See also 2great
1great ಗ್ರೇಟ್‍
ಗುಣವಾಚಕ
  1. (ಸಾಮಾನ್ಯವಾಗಿ ಆಶ್ಚರ್ಯ, ಮೆಚ್ಚಿಕೆ, ತಿರಸ್ಕಾರ, ಸದಾಗ್ರಹ, ಮೊದಲಾದವನ್ನು ಸೂಚಿಸುವ) ದೊಡ್ಡ; ಭಾರಿ; ಬಹು; ವ್ಯಾಪಕ; ಮಹಾ:
    1. made a great blot ದೊಡ್ಡ ಚಿತ್ತು, ಕಲೆ ಮಾಡಿಬಿಟ್ಟ.
    2. (ಆಡುಮಾತಿನಲ್ಲಿ ಇನ್ನೊಂದು ಗುಣವಾಚಕದ ಹಿಂದೆ) a great big stick ದೊಡ್ಡ, ಭಾರಿ ದೊಣ್ಣೆ.
    3. (ಜಾತಿಗಳಲ್ಲಿ ಯಾ ವ್ಯಕ್ತಿಗಳಲ್ಲಿ ಹೆಚ್ಚು ದೊಡ್ಡದರ ವಿಶೇಷಣವಾಗಿ) ದೊಡ್ಡ: great A, Z ದೊಡ್ಡ A, Z (ಅಕ್ಷರಗಳು).
  2. ಅಸಾಧಾರಣ; ಹೆಚ್ಚಿನ; ಬಹಳ; ವಿಶೇಷ: take great care ವಿಶೇಷ ಎಚ್ಚರ ತಾಳು.: of great popularity ಅಸಾಧಾರಣ ಜನಪ್ರಿಯತೆಯ.
  3. ಮುಖ್ಯ; ಪ್ರಮುಖ; ಪ್ರಧಾನ: a great necessity ಮುಖ್ಯ ಆವಶ್ಯಕತೆ.
  4. ಉನ್ನತ; ಉಚ್ಚ; ಉದಾತ್ತ; ಶ್ರೇಷ್ಠ.
  5. ಮಾನ್ಯ; ಗೌರವಾನ್ವಿತ; ಸಂಭಾವಿತ.
  6. ಮಹತ್ವದ; ಪರ್ವ: a great occasion ಮಹತ್ವದ ಸಂದರ್ಭ. a great moment ಪರ್ವಕಾಲ.
  7. ಅಗ್ರ; ಅಗ್ರಗಣ್ಯ: the Great Powers ಅಗ್ರರಾಷ್ಟ್ರಗಳು; ಪ್ರಮುಖ ರಾಷ್ಟ್ರಗಳು.
  8. (ಆ ಹೆಸರಿನವರಲ್ಲಿ ಐತಿಹಾಸಿಕವಾಗಿ ಪ್ರಮುಖ ಎಂಬರ್ಥದಲ್ಲಿ) ಅತಿ ವಿಖ್ಯಾತ: Alexander the Great ಅಲೆಕ್ಸಾಂಡರ್‍ ಮಹಾಶಯ.
  9. (ಬಿರುದುಗಳಲ್ಲಿ ವಿಶೇಷಣವಾಗಿ) ಶ್ರೇಷ್ಠ: the Great Mogul ಮೊಗಲ್‍ ಶ್ರೇಷ್ಠ.
