hell ಹೆಲ್‍
ನಾಮವಾಚಕ
  1. ಪ್ರೇತಲೋಕ; ಮೃತರ ಲೋಕ.
  2. ನರಕ; ಶಾಶ್ವತ ಶಿಕ್ಷೆಗೆ ಗುರಿಯಾದ ಆತ್ಮಗಳು ಮತ್ತು ದುರ್ದೇವತೆಗಳು ಯಾತನೆಯನ್ನನುಭವಿಸುವ ಲೋಕ.
  3. ದೌಷ್ಟ್ಯದ ಯಾ ದುಷ್ಟತನದ ಯಾ ಸಂಕಟದ – ಸ್ಥಳ, ಸ್ಥಿತಿ.
  4. (ಆಡುಮಾತು) (ಆಶ್ಚರ್ಯ ಯಾ ಕಿರಿಕಿರಿಯನ್ನು ಸೂಚಿಸಲು ಬಳಸುವ ಉದ್ಗಾರ) ಹಾಳು; ಅನಿಷ್ಟ: what the hell do you want? ಹಾಳಾದ್ದು ಏನು ಬೇಕು ನಿನಗೆ? who the hell are you ಹಾಳಾದವನು ನೀನು ಯಾರು?.
  5. (ಪ್ರಿಸನರ್ಸ್‍ ಬೇಸ್‍ ಮೊದಲಾದ ಆಟಗಳಲ್ಲಿ) ಬಂದಿಗಳನ್ನು ಕೂಡುವ ಕೋಷ್ಠ.
  6. ಜೂಜುಮನೆ.
  7. (ಅಮೆರಿಕನ್‍ ಪ್ರಯೋಗ, ಆಡುಮಾತು) ತಮಾಷೆ; ಎಗ್ಗುಸಗ್ಗಿಲ್ಲದ ವಿನೋದ, ಕುಚೇಷ್ಟೆ.
ನುಡಿಗಟ್ಟು
  1. a hell of noise ಸಹಿಸಲಾಗದ, ವಿಪರೀತ – ಗಲಾಟೆ.
  2. all the hell let loose ಶುದ್ಧ ಗೊಂದಲ, ಅವಾಂತರ, ಗಲಭೆ.
  3. a or (ಅಮೆರಿಕನ್‍ ಪ್ರಯೋಗ) one or (ಬ್ರಿಟಿಷ್‍ ಪ್ರಯೋಗ) the hell of a or helluva = ನುಡಿಗಟ್ಟು \((17)\).
  4. as hell ತೀರ; ಅತಿ: tired as hell ತೀರ ಆಯಾಸಗೊಂಡು.
  5. beat the hell out of ಚೆನ್ನಾಗಿ, ಬಲವಾಗಿ ಗುದ್ದು ಹಾಕು.
  6. be hell on (ಅಶಿಷ್ಟ):
    1. ಅಪ್ರಿಯವಾಗಿ ವರ್ತಿಸು; ಕಟುವಾಗಿ ನಡೆದುಕೊ; ಕೋಪ ತೋರು; ನೋಯಿಸುವಂತೆ ವರ್ತಿಸು: she’s hell on her servants ಅವಳು ಆಳುಗಳ ಬಗ್ಗೆ ಬಹಳ ಕಟುವಾಗಿ ನಡೆದುಕೊಂಡಳು.
    2. ಅಪಾಯಕಾರಿಯಾಗಿರು: these country roads are hell on tyres ಈ ಹಳ್ಳಿಗಾಡಿನ ರಸ್ತೆಗಳು ಟೈರುಗಳಿಗೆ ಅಪಾಯಕಾರಿ.
  7. catch hell = ನುಡಿಗಟ್ಟು \((10)\).
  8. come hell or high waterಏನೇ, ಎಷ್ಟೇ ಅಡ್ಡಿಆತಂಕಗಳು ಬರಲಿ ಲೆಕ್ಕಿಸದೆ.
  9. for the hell of it ಕೇವಲ ವಿನೋದಕ್ಕಾಗಿ, ತಮಾಷೆಗಾಗಿ.
  10. get hell ಬಯ್ಗುಳ ತಿನ್ನು; ಬಯ್ಯಿಸಿಕೊ; ಚೆನ್ನಾಗಿ ಛೀಮಾರಿ ಮಾಡಿಸಿಕೊ: he’ll get hell from his wife for coming so late again ಮತ್ತೆ ಅಷ್ಟು ಹೊತ್ತಾಗಿ, ಹೊತ್ತು ಮೀರಿ ಬರುತ್ತಿರುವುದಕ್ಕಾಗಿ ಅವನ ಹೆಂಡತಿಯಿಂದ ಅವನು ಬಯ್ಯಿಸಿಕೊಳ್ಳುತ್ತಾನೆ.
