See also 2like  3like  4like  5like  6like  7like
1like ಲೈಕ್‍
ಗುಣವಾಚಕ
( ತರರೂಪ more like, ತಮರೂಪ most like ವಿರಳವಾಗಿ ಕಾವ್ಯಪ್ರಯೋಗ ತರರೂಪ liker, ತಮರೂಪ likest).
  1. ಅಂತಹ; ಅಂಥ; ಸದೃಶ; ಅದೇ – ರೀತಿಯ, ಬಗೆಯ; ಬೇರೊಂದು ವಸ್ತುವಿನ ಕೆಲವು ಯಾ ಎಲ್ಲಾ ಗುಣಗಳನ್ನು ಹೊಂದಿರುವ: in like manner ಅಂತೆಯೇ; ಅದೇ ರೀತಿಯಲ್ಲಿ. as like as two peas ಎರಡು ಬಟಾಣಿ ಕಾಳುಗಳಂತೆ ಒಂದೇ ಬಗೆಯಾಗಿ. very like her brother ಬಹಳವಾಗಿ ತನ್ನ ಅಣ್ಣನಂತೆ. on this and the like topics ಈ ಮತ್ತು ಇಂಥ ವಿಷಯಗಳ ಮೇಲೆ.
  2. ಅಂತಹ; ಹೋಲುವ; ಸದೃಶ; ಅಂತೆ ಕಾಣಿಸುವ, ತೋರುವ; ಹೋಲಿಕೆಯುಳ್ಳ: looks like rabbits ಮೊಲಗಳಂತೆ ಕಾಣಿಸುತ್ತದೆ; ಮೊಲಗಳಿರಬೇಕು.
  3. ಸಮಾನ ವರ್ಗದ; ಒಂದೇ ವರ್ಗಕ್ಕೆ, ವಿಭಾಗಕ್ಕೆ, ಶ್ರೇಣಿಗೆ ಸೇರಿದ: good writers like Karanth ಕಾರಂತರಂತಹ ಒಳ್ಳೆಯ ಲೇಖಕರು.
  4. (ಸಾಮಾನ್ಯವಾಗಿ ಜೋಡಿಯಾಗಿ, ಜೊತೆಜೊತೆಯಾಗಿ ಇರುವ ವಸ್ತುಗಳ ವಿಷಯದಲ್ಲಿಪರಸ್ಪರ) ಒಂದರಂತೆ ಇನ್ನೊಂದು ಇರುವ: like mother, like daughter ತಾಯಿಯಂತ ಮಗಳು; ತಾಯಿ ಹೇಗಿದ್ದಾಳೋ ಮಗಳೂ ಅಂತೆಯೇ ಇದ್ದಾಳೆ.
  5. ಅನುಗುಣವಾಗಿರುವ; ಸ್ವಭಾವಕ್ಕೆ – ತಕ್ಕಂತೆ, ಅನುರೂಪವಾಗಿ ಇರುವ: that is like your impudence ಅದು ನಿನ್ನ ಧಾರ್ಷ್ಟ್ಯಕ್ಕೆ ತಕ್ಕಂತಿದೆ. it was like him to think of himself last ತನ್ನ ವಿಷಯವನ್ನು ಕೊನೆಯಲ್ಲಿ ಯೋಚಿಸುವುದು ಅವನ ಸ್ವಭಾವಕ್ಕೆ ಅನುಗುಣವಾಗಿತ್ತು. it is not like them to be late ತಡವಾಗಿ ಬರುವುದು ಅವರ ಸ್ವಭಾವವಲ್ಲ.
  6. (ಯಾವುದನ್ನೇ ಮಾಡಲು ಯಾ ಪಡೆಯಲು) ತಕ್ಕ ಸ್ಥಿತಿಯಲ್ಲಿ ಯಾ ಸೂಕ್ತ ಮನೋಭಾವದಲ್ಲಿ ಇರುವ: feel like working ಕೆಲಸ ಮಾಡಬೇಕೆನಿಸುತ್ತದೆ. felt like a cup of tea ಒಂದು ಲೋಟಾ ಟೀ ಬೇಕಿನಿಸಿತು.
