See also 2honour
1honour ಆನರ್‍
ನಾಮವಾಚಕ
  1. ಮರ್ಯಾದೆ; ಗೌರವ
  2. ಘನತೆ; ಮಹಿಮೆ.
  3. ಮನ್ನಣೆ; ಮಾನ್ಯತೆ.
  4. ಖ್ಯಾತಿ; ಕೀರ್ತಿ; ಯಶಸ್ಸು; ಒಳ್ಳೆಯ ಹೆಸರು.
  5. ಗೌರವಾರ್ಹ ಗುಣ; ಉದಾತ್ತವಾದ ಶೀಲ, ಒಳ್ಳೆಯ ನಡತೆ, ದೊಡ್ಡ ಮನಸ್ಸು, ಔದಾರ್ಯ, ಪ್ರಾಮಾಣಿಕತೆ, ಸತ್ಯಸಂಧತೆ, ನಿಷ್ಠೆ, ಮೊದಲಾದ ಗೌರವಾರ್ಹವಾದ ವೈಯಕ್ತಿಕ ಗುಣಗಳು: a man of honour ಗೌರವಾನ್ವಿತ ಮನುಷ್ಯ; ಮರ್ಯಾದೆಯುಳ್ಳ ವ್ಯಕ್ತಿ.
  6. ವಿಶೇಷ – ಹಕ್ಕು, ಸವಲತ್ತು, ಅಧಿಕಾರ: have the honour to do (or of doing) ಮಾಡುವ ವಿಶೇಷ ಅಧಿಕಾರ ಹೊಂದಿರು.
  7. ನ್ಯಾಯನಿಷ್ಠೆ ಯಾ ಸಂಪ್ರದಾಯನಿಷ್ಠೆ.
  8. (ಹೆಂಗಸಿನ ವಿಷಯದಲ್ಲಿ) ಮಾನ; ಸತೀತ್ವ; ಪಾತಿವ್ರತ್ಯ; ಸಾಧ್ವೀತನ.
  9. ಗೌರವಾರ್ಥವಾಗಿ ಕೊಟ್ಟ ಪದವಿ, ಉಪಾಧಿ, ಬಿರುದು, ಮೊದಲಾದವು.
  10. (ಗಾಲ್‍) (ಹಿಂದಿನ ಕುಳಿಯನ್ನೂ ತುಂಬಿ ಗೆದ್ದ ಕಾರಣ ಪಡೆದುಕೊಂಡ) ಮೊದಲು ಹೊಡೆಯುವ ಹಕ್ಕು: it is my honour ಮೊದಲು ಹೊಡೆಯುವ ಹಕ್ಕು ನನ್ನದು.
  11. (ಬಹುವಚನದಲ್ಲಿ) ಗೌರವ(ಗಳು); ಮರ್ಯಾದೆ(ಗಳು); ಅತಿಥಿಗಳು ಮೊದಲಾದವರಿಗೆ ಮಾಡುವ ಆದರಾತಿಥ್ಯ, ಉಪಚಾರ: the honours of the house ಕುಟುಂಬದ ಸಂಪ್ರದಾಯದ ಅತಿಥಿ ಸತ್ಕಾರthe honours of the town ನಗರದ ಮರ್ಯಾದೆಗಳು, ಗೌರವಗಳು.
  12. (ವಿಶ್ವವಿದ್ಯಾನಿಲಯ) (ಬಹುವಚನದಲ್ಲಿ) ಆನರ್ಸ್‍:
    1. (ಪರೀಕ್ಷೆಯಲ್ಲಿ ಸಾಮಾನ್ಯ ಯೋಗ್ಯತೆಗಿಂತ ಹೆಚ್ಚಿನ ಪಾಂಡಿತ್ಯಕ್ಯಾಗಿ ಕೊಡುವ) ಆನರ್ಸ್‍ (ಪದವಿ); ವಿಶೇಷ ಪದವಿ.
    2. ಸಾಮಾನ್ಯ ಪದವಿಯ ವ್ಯಾಸಂಗಗಳಿಗಿಂತ ಹೆಚ್ಚಿನ ವ್ಯಾಸಂಗ ಕ್ರಮ.
