See also 2point
1point ಪಾಇಂಟ್‍
ನಾಮವಾಚಕ
  1. (ಸಣ್ಣ) ಚುಕ್ಕೆ; ಬಿಂದು.
  2. ಪೂರ್ಣವಿರಾಮ (ಚಿಹ್ನೆ).
  3. (ಸೆಮಿಟಿಕ್‍ ಭಾಷೆಗಳಲ್ಲಿ ಸ್ವರಗಳನ್ನು ಸೂಚಿಸಲು ಯಾ ವ್ಯಂಜನಗಳ ವ್ಯತ್ಯಾಸ ತೋರಿಸಲು ಬಳಸುವ) ಚುಕ್ಕೆ; ಬಿಂದು; ತೀರ ಸಣ್ಣಗೆರೆ.
  4. ದಶಾಮಾಂಶ ಬಿಂದು; ದಶಾಮಾಂಶ ಸಂಖ್ಯೆಗಳಲ್ಲಿ ಪೂರ್ಣಸಂಖ್ಯೆಗಳನ್ನೂ ಭಿನ್ನರಾಶಿಗಳನ್ನೂ ಪ್ರತ್ಯೇಕಿಸುವ ಬಿಂದು.
  5. ಅಂಶ; ವಿವರ; ಬಾಬು: we differ on these points ಈ ಅಂಶಗಳಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯವಿದೆ.
  6. (ಪ್ರದರ್ಶನಕ್ಕಾಗಿ ಇಟ್ಟಿರುವ ಒಂದು ವಸ್ತುವಿನ ಮೌಲ್ಯಮಾಪನದಲ್ಲಿ ಏಕಮಾನವಾಗಿ ಇಟ್ಟುಕೊಳ್ಳುವ) ಸೂಚ್ಯಂಕ; ಅಂಕ.
  7. ಯೂನಿಟ್ಟು; ಪಡಿತರ ಪದ್ಧತಿಯ ಏಕಮಾನ.
  8. ಋಣಸಂಚಯದ ಬೆಲೆ ಮೊದಲಾದವನ್ನು ಘೋಷಿಸುವಾಗ ಬಳಸುವ(ಏರಿಳಿತಕ್ಕೊಳಪಟ್ಟ) ಏಕಮಾನ; ಪಾಯಿಂಟು: prices on the stock exchange advanced by two points ಸ್ಟಾಕ್‍ಎಕ್ಸ್‍ಚೇಂಜಿನಲ್ಲಿ ಬೆಲೆಗಳು ಎರಡು ಪಾಯಿಂಟುಗಳಷ್ಟು ಏರಿವೆ.
  9. (ಮುದ್ರಣ) ಅಚ್ಚಿನ ಮೊಳೆಗಳ ಗಾತ್ರದ ಏಕಮಾನ (ಬ್ರಿಟನ್‍ ಮತ್ತು ಅಮೆರಿಕಗಳಲ್ಲಿ $0.0138$ ಅಂಗುಲದಷ್ಟು).
  10. (ಜ್ಯಾಮಿತಿ) ಬಿಂದು; ಸ್ಥಾನ ಮಾತ್ರ ಉಳ್ಳ ಆದರೆ ಉದ್ದ, ಅಗಲ, ದಪ್ಪ ಇಲ್ಲದ ಆಕೃತಿ.
  11. ಖಚಿತವಾದ – ಸ್ಥಳ, ಸ್ಥಾನ; ಬಿಂದು: point of contact ಸಂಗಮಸ್ಥಾನ; ಸಂಗಮ ಬಿಂದು Bombay and points east ಬೊಂಬಾಯಿ ಮತ್ತು ಪೌರಸ್ತ್ಯ ಸ್ಥಳಗಳು.
  12. ಪಾಯಿಂಟು; ವಜ್ರದ ಒಂದು ಮಾನ (2 mg).
  13. (ಬೇಟೆ)
    1. ನೇರವಾಗಿ ಓಡಿ ಮುಟ್ಟುವ – ಸ್ಥಾನ, ನೆಲೆ, ಗುರಿ.
    2. ಇಂಥ ಸ್ಥಾನವನ್ನು ಮುಟ್ಟಲು ಓಡುವ ಓಟ.