  7. (ಇರುವಂತೆ, ಆಗುವಂತೆ) ಕಾಣುವ: looks like lasting ಬಾಳಿಕೆ ಬರುವಂತೆ ಕಾಣುತ್ತದೆ.
  8. (ಪ್ರಾಚೀನ ಪ್ರಯೋಗ ಯಾ ಆಡುಮಾತು) ಸಂಭವನೀಯವಾದ: as like as not ಆಗಲೂಬಹುದು ಆಗದಿರಲೂ ಬಹುದು. like enough ಪ್ರಾಯಶಃ ಬಹುಶಃ.
ಪದಗುಚ್ಛ
  1. a critic like you ನಿನ್ನಂಥ ವಿಮರ್ಶಕ.
  2. beings of like passion with (or to) us (ವಿರಳ ಪ್ರಯೋಗ) ನಮ್ಮಂತೆಯೇ ರಾಗದ್ವೇಷಗಳಿರುವ ಜೀವಿಗಳು.
  3. be nothing like (ಯಾವ ವಿಧದಲ್ಲೂ) ಸಮಾನವಾಗಿಲ್ಲದಿರು ಯಾ ಹೋಲಿಕೆಯಿಲ್ಲದಿರು ಯಾ ಸಾಕಷ್ಟಿಲ್ಲದಿರು.
  4. be (or have) like to do ಮಾಡುವುದರಲ್ಲಿರು; ಮಾಡುವ ಪ್ರಯತ್ನದಲ್ಲಿರು.
  5. had like to have done (ಪ್ರಾಚೀನ ಪ್ರಯೋಗ, ಆಡುಮಾತು) ಇನ್ನೇನು ಮಾಡಿಬಿಡುವುದರಲ್ಲಿದ್ದೆ.
  6. like father, like son ತಂದೆಯಂತೆ ಮಗ.
  7. like master, like man ದಣಿಯಂತೆ ಆಳು; ಯಥಾ ರಾಜಾ ತಥಾ ಪ್ರಜಾಃ.
  8. liker to God than man (ವಿರಳ ಪ್ರಯೋಗ) ಮನುಷ್ಯನಿಗಿಂತಲೂ ದೇವರನ್ನೇ ಹೆಚ್ಚು ಹೋಲುವ.
  9. like that (ಆಗ ತಾನೇ ನೋಡಿದುದರ, ಹೇಳಿದುದರ) ಹಾಗೆ; ಅಂತೆ; ಅದರಂತೆ; ಆ ರೀತಿ; ಆ ಪ್ರಕಾರವಾಗಿ.
  10. look like (ಯಾವುದೋ ಒಂದರಂತೆ) ಕಾಣು; ತೋರು.
  11. nothing like ಅದರಷ್ಟಿಲ್ಲ; ಅಷ್ಟಿಲ್ಲ: nothing like as (or so) good ಅದರಷ್ಟು ಒಳ್ಳೆಯದಲ್ಲ; ಅಷ್ಟು ಚೆನ್ನಾಗಿಲ್ಲ.
  12. something like ಹತ್ತಿರ ಹತ್ತಿರ; ಅದರಷ್ಟೇ; something like a 1000 rupees ಹತ್ತಿರ ಹತ್ತಿರ ಸಾವಿರ ರೂಪಾಯಿಗಳು.
  13. something like a day (like ಪದವನ್ನು ಒತ್ತಿ ಹೇಳಿದಾಗ) (ಆಡುಮಾತು) ಬಹು ಸೊಗಸಾದ ದಿನ.
  14. the picture is not like ಚಿತ್ರ ಮೂಲದಂತಿಲ್ಲ.