  13. ಭೂಷಣ; ಗೌರವ ತರುವ ವ್ಯಕ್ತಿ, ವಸ್ತು: he is an honour to his profession ಅವನು ತನ್ನ ತ್ತಿಗೆ ಭೂಷಣಪ್ರಾಯವಾಗಿದ್ದಾನೆ.
  14. ಉನ್ನತ – ಸ್ಥಾನ, ಪದವಿ; ‘ಮಾನ್ಯರೆ’ ಎಂಬ ಸಂಬೋಧನೆಗೆ ಅರ್ಹವಾದ ಸ್ಥಾನಮಾನ; ಕೌಂಟಿ ನ್ಯಾಯಾಲಯಗಳ ನ್ಯಾಯಮೂರ್ತಿ, (ಅಮೆರಿಕನ್‍ ಪ್ರಯೋಗ) ಮೇಯರ್‍, ಗ್ರಾಮೀಣ ಯಾ ಐರಿಷ್‍ ಭಾಷೆಯಲ್ಲಿ ಯಾವನೇ ವರಿಷ್ಠ – ಇವರ ವಿಷಯದಲ್ಲಿಹೇಳುವಾಗ ಬಳಸುವ Your Honour ಮಾನ್ಯರೇhis Honour ಮಾನ್ಯರು.
  15. (ವಿಸ್ಟ್‍ ಆಟದಲ್ಲಿನ) ತುರುಹಿನ ಹಾಸು, ರಾಜ, ರಾಣಿ, ಗುಲಾಮ ಮತ್ತು (ಬ್ರಿಜ್‍ ಆಟದಲ್ಲಿ ಇವುಗಳ ಜೊತೆಗೆ) ಹತ್ತರ ಎಲೆ ಯಾ ತುರುಹಿಲ್ಲದ ಆಟದಲ್ಲಿ ನಾಲ್ಕು ಹಾಸುಗಳು.
  16. (ವಾಣಿಜ್ಯ) ಗೌರವವನ್ನುಳಿಸುವ – ಒಪ್ಪಿಗೆ, ಸ್ವೀಕಾರ, ಅಂಗೀಕಾರ: acceptance for the honour of ತಿರಸ್ಕೃತ ಹುಂಡಿಯನ್ನು (ಅದನ್ನು ಬರೆದುಕೊಟ್ಟವನ ಯಾ ವರ್ಗಾಯಿಸಿ ಕೊಟ್ಟವನ ಗೌರವ ಉಳಿಸಲು) ಮೂರನೆಯವನು ಅಂಗೀಕರಿಸಿ ಹಣ ಪಾವತಿ ಮಾಡುವುದು.
ಪದಗುಚ್ಛ
  1. code (or law) of honour ಸದಾಚಾರ ಸಂಹಿತೆ; ಮರ್ಯಾದೆಯ ಕ್ರಮಗಳು; ನಡವಳಿಕೆಯ ಸಾಂಪ್ರದಾಯಿಕ ನಿಯಮಗಳು.
  2. debt of honour.
  3. do the honours of a house ಸರಿಯಾಗಿ ಆತಿಥ್ಯ ನಡೆಸು; ಅತಿಥಿಗಳನ್ನು ಯಥೋಚಿತವಾಗಿ ನೋಡಿಕೊ.
  4. do the honours of the table ಔತಣಕ್ಕೆ ಬಂದ ಅತಿಥಿಗಳನ್ನು ಸರಿಯಾಗಿ ಸತ್ಕರಿಸು.
  5. do the honours of the town ಊರಿಗೆ ಬಂದ ಅತಿಥಿಗಳನ್ನು ಯಥೋಚಿತವಾಗಿ ಗೌರವಿಸು.
  6. $^1$guard of honour.
  7. honour bright (ಆಡುಮಾತು) ನನ್ನ ಗೌರವದ ಮೇಲಾಣೆ.