  14. (ವಂಶಲಾಂಛನ ವಿದ್ಯೆ) ಗುರಾಣಿಯ ಮೇಲೆ ಸ್ಥಾನವನ್ನು ನಿರ್ಣಯಿಸುವ ಸಲುವಾಗಿ ಮಾಡಿರುವ ಒಂಬತ್ತು ಚುಕ್ಕಿಗಳಲ್ಲಿ, ಬಿಂದುಗಳಲ್ಲಿ ಒಂದು.
  15. (ಮುಖ್ಯವಾಗಿ ಉಷ್ಣತೆಯ ವಿಷಯದಲ್ಲಿ) ಒಂದು ಕ್ರಿಯೆಯ – ಹಂತ, ಘಟ್ಟ; ಬಿಂದು: boiling point ಕುದಿಬಿಂದು. freezing point ಘನೀಭವನಬಿಂದು.
  16. (ಕೆಲಸ ಮೊದಲಾದವನ್ನು ಮಾಡಲು) ನಿಶ್ಚಿತ, ನಿರ್ದಿಷ್ಟ – ಕಾಲ ವೇಳೆ, ಹೊತ್ತು, ಮುಹೂರ್ತ, ಸಮಯ: when it came to the point, he declined ವೇಳೆ ಬಂದಾಗ ಅವನು ಆಗುವುದಿಲ್ಲವೆಂದ.
  17. ಕ್ಲುಪ್ತ, ನಿರ್ದಿಷ್ಟ ಯಾ ನಿಯಮಿತ – ಕಾಲ, ವೇಳೆ, ಹೊತ್ತು, ಘಳಿಗೆ, ಮುಹೂರ್ತ: point of death ಸಾವಿನ ಘಳಿಗೆ.
  18. ವಿಶಿಷ್ಟ ಗುಣ, ಲಕ್ಷಣ; ವೈಶಿಷ್ಟ್ಯ; singing is not his strong point ಹಾಡುವುದು ಅವನ ವೈಶಿಷ್ಟ್ಯವೇನೂ ಅಲ್ಲ.
  19. ಪ್ರಕೃತ ಅಂಶ; ಸದ್ಯಕ್ಕೆ ಅಗತ್ಯವಾದ ವಿಷಯ ಅದೇ. come to the point (ಪ್ರಕೃತ) ವಿಷಯಕ್ಕೆ ಬರು, ಬಾ.
  20. (ಪೂರ್ತಿಯಾಗಿ ಸೂಜಿಯಿಂದ ಹೊಲಿದು ಮಾಡಿದ) ಕಸೂತಿ ದಾರದ ಹೆಣಿಗೆ.
  21. (ತಪ್ಪು ಪ್ರಯೋಗ) ಕಸೂತಿದಾರದ ಹೆಣಿಗೆಯನ್ನು ಅನುಕರಿಸಿದ ತಲೆದಿಂಬಿನ ಕಸೂತಿ (ಕೆಲಸ).
  22. (ಉಪಕರಣ, ಅಯುಧ, ಗುಂಡುಸೂಜಿ, ಲೇಖನಿ, ಮೊದಲಾದವುಗಳ) ಮೊನೆ; ಮೊನಚುತುದಿ.
  23. ತುದಿ; ಕೊನೆ.
    1. ಭೂಶಿರ.
    2. ಬೆಟ್ಟದ ಕೋಡು, ತುದಿ; ಪರ್ವತಶೃಂಗ (ಮುಖ್ಯವಾಗಿ ಸ್ಥಳಗಳ ಹೆಸರುಗಳಲ್ಲಿ ಪ್ರಯೋಗ): Start Point ಸ್ಟಾರ್ಟ್‍ ಪಾಯಿಂಟ್‍ ಭೂಶಿರ.
  24. (ಸೈನ್ಯ) ಮುಂಗಾವಲು ಸೇನೆಯ ಮುಂಚೂಣಿ; ಮುಂಗಾಪು ಸೈನ್ಯದ ಅಗ್ರದಳ.
  25. (ನಾಯಿ, ಕುದುರೆ, ಮೊದಲಾದವುಗಳ) ತುದಿಭಾಗಗಳು; ಮುಂತುದಿ ಮತ್ತು ಹಿಂತುದಿ: bay with black points ತುದಿಭಾಗಗಳು ಕಪ್ಪಾಗಿರುವ ಕೆಂಚುಕುದುರೆ.
