See also 2cake
1cake ಕೇಕ್‍
ನಾಮವಾಚಕ
  1. ಕೇಕು; ಹಿಟ್ಟಿನ ಜತೆಗೆ ದ್ವೀಪ ದ್ರಾಕ್ಷಿ, ಬೆಣ್ಣೆ, ಮೊಟ್ಟೆ ಮೊದಲಾದವುಗಳನ್ನು ಹಾಕಿ ಮಾಡಿದ, ಹುದುಗು ಹಾಕಿಲ್ಲದ, ಸಿಹಿಯಾದ ಬ್ರೆಡ್ಡು.
  2. (ದಪ್ಪನಾದ ಬಿಲ್ಲೆಯ ಯಾ ಅಲಂಕಾರದ ಆಕಾರಗಳಲ್ಲಿ ಬೇಯಿಸಿದ) ದೊಡ್ಡ ಪ್ರಮಾಣದ ಕೇಕು.
  3. (ಸ್ಕಾಟ್ಲಂಡ್‍, ಉತ್ತರ ಇಂಗ್ಲಂಡ್‍ಗಳಲ್ಲಿ ಓಟ್‍ ಧಾನ್ಯದ) ತೆಳು ಬ್ರೆಡ್ಡು.
  4. ತಿನಿಸುಬಿಲ್ಲೆ; ತಿಂಡಿಬಿಲ್ಲೆ; ಒತ್ತಿ ಮಾಡಿದ, ಚಪ್ಪಟೆಯಾದ ಇತರ ಆಹಾರದ ದಪ್ಪ ಬಿಲ್ಲೆ: pancake, fish cake.
  5. (ಯಾವುದೇ ವಸ್ತುವಿನ ಒತ್ತಿದ) ಬಿಲ್ಲೆ; ಹಲ್ಲೆ: cake of soap ಸೋಪಿನ ಬಿಲ್ಲೆ.
ನುಡಿಗಟ್ಟು
  1. piece of cake (ಆಡುಮಾತು) ಸುಲಭ ಕೆಲಸ; ಸುಲಿದ ಬಾಳೆಹಣ್ಣು; ಸುಲಭವಾದ ಯಾ ಪ್ರಿಯವಾದ ಕೆಲಸ.
  2. cakes and ale ಮಜಾಕೂಟ; ಸಂತೋಷಸಮಾರಂಭ.
  3. land of cakes ಸ್ಕಾಟ್ಲಂಡು.
  4. take the cake (ಅಶಿಷ್ಟ) (ಯಾವುದರಲ್ಲೇ) ಎಲ್ಲರನ್ನೂ ಮೀರಿಸು.
  5. cannot eat one’s cake and have it too ಉಂಡ ಬಳಿಕ ಕೊಂಡೂ ಹೋಗಲಾಗದು; ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.
  6. cannot have one’s cake and eat it = ನುಡಿಗಟ್ಟು \((5)\).
  7. slice of the cake ಲಾಭದಲ್ಲಿ ಪಾಲು; ಪ್ರಯೋಜನದಲ್ಲಿ ಭಾಗ.
  8. go or sell like hot cakes ಬೇಗನೆ ಖರ್ಚಾಗು; ಶೀಘ್ರವಾಗಿ ಮಾರಾಟವಾಗು.