  8. honours are even ಪಂದ್ಯದಲ್ಲಿ (ಎರಡು ಕಡೆ) ಎಲ್ಲವೂ ಸಮನಾಗಿವೆ (ರೂಪಕವಾಗಿ ಸಹ).
  9. honours of war ಯುದ್ಧ ಸವಲತ್ತು; ಯುದ್ಧದಲ್ಲಿ ಶರಣಾಗತವಾದ ಸೈನ್ಯಕ್ಕೆ ಬಾವುಟ ಮೊದಲಾದವನ್ನು ಎತ್ತಿ ಹಿಡಿದುಕೊಂಡು ಹೋಗಲು ಕೊಟ್ಟ ರಿಯಾಯಿತಿಗಳು.
  10. in honour of (ಯಾರೋ ಒಬ್ಬರ ಯಾ ಯಾವುದೋ ಒಂದರ) ಗೌರವಾರ್ಥವಾಗಿ.
  11. last or funeral honours (ಶವಸಂಸ್ಕಾರದಲ್ಲಿ ಸಲ್ಲಿಸುವ) ಅಂತ್ಯಗೌರವ; ಅಂತಿಮ ಮರ್ಯಾದೆ.
  12. $^1$legion of Honour.
  13. maid of honour.
  14. matron of honour.
  15. military honours (ಗೌರವಾರ್ಥ ಸೈನಿಕ ಅಧಿಕಾರಿ ಮೊದಲಾದವರ ಶವಸಂಸ್ಕಾರದಲ್ಲಿ ಅಥವಾ ರಾಜರು ಮೊದಲಾದವರ ಸಂದರ್ಶನದಲ್ಲಿ ತೋರಿಸುವ) ಸೈನಿಕ – ಮರ್ಯಾದೆ, ಗೌರವ; ಲಷ್ಕರಿ ಗೌರವ.
  16. $^1$point of honour.
  17. (up) on my honour! (ಆಣೆ ಇಟ್ಟು ಹೇಳುವಾಗ) ನನ್ನ ಗೌರವದ ಆಣೆಗೂ.
  18. $^1$word of honour.
  19. your,his, Honour
    1. (ಜಿಲ್ಲಾ ನ್ಯಾಯಾಧಿಪತಿಯನ್ನು ಕುರಿತು ಸಂಬೋಧಿಸುವಾಗ) ಸನ್ಮಾನ್ಯರೆ.
    2. (ಉನ್ನತ ಅಂತಸ್ತಿನವರನ್ನು ಹಳ್ಳಿಯವರು ಸಂಬೋಧಿಸುವಾಗ) ಮಹಾಸ್ವಾಮಿ.
ನುಡಿಗಟ್ಟು
  1. be bound in honour to (do) (ಏನನ್ನಾದರೂ ಮಾಡುವ) ಧರ್ಮಕ್ಕೆ, ಗೌರವಕ್ಕೆ, ಕರ್ತವ್ಯಕ್ಕೆ – ಕಟ್ಟುಬಿದ್ದಿರು.
  2. be in honour bound = ನುಡಿಗಟ್ಟು \((3)\).
  3. be on one’s honour to (do) (ಏನನ್ನಾದರೂ ಮಾಡುವುದು) ಒಬ್ಬನ ಧರ್ಮವಾಗಿರು, ಕರ್ತವ್ಯವಾಗಿರು: we were on our honour not to cheat ಮೋಸಮಾಡದಿರುವುದು ನಮ್ಮ ಕರ್ತವ್ಯವಾಗಿತ್ತು.
See also 1honour
2honour ಆನರ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  1. ಗೌರವಿಸು; ಮನ್ನಣೆ ತೋರು; ಮರ್ಯಾದೆ ಮಾಡು.
  2. ಬಿರುದು, ಪದವಿ, ಪ್ರಶಸ್ತಿ – ಕೊಡು.
  3. (ವಾಣಿಜ್ಯ) ವಾಯಿದೆಗೆ ಸರಿಯಾಗಿ ಹುಂಡಿಯ ಹಣ ಸಲ್ಲಿಸು; ಚೆಕ್ಕಿನ ಹಣ ಕಟ್ಟು.