  26. ಮೊನೆಯಾಗಿರುವ ಉಪಕರಣ, ಆಯುಧ, ಉದಾಹರಣೆಗೆ etching needle ಕೊರೆ ಸೂಜಿ.
  27. ಸಾರಂಗದ, (ಗಂಡು)ಜಿಂಕೆಯ ಕೊಂಬಿನ ಮೊನೆ; ಕುರಂಗಶೃಂಗ.
  28. (ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) (ರೈಲುಮಾರ್ಗ) ರೈಲುಗಾಡಿಯು ಒಂದು ರೈಲು ಮಾರ್ಗದಿಂದ ಇನ್ನೊಂದಕ್ಕೆ ಹೋಗಲು ನೆರವಾಗಿ ಹಾಕಿರುವ, ಸ್ವಲ್ಪಮಟ್ಟಿಗೆ ಕದಲಿಸಬಲ್ಲ, ಮೊನಚು ಕಂ; ಹೊರಳುಗಂಬಿ.
  29. ಬ್ಯಾಕ್‍ಗ್ಯಾಮನ್‍ ಆಟದ ಹಲಗೆಯಲ್ಲಿ ಮೊನೆಯಾದ ಭಾಗ.
  30. (ಚರಿತ್ರೆ) ರವಿಕೆಗೆ ಅಂಚುಕಟ್ಟಲು ಬಳಸುವ ಯಾ ಬಿಗಿ ಕವಚಕ್ಕೆ ಬಿಗಿ ಷರಾಯಿಯನ್ನು ಕೂಡಿಸಿ ಕಟ್ಟಲು ಬಳಸುವ ಕಸೂತಿಯ ಅಂಚುಪಟ್ಟಿ.
  31. (ನೌಕಾಯಾನ) ಹಾಯಿಯ ಕೆಳಅಂಚನ್ನು ಮೇಲಕ್ಕೆ ಮುದುರಿ ಕಟ್ಟಲು ಬಳಸುವ ಸಣ್ಣ ಹಗ್ಗ.
  32. ಬಿಂದು:
    1. ನಾವಿಕರ ದಿಕ್ಸೂಚಿಯಲ್ಲಿ ಸಮಾಂತರಗಳಲ್ಲಿ ಗುರುತಿಸಿರುವ ಮೂವತ್ತೆರಡು ದಿಕ್ಕುಗಳಲ್ಲಿ ಒಂದು.
    2. ಭೂಮಿಯ ಮೇಲೆ ಆ ದಿಕ್ಕು.
  33. (ಕಥೆ, ಹಾಸ್ಯ, ಟೀಕೆ, ಮೊದಲಾದವುಗಳ) ರಸಮಯ ಅಂಶ ; ವೈಶಿಷ್ಟ್ಯ; ಸ್ವಾರಸ್ಯ: don’t see the point ಅದರ ಸ್ವಾರಸ್ಯ ಏನೋ ನಾನು ಕಾಣೆ.
  34. ತೀಕ್ಷ್ಣತೆ; ಮೊನೆ; ಚುರುಕು; ಕಾವು; ವರ್ಚಸ್ಸು; ಓಜಸ್ಸು: his remarks lack point ಅವನ ಟೀಕೆಗಳಲ್ಲಿ ಚುರುಕಿಲ್ಲ.
  35. (ಕ್ರಿಕೆಟ್‍) ಪಾಯಿಂಟು; ಬ್ಯಾಟುಗಾರನ ಎಡಮಗ್ಗುಲಲ್ಲಿ ಪಾಪಿಂಗ್‍ಕ್ರೀಸಿಗೆ ನೇರವಾಗಿ ನಿಲ್ಲಿಸಿರುವ ಕ್ಷೇತ್ರಪಾಲಕ ಯಾ ಅವನು ನಿಲ್ಲುವ ಸ್ಥಾನ.
  36. (ಬೇಟೆನಾಯಿಯ ವಿಷಯದಲ್ಲಿ)
    1. (ಬೇಟೆಯನ್ನು ಕಂಡುಹಿಡಿದ ಬೇಟೆ ನಾಯಿಯು ಆ ಸ್ಥಳವನ್ನು) ತೋರಿಸುವಿಕೆ, ತೋರಿಸುವ ರೀತಿ.