  15. what is he like? ಅವನು ಹೇಗೆ ಕಾಣುತ್ತಾನೆ? ಅವನು ಎಂಥವನು?
  16. what is it like? ಅದು ಹೇಗಿದೆ?
See also 1like  3like  4like  5like  6like  7like
2like ಲೈಕ್‍
ಉಪಸರ್ಗ
  1. ಅಂತೆ; ಆ ರೀತಿ; ಹಾಗೆ: acted like an idiot ದಡ್ಡನಂತೆ ವರ್ತಿಸಿದ. cannot do it like you ನೀನು ಮಾಡುವಂತೆ ಅದನ್ನು ಮಾಡಲಾರೆ. do not talk like that ಹಾಗೆ(ಲ್ಲ) ಮಾತನಾಡಬೇಡ.
  2. ಅಷ್ಟು; ಅಷ್ಟು, ಅಷ್ಟರ – ಮಟ್ಟಿಗೆ; ಆ ಪ್ರಮಾಣದಲ್ಲಿ.
ನುಡಿಗಟ್ಟು
  1. blush like a peony ಪಿಯನಿ ಹೂವಿನಂತೆ (ನಾಚಿ, ಮುಖ) ಕೆಂಪಾಗು, ಕೆಂಪೇರು.
  2. drink like a $^1$fish.
  3. fit like a glove ಸರಿಯಾಗು ಹೊಂದು.
  4. hate (a person etc.) like poison (ವ್ಯಕ್ತಿ ಮೊದಲಾದವರನ್ನು) ವಿಷದಂತೆ ಯಾ ವಿಷದಷ್ಟು ದ್ವೇಷಿಸು.
  5. like a $^1$house on fire.
  6. like $^1$anything.
  7. like a shot (ಆಡುಮಾತು) ಹಿಂದು ಮುಂದು ನೋಡದೆ; ಹಿಂಜರಿಕೆಯಿಲ್ಲದೆ; ಇಚ್ಛಾನುಪೂರ್ವಕವಾಗಿ.
  8. like fun ತೀರ ರಭಸದಿಂದ; ತುಂಬಾ ಜೋರಾಗಿ.
  9. like hell.
  10. like mad ಬಲು ಜೋರಾಗಿ; ಬಿರುಸಾಗಿ; ಹುಚ್ಚುಹತ್ತಿದಂತೆ; ಗರ ಬಡಿದಂತೆ.
  11. like so (ಆಡುಮಾತು) ಈ ರೀತಿಯಲ್ಲಿ; ಹೀಗೆ.
  12. scatter (them) like chaff (ಅವನ್ನು ಯಾ ಅವರನ್ನು) ಹೊಟ್ಟಿನಂತೆ – ತೂರಿಬಿಡು, ಚೆದುರಿಸು; ದಿಕ್ಕಾ ಪಾಲಾಗುವಂತೆ ಮಾಡು.
  13. sell like hot $^1$cakes.
  14. smoke (tobacco etc.) like a chimney ಚಿಮಣಿಯಂತೆ ಹೊಗೆಬಿಡು; ತಂಬಾಕು ತುಂಬ ಸೇದಿ ಭಾರಿ ಹೊಗೆಬಿಡು; ಅತಿ ಹೊಗೆಸೊಪ್ಪು ಸೇದು; ಮಿತಿಮೀರಿ ಧೂಮಪಾನ ಮಾಡು.
  15. spread like wildfire ಕಾಳ್ಗಿಚ್ಚಿನಂತೆ ಹರಡು.
  16. swear like a trooper ಸೈನಿಕನಂತೆ, ಸೈನಿಕನಷ್ಟೇ ಅವಾಚ್ಯ ಶಬ್ದ ನುಡಿ.
  17. swim like a duck ಬಾತುಕೋಳಿಯಂತೆ (ಸಹಜವಾಗಿ) ಈಜು.
