಿದ್ಧರಾಗಿ.
  15. trade mark ವ್ಯಾಪಾರ (ಸ್ವಾಮ್ಯ) ಮುದ್ರೆ: ವ್ಯಾಪಾರಾಂಕನ; ಸರಕುಮುದ್ರೆ.
  16. up to the mark ರೂಢಿಯ ಯಾ ಸಾಮಾನ್ಯ ಮಟ್ಟಕ್ಕೆ ಸಮನಾಗಿ.
  17. wide of the mark = ಪದಗುಚ್ಛ\((2)\).