    2. ಹಾಗೆ ತೋರಿಸುವಾಗ ಅದು ನಿಂತಿರುವ ಜಾಗ, ಸ್ಥಳ.
  37. ಪ್ರಮುಖಾಂಶ; ಪ್ರಧಾನಾಂಶ; ವಾಸ್ತವಿಕವಾಗಿ ಉದ್ದೇಶಿತವಾದುದು ಯ ಚರ್ಚೆಯಲ್ಲಿರುವುದು: that was the point of the question ಚರ್ಚೆಯ ಮುಖ್ಯ ಅಂಶವೇ ಅದಾಗಿತ್ತು.
  38. (ನಿಷೇಧಾರ್ಥಕ ಯಾ ಪ್ರಶ್ನಾರ್ಥಕದೊಡನೆ) ಅರ್ಥ; ಉದ್ದೇಶ; ಪ್ರಯೋಜನ; ಲಾಭ: saw no point in speaking ಮಾತನಾಡುವುದರಿಂದ ಪ್ರಯೋಜನವನ್ನೇನೂ ಕಾಣಲಿಲ್ಲ.
  39. (ಸಾಮಾನ್ಯವಾಗಿ ಬಹುವಚನದಲ್ಲಿ) ಮೋಟಾರ್‍ ವಾಹನದ ಡಿಸ್ಟ್ರಿಬ್ಯೂಟರಿನ ವಿದ್ಯುತ್ಸಂಪರ್ಕ ಸೆಟ್ಟುಗಳಲ್ಲಿ ಒಂದು.
  40. (ಮುಷ್ಟಿಕಾಳಗ) ನಾಕ್‍ಔಟ್‍ ಹೊಡೆತದಲ್ಲಿ ಗಡ್ಡದ ತುದಿ.
  41. = power point.
  42. ಪಾಯಿಂಟು; ಆಟ ಮೊದಲಾದವುಗಳಲ್ಲಿ ಯಾ (ರೂಪಕವಾಗಿ) ಚರ್ಚಾ ಗೋಷ್ಠಿಗಳಲ್ಲಿ ಗಳಿಸುವ ಜಯದ ಏಕಮಾನ, ಅಂಕ, ಅಂಶ.
  43. (ಬ್ಯಾಲೆ ನೃತ್ಯದಲ್ಲಿ) ಕಾಲಿನ ಹೆಬ್ಬೆರಳಿನ ತುದಿ; ಪಾದಾಂಗುಷ್ಠಾಗ್ರ.
  44. ಯಾವುದೇ ಮೇಲ್ಮೈ ಮೇಲಿನ ಸಣ್ಣ ಗುರುತು, ಚುಕ್ಕೆ.
  45. ಪ್ರಗತಿಯ ಯಾ ಹೆಚ್ಚಳದ ಒಂದು ಹಂತ ಯಾ ಘಟ್ಟ: at that point we gave up ಆ ಹಂತದಲ್ಲಿ ನಾವು ಕೈಬಿಟ್ಟೆವು.
  46. ವೈಶಿಷ್ಟ್ಯ: tact is not his good point ವ್ಯವಹಾರ ಕೌಶಲ ಅವನ ವೈಶಿಷ್ಟ್ಯವಲ್ಲ.
  47. (ಬಾಕ್ಸಿಂಗ್‍) ಹೊಡೆದುರುಳಿಸುವ ಸ್ಥಳವಾಗಿ ಗಲ್ಲದ ತುದಿ.
ಪದಗುಚ್ಛ
  1. at all points ಎಲ್ಲ ಭಾಗದಲ್ಲೂ; ಎಲ್ಲೆಡೆಯಲ್ಲೂ.
  2. at the point of ಅಂಚಿನಲ್ಲಿ ಹತ್ತಿರ ಹತ್ತಿರ: at the point of death ಸಾವಿನ ಅಂಚಿನಲ್ಲಿ.
  3. beside the point ಅಪ್ರಸ್ತುತ ಯಾ ಅಪ್ರಸ್ತುತವಾಗಿ; ಸದ್ಯದ ವಿಷಯಕ್ಕೆ ಸಂಬಂಧಿಸಿರದೆ.