See also 1like  2like  4like  5like  6like  7like
3like ಲೈಕ್‍
ಕ್ರಿಯಾವಿಶೇಷಣ
  1. (ಪ್ರಾಚೀನ ಪ್ರಯೋಗ) ಅದೇ – ತರಹ, ರೀತಿಯಲ್ಲಿ; ಅದರಂತೆ; ಅದು ಹೇಗೋ ಹಾಗೆ: sang like as a nightingale ರಾತ್ರಿ ಕೋಗಿಲೆಯ ತರಹ ಹಾಡಿದಳು.
  2. (ಅಶಿಷ್ಟ) ಹಾಗೆ – ಹೇಳುವುದಾದರೆ, ಹೇಳುವುದಾದಲ್ಲಿ; ಮಸಲ; ಆ ಮಾತಿಗೆ ಬಂದರೆ: did a quick get away, like ಹೇಳುವುದಾದರೆ, (ಅಪರಾಧವೆಸಗಿ) ಬೇಗ ತಪ್ಪಿಸಿಕೊಂಡು ಹೊರಟುಹೋದ. by way of argument like ಮಸಲ ವಾದಕ್ಕಾಗಿ; ವಾದಕ್ಕಾಗಿ ಹೇಳುವುದಾದರೆ, ಹೇಳುವುದಾದಲ್ಲಿ.
  3. (ಆಡುಮಾತು) ಪ್ರಾಯಶಃ; ಬಹುಶಃ (ಸಾಮಾನ್ಯವಾಗಿ ಪ್ರಾಸಂಗಿಕ ವಾಕ್ಯವಾಗಿ ಪ್ರಯೋಗ) (very like or like enough): they will come, like enough ಅವರು ಬಹುಶಃ ಬರುತ್ತಾರೆ.
  4. ಸ್ವಲ್ಪ (ಮಟ್ಟಿಗೆ); ಸ್ವಲ್ಪ ಪ್ರಮಾಣದಲ್ಲಿ; ತಕ್ಕಮಟ್ಟಿಗೆ: a small like wagon ಸ್ವಲ್ಪ ಚಿಕ್ಕ ಗಾಡಿ, ವ್ಯಾಗನ್ನು. he shrunk up like and went away ಅವನು ಸ್ವಲ್ಪ ಮುದುರಿಕೊಂಡು ಹೊರಟುಹೋದ.
  5. ಹೆಚ್ಚುಕಡಮೆ; ಸರಿಸುಮಾರು: the rates are like 18 per thousand ದರಗಳು ಸರಿ ಸುಮಾರು ಸಾವಿರಕ್ಕೆ 18ರಂತೆ ಇವೆ.
ಪದಗುಚ್ಛ

as like as not (or like as not) ಮುಕ್ಕಾಲು ಮೂರು ವೀಸೆ ಪಾಲು; ಬಹುಪಾಲು; ಬಹುಮಟ್ಟಿಗೆ; ಬಹುತೇಕ: like as not, her estimate won’t be very good ಬಹುಮಟ್ಟಿಗೆ ಅವಳ ಎಣಿಕೆ (ಅಭಿಪ್ರಾಯ) ಅಷ್ಟೇನೂ ಸರಿಯಾಗಿರುವುದಿಲ್ಲ.

See also 1like  2like  3like  5like  6like  7like
4like ಲೈಕ್‍
ಸಂಯೋಜಕಾವ್ಯಯ

(ಆಡುಮಾತು, ವಿವಾದ ಪ್ರಯೋಗ)

  1. ಅಂತೆ; ಹಾಗೆ: cannot do it like you do ನೀನು ಮಾಡುವಂತೆ ಮಾಡಲಾರೆ. snow is falling like in January ಜನವರಿಯಲ್ಲಿ ಬೀಳುವಂತೆ ಹಿಮ ಸುರಿಯುತ್ತಿದೆ. looks like they can raise better tobacco ಅವರು ಇನ್ನೂ ಉತ್ತಮ ಹೊಗೆಸೊಪ್ಪು ಬೆಳೆಯುವಂತೆ ತೋರುತ್ತದೆ.
