1word
ವರ್ಡ್
ನಾಮವಾಚಕ
- ಮಾತು; ಶಬ್ದ; ಪದ; ನುಡಿ; ಸೊಲ್ಲು: is not the word for it ಅದಕ್ಕೆ ತಕ್ಕ ಪದವಲ್ಲ.
- ಕಂಪ್ಯೂಟರ್ ದತ್ತಾಂಶ, ನಿರ್ದೇಶನ, ಮೊದಲಾದವುಗಳಲ್ಲಿ ಬಳಸುವ, ಮೂಲಭೂತ ಅಭಿವ್ಯಕ್ತಿಯ ಘಟಕ, ಅಂಶ.
- ಮಾತು; ಭಾಷಣ: honest in word and deed ನುಡಿಯಲ್ಲಿ ಮತ್ತು ನಡೆಯಲ್ಲಿ ಪ್ರಾಮಾಣಿಕ; ನುಡಿದಂತೆ ನಡೆಯುವ (ನಿಷ್ಠೆಯುಳ್ಳ).
- (ಬಹುವಚನ ಯಾ ಏಕವಚನದಲ್ಲಿ) ಹೇಳಿದ ಮಾತು; ಹೇಳಿಕೆ; ನುಡಿ; ಟೀಕೆ; ಉಕ್ತಿ; ವಚನ; ಮಾತುಕತೆ.
- (ಬಹುವಚನದಲ್ಲಿ) ಮಾತು; ಹಾಡಿನ ಸಾಹಿತ್ಯ, ನಟನ ಮಾತುಗಳು, ಮೊದಲಾದವು.
- (ಕೇವಲ ಬಾಯಿಮಾತಿನಲ್ಲಿ) ಹೇಳಿದುದು; ಮಾತು; ನುಡಿ (ಕಾರ್ಯರೂಪವಾಗಿ ಮಾಡಿದುದಲ್ಲ): bold in word only ಮಾತಿನಲ್ಲಷ್ಟೇ ಧೈರ್ಯಶಾಲಿ.
- ಸುದ್ದಿ; ವಾರ್ತೆ; ಸಮಾಚಾರ: send word ಸಮಾಚಾರ ಕಳುಹಿಸು.
- ಆಡಿದ ಮಾತು; ಕೊಟ್ಟ ವಚನ; ವಾಗ್ದಾನ: gave us their word ಅವರು ವಾಗ್ದಾನ ಮಾಡಿದರು, ಮಾತು ಕೊಟ್ಟರು.
- ಆಜ್ಞೆ; ಅಪ್ಪಣೆ; ಶಾಸನ: his word is law ಅವನ ಮಾತೇ ಶಾಸನ.
- ಸಂಕೇತ ಪದ: gave the word to begin ಪ್ರಾರಂಭಿಸಲು ಸಂಕೇತ(ಪದ) ಕೊಟ್ಟ.
- ಸೂಕ್ತಿ; ಧ್ಯೇಯ(ಪದ).
- (ಬಹುವಚನದಲ್ಲಿ) ಕೋಪದ ಮಾತು; ಜಗಳ: have words with ಕೋಪದಿಂದ – ನುಡಿ, ಕೂಗಾಡು.
ಪದಗುಚ್ಛ
- at a word ಹೇಳಿದ ಯಾ ಕೇಳಿದ ಕೂಡಲೇ.
- a word to the wise ವಿವೇಕಿಗೆ ಒಂದು ಮಾತು ಸಾಕು.
- be as good as word (or better than) one’s word ನುಡಿದಂತೆ ನಡೆ; ಆಡಿದಂತೆ (ಯಾ ಆಡಿದುದಕ್ಕಿಂತ ಮಿಗಿಲಾಗಿ) ನಡೆದುಕೊ.
- break one’s word ಮಾತಿಗೆ ತಪ್ಪು.
- eat one’s words.
- give (or pledge) person word ಮಾತು, ಭಾಷೆ – ಕೊಡು; ವಾಗ್ದಾನ ಮಾಡು.
- (hard, high, etc.) words ಕೋಪದ, ಬಿರು – ಮಾತುಗಳು.
- have a word (with) ಸಂಕ್ಷೇಪವಾಗಿ ಮಾತುಕತೆ ನಡೆಸು, ವಿಚಾರ ವಿನಿಮಯ ಮಾಡಿಕೊ.
- have a word to say ಹೇಳಲು ಯಾ ಕೇಳಲು ಯೋಗ್ಯವಾದಂಥ ವಿಷಯವನ್ನು ತಿಳಿದಿರು.
- have no words for ಮಾತಿಲ್ಲದಂತಾಗು; ಹೇಳಲು ಮಾತಿಲ್ಲವಾಗು
- his word is (as good as) his bond ಅವನ ಮಾತೇ ಒಂದು ಪತ್ರ(ದಷ್ಟು ಖಚಿತ, ಸತ್ಯ).
- I give you my word for it ಅದು ಹಾಗೆಯೇ, ನಿಜ, ಎಂದು ಭರವಸೆ ಕೊಡುತ್ತೇನೆ, ಪ್ರಮಾಣ ಮಾಡುತ್ತೇನೆ.
- in a (or one) word ಒಂದು ಮಾತಿನಲ್ಲಿ; ಸಂಕ್ಷೇಪವಾಗಿ.
- in other words ಅರ್ಥಾತ್; ಅಂದರೆ; ಬೇರೆ ಮಾತುಗಳಲ್ಲಿ ಹೇಳುವುದಾದರೆ.
