See also 2guard
1guard ಗಾರ್ಡ್‍
ನಾಮವಾಚಕ
  1. (ಕತ್ತಿವರಿಸೆ, ಮುಷ್ಟಿಕಾಳಗ, ಮೊದಲಾದವುಗಳಲ್ಲಿ) ರಕ್ಷಣಾಭಂಗಿ; ಕಾಪು ವರಿಸೆ; ಆತ್ಮರಕ್ಷಣೆಗಾಗಿ ನಿಲ್ಲುವ ಭಂಗಿ ಯಾ ಮಾಡುವ ಚಲನೆ.
  2. (ಕ್ರಿಕೆಟ್‍) ಬ್ಯಾಟಿನ ಕಾಪುನೆಲೆ; ರಕ್ಷಣೆ ಸ್ಥಾನ; ವಿಕೆಟ್ಟಿನ ರಕ್ಷಣೆಗಾಗಿ ಬ್ಯಾಟನ್ನು ಹಿಡಿಯುವ, ಇಡುವ – ಜಾಗ, ಸ್ಥಳ.
  3. ಕಾವಲು; ಪಹರೆ; ಜಾಗರೂಕ ಸ್ಥಿತಿ; ಎಚ್ಚರ; ಎಚ್ಚರಿಕೆ(ಯಿಂದಿರುವುದು).
  4. ರಕ್ಷಕ; ಪಾಲಕ; ಕಾಪಾಡುವವನು.
  5. ಕಾವಲುಗಾರ; ಕಾವಲಿರುವವನು; ಪಹರೆಯವನು.
  6. (ಚರಿತ್ರೆ) (ಟಪಾಲು ಬಂಡಿಯ) ರಕ್ಷಣಾಧಿಕಾರಿ.
  7. (ಬ್ರಿಟಿಷ್‍ ಪ್ರಯೋಗ) (ರೈಲಿನ) ಗಾರ್ಡು; ಮೇಲ್ವಿಚಾರಕ.
  8. (ಅಮೆರಿಕನ್‍ ಪ್ರಯೋಗ) ಜೈಲು ಪಹರೆಯವ; ಸೆರೆಮನೆಯ ಕಾವಲುಗಾರ.
  9. (ಬಾಸ್ಕೆಟ್‍ ಬಾಲ್‍ ಯಾ ಅಮೆರಿಕದ ಕಾಲ್ಚೆಂಡಾಟಗಳಲ್ಲಿ) ರಕ್ಷಕ; ರಕ್ಷಣೆ ಆಟಗಾರ.
  10. (ಬಹುವಚನದಲ್ಲಿ) (ಇಂಗ್ಲೆಂಡಿನ) ಅರಮನೆಯ ಸೈನ್ಯ: foot guards ಪದಾತಿಗಳು; ಕಾಲಾಳು ಸೈನಿಕರು. horse guards ರಾವುತರು; ಅಶ್ವಾರೋಹಿ ಸೈನಿಕರು.
  11. (ಒಂದು ಸ್ಥಳದ, ವ್ಯಕ್ತಿಯ) ಕಾಪು ಪಡೆ; ರಕ್ಷಣಾ ದಳ; ರಕ್ಷಣೆಗಾಗಿರುವ ಸೈನಿಕರು.
  12. ಬೆಂಗಾವಲು ಪಡೆ; ಅಂಗರಕ್ಷಕದಳ; ಅಂಗರಕ್ಷಕ (ಸೈನಿಕ)ರು; ಬೆಂಗಾವಲು ಭಟರು.
  13. ಸೈನ್ಯದ (ಪ್ರತ್ಯೇಕ) ಕಾಪು – ದಳ, ಪಡೆ.
  14. (ಸಾಮಾನ್ಯವಾಗಿ ಸಂಯುಕ್ತ ಪದಗಳಲ್ಲಿ) ಕಾಪು; ರಕ್ಷೆ; ಕೆಡುಕಾಗದಂತೆ, ಅಪಾಯ ಸಂಭವಿಸದಂತೆ ರಕ್ಷಿಸುವ ಸಲಕರಣೆ: fire-guard ಬೆಂಕಿಕಾಪು. trigger-guard ಬಂದೂಕಿನ ಕುದುರೆ ಕಾಪು.
  15. (ಬಳಸುವವನ ಕೈಯನ್ನು ರಕ್ಷಿಸುವ) ಕತ್ತಿಹಿಡಿಕೆಯ ಭಾಗ.
ಪದಗುಚ್ಛ
  1. advance guard ಮುಂಗಾಪಿನ ಪಡೆ.
  2. be on guard = ಪದಗುಚ್ಛ \((5)\).
  3. guard of honour ಗೌರವರಕ್ಷೆ; (ಗೌರವ ತೋರಿಸುವುದಕ್ಕಾಗಿರುವ) ಗೌರವದಳ.
  4. give guard = ಪದಗುಚ್ಛ \((10)\).
  5. keep guard ಕಾವಲಿರು; ಪಹರೆ ಇರು.
  6. mount guard ಕಾವಲು ವಹಿಸಿಕೊ.
  7. rear guard ಹಿಂಗಾಪಿನ ಪಡೆ.
  8. relieve guard ಪಹರೆ ವಹಿಸಿಕೊ; ಇನ್ನೊಬ್ಬನ ಪಹರೆಯ ಅವಧಿ ಮುಗಿದ ಮೇಲೆ ತನ್ನ ಪಹರೆಯ ಸರದಿ ವಹಿಸಿಕೊ.
  9. stand guard = ಪದಗುಚ್ಛ \((5)\).
  10. take guard (ಕ್ರಿಕೆಟ್‍) ಆಟಗಾರನು ಬ್ಯಾಟಿನ ರಕ್ಷಣಾಜಾಗ ನಿರ್ಧರಿಸು; ಕಾಪು ನೆಲೆಯಾಗಿ ಯಾ ಸ್ಥಳದಲ್ಲಿ ಬ್ಯಾಟನ್ನು ಊರಬೇಕೆಂದು ನಿರ್ಧರಿಸು.
ನುಡಿಗಟ್ಟು
  1. off one’s guard (ಅಕ್ರಮಣ, ಆಕಸ್ಮಿಕ, ಮೊದಲಾದವುಗಳಿಂದ ರಕ್ಷಿಸಿಕೊಳ್ಳುವುದರಲ್ಲಿ) ಹುಷಾರು ತಪ್ಪಿ; ಎಚ್ಚರಿಕೆ ತಪ್ಪಿ(ಹೋಗಿ).
  2. on one’s guard (ಆಕ್ರಮಣ, ಅಕಸ್ಮಾತ್‍ ಘಟನೆ, ಹಠಾತ್ತಾದ ಸ್ವಂತ ಪ್ರೇರಣೆ, ಮೊದಲಾದವನ್ನು ಎದುರಿಸಲು) ತನ್ನ ಹುಷಾರಿನಲ್ಲಿ, ಎಚ್ಚರಿಕೆಯಿಂದ, ಸಿದ್ಧವಾಗಿ – ಇದ್ದು.