  10. ಶ್ರೇಷ್ಠ; ಅಸಾಧಾರಣ ಸಾಮರ್ಥ್ಯ, ಪ್ರತಿಭೆ, ಬೌದ್ಧಿಕ ಇಲ್ಲವೆ ವ್ಯಾವಹಾರಿಕ ಗುಣಾತಿಶಯಗಳು, ಶೀಲದ ಔನ್ನತ್ಯ ಯಾ ಪವಿತ್ರತೆ ಇವು ಉಳ್ಳ: a great judge ಸತ್ಯಸಂಧ ಯಾ ನ್ಯಾಯನಿಷ್ಠ ನ್ಯಾಯಾಧಿಪತಿ. a great painter ಪ್ರತಿಭಾನ್ವಿತ ಚಿತ್ರಕಾರ. the truly great man ನಿಜವಾಗಿಯೂ ಮಹಾನ್‍ ವ್ಯಕ್ತಿ, ಲೋಕೋತ್ತರ ಪುರುಷ. great thoughts ಉನ್ನತ ಚಿಂತನಗಳು.
  11. (ಆಖ್ಯಾತಕವಾಗಿ)
    1. (ಒಂದು ಕೆಲಸ, ಕ್ಷೇತ್ರದಲ್ಲಿ) ಅತಿ ಕುಶಲ, ಚತುರ.
    2. (ಒಂದು ವಿಷಯದಲ್ಲಿ) ದೊಡ್ಡ ಪಂಡಿತ; ಮಹಾವಿದ್ವಾಂಸ.
  12. ಬಹು ಸಮರ್ಪಕ, ತೃಪ್ತಿಕರ; ಉತ್ತಮ: wouldn’t it be great if....? .... ಆಗಿದ್ದರೆ ಬಹು ಸಮರ್ಪಕವಾಗುತ್ತಿತ್ತಲ್ಲವೆ?
  13. (ಹೆಸರಿಸಿದಂಥ) ಹೆಸರು ಸಲ್ಲುವ; ಹೆಸರಿಗೆ ತಕ್ಕ; ಅನ್ವರ್ಥಕ.
  14. (ಕರ್ತೃಬೋಧಕ ನಾಮವಾಚಕಗಳೊಡನೆ) ಕಾರ್ಯವನ್ನು, ಕೃತ್ಯವನ್ನು – ಅತಿ ದೊಡ್ಡ ಪ್ರಮಾಣದಲ್ಲಿ ಮಾಡುವ; ಶುದ್ಧ; ಪಕ್ಕಾ; ಮಹಾನ್‍: a great scoundrel ಪಕ್ಕಾ ಬದ್ಮಾಷ್‍; ಶುದ್ಧ ನೀಚ. a great dancer ಮಹಾನ್‍ ನರ್ತಕ.
  15. (uncle, aunt, nephew, niece ಎಂಬುವುಗಳಿಗೆ ಯಾ grand ಒಡನೆ ಕೂಡಿದ ನಂಟತನ ಹೇಳುವ ಪದಗಳಿಗೆ ಒಮ್ಮೆಯೋ ಹೆಚ್ಚು ಬಾರಿಯೋ ಪೂರ್ವಪದವಾಗಿ) ಒಂದು ತಲೆ ಹಿಂದಿನ ಯಾ ಮುಂದಿನ: great grandfather ಮುತ್ತಜ್ಜ.
  16. (ಆಶ್ಚರ್ಯಸೂಚಕ ಉದ್ಗಾರವಾಗಿ) Great god! ಅಯ್ಯೋ ದೇವರೇ! ಭಗವಂತ! ಪರಮಾತ್ಮ!
ಪದಗುಚ್ಛ
  1. a great deal ಬಹಳ; ತುಂಬ; ಬಹು; ಹೆಚ್ಚು ಪ್ರಮಾಣ.
  2. a great many ಭಾರಿ ಸಂಖ್ಯೆಯ; ಅನೇಕಾನೇಕ.
  3. a great while ago ಬಹುಕಾಲದ ಹಿಂದೆ.
  4. Great Caesar! ಅಯ್ಯೋ ದೇವರೇ!
  5. Great $^1$charter.
  6. Great $^1$circle.
  7. Great dane.
  8. Great $^1$deal.
  9. Great $^2$divide.
  10. Greater Britain ಗ್ರೇಟ್‍ ಬ್ರಿಟನ್‍ ಮತ್ತು ಅದರ ವಸಾಹತುಗಳು (ವಿವರಣಾತ್ಮಕ ಹೆಸರು, ಅಧಿಕೃತ ಹೆಸರಲ್ಲ).
  11. greatest common measure
    1. ಮಹತ್ತಮ ಸಾಮಾನ್ಯ ಅಪವರ್ತನ.