  2. ಹೇಗೋ ಹಾಗೆ; ಅಂತಿರುವಂತೆ; ಹಾಗಿರುವಂತೆ: ate like they were starving ಹೊಟ್ಟೆಗಿಲ್ಲದೆ ಉಪವಾಸವಿರುವವರಂತೆ ತಿಂದರು.
ಪದಗುಚ್ಛ

tell it like it is ವಾಸ್ತವ ಸಂಗತಿಗಳನ್ನು ತಿಳಿಸು; ಇರುವುದನ್ನು ಇರುವಂತೆ ತಿಳಿಸು.

See also 1like  2like  3like  4like  6like  7like
5like ಲೈಕ್‍
ನಾಮವಾಚಕ
  1. (ಸರಿ)ಸಮಾನ; ಸದೃಶ; ಸಾಟಿ; ಸರಿಸಾಟಿ; ಸಮಾನನಾ(ವಾ)ದ ಯಾ ಅದರಂಥ ಯಾ ಅವನಂಥ – ವ್ಯಕ್ತಿ ಯಾ ವಸ್ತು: mix with your likes ನಿನ್ನ ಸಮಾನರೊಂದಿಗೆ ಬೆರೆ, ಸೇರು. shall not see its like again ಅದರಂಥದ್ದನ್ನು ಮತ್ತೆ ಕಾಣಲಾರೆವು; ಅದರಂಥದ್ದು ಇನ್ನು ಸಿಕ್ಕಲಾರದು. compare like with like ಸಮಾನವಾದ ವಸ್ತು ಯಾ ವ್ಯಕ್ತಿಯನ್ನು ಸಮಾನವಾದ ವಸ್ತು ಯಾ ವ್ಯಕ್ತಿಯೊಂದಿಗೆ ಹೋಲಿಸು.
  2. ಅದರಂಥ ಯಾ ಅದೇ ಬಗೆಯ ವಸ್ತು(ಗಳು) ಯಾ ವಿಷಯ(ಗಳು): will never do the like again ಪುನಃ ಅಂಥದನ್ನು ಎಂದಿಗೂ ಮಾಡುವುದಿಲ್ಲ.
  3. (ಗಾಲ್‍) ಸಮಹೊಡೆತ; ಎದುರು ಆಟಗಾರ ಯಾ ಆಟಗಾರರು ಹೊಡೆದು ಗಳಿಸಿರುವ ಪಾಯಿಂಟುಗಳಿಗೆ ಸರಿಸಮಾನವಾಗುವಂತೆ ಹೊಡೆಯುವ ಆಟದ ಒಂದು ವರಸೆ, ಹೊಡೆತ.
ಪದಗುಚ್ಛ
  1. and the like ಇತ್ಯಾದಿ; ಮುಂತಾದವು; ಮೊದಲಾದುವು; ಎಂದು ಮುಂತಾದ; ಎಂಬಂಥ: music, painting and the like ಸಂಗೀತ, ಚಿತ್ರಕಲೆ, ಮುಂತಾದವು, ಇತ್ಯಾದಿ.
  2. did you ever see the like of it? ಅಂಥದ್ದನ್ನು ನೀನು ಎಂದಾದರೂ ಕಂಡಿದ್ದೆಯಾ?
  3. like cures like ಅದಕ್ಕೆ ಅದೇ ಮದ್ದು.
  4. or the like ಅಥವಾ ಅದೇ ಬಗೆಯ ಬೇರೆ ವಸ್ತು(ಗಳು), ವಿಷಯ(ಗಳು).
  5. the likes of me (ಆಡುಮಾತು) ನನ್ನಂಥವರು; ನನ್ನಂಥ ದೀನರು, ಬಡವರು, ಪಾಮರರು.