- in so many words ಸ್ಪಷ್ಟವಾಗಿ; ನಿಸ್ಸಂದಿಗ್ಧವಾಗಿ; ಯಾವ ಸಂದೇಹವೂ ಇಲ್ಲದಂತೆ.
- keep one’s word ಮಾತು ಉಳಿಸಿಕೊ; ವಾಗ್ದಾನ ಪಾಲಿಸು.
- my (or upon my) word (ಆಶ್ಚರ್ಯ ಯಾ ಭಯಸೂಚಕ ಅವ್ಯಯವಾಗಿ) ಅಯ್ಯೋ ದೇವರೇ! (ಇತ್ಯಾದಿ).
- not a word of it (ಕಥೆ, ವೃತ್ತಾಂತ, ಮೊದಲಾದವುಗಳ ವಿಷಯದಲ್ಲಿ) ಅದರ ಬಗ್ಗೆ – ಒಂದು ಮಾತಿಲ್ಲ, ಸೊಲ್ಲಿಲ್ಲ, ಸದ್ದಿಲ್ಲ.
- not have a word to throw at a dog ನಾಯಿಯನ್ನು ಮಾತನಾಡಿಸಲೂ ಬಾಯಿ ಬಿಡದಷ್ಟು ಬಿಗಿತುಕೊಂಡಿದ್ದಾನೆ; ಮಾತನಾಡಿದರೆ ಮುತ್ತು ಸುರಿದು ಹೋಗುತ್ತದೇನೋ ಎಂದು ತುಟಿ ಬಿಚ್ಚದಿದ್ದಾನೆ.
- not the word for it (ಹಾಗೆಂದರೆ) ಅದಕ್ಕೆ ಸರಿಯಾದ, ಸಮರ್ಪಕವಾದ – ಪದವಲ್ಲ; ಅದನ್ನು ಸರಿಯಾಗಿ ವಿವರಿಸಿದಂತಾಗಲಿಲ್ಲ.
- of few words ಮಿತಭಾಷಿಯಾದ; ಹೆಚ್ಚು ಮಾತಿಲ್ಲದ.
- of many words ವಾಚಾಳಿಯಾದ; ವಿಪರೀತ ಮಾತನಾಡುವ.
- of one’s words ಮಾತಿಗೆ ತಪ್ಪದ; ಆಡಿದ ಮಾತಿನಂತೆ ನಡೆಯುವ; (ಅವನ) ಮಾತನ್ನು – ನೆಚ್ಚಬಹುದಾದ, ನಂಬಬಹುದಾದ: a man of his word ಮಾತಿಗೆ ತಪ್ಪದ ವ್ಯಕ್ತಿ.
- say a few words ಎರಡು ಮಾತನಾಡು; ಚಿಕ್ಕ ಭಾಷಣಮಾಡು.
- say the word ಅಪ್ಪಣೆ (ಆಜ್ಞೆ) ಕೊಡು.
- suit the action to the word ಆಡಿದಂತೆ ನಡೆ; (ಬೆದರಿಕೆ, ಎಚ್ಚರಿಕೆ, ಮೊದಲಾದವನ್ನು) ನಿರ್ದಾಕ್ಷಿಣ್ಯವಾಗಿ ಕಾರ್ಯರೂಪಕ್ಕೆ ತಂದುಬಿಡು.
- take a person at his (or her) word ಒಬ್ಬ ವ್ಯಕ್ತಿಯ ಮಾತುಗಳನ್ನು ಅಕ್ಷರಶಃ ಗ್ರಹಿಸು, ಅರ್ಥಮಾಡಿಕೊ.
- take a person’s word for it ಅವನು ಹೇಳಿದ್ದನ್ನು (ವಿಚಾರ, ಶೋಧನೆ ಮಾಡದೆ) ಸತ್ಯವೆಂದು ಒಪ್ಪಿಕೊ, ನಂಬಉ.
- the Word (of God)
- ಬೈಬಲ್ಲು; ಬೈಬಲ್ಲು ಯಾ ಅದರ ಒಂದು ಭಾಗ.
- (ದೇವಮಾನವರ ಮಧ್ಯವರ್ತಿ ಅಥವಾ ಪ್ರತ್ಯಕ್ಷ ದೇವಸ್ವರೂಪನೆಂದು ಕ್ರೈಸ್ತರು ನಂಬಉವ) ಯೇಸುಕ್ರಿಸ್ತ.
- too funny etc. for words ಹೇಳಲಾರದಷ್ಟು ವಿಚಿತ್ರ, ಹಾಸ್ಯಾಸ್ಪದ, ಇತ್ಯಾದಿ.
- upon (or on) my word ನನ್ನ ಆಣೆಗೂ, ಸತ್ಯವಾಗಿ ಹೇಳುತ್ತೇನೆ... ಇತ್ಯಾದಿ.
- word for word ಪದಶಃ; ಶಬ್ದಕ್ಕೆ ಪ್ರತಿಯಾಗಿ ಶಬ್ದ ಇಟ್ಟು: translate word for word ಪದಶಃ ಭಾಷಾಂತರಿಸು.
- word of honour ಗೌರವದ ಆಣೆ; ತನ್ನ ಗೌರವದ ಮೇಲೆ ಆಣೆ ಇಟ್ಟು ಮಾಡಿದ ವಾಗ್ದಾನ, ಕೊಟ್ಟ ಮಾತು.
- word of mouth ಕೇವಲ ಬಾಯಿಮಾತು, ಹೇಳಿಕೆ.
- words $^2$fail me.
- words of command (ಆಟ, ಸೈನಿಕ ಕವಾಯತು, ಮೊದಲಾದವುಗಳಲ್ಲಿ) ಆಜ್ಞೆಯ ಮಾತು.