  11. give (a person) hell (ಯಾವುದೇ ವ್ಯಕ್ತಿಗೆ) ತಡೆಯಲಾಗದ ಕಿರುಕುಳ ಕೊಡು; ಗೋಳುಗುಟ್ಟಿಸು; ಪೀಡಿಸು; ಕಾಟಕೊಡು; ಸಹಿಸಲಾರದಂತೆ ಮಾಡು.
  12. go to hell! ಹಾಳಾಗಿ ಹೋಗು!
  13. hell and high water ಯಾವುದೇ ಬಗೆಯ ಯಾ ಪ್ರಮಾಣದ ಅಡ್ಡಿಆತಂಕಗಳು, ಕಷ್ಟಗಳು, ಕ್ಲೇಶಗಳು:led his men through hell and high water ಎಲ್ಲ ರೀತಿಯ ಕಷ್ಟಗಳಲ್ಲೂ ಅವನು ಜನರಿಗೆ ದಾರಿ ತೋರಿದನು.
  14. hell around (ಅಶಿಷ್ಟ) ಸಂಯಮ ಬಿಟ್ಟು ವರ್ತಿಸು, ಜೀವಿಸು; ಹುಚ್ಚಾಬಟ್ಟೆ ವರ್ತಿಸು; ಪೋಕರಿಯಾಗಿ ನಡೆದುಕೊ, ಬದುಕು: all they cared about was drinking and hell in around ಅವರಿಗೆ ಬೇಕಾಗಿದ್ದುದು ಕುಡಿಯುವುದು ಮತ್ತು ಹುಚ್ಚಾಬಟ್ಟೆ ವರ್ತಿಸುವುದು ಮಾತ್ರ.
  15. hell for (ಯಾವುದಾದರೂ ಒಂದರ ಬಗ್ಗೆ) ಬಹಳ ಕಾಳಜಿಯುಳ್ಳ; ಬಹಳ ಆಸಕ್ತಿ, ಶ್ರದ್ಧೆ ಇರುವ: he was hell for efficiency ಅವನಿಗೆ ದಕ್ಷತೆಯ ಬಗ್ಗೆ ತೀವ್ರ ಆಸಕ್ತಿಯಿತ್ತು.
  16. hell for leather ಪೂರ್ತಿವೇಗದಲ್ಲಿ; ಹುಚ್ಚಾಪಟ್ಟೆ ವೇಗದಲ್ಲಿ.
  17. hell of a (ಅಶಿಷ್ಟ)
    1. ಚೆನ್ನಾಗಿಲ್ಲದ; ಕೆಟ್ಟ; ಅಹಿತವಾದ; ಸರಿಬೀಳದ; ಕಷ್ಟದ; ಪ್ರಯಾಸದ: we had a hell of a trip on that bumpy road ಎತ್ತೆತ್ತಿ ಹಾಕುವ ಆ ರಸ್ತೆಯ ಮೇಲಿನ ಪ್ರವಾಸ ನಮಗೆ ಬಹಳ ಪ್ರಯಾಸವಾಯಿತು.
    2. ಅಸಾಧಾರಣ; ಅತಿಶಯವಾದ; ಅದ್ಭುತ; ಅಮೋಘ: he got a great applause after giving a hell of a speech ಅಮೋಘವಾದ ಭಾಷಣ ಮಾಡಿದ ನಂತರ ಅವನಿಗೆ ಮೆಚ್ಚಿಕೆ ದೊರೆಯಿತು.
    3. ತುಂಬ; ಬಹಳ; ಭಾರಿ; ಅತಿ; ವಿಪರೀತ: it was a hell of a lot of money for a movie ಬರೀ ಒಂದು ಚಲನಚಿತ್ರ ನೋಡಲು ಅದು ತುಂಬ ದುಡ್ಡು.
  18. hell to pay ಬಹಳ ಕಷ್ಟ; ಫಜೀತಿ; ತಕ್ಕ ಶಾಸ್ತಿ: if he’s late there’ll be hell to pay ಅವನು ಹೊತ್ತು ಮೀರಿ ಬಂದರೆ ಅವನಿಗೆ ಬಹಳ ಕಷ್ಟ ಕಾದಿದೆ.
  19. knock the hell out of = ನುಡಿಗಟ್ಟು \((5)\).