  6. the likes of you (ಆಡುಮಾತು) ನಿನ್ನಂಥವರು; ನಿನ್ನಂಥ – ಘನತೆವಂತರು, ದೊಡ್ಡವರು, ಪ್ರಸಿದ್ಧರು.
See also 1like  2like  3like  4like  5like  7like
6like ಲೈಕ್‍
ಸಕರ್ಮಕ ಕ್ರಿಯಾಪದ
  1. ರುಚಿಸು; ಹಿಡಿಸು; ಮನಸ್ಸಿಗೆ ಸೇರು; ಹಿತವಾಗು; ಪ್ರಿಯವಾಗು; ಇಷ್ಟವಾಗು: it likes me not (ಪ್ರಾಚೀನ ಪ್ರಯೋಗ) ಅದು ನನಗೆ ಸೇರುವುದಿಲ್ಲ, ಹಿಡಿಸುವುದಿಲ್ಲ. it likes me well ಅದು ನನಗೆ ಬಹಳ ಇಷ್ಟ, ಬಹಳ ಹಿತವಾಗಿದೆ. I like my coffee black ನನಗೆ ಕರಿಕಾಫಿ ಇಷ್ಟ. I do not like such things discussed ಅಂಥ ವಿಷಯಗಳನ್ನು ಚರ್ಚಿಸುವುದು ನನಗೆ ಇಷ್ಟವಿಲ್ಲ, ಹಿಡಿಸುವುದಿಲ್ಲ.
  2. ಹಿತಕರವಾಗು; ತೃಪ್ತಿಕರವಾಗು; ಒಗ್ಗು; ಒಂಟು; ಹಿಡಿಸು: I like that dish but it does not like me ನನಗೆ ಆ ತಿಂಡಿ ಇಷ್ಟ, ಆದರೆ ಅದು ನನಗೆ ಒಂಟುವುದಿಲ್ಲ.
  3. (ಒಬ್ಬ ವ್ಯಕ್ತಿಯನ್ನು ಯಾ ವಸ್ತುವನ್ನು ಯಾ ವಿಷಯವನ್ನು) ಮೆಚ್ಚು; ಪ್ರೀತಿಸು; ಇಷ್ಟಪಡು: I like you ನಾನು ನಿನ್ನನ್ನು ಪ್ರೀತಿಸುತ್ತೇನೆ. I like his impudence (ವ್ಯಂಗ್ಯದಲ್ಲಿ) ನಾನು ಅವನ ಉದ್ಧಟತನವನ್ನು ಮೆಚ್ಚುತ್ತೇನೆ.
  4. ಬಯಸು; ಬೇಕೆನಿಸು; ಅಪೇಕ್ಷಿಸು; ಇಷ್ಟಪಡು: would like a cup of tea ಒಂದು ಕಪ್ಪು ಚಹಾ ಬೇಕೆನಿಸುತ್ತದೆ. I should much like to come ಬರಲು ಬಹಳ ಇಷ್ಟಪಡುತ್ತೇನೆ. should like you to come ನೀನು ಬರಬೇಕೆಂದು ಅಪೇಕ್ಷಿಸುತ್ತೇನೆ. should like time to consider it ಅದನ್ನು ಪರ್ಯಾಲೋಚಿಸಲು ಕಾಲ ಬಯಸುತ್ತೇನೆ, ಕಾಲ ಬೇಕು.
  5. (ಸಾಮಾನ್ಯವಾಗಿ ಪ್ರಶ್ನಾರ್ಥಕದಲ್ಲಿ) ಭಾವಿಸು; ಪರಿಗಣಿಸು; ಅನ್ನಿಸು; ತೋರು: how would you like it if it happened to you? ಅದು ನಿನಗೆ ಆಗಿದ್ದಿದ್ದರೆ, ನಿನಗೆ ಹೇಗಾಗುತ್ತಿತ್ತು, ಏನು ಅನ್ನಿಸುತ್ತಿತ್ತು?
