debt ಡೆಟ್‍
ನಾಮವಾಚಕ
  1. ಸಾಲ; ಕಡ; ಋಣ; ದೇಣಿ.
  2. ಋಣಭಾರ; ಹೊಣೆ; ಋಣಕ್ಕೆ ಗುರಿಯಾಗಿರುವುದು; (ಯಾವುದನ್ನೇ) ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು: I love him a debt of gratitude ಆತನಿಗೆ ನಾನು ಕೃತಜ್ಞತೆಯ ಋಣಹೊತ್ತಿದ್ದೇನೆ.
ಪದಗುಚ್ಛ
  1. be in debt ಸಾಲದಲ್ಲಿರು; ಸಾಲಗಾರನಾಗಿರು; ಋಣಿಯಾಗಿರು.
  2. debt of honour ನಂಬಿಕೆ ಸಾಲ; ಮರ್ಯಾದೆ ಸಾಲ; ಕಾನೂನಿನ ಪ್ರಕಾರ ವಸೂಲು ಮಾಡಲಾಗದ ಸಾಲ; ಮುಖ್ಯವಾಗಿ ಜೂಜಿನಲ್ಲಿ ಸೋತ ಹಣ.
  3. debt of nature ಪ್ರಕೃತಿ ಋಣ; ಮರ್ತ್ಯತೆ; ಸಾಯಲೇಬೇಕಾಗಿರುವುದು.
  4. floating debt ಚರ ಸಾಲ; ಚರ ಋಣ; ಕೇಳಿದಾಗ ಯ ನಿಗದಿಯಾದ ಕಾಲಕ್ಕೆ ತೀರಿಸಬೇಕಾದ ರಾಷ್ಟ್ರೀಯ ಸಾಲಭಾಗ.
  5. funded debt ಸ್ಥಿರ ಸಾಲ; ಸಂಚಿತ ಋಣ; ಬಡ್ಡಿ ಮಾತ್ರ ಕೊಡುತ್ತ ಬರಬೇಕಾದ ಸಾರ್ವಜನಿಕ ಸಾಲದ ಸಂಚಿತಭಾಗ.
  6. get into debt ಸಾಲಕ್ಕೆ – ಬೀಳು, ಸಿಕ್ಕಿಹಾಕಿಕೊ.
  7. in debt ಸಾಲದಲ್ಲಿ; ಸಾಲಕ್ಕೊಳಗಾಗಿ.
  8. in person’s debt (ಒಬ್ಬನಿಗೆ) ಋಣಿಯಾಗಿ; (ಒಬ್ಬನ) ಋಣದಲ್ಲಿ.
  9. out of debt ಸಾಲ ತೀರಿ; ಋಣಮುಕ್ತನಾಗಿ.
  10. small debt ಚಿಲ್ಲರೆ ಸಾಲ; ಸಣ್ಣ ಸಾಲ; ಇಂಗ್ಲೆಂಡಿನಲ್ಲಿ ಕೌಂಟಿ ಕೋರ್ಟಿನ ಮೂಲಕ ವಸೂಲಿ ಮಾಡಿಕೊಳ್ಳಬಹುದಾದ ಸಾಲ.