  20. like hell (ಅನೇಕ ವೇಳೆ ಆಧಿಕ್ಯಸೂಚಕವಾಗಿ):
    1. (ಆಡುಮಾತು) ಏನನ್ನೂ ಲಕ್ಷ್ಯ ಮಾಡದೆ; ಎಲ್ಲಾ ಆಸೆ ತೊರೆದು.
    2. (ಆಡುಮಾತು) ವಿಪರೀತವಾಗಿ; ಮಿತಿಮೀರಿ; ಅಸಾಧ್ಯವಾಗಿ: he ran like hell ಅವನು ವಿಪರೀತ ವೇಗವಾಗಿ ಓಡಿದ.
  21. not a hope in hell ಏನೇನೂ ಅವಕಾಶ ಇಲ್ಲ; ಅದರ ಆಸೆಯೇ ಇಲ್ಲ.
  22. play (merry) hell with (ಅಶಿಷ್ಟ) ನಿರ್ಲಕ್ಷ್ಯದಿಂದ ವ್ಯವಹರಿಸು; ತೊಂದರೆಯನ್ನು ಯಾ ಅಪಾಯವನ್ನು ಉಂಟುಮಾಡು; ಅವ್ಯವಸ್ಥೆಗೊಳಿಸು; ಅಸ್ತವ್ಯಸ್ತಗೊಳಿಸು: heavy rains played hell with the flow of traffic ಭಾರಿ ಮಳೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
  23. raise hell:
    1. ಯದ್ವಾತದ್ವಾ ಮಜ ಮಾಡು.
    2. ಗುಲ್ಲೆಬ್ಬಿಸು; ಗೊಂದಲವನ್ನುಂಟುಮಾಡು; ಕೋಲಾಹಲ ಹುಟ್ಟಿಸು; ರಂಪ ಮಾಡು; ಗಲಾಟೆ ಮಾಡು; ಪ್ರಬಲವಾಗಿ ಆಕ್ಷೇಪಿಸು: she will raise hell when she sees what your dog has done to her garden ಅವಳ ತೋಟದಲ್ಲಿ ನಿನ್ನ ನಾಯಿ ಮಾಡಿರುವ ಹಾವಳಿಯನ್ನು ನೋಡಿದಾಗ ಆಕೆ ಭಾರಿ ರಂಪ ಮಾಡುವಳು.
  24. ride hell for leather:
    1. (ಸಾಮಾನ್ಯವಾಗಿ ಕುದುರೆ ಸವಾರನ ವಿಷಯದಲ್ಲಿ) ಪೂರ್ಣವೇಗದಲ್ಲಿ ; ಅತಿ ಹೆಚ್ಚಿನ ವೇಗದಲ್ಲಿ; ತುಂಬ ಜೋರಿನ ವೇಗದಲ್ಲಿ; ದೌಡಾದೌಡಿಯಲ್ಲಿ: we saw two horsemen riding hell for leather on the plain ಇಬ್ಬರು ಕುದುರೆ ಸವಾರರು ಮೈದಾನದಲ್ಲಿ ಭಾರಿ ವೇಗದಿಂದ ಕುದುರೆ ಓಡಿಸಿಕೊಂಡು ಹೋಗುತ್ತಿದ್ದುದನ್ನು ನಾವು ನೋಡುದೆವು.
    2. ಆದಷ್ಟು ಜಾಗ್ರತೆಯಾಗಿ; ಸಾಧ್ಯವಾದಷ್ಟು ಬೇಗನೆ.
  25. the hell = ನುಡಿಗಟ್ಟು \((27)\): get the hell out of here! ತೊಲಗಿಹೋಗು ಇಲ್ಲಿಂದ ಹಾಳಾದವನೆ!
  26. the hell you say ಅದು ತೀರ ಆಶ್ಚರ್ಯಕರ; ಬಹಳ ಸೋಜಿಗವಾಗಿದೆ.
  27. to hell ಹಾಳಾಗಿಹೋಗಲಿ; ನಾಶವಾಗಿ ಹೋಗಲಿ: to hell with it! ಹಾಳಾಗಿ ಹೋಗಲಿ ಅದು!
  28. what the hell (ಆಡುಮಾತು) (ಯಾವುದೇ ಕಷ್ಟ ಯಾ ಅಡ್ಡಿಯನ್ನು ಲಕ್ಷಿಸದೆ) ಏನು ಮಹಾ? ಏನು ನಷ್ಟ?:what the hell, I can go tomorrow instead ಏನು ಮಹಾ! (ಇವತ್ತಿಗೆ) ಬದಲು ನಾಳೆ ಹೋದರಾಯಿತು.
  29. who the hell, who is the hell, is he? ಯಾರವನು, ಆ ಹಾಳಾದವನು?