  4. carry one’s point ತನ್ನ ಉದ್ದೇಶವನ್ನು ಸಾಧಿಸಿಕೊ, ಸಮರ್ಥಿಸಿಕೊ.
  5. case in point ಪ್ರಸ್ತುತವಾದ ಯಾ ಪರಿಗಣನೆಯಲ್ಲಿರುವ ವಿಷಯ.
  6. come to the point (ಪ್ರಕೃತ) ವಿಷಯಕ್ಕೆ ಬರು, ಬಾ.
  7. give points to opponent in game
    1. ಆಟದಲ್ಲಿ ಪ್ರತಿಸ್ಪರ್ಧಿಗೆ ಕೆಲವು ಪಾಯಿಂಟುಗಳನ್ನು (ರಿಯಾಯಿತಿಯಾಗಿ) ಕೊಡು; ಹೀಗೆ ಕೊಟ್ಟು ಗೆಲ್ಲು.
    2. (ರೂಪಕವಾಗಿ) ಬೆರೊಬ್ಬನಿಗಿಂತ ಮೇಲುಗೈಯಾಗಿರು.
  8. in point ಸಂಗತ; ಪ್ರಸ್ತುತ; ಹೊಂದತಕ್ಕ: the case you make is not in point ನೀನು ತೆಗೆದುಕೊಂಡಿರುವ ನಿದರ್ಶನ ಸಂಗತವಲ್ಲ, ಹೊಂದತಕ್ಕದ್ದಲ್ಲ.
  9. in point of fact ವಸ್ತುತಃ; ವಾಸ್ತವವಾಗಿ; ನಿಜಾಂಶ ನೋಡಿದರೆ; ನಿಜಕ್ಕೂ.
  10. come to a point ಬೇಟೆ ಇರುವ ಸ್ಥಳಕ್ಕೆ ಬರು.
  11. make one’s point ತನ್ನ ಹೇಳಿಕೆಯನ್ನು, ವಾದವನ್ನು – ಸಮರ್ಥಿಸು, ರುಜುವಾತು ಮಾಡಿಕೊಡು.
  12. nine points ಹತ್ತರಲ್ಲಿ ಒಂಬತ್ತು ಬಾಗ; ಮುಕ್ಕಾಲು ಮೂರು ವೀಸೆ ಪಾಲು; ಹೆಚ್ಚು ಕಡಿಮೆ ಪೂರ್ತಿ.
  13. not to put too fine a point on (or upon) it ನಿರ್ದಾಕ್ಷಿಣ್ಯವಾಗಿ, ನಿಷ್ಠುರವಾಗಿ, ನಯನಾಜೂಕು ನೋಡದೆ ಹೇಳಬೇಕಾದರೆ.
  14. point of conscience ಅಂತಸ್ಸಾಕ್ಷಿಗೆ, ಆತ್ಮಸಾಕ್ಷಿಗೆ ಸಂಬಂಧಿಸಿದ ಅಂಶ, ವಿಷಯ; ಪ್ರಶ್ನೆ: it is a point of conscience with me ನನ್ನ ಪಾಲಿಗೆ ಅದು ಆತ್ಮಸಾಕ್ಷಿಯ ವಿಷಯ, ಪ್ರಶ್ನೆ.
  15. on (or upon) the point of (ನಿರ್ದಿಷ್ಟ ಕೆಲಸವನ್ನು) ಇನ್ನೇನು ಮಾಡಬೇಕು (ಎನ್ನುವಾಗ).
  16. point of honour (ಮಾನ) ಮರ್ಯಾದೆಯ ವಿಷಯ.
  17. point of no return ಹಿಂದಿರುಗಲಾರದ ಸ್ಥಿತಿ, ಸ್ಥಾನ; ಪ್ರಯಾಣ ಯಾ ಉದ್ಯಮದಲ್ಲಿ ಬಹುದೂರ ಸಾಗಿ, ಸಾಧನ ಸಾಮಗ್ರಿಯ ಕೊರತೆಯಿಂದಾಗಿ ಪ್ರಾರಂಭದ ಸ್ಥಾನಕ್ಕೆ ಹಿಂದಿರುಗಲು ಸಾಧ್ಯವಾಗದೆ ಮುಂದಕ್ಕೆ ಕೊನೆಯವರೆಗೆ ಮುಂದುವರಿಸುವುದೇ ಅನಿವಾರ್ಯವಾಗುವ ಯಾ ವ್ಯಾವಹಾರಿಕವಾಗಿ ಹೆಚ್ಚು ಪ್ರಯೋಜನಕಾರಿಯಾಗಿರುವ ಸ್ಥಿತಿ, ಸ್ಥಾನ; ಯಾವುದೇ ಕಾರ್ಯ ಯಾ ವ್ಯವಹಾರದಲ್ಲಿ ಹಿಂದಿನ ಸ್ಥಿತಿಗೆ ಬರಲಾಗದಂತೆ ಆದ ಹಂತ, ಘಟ್ಟ.