ಪದಗುಚ್ಛ
  1. how do you like it? ಅದು ನಿನಗೆ ಹೇಗನಿಸುತ್ತದೆ? ಅದು ನಿನಗೆ ಒಪ್ಪಿಗೆಯೇ ಅಥವಾ ಇಲ್ಲವೇ?
  2. if you like
    1. ಪ್ರಾರ್ಥನೆಗೆ ಒಪ್ಪಿಗೆ, ಸಮ್ಮತಿ ಸೂಚಿಸಲು: I will come if you like ನಿನಗೆ ಇಷ್ಟವಿದ್ದಲ್ಲಿ ನಾನು ಬರುತ್ತೇನೆ. you may come if you like ನಿನಗೆ ಇಷ್ಟವಿದ್ದಲ್ಲಿ ನೀನು ಬರಬಹುದು.
    2. ಪ್ರಾರ್ಥನೆಗೆ ಅರೆ ಒಪ್ಪಿಗೆ, ಸೀಮಿತ ಸಮ್ಮತಿ ಸೂಚಿಸಲು: I am shy if you like, but not cowardly ನನಗೆ ಸಂಕೋಚವೆಂದು ನೀನು ಹೇಳಿದರೆ ಒಪ್ಪುತ್ತೇನೆ, ಆದರೆ ಹೇಡಿ ಎಂದರೆ ಒಪ್ಪುವುದಿಲ್ಲ. I am careful if you like, but not miserly ನನ್ನನ್ನು ಜಾಗರೂಕನೆಂದರೆ ನಾನು ಒಪ್ಪಬಹುದು, ಆದರೆ ನಾನು ಜುಗ್ಗನಲ್ಲ.
  3. I like that? (ಹಾಸ್ಯ ಪ್ರಯೋಗ) (ವ್ಯಂಗ್ಯ ಪ್ರಯೋಗ) ಆಹಾ, ಬಹಳ ಚೆನ್ನಾಗಿದೆ! (ಅಗೌರವ ಸೂಚಿಸುವ ಉದ್ಗಾರ).
  4. like it or not (ಆಡುಮಾತು) ಒಪ್ಪು ಬಿಡು; ಇಷ್ಟವಿರಲಿ – ಇಲ್ಲದಿರಲಿ ಯಾ ಬಿಡಲಿ; ಬೇಕಾಗಲಿ – ಬೇಡವಾಗಲಿ ಯಾ ಬೇಡದಿರಲಿ.
  5. should like to know ನಾನು ತಿಳಿದುಕೊಳ್ಳಬೇಕೆಂದಿದ್ದೇನೆ; ನನಗೆ ಅದನ್ನು ಹೇಳುವುದು ನಿನಗೆ ಕಷ್ಟ ಎಂದು ನನ್ನ ಭಾವನೆ.
  6. should like to see (ವ್ಯಂಗ್ಯದಲ್ಲಿ) ನನಗೆ ಅದನ್ನು ನೋಡುವ – ಸಂಭವ, ಸಾಧ್ಯತೆ ಇಲ್ಲ.
See also 1like  2like  3like  4like  5like  6like
7like ಲೈಕ್‍
ನಾಮವಾಚಕ

(ಬಹುವಚನದಲ್ಲಿ) ಇಷ್ಟ; ಇಷ್ಟವಾದದ್ದು; ಇಷ್ಟವಾದವು; ಅಭಿರುಚಿಗಳು; ಒಲವುಗಳು.

ಪದಗುಚ್ಛ

likes and dislikes ಬೇಕು ಬೇಡಗಳು; ಇಷ್ಟಾನಿಷ್ಟಗಳು; ಒಲವು ಹಗೆತನಗಳು; ಇಚ್ಛಾದ್ವೇಷಗಳು; ಪ್ರಿಯಾಪ್ರಿಯಗಳು.