    2. ಅತ್ಯಧಿಕ ಸಾಮಾನ್ಯಾಂಶ.
  12. great go ಕೇಂಬ್ರಿಜ್‍ನ ಬಿ.ಎ. ಪದವಿಯ ಅಂತಿಮ ಪರೀಕ್ಷೆ.
  13. Great $^3$seal.
  14. live to a great age ಬಹುವರ್ಷ ಬದುಕು.
  15. the great Commoner ಹಿರಿಯ ವಿಲಿಯಮ್‍ ಪಿಟ್‍ [ಸಪ್ತವಾರ್ಷಿಕ ಯುದ್ಧದ ಕಾಲದಲ್ಲಿ (1757–1763) ಬ್ರಿಟನ್ನಿನ ಪ್ರಧಾನಿಯಾಗಿದ್ದವನು].
  16. the greatest happiness of the greatest number ಬೆಂತಂ ಎಂಬ ತತ್ತ್ವಜ್ಞನ ಪ್ರಮುಖ ತತ್ತ್ವ (ನೋಡಿ Benthamism).
  17. the great majority ಅಧಿಕಾಂಶ; ಬಹುಪಾಲು.
  18. the great unpaid ಸಂಬಳವಿಲ್ಲದ ನ್ಯಾಯಾಧಿಪತಿಗಳು.
  19. the great unwashed ಮೈತೊಳೆಯದವರು; ದೊಂಬಿ ಜನ; ಕೀಳು ಜನ.
ನುಡಿಗಟ್ಟು
  1. great with child (ಪ್ರಾಚೀನ ಪ್ರಯೋಗ) ಬಸಿರಾದ; ತುಂಬು ಗರ್ಭಿಣಿಯಾದ.
  2. the great world ಉನ್ನತ ಸಮಾಜ; ಸಮಾಜದ ಉನ್ನತ – ವೃತ್ತ, ವಲಯ, ವರ್ಗ.
See also 1great
2great ಗ್ರೇಟ್‍
ನಾಮವಾಚಕ
  1. (ಗತಪ್ರಯೋಗ) ಮಹಾಪುರುಷ; ಶ್ರೇಷ್ಠ ವ್ಯಕ್ತಿ.
  2. ದೊಡ್ಡದಾದದ್ದು; ಶ್ರೇಷ್ಠವಾದದ್ದು; ಮಹತ್ತಾದದ್ದು.
  3. (ಬಹುವಚನದಲ್ಲಿ Greats) ಆಕ್ಸ್‍ಹರ್ಡಿನ ಬಿ.ಎ. ಅಂತಿಮ ಪರೀಕ್ಷೆ ಮುಖ್ಯವಾಗಿ ಕ್ಲಾಸಿಕಲ್‍ ಸಾಹಿತ್ಯ ಮತ್ತು ತತ್ತ್ವಶಾಸ್ತ್ರಗಳ ಆನರ್ಸ್‍ ಪರೀಕ್ಷೆ.
ಪದಗುಚ್ಛ
  1. great and small ಹಿರಿಯರೂ ಕಿರಿಯರೂ ಯಾ ದೊಡ್ಡವೂ ಚಿಕ್ಕವೂ.
  2. the great (ಬಹುವಚನ) ಮಹಾವ್ಯಕ್ತಿಗಳು; ಮಹಾಪುರುಷರು; ಮಹನೀಯರು; ಮಹಾಮಹಿಮರು.
  3. the greatest (ಅಶಿಷ್ಟ) ಅಸಾಧಾರಣ ವ್ಯಕ್ತಿ.