  18. point of order ಕ್ರಮ ವಿಚಾರ; ಚರ್ಚೆ ಮೊದಲಾದವುಗಳಲ್ಲಿ ಸರಿಯಾದ ವಿಧಾನವನ್ನು ಅನುಸರಿಸಲಾಗಿದೆಯೋ ಇಲ್ಲವೋ ಎಂಬ ಪ್ರಶ್ನೆ.
  19. point-to-point race ಪಂದ್ಯದ ಪಥದಲ್ಲಿ ಕೆಲವು ಹೆಗ್ಗುರುತುಗಳಿಂದ ನಿರ್ದೇಶಿಸಿದ ಪಥದಲ್ಲೇ ಓಡುವ ಪಂದ್ಯ.
  20. point of view
    1. ನೋಟದ ನಿಟ್ಟು; ದೃಷ್ಟಿಕೋನ.
    2. (ರೂಪಕವಾಗಿ) ದೃಷ್ಟಿ; ಅಭಿಪ್ರಾಯ; ನಿಲುವು.
  21. potatoes and point ತಿನ್ನಲು ಆಲೂಗೆಡ್ಡೆ ತೋರಿಸಲು ರುಚಿಕರವಾದ ತಿಂಡಿ (ಆಲೂಗೆಡ್ಡೆ ರುಚಿಕೊಡುವ ವಸ್ತುವಾವುದೂ ಇಲ್ಲದಾಗ ಎದುರಿಗಿರುವ ರುಚಿಯಾದ ಭಕ್ಷ್ಯ ಮೊದಲಾದವಕ್ಕೆ ಅದನ್ನು ತೋರಿಸಿ ಬಳಿಕ ತಿನ್ನುವ ಪದ್ಧತಿ).
  22. the point of the jaw (ಮುಷ್ಟಿಯುದ್ಧದಲ್ಲಿ ಎದುರಾಳಿಯನ್ನು ಹೊಡೆದುರುಳಿಸುವ ಕೊನೆಯ ಹೊಡೆತಕ್ಕಾಗಿ ಆರಿಸಿಕೊಳ್ಳುವ) ಗಲ್ಲದ ತುದಿ.
  23. to the point ಪ್ರಸಕ್ತ ವಿಷಯಕ್ಕೆ ಸಂಬಂಧಿಸಿದಷ್ಟು; ಎಷ್ಟೋ ಅಷ್ಟು.
  24. score points off ವಾದ ಮೊದಲಾದವುಗಳಲ್ಲಿ ಒಬ್ಬನಿಗಿಂತ ಮೇಲುಗೈಯಾಗು.
  25. take a person’s point ಒಬ್ಬನ ವಾದ ಸರಿಯೆಂದು ಒಪ್ಪು.
  26. up to a point ಒಂದು ಹಂತದವರೆಗೆ; ಸ್ವಲ್ಪ ಮಟ್ಟಿಗೆ, ಆದರೆ ಪೂರ್ತಿಯಾಗಲ್ಲ.
  27. win on points (ಮುಷ್ಟಿಕಾಳಗ) ಅಂಕಗಳಿಂದ ಗೆಲ್ಲು; ಹೆಚ್ಚು ಅಂಕಗಳನ್ನು ಗಳಿಸುವ ಆಧಾರದ ಮೇಲೆ ಗೆಲ್ಲು (ಹೊಡೆದುರುಳಿಸಿ ಅಲ್ಲ).
  28. make a point of ಅತ್ಯವಶ್ಯವೆಂದು ಪರಿಗಣಿಸು ಯಾ ಒತ್ತಿಹೇಳು.