maid ಮೇಡ್‍
ನಾಮವಾಚಕ
  1. ಹುಡುಗಿ; ಬಾಲೆ; ಬಾಲಿಕೆ.
  2. ಕೊಡಗೂಸು; ಕನ್ಯೆ; ಕುಮಾರಿ; ಇನ್ನೂ ಮದುವೆಯಾಗದಿರುವ ಹುಡುಗಿ.
  3. ಮದುವೆಯಿಲ್ಲದ ಹೆಂಗಸು; ಅವಿವಾಹಿತೆ.
  4. ಹೆಣ್ಣಾಳು; ಸೇವಿಕೆ; ಸೇವಕಿ; ಪರಿಚಾರಿಕೆ; ಕೆಲಸದವಳು.
ಪದಗುಚ್ಛ
  1. maid of all work ಮನೆಗೆಲಸದವಳು; ಪರಿಚಾರಿಕೆ; ಎಲ್ಲ ಮನೆಗೆಲಸವನ್ನೂ ಮಾಡುವ ಹೆಣ್ಣಾಳು.
  2. maid of honour
    1. ಪರಿವಾರದವಳು; ಸಂಗಾತಿ; ಸಖಿ; ಗೌರವಾನುಚರೆ; ಗೌರವ ಸಹಚರಿ; ರಾಣಿಯ ಯಾ ರಾಜಕುಮಾರಿಯ ಪರಿಜನರಲ್ಲೊಬ್ಬಳಾದ (ಸಾಮಾನ್ಯವಾಗಿ ದೊಡ್ಡ ಮನೆತನದ, ಮದುವೆಯಿಲ್ಲದ) ಮಹಿಳೆ.
    2. ಒಂದು ಬಗೆಯ ಚೀಸ್‍ಕೇಕು; ಗರಣೆ, ಕೆನೆ, ಮೊದಲಾದವುಗಳನ್ನು ತುಂಬಿದ ಸಣ್ಣ ಕಡುಬು.
    3. ವಧುವಿನ ಸಂಗಾತಿ, ಸಹಚರಿ.
  3. old maid
    1. ವೃದ್ಧಕನ್ಯೆ; ವಯಸ್ಕಳಾದ ಅವಿವಾಹಿತೆ.
    2. ಒಂದು ಬಗೆಯ ಇಸ್ಪೀಟಾಟ.
  4. the Maid (of Orleans) (15ನೆ ಶತಮಾನದಲ್ಲಿ ನಡೆದ ಇಂಗ್ಲೆಂಡ್‍ ಮತ್ತು ಹ್ರಾನ್ಸ್‍ ದೇಶಗಳ ನಡುವಣ ಯುದ್ಧದಲ್ಲಿ ಆರ್ಲಿಯನ್ಸ್‍ ನಗರವನ್ನು ಇಂಗ್ಲಿಷರಿಂದ ರಕ್ಷಿಸಿದ ಹ್ರಾನ್ಸಿನ ಕನ್ಯೆ) ಜೋನ್‍ ಆಹ್‍ ಆರ